For Quick Alerts
ALLOW NOTIFICATIONS  
For Daily Alerts

ಈ ಬೆಡ್‌ಟೈಮ್‌ ನಿಯಮ ಪಾಲಿಸಿದರೆ ದಾಂಪತ್ಯ ಮಧುರವಾಗುವುದರಲ್ಲಿ ನೋ ಡೌಟ್

|

ದಾಂಪತ್ಯ ಜೀವನ ಮಧುರವಾಗಿರಬೇಕೆಂದರೆ ಚಿಕ್ಕ-ಚಿಕ್ಕ ವಿಷಯದ ಕಡೆಗೂ ಗಮನ ಕೊಡಬೇಕಾಗುತ್ತದೆ, ಅದರಲ್ಲೂ ಬೆಡ್‌ಟೈಂನಲ್ಲಿ ಕೆಲವೊಂದು ನಿಯಮಗಳನ್ನು ನೀವು ಪಾಲಿಸಿದರೆ ನೀವಿಬ್ಬರು ಮತ್ತಷ್ಟು ಅರ್ಥ ಮಾಡಿಕೊಳ್ಳಲು, ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲು ನೆರವಾಗುವುದು.

ಸಿಂಪಲ್ ಆಗಿ ಹೇಳಬೇಕೆಂದರೆ ಮೊಬೈಲ್... ದಾಂಪತ್ಯ ಜೀವನದ ಮಧುರ ಕ್ಷಣಗಳನ್ನು ಹಾಳು ಮಾಡುವ ದೊಡ್ಡ ಶತ್ರು ಮೊಬೈಲ್‌ ಎನ್ನುವುದರಲ್ಲಿ ನೋ ಡೌಟ್. ಕೆಲವರು ಬೆಡ್‌ ಮೇಲೆ ಮಲಗಿದ ಮೇಲೂ ಮೊಬೈಲ್‌ ನೋಡುವುದರಲ್ಲಿ ಫುಲ್‌ ಬ್ಯುಸಿ.

ಅವರು ಮೊಬೈಲ್‌ ನೋಡುತ್ತಿದ್ದಾರೆ ಎಂದಾದರೆ ಅವರೇನು ತಪ್ಪು ಮಾಡುತ್ತಿದ್ದಾರೆ ಎಂದಲ್ಲ, ಮಲಗುವಾಗ ಮೊಬೈಲ್‌ ನ್ಯೂಸ್‌ ನೋಡುವುದು, ವೀಡಿಯೋಗಳನ್ನು ನೋಡುವುದು, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಅಂತ ನೋಡುವುದು ಮಾಡುತ್ತಾ ಇಬ್ಬರು ಕೂತು ಮಾತನಾಡುವುದು, ಯಾವುದಾದರೂ ವಿಷಯಗಳ ಬಗ್ಗೆ ಚರ್ಚೆ ಮಾಡುವುದನ್ನೇ ಮರೆತು ಬಿಡುತ್ತೇವೆ. ಇಂಥ ಚಿಕ್ಕ-ಪುಟ್ಟ ವಿಷಯಗಳಿಂದ ಸಂಬಂಧದಲ್ಲಿ ನಮಗೆ ಅರಿಯದಂತೆ ಗ್ಯಾಪ್‌ ಉಂಟು ಮಾಡುತ್ತಿರುತ್ತದೆ.

ಎಷ್ಟೇ ಸ್ಟ್ರೆಸ್‌ ಇರಲಿ, ಕೆಲಸದ ಒತ್ತಡ ಇರಲಿ ಒಬ್ಬರಿಗೊಬ್ಬರು ಸಮಯ ಕೊಡಬೇಕಾಗಿರುವುದು ದಾಂಪತ್ಯ ಸುಂದರವಾಗಿರಬೇಕೆಂದರೆ ನಿಮ್ಮ ಬೆಡ್‌ರೂಂನಲ್ಲಿ ಈ ನಿಯಮಗಳನ್ನು ಪಾಲಿಸುವುದು ಬೆಟರ್:

1. ಎಲೆಕ್ಟ್ರಾನಿಕ್‌ ವಸ್ತುಗಳನ್ನು ದೂರವಿಡಿ

ಮಲಗಲು ಬೆಡ್‌ರೂಂಗೆ ಬರುವಾಗ ನೀವು ಮೊದಲು ಮಾಡಬೇಕಾಗಿರುವುದು ಮೊಬೈಲ್‌ ದೂರವಿಡುವುದು. ಲ್ಯಾಪ್‌ಟಾಪ್ ಅಷ್ಟೇ ಬೆಡ್‌ಗೆ ತರಲೇಬೇಡಿ. ಏನೇ ಕೆಲಸವಿದ್ದರು ಮುಗಿಸಿ ಬನ್ನಿ, ಬೆಡ್‌ರೂಂಗೆ ಬಂದ ಮೇಲೆ ಅದು ನಿಮ್ಮಿಬ್ಬರ ಸ್ಥಳ, ನಿಮ್ಮಿಬ್ಬರಿಗಾಗಿ ಇರುವಂಥ ಸ್ಥಳ.... ಅಲ್ಲದೆ ಬೆಡ್‌ರೂಂ ಎಂಬುವುದು ವಿಶ್ರಾಂತಿ ನೀಡುವಂಥದ್ದು. ಆದ್ದರಿಂದ ಬೆಡ್‌ರೂಂಗೆ ಬಂದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಮುಟ್ಟಲೇಬೇಡಿ.

ಮೊಬೈಲ್‌ ನೋಡಿ ಅಭ್ಯಾಸ ಬೆಳೆಸಿದವರಿಗೆ ಅದನ್ನು ನೋಡದೆ ಇರಲು ಸಾಧ್ಯವಾಗಲ್ಲ, ನಿಮಗೆ ಆ ರೀತಿಯಿದ್ದರೆ ಬೆಡ್‌ರೂಂಗೆ ಮೊಬೈಲ್‌ ತರಲೇಬೇಡಿ.

2. ಬೆಡ್‌ರೂಂ ಆಕರ್ಷಕವಾಗಿರಲಿ

ನಾವು ಮಲಗುವ ಕೋಣೆಯನ್ನು ತುಂಬಾ ಒಪ್ಪವಾಗಿ-ಆಕರ್ಷಕವಾಗಿ ಇಟ್ಟುಕೊಳ್ಳಬೇಕು. ಅಲ್ಲಲ್ಲಿ ವಸ್ತುಗಳು ಹರಡಿಕೊಂಡಿದ್ದರೆ ಮನಸ್ಸಿಗೆ ರಿಲ್ಯಾಕ್ಸ್ ಅನಿಸಲ್ಲ. ಇನ್ನು ದಂಪತಿ ಮಲಗುವ ಕೋಣೆ ಸ್ವಲ್ಪ ರೊಮ್ಯಾಂಟಿಕ್ ಆಗಿರಲಿ. ಡಿಮ್‌ ಲೈಟ್‌ ಇರಲಿ, ಆಕರ್ಷಕ ಕಟರ್ನ್ ಬಳಸಿ. ನಿಮ್ಮಿಬ್ಬರ ಮೂಡ್‌ ಮತ್ತಷ್ಟು ಸ್ಪೈಸಿಯಾಗಲು ಸೆಕ್ಸಿ ಉಡುಪುಗಳೂ ಪ್ರಮುಖ ಪಾತ್ರವಹಿಸುತ್ತದೆ.

3. ಮಲಗುವ ಮುನ್ನ ರಿಲ್ಯಾಕ್ಸ್ ಆಗಲು ಸ್ನಾನ ಮಾಡಿ

ಕೆಲವೊಮ್ಮೆ ಸಮಯ ಮಾಡಿಕೊಂಡು ಇಬ್ಬರು ಜೊತೆಯಾಗಿ ಸ್ನಾನಕ್ಕೆ ಹೋಗಿ, ಈ ರೊಮ್ಯಾಂಟಿಕ್‌ ಕ್ಷಣಗಳು ನಿಮ್ಮಿಬ್ಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುತ್ತದೆ, ಒಬ್ಬರನ್ನೊಬ್ಬರು ಮತ್ತಷ್ಟು ಇಷ್ಟಪಡಲಾರಂಭಿಸುತ್ತೀರಿ.

ಮದುವೆಯಾದ ಹೊಸದರಲ್ಲಿ ಹೇಗಿತ್ತು ರೊಮ್ಯಾನ್ಸ್ ಎಂಬುವುದನ್ನು ನೆನಪು ಮಾಡಿಕೊಳ್ಳಿ, ಆ ದಿನಗಳು ಎಷ್ಟು ಚೆನ್ನಾಗಿತ್ತು ಅನಿಸುತ್ತಿದೆಯೇ? ಈಗಲೂ ನೀವು ಆ ದಿನಗಳಿಗೆ ಮರಳಬಹುದು. ಕೆಲಸ, ಮಕ್ಕಳು, ಹಣದ ಚಿಂತೆ , ಕಮಿಟ್‌ಮೆಂಟ್‌ ಅವೆಲ್ಲಾ ಇದ್ದೇ ಇರುತ್ತದೆ, ಹಾಗಂತ ನಿಮ್ಮಿಬ್ಬರ ಜೀವನದ ರೊಮ್ಯಾಂಟಿಕ್‌ ಕ್ಷಣಗಳನ್ನು ಏಕೆ ದೂರ ಮಾಡಬೇಕು. ಒಬ್ಬರು ಮತ್ತಷ್ಟು ರೊಮ್ಯಾಂಟಿಕ್ ಆಗಿ ನೋಡಿ, ನಿಮ್ಮ ನಡುವೆ ಇರುವ ಎಷ್ಟೋ ಸಮಸ್ಯೆಗಳು ಬಗೆಹರಿಯುವುದು.

4. ಇಬ್ಬರ ದಿನಾ ಸ್ವಲ್ಪ ಹೊತ್ತು ಮಾತನಾಡಿ

ಎಷ್ಟೋ ದಂಪತಿಗಳು ಒಂದೇ ಮನೆಯಲ್ಲಿ, ಒಂದೇ ರೂಮ್‌ನಲ್ಲಿದ್ದರೂ ಮಾತನಾಡುವುದನ್ನೇ ಮರೆತು ಬಿಟ್ಟಿರುತ್ತಾರೆ. ಮಾತನಾಡುವುದು ಅಂದ್ರೆ ಆ ವಸ್ತು ಎಲ್ಲಿಟ್ಟೆ, ಇದು ಏಕೆ ಹೀಗೆ ಮಾಡಿದೆ ಎಂದು ಕೇಳುವುದಲ್ಲ, ನೀವು ಒಂದು ಸಮಯದಲ್ಲಿ ಪಾರ್ಕ್‌ನಲ್ಲಿ ಕೈ-ಕೈ ಹಿಡಿದು ನಡೆಯುತ್ತಿದ್ದಾಗ ವಿಷಯನೇ ಇಲ್ಲದಿದ್ದರೂ ಎಷ್ಟೊಂದು ಮಾತನಾಡುತ್ತಿದ್ದೀರಿ, ಮೊಬೈಲ್‌ ಬಿಸಿಯಾದರೂ ಮಾತು ಮುಗಿಯುತ್ತಿರಲಿಲ್ಲ ಅಲ್ವಾ?ಈಗ ಆ ಮಾತುಗಳೆಲ್ಲಾ ಎಲ್ಲಿಗೆ ಹೋಯ್ತು? ಯೋಚಿಸಿ, ಹೌದು ಎಷ್ಟು ಬದಲಾಯ್ತು ಜೀವನ ಎಂದನಿಸುತ್ತಿದೆಯೇ? ಜೀವನ ಬದಲಾಗಲಿಲ್ಲ, ನೀವು ಬದಲಾಗಿದ್ದು, ಮೊದಲಿನಂತೆ ಮತ್ತೊಮ್ಮೆ ಬದಲಾಗಿ ಎಲ್ಲವೂ ಸರಿಯಾಗುತ್ತೆ.

5. ಒಂದು ಬಿಸಿ ಅಪ್ಪುಗೆ ಇರಲಿ

ಸಂಗಾತಿಯ ಒಂದು ಬಿಸಿ ಅಪ್ಪುಗೆ ಎಷ್ಟೋ ರಿಲ್ಯಾಕ್ಸ್ ನೀಡುತ್ತೆ. ಒಂದು ಬಿಸಿ ಅಪ್ಪುಗೆ ಪ್ರತಿದಿನ ಇರಲಿ. ಲೈಂಗಿಕತೆ ಪ್ರತಿನಿತ್ಯದ ಜೀವನದಲ್ಲಿ ಇಲ್ಲದೇ ಇರಬಹುದು, ಆದರೆ ಸಂಗಾತಿ ಅಪ್ಪುಗೆಯಲ್ಲಿ ನಿದ್ದೆಗೆ ಜಾರಿದರೆ ಮನಸ್ಸು ನಿರಾಳ ಅನಿಸುವುದು. ದಿನದಲ್ಲಿ ಇಬ್ಬರು ಎಷ್ಟೇ ಜಗಳವಾಡಿದರೂ ನಿಮ್ಮಿಬ್ಬರ ಮುನಿಸು ಕರಗಿಸುವ ಶಕ್ತಿ ಆ ಅಪ್ಪುಗೆಗೆ ಇದೆ. ಹೆಂಡತಿಯಾದವಳು ಬಾಯಿ ಬಿಟ್ಟು ಹೇಳದಿದ್ದರೂ ಗಂಡನಿಂದ ಇದನ್ನೆಲ್ಲಾ ಬಯಸುತ್ತಾಳೆ. ನೀವು ಹೀಗೆ ಮಾಡಿದರೆ ಅವಳೆಷ್ಟು ಖುಷಿ ಪಡುತ್ತಾಳೆ ಗೊತ್ತಾ, ಅವಳ ದಿನದ ದಣಿವೆಲ್ಲಾ ದೂರಾಗಿ .ಲವಲವಿಕೆಯಿಂದ ಓಡಾಡುತ್ತಾಳೆ.

6. ಒಂದೊಳ್ಳೆ ಮಾತನಾಡಿ

ಮದುವೆಯಾಗಿ ಕೆಲವು ವರ್ಷಗಳು ಕಳೆಯುತ್ತಿದ್ದಂತೆ ಒಬ್ಬರನ್ನೊಬ್ಬರ ತಪ್ಪು ಹುಡುಕುವುದರಲ್ಲಿಯೇ ಬ್ಯುಸಿಯಾಗುತ್ತೇವೆ. ಅದೇ ಒಳ್ಳೆಯ ವಿಚಾರಗಳ ಬಗ್ಗೆ ಸುಮ್ಮನಾಗತ್ತೇವೆ. ಅಡುಗೆ ಚೆನ್ನಾಗಿಲ್ಲದಿದ್ದಾಗ ಇವತ್ತು ಉಪ್ಪು, ಹುಳಿ ಜಾಸ್ತಿ ಅಂತ ಹೇಳುವವರು, ಅಡುಗೆ ಚೆನ್ನಾಗಿ ಮಾಡಿದ ದಿನ ಹೊಗಳಲೂ ಬೇಕು ಅಲ್ವಾ? ಅದೇ ರೀತಿ ಗಂಡನ ತಪ್ಪುಗಳನ್ನು ಬೊಟ್ಟು ಮಾಡುವವರು ಅವರು ಒಳ್ಳೆಯದು ಮಾಡುವಾಗ ಹೊಗಳಬೇಕಲ್ವಾ? ಅದು ತಾನೆ ಸರಿ...

ನಿಮ್ಮ ಇಂಥ ಚಿಕ್ಕ-ಪುಟ್ಟ ಖುಷಿಗಳಿಗಾಗಿ ಮಲಗುವ ಮುಂಚೆ ನಿಮ್ಮಿಬ್ಬರಿಗಾಗಿಯೇ ಕ್ಷಣಗಳನ್ನು ಕಳೆಯಿರಿ, ಈ ಮಾತುಗಳನ್ನು ನೀವೂ ಒಪ್ಪುತ್ತೀರಿ ತಾನೆ?

English summary

Effective Bedtime Rituals for Couples For Strong Bond in Kannada

Relationship Tips: Follow these bedtime rituals to build strong bond read on...
X
Desktop Bottom Promotion