For Quick Alerts
ALLOW NOTIFICATIONS  
For Daily Alerts

ಮ್ಯಾರೇಜ್‌ ಪ್ರಪೋಸಲ್‌ನಲ್ಲಿ ಈ ತಪ್ಪುಗಳನ್ನು ಮಾಡಲೇಬಾರದು

|

ನಿಮ್ಮ ಮದುವೆ ಪ್ರಪೋಸಲ್‌ ಸಿನಿಮಾದಲ್ಲಿ ಕಾಣುವಂತಿರಬೇಕು ಎಂದು ನೀವು ಬಯಸುವುದಾದರೆ ಹೋಲ್ಡ್ ಆನ್‌, ರಿಯಾಲಿಟಿ ಅದಲ್ಲ.....

ಮದುವೆ ಸಂಬಂಧದ ಮಾತುಕತೆಯಲ್ಲಿ ಮದುವೆ ಪ್ರಪೋಸಲ್‌ ಅಥವಾ ಹುಡುಗಿ ನೋಡುವ ಶಾಸ್ತ್ರ ಇದೆಯೆಲ್ಲಾ ತುಂಬಾನೇ ಪ್ರಮುಖವಾದ ದಿನ. ಈ ಸಂದರ್ಭದಲ್ಲಿ ಹುಡುಗನ ಮನೆಯವರು ಆಡುವ ಮಾತುಗಳು, ಹುಡುಗಿ ಮನೆಯವರ ಮಾತುಗಳು, ಎರಡೂ ಮನೆಯವರ ನಡವಳಿಕೆಗಳು ಆ ಜೋಡಿ ಒಂದಾಗಬೇಕೆ, ಬೇಡ್ವೆ ಎಂಬ ತೀರ್ಮಾನಕ್ಕೆ ಬರಲು ತುಂಬಾನೇ ಮುಖ್ಯವಾಗುತ್ತದೆ.

Marriage Proposal

ಮನೆಯವರು ಒಪ್ಪಿ ಮಾಡುವ ಮದುವೆ ಅಂದ ಮೇಲೆ ಬರೀ ಹುಡುಗ-ಹುಡುಗಿ ಒಪ್ಪಿಗೆ ಸೂಚಿಸಿದರ ಸಾಕಾಗಲ್ಲ, ಅಲ್ಲಿ ಹಲವಾರು ವಿಷಯಗಳು ಮುಖ್ಯವಾಗುತ್ತದೆ. ಆದ್ದರಿಂದ ಮದುವೆ ಪ್ರಪೋಸಲ್‌ನಲ್ಲಿ ಈ ತಪ್ಪುಗಳಾಗದಂತೆ ಎಚ್ಚರವಹಿಸಿ:

ತುಂಬಾ ಸರ್‌ಪ್ರೈಸ್‌ ಬೇಡ

ತುಂಬಾ ಸರ್‌ಪ್ರೈಸ್‌ ಬೇಡ

ಮದುವೆ ಎಂಬುವುದು ದೊಡ್ಡ ಕಮಿಟ್‌ಮೆಂಟ್‌, ಆ ಕಮಿಟ್‌ಮೆಂಟ್‌ ತೆಗೆದುಕೊಳ್ಳಲು ಇಬ್ಬರು ರೆಡಿ ಇರಬೇಕು, ಹಾಗಾಗಿ ಆ ಕಡೆಯಿಂದ ಒಪ್ಪಿಗೆ ಸಿಗುವ ಮುನ್ನ ಸರ್‌ಪ್ರೈಸ್‌ ಪ್ರಪೋಸಲ್‌ ಪ್ಲ್ಯಾನ್‌ ಬೇಡ್ವೆ ಬೇಡ. ಒಂದು ವೇಳೆ ನಿಮಿಗಿಬ್ಬರಿಗೂ ಒಪ್ಪಿಗೆ ಇದ್ದರೂ ಮನೆಯವರು ಒಪ್ಪಿ ಮಾಡುವ ಮದುವೆಯಾದರೆ ಅವರ ಒಪ್ಪಿಗೆಯೂ ಮುಖ್ಯ, ಈ ಕಾರಣಕ್ಕೆ ತುಂಬಾ ಸರ್‌ಪ್ರೈಸ್‌ ಮದುವೆ ಪ್ರಪೋಸಲ್ ಬೇಡ.

ಮತ್ತೊಂದು ವಿಷಯವೆಂದು ನೀವು ಹುಡುಗಿ ನೋಡಲು ಹೋಗುವಾಗ ಈ ಮಾಹಿತಿ ಮೊದಲೇ ಅವರಿಗೆ ಗೊತ್ತಿದ್ದರೆ ಒಳ್ಳೆಯದು. ಸಡನ್ ಹೋದರೆ ಅವರಿಗೂ ಇರಿಸು-ಮುರಿಸಾಗುವುದು, ಈ ಕಾರಣಕ್ಕೆ ಸರ್‌ಪ್ರೈಸ್‌ ಬೇಡ್ವೆ ಬೇಡ.

 ಮನೆಯವರ ಮಾತುಗಳನ್ನು ಕಡೆಗಣಿಸಬೇಡಿ

ಮನೆಯವರ ಮಾತುಗಳನ್ನು ಕಡೆಗಣಿಸಬೇಡಿ

ನಮ್ಮಲ್ಲಿ ಮದುವೆ ಎಂದರೆ ಬರೀ ಹೆಣ್ಣು-ಗಂಡು ಒಂದಾಗುವುದು ಮಾತ್ರವಲ್ಲ, ಎರಡೂ ಕುಟುಂಬಗಳ ನಡುವೆ ಕೂಡ ಬಾಂಧವ್ಯ ಬೆಳೆಯುವುದು. ಈ ಕಾರಣಕ್ಕೆ ಎರಡೂ ಕುಟುಂಬದಲ್ಲಿ ಪೋಷಕರ ಅಭಿಪ್ರಾಯಕ್ಕೂ ಬೆಲೆ ನೀಡಬೇಕು. ಇನ್ನು ನೀವಿಬ್ಬರು ಪ್ರೀತಿ ಮಾಡುತ್ತಿದ್ದು ಪೋಷಕರ ಒಪ್ಪಿಗೆ ಮೇರೆ ಮದುವೆಯಾಗಲು ಇಚ್ಚಿಸುವುದಾದರೆ ಮದುವೆ ಪ್ರಪೋಸಲ್‌ಗೆ ಮುಂಚೆಯೇ ನೀವು ನಿಮ್ಮ ಮನೆಯವರನ್ನು ಒಪ್ಪಿಸಬೇಕು, ಆ ದಿನ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂದು ಮೊದಲೇ ಹೇಳಿ.

ಪೋಷಕರಿಗೆ ನೀವು ಪ್ರೀತಿ ಮಾಡಿ ಮದುವೆಯಾಗುವುದು ಇಷ್ಟವಿರದಿದ್ದರೆ, ನಿಮಗೋಸ್ಕರ ಆ ಮದುವೆಗೆ ಒಪ್ಪಿಗೆ ಸೂಚಿಸಿದ್ದರೆ ನಿಮ್ಮ ಸಂಗಾತಿ ಅಥವಾ ಅವರ ಮನೆಯವರ ಜೊತೆ ಸರಿಯಾಗಿ ಮಾತನಾಡದೆ ಇರುವುದು ಅಥವಾ ಕೆಲವೊಂದು ಕೊಂಕು ಮಾತುಗಳನ್ನಾಡುವುದು ಮಾಡಬಹುದು, ಇದರಿಂದ ಅವರ ಮನಸ್ಸಿಗೆ ಬೇಸರವಾಗಬಹುದು, ಕೆಲವೊಮ್ಮೆ ಮದುವೆ ಸಂಬಂಧ ಮುರಿದು ಬೀಳಬಹುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.

ಅತಿಯಾದ ಮಾತು ಬೇಡ

ಅತಿಯಾದ ಮಾತು ಬೇಡ

ಎರಡೂ ಮನೆಯವರು ಸೇರಿದಾಗ ಮಾತುಕತೆಯ ಮೂಲಕ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ, ಹಾಗಂತ ಅತಿಯಾದ ಮಾತು ಬೇಡ, ನಿಮ್ಮ ಹುಡುಗ ಅಥವಾ ಹುಡುಗಿಯ ಕುರಿತು ಹೇಳುವಾಗ ತುಂಬಾ ಹೊಗಳುವುದು, ನಿಮ್ಮ ಮನೆತನದ ಬಗ್ಗೆ ತುಂಬಾನೇ ಹೇಳಿಕೊಳ್ಳುವುದು ಮಾಡಬಾರದು. ಇವೆಲ್ಲಾ ಹೇಳಿ ತಿಳಿಯಬೇಕಾದ ವಿಷಯವಲ್ಲ, ನೋಡಿ ತಿಳಿಯಬೇಕಾಗಿರುವುದು.

ತುಂಬಾ ಮಾತನಾಡುತ್ತಿದ್ದರೆ ಅವರಿಗೆ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು, ನೀವು ಬಡಾಯಿ ಕೊಚ್ಚಿಕೊಳ್ಳುತ್ತಿರುವಂತೆ ಅನಿಸಬಹುದು, ಆದ್ದರಿಂದ ಎಷ್ಟು ಹೇಳಬೇಕೋ ಅಷ್ಟು ಮಾತ್ರ ಹೇಳಿ.

ಮನೆಯವರ ಮುಂದೆ ತುಂಬಾ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವುದು ನಿಮ್ಮಿಬ್ಬರಿಗೆ ಇಷ್ಟವಾಗಿದೆ ಎಂದ ಮಾತ್ರಕ್ಕೆ ಮನೆಯವರ ಮುಂದೆಯೇ ತುಂಬಾ ರೊಮ್ಯಾಂಟಿಕ್‌ ಆಗಿ ನಡೆದುಕೊಳ್ಳುವುದು ಮಾಡಿದರೆ ನಿಮ್ಮ ನಡವಳಿಕೆಯಿಂದ ಮನೆಯವರಿಗೆ ಇರಿಸು-ಮುರಿಸಾಗಬಹುದು ಆದ್ದರಿಂದ ಆ ರೀತಿ ವರ್ತಿಸದಿದ್ದರೆ ಒಳ್ಳೆಯದು. ನಿಮ್ಮಿಬ್ಬರ ಸಂಬಂಧದ ಬಗ್ಗೆ ಜಗಜಾಹೀರು ಮಾಡುವುದು ಮದುವೆ ಪ್ರಪೋಸಲ್ ಬಂದ ತಕ್ಷಣ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್‌ ಮೂಲಕ ಜಗಜಾಹೀರು ಮಾಡದಿದ್ದರೆ ಒಳ್ಳೆಯದು, ಇದು ಜಸ್ಟ್ ಮದುವೆ ಪ್ರಪೋಸಲ್‌. ನೀವು ನಿಮ್ಮ ಸಂಬಂಧದ ಬಗ್ಗೆ ಹೊರ ಜಗತ್ತಿಗೆ ತಿಳಿಸಲು ಇಷ್ಟಪಡುವುದಾದರೆ ಎಂಗೇಜ್‌ಮೆಂಟ್‌ವರೆಗೆ ಕಾಯುವುದು ಒಳ್ಳೆಯದು.

ಮನೆಯವರ ಮುಂದೆ ತುಂಬಾ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವುದು ನಿಮ್ಮಿಬ್ಬರಿಗೆ ಇಷ್ಟವಾಗಿದೆ ಎಂದ ಮಾತ್ರಕ್ಕೆ ಮನೆಯವರ ಮುಂದೆಯೇ ತುಂಬಾ ರೊಮ್ಯಾಂಟಿಕ್‌ ಆಗಿ ನಡೆದುಕೊಳ್ಳುವುದು ಮಾಡಿದರೆ ನಿಮ್ಮ ನಡವಳಿಕೆಯಿಂದ ಮನೆಯವರಿಗೆ ಇರಿಸು-ಮುರಿಸಾಗಬಹುದು ಆದ್ದರಿಂದ ಆ ರೀತಿ ವರ್ತಿಸದಿದ್ದರೆ ಒಳ್ಳೆಯದು. ನಿಮ್ಮಿಬ್ಬರ ಸಂಬಂಧದ ಬಗ್ಗೆ ಜಗಜಾಹೀರು ಮಾಡುವುದು ಮದುವೆ ಪ್ರಪೋಸಲ್ ಬಂದ ತಕ್ಷಣ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್‌ ಮೂಲಕ ಜಗಜಾಹೀರು ಮಾಡದಿದ್ದರೆ ಒಳ್ಳೆಯದು, ಇದು ಜಸ್ಟ್ ಮದುವೆ ಪ್ರಪೋಸಲ್‌. ನೀವು ನಿಮ್ಮ ಸಂಬಂಧದ ಬಗ್ಗೆ ಹೊರ ಜಗತ್ತಿಗೆ ತಿಳಿಸಲು ಇಷ್ಟಪಡುವುದಾದರೆ ಎಂಗೇಜ್‌ಮೆಂಟ್‌ವರೆಗೆ ಕಾಯುವುದು ಒಳ್ಳೆಯದು.

ಮನೆಯವರ ಮುಂದೆ ತುಂಬಾ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವುದು

ನಿಮ್ಮಿಬ್ಬರಿಗೆ ಇಷ್ಟವಾಗಿದೆ ಎಂದ ಮಾತ್ರಕ್ಕೆ ಮನೆಯವರ ಮುಂದೆಯೇ ತುಂಬಾ ರೊಮ್ಯಾಂಟಿಕ್‌ ಆಗಿ ನಡೆದುಕೊಳ್ಳುವುದು ಮಾಡಿದರೆ ನಿಮ್ಮ ನಡವಳಿಕೆಯಿಂದ ಮನೆಯವರಿಗೆ ಇರಿಸು-ಮುರಿಸಾಗಬಹುದು ಆದ್ದರಿಂದ ಆ ರೀತಿ ವರ್ತಿಸದಿದ್ದರೆ ಒಳ್ಳೆಯದು.

ನಿಮ್ಮಿಬ್ಬರ ಸಂಬಂಧದ ಬಗ್ಗೆ ಜಗಜಾಹೀರು ಮಾಡುವುದು

ಮದುವೆ ಪ್ರಪೋಸಲ್ ಬಂದ ತಕ್ಷಣ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್‌ ಮೂಲಕ ಜಗಜಾಹೀರು ಮಾಡದಿದ್ದರೆ ಒಳ್ಳೆಯದು, ಇದು ಜಸ್ಟ್ ಮದುವೆ ಪ್ರಪೋಸಲ್‌. ನೀವು ನಿಮ್ಮ ಸಂಬಂಧದ ಬಗ್ಗೆ ಹೊರ ಜಗತ್ತಿಗೆ ತಿಳಿಸಲು ಇಷ್ಟಪಡುವುದಾದರೆ ಎಂಗೇಜ್‌ಮೆಂಟ್‌ವರೆಗೆ ಕಾಯುವುದು ಒಳ್ಳೆಯದು.

ಬೇರೆ ಕಾರ್ಯಕ್ರಮದ ಜೊತೆ ಮದುವೆ ಪ್ರಪೋಸಲ್ ಕಾರ್ಯಕ್ರಮ ಇಡಬಾರದು

ಬೇರೆ ಕಾರ್ಯಕ್ರಮದ ಜೊತೆ ಮದುವೆ ಪ್ರಪೋಸಲ್ ಕಾರ್ಯಕ್ರಮ ಇಡಬಾರದು

ಮದುವೆ ಪ್ರಪೋಸಲ್ ಅಥವಾ ಹೆಣ್ಣು-ಗಂಡು ನೋಡುವ ಶಾಸ್ತ್ರ ಇಟ್ಟುಕೊಳ್ಳಬೇಡಿ, ಇತ್ತ ಇವರನ್ನು ಗಮನಿಸಲೂ ಸಾಧ್ಯವಾಗಲ್ಲ, ಅತ್ತ ಕಾರ್ಯಕ್ರಮದ ಖುಷಿ ಅನುಭವಿಸಲೂ ಸಾಧ್ಯವಾಗಲ್ಲ, ಒಂಥರಾ ಗಡಿಬಿಡಿಯಾಗುತ್ತೆ ಆದ್ದರಿಂದ ಈ ಕಾರ್ಯಕ್ರಮವನ್ನು ಬೇರೆ ಕಾರ್ಯಕ್ರಮದ ಜೊತೆ ಮಿಕ್ಸ್ ಮಾಡಬೇಡಿ.

ಹೆಣ್ಣು ಗಂಡು ಮನಸ್ಸು ಬಿಚ್ಚು ಮಾತನಾಡಬೇಕು

ಹೆಣ್ಣು ಗಂಡು ಮನಸ್ಸು ಬಿಚ್ಚು ಮಾತನಾಡಬೇಕು

ಮದುವೆ ಪ್ರಪೋಸಲ್ ಬಂದಾಗ ಎಲ್ಲಾ ಒಕೆಯಾದರೆ ನಂತರ ಮನೆಯವರು ನಿಶ್ಚಿತಾರ್ಥದ ಮಾತುಕತೆ ನಡೆಸಬಹುದು. ನಿಶ್ಚಿತಾರ್ಥಕ್ಕೆ ಮುನ್ನ ಇಬ್ಬರಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಬೇಕೆಂದು ಅನಿಸಿದರೆ ಮನೆಯವರ ಬಳಿ ಈ ಕುರಿತು ಹೇಳಿ.

ಇನ್ನು ಅರೇಂಜ್‌ ಮ್ಯಾರೇಜ್ ಆಗಿದ್ದರೆ ಹೆಣ್ಣು-ಗಂಡು ತಮ್ಮ ಇಷ್ಟ-ಕಷ್ಟಗಳ ಬಗ್ಗೆ ಓಪನ್‌ ಆಗಿ ಮಾತನಾಡಿ. ಈ ಹಿಂದೆ ಯಾರನ್ನಾದರೂ ಪ್ರೀತಿಸಿದ್ದರೆ, ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದರ ಬಗ್ಗೆ, ಎಷ್ಟು ಸಂಪಾದನೆ ಇದೆ ಎಂದೆಲ್ಲಾ ವಿಚಾರ ಓಪನ್ ಆಗಿ ಮಾತನಾಡಿದರೆ ಒಳ್ಳೆಯದು.

ಇವೆಲ್ಲಾ ಮುಚ್ಚಿಟ್ಟು ಮದುವೆಯಾದರೆ ಸಮಸ್ಯೆ ತಪ್ಪಿದ್ದಲ್ಲ ನೆನಪಿರಲಿ.

English summary

Common Marriage Proposal Mistakes to Avoid in Kannada

Marriage Proposal: Never make common marriage proposal mistake, read on...
Story first published: Sunday, December 18, 2022, 21:35 [IST]
X
Desktop Bottom Promotion