For Quick Alerts
ALLOW NOTIFICATIONS  
For Daily Alerts

ಕಪಲ್‌ ಯೋಗ ಮಾಡಿದರೆ ದಂಪತಿ ನಡುವೆ ಕುಚ್‌ ಕುಚ್ ಹೋತಾ ಹೈ

|

ಪಾರ್ಟನ್ನರ್‌ ಯೋಗ ಅಥವಾ ಕಪಲ್‌ ಯೋಗದ ಬಗ್ಗೆ ಕೇಳಿರುತ್ತೀರಿ. ಈ ಯೋಗ ಭಂಗಿಗಳನ್ನು ಮಾಡಲು ಇಬ್ಬರು ಬೇಕ, ಅದರಲ್ಲಿ ಸಂಗಾತಿ ಜೊತೆಗೆ ಯೋಗ ಮಾಡುವಾಗ ಈ ಯೋಗ ಭಂಗಿಗಳು ನಿಮ್ಮಿಬ್ಬರ ನಡುವಿನ ಅನ್ಯೂನ್ಯತೆ ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ.

ಎಷ್ಟೋ ಕುಟುಂಬಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸದಲ್ಲಿ ತುಂಬಾ ಬ್ಯುಸಿ ಇರುತ್ತಾರೆ, ತಮ್ಮ-ತಮ್ಮ ಕೆಲಸಗಳಲ್ಲಿ ಮುಳುಗಿರುವವರು ಅರ್ಧ ಗಂಟೆ ಜೊತೆಯಾಗಿ ಯೋಗ ಅಭ್ಯಾಸ ಮಾಡುವುದರಿಂದ ದಾಂಪತ್ಯ ಜೀವನ ಮತ್ತಷ್ಟು ಗಟ್ಟಿಯಾಗುವುದರಲ್ಲಿ ಯಾವುದೇ ಡೌಟಿಲ್ಲ...

ಕಪಲ್‌ ಯೋಗದಲ್ಲಿ ಹಲವಾರು ಭಂಗಿಗಳಿವೆ. ನೀವು ಸರಳವಾದ ಭಂಗಿಯನ್ನು ಮೊದಲಿಗೆ ಅಭ್ಯಾಸ ಮಾಡಿ, ಕ್ರಮೇಣ ಅಡ್ವಾನ್ಸ್ ಭಂಗಿಗಳನ್ನು ಟ್ರೈ ಮಾಡಬಹುದು.

ದೇಹದ ಫಿಡ್ನೆಸ್ ಕಾಪಾಡಲು ವಾರದಲ್ಲಿ 5 ದಿನ ಯೋಗಾಭ್ಯಾಸ ಮಾಡಿ, ಅದರಲ್ಲಿ ಒಂದು ಅಥವಾ ಎರಡು ದಿನ ಕಪಲ್ ಯೋಗ ಮಾಡಿದರೆ ನಿಮ್ಮಿಬ್ಬರ ಬಂಧದಲ್ಲಿ ರೊಮ್ಯಾನ್ಸ್‌ ಹೆಚ್ಚಲು ಕಾರಣವಾಗುವುದು. ಜೊತೆಯಾಗಿ ಮಾಡುವ ಈ ಯೋಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಂತೆ ಮಾಡುವುದರ ಜೊತೆಗೆ ಇಬ್ಬರೂ ದೇಹದ ಫಿಟ್ನೆಸ್ ಕಡೆ ಗಮನ ನೀಡಲು ಸಾಧ್ಯವಾಗುವುದು.

ನೀವು ಕಪಲ್ ಯೋಗ ಮಾಡಿದರೆ ನಿಮ್ಮಿಬ್ಬರಿಗೆ ಸಿಗುವ ಲಾಭಗಳಿವು ನೋಡಿ:

ಅನ್ಯೂನ್ಯತೆ ಹೆಚ್ಚುವುದು, ಮನಸ್ಸು ರಿಲ್ಯಾಕ್ಸ್ ಆಗುವುದು

ಅನ್ಯೂನ್ಯತೆ ಹೆಚ್ಚುವುದು, ಮನಸ್ಸು ರಿಲ್ಯಾಕ್ಸ್ ಆಗುವುದು

ಕಪಲ್ ಯೋಗ ಅಭ್ಯಾಸ ಮಾಡುವುದರಿಂದ ನಮ್ಮ ಸಂಗಾತಿ ನಮ್ಮ ಮನಸ್ಸಿಗೆ ಮತ್ತಷ್ಟು ಸಮೀಪವಾಗುತ್ತಾರೆ. ಇಬ್ಬರಲ್ಲಿರು ಅನಗ್ಯತ ಮುನಿಸು, ತಳಮಳ ಎಲ್ಲವೂ ದೂರವಾಗಿ ಮನಸ್ಸು ರಿಲ್ಯಾಕ್ಸ್ ಆಗುವುದು.

ಯೋಗ ಅಭ್ಯಾಸಕ್ಕೆ ಬೆಂಬಲ ಸಿಗುವುದು

ಯೋಗ ಅಭ್ಯಾಸಕ್ಕೆ ಬೆಂಬಲ ಸಿಗುವುದು

ಗಂಡ-ಹೆಂಡತಿ ಇಬ್ಬರು ಜೊತೆಯಾಗಿ ವ್ಯಾಯಾಮ ಅಭ್ಯಾಸ ಮಾಡುವುದರಿಂದ ಇಬ್ಬರೂ ಫಿಟ್‌ ಆಗಿರಬಹುದು, ಅಲ್ಲದೆ ಒಬ್ಬರು ವ್ಯಾಯಾಮ ಮಾಡುವಾಗ ಮತ್ತೊಬ್ಬರು ಸೋಮಾರಿಯಾಗಿದ್ದರೆ ಇವರಿಗೂ ಉದಾಸೀನ ಬರುವ ಸಾಧ್ಯತೆ ಇದೆ. ಒಬ್ಬರು ಜೊತೆಯಾಗಿ ಯೋಗ ಅಭ್ಯಾಸ ಮಾಡಿದಾಗ ಯೋಗ ಮಾಡಲು ಉತ್ಸಾಹ ತೋರುವಿರಿ, ಅಲ್ಲದೆ ಇಬ್ಬರೂ ದೈಹಿಕ ಫಿಟ್ನೆಸ್ ಕಾಪಾಡಬಹುದು.

ಸಂಗಾತಿಯಲ್ಲಿ ನಿಯತ್ತು ಹೆಚ್ಚುವುದು

ಸಂಗಾತಿಯಲ್ಲಿ ನಿಯತ್ತು ಹೆಚ್ಚುವುದು

ಇಬ್ಬರ ಮನಸ್ಸು ಒಂದಾದಾಗ, ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುವಾಗ ಸಂಗಾತಿಗೆ ಮೋಸ ಮಾಡಲು ಮನಸ್ಸಾಗಲ್ಲ, ಇದು ನಿಯತ್ತು ಹೆಚ್ಚಿಸುತ್ತದೆ. ಇಬ್ಬರ ನಡುವೆ ಹೊಂದಾಣಿಕೆಯಿಲ್ಲದಿದ್ದಾಗ ಮಾತ್ರ ಮೋಸ ಸಂಭವಿಸುವುದು. ಈ ಯೋಗ ಇಬ್ಬರ ನಡುವಿನ ಬಾಂಧವ್ಯ ಬಲವಾಗಿಸುವುದು.

ನಿಮ್ಮ ಸಂಬಂಧ ಏನೆಂದು ತಿಳಿಯಲು ಈ ಕಪಲ್ ಯೋಗ ಸಹಕಾರಿ

ನಿಮ್ಮ ಸಂಬಂಧ ಏನೆಂದು ತಿಳಿಯಲು ಈ ಕಪಲ್ ಯೋಗ ಸಹಕಾರಿ

ಕಪಲ್ ಯೋಗ ಮಾಡುವಾಗ ನಿಮ್ಮ ಸಂಗಾತಿಯ ಬಿಸಿಯುಸಿರು ನಿಮ್ಮನ್ನು ತಾಗುವುದು, ಅದುವೇ ಒಂದು ರೋಮಾಂಚನ ತರುವುದು, ಇಬ್ಬರ ನಡುವೆ ರೊಮ್ಯಾಂಟಿಕ್ ಫೀಲ್ ಹೆಚ್ಚುವುದು. ಒಂದು ವೇಳೆ ಆ ರೀತಿ ಆಗದೇ ಹೋದರೆ ಆ ಸಂಬಂಧದಲ್ಲಿ ಏನೋ ಮಿಸ್‌ ಹೊಡೆಯುತ್ತಿದೆ ಎಂದರ್ಥ. ಕಪಲ್‌ ಯೋಗ ನಮ್ಮ ಸಂಬಂಧ ಯಾವ ರೀತಿಯದ್ದು ಎಂದು ತಿಳಿಯಲು ಸಹಕಾರಿಯಾಗಿದೆ.

ಸಂಬಂಧದಲ್ಲಿ ತಾಜಾತನ ಮೂಡಿಸುವುದು

ಸಂಬಂಧದಲ್ಲಿ ತಾಜಾತನ ಮೂಡಿಸುವುದು

ಮದುವೆಯಾದಾಗ ಹೊಸದರಲ್ಲಿದ್ದ ಕೇರ್‌, ರೊಮ್ಯಾನ್ಸ್ ವರ್ಷಗಳು ಕಳೆಯುತ್ತಿದ್ದಂತೆ ಕಡಿಮೆಯಾಗುವುದು ಸಹಜ, ಆದರೆ ನಂತರದ ದಿನಗಳಲ್ಲಿ ಅವು ಸಂಪೂರ್ಣ ಕಣ್ಮರೆಯಾದರೆ ಆ ಸಂಸಾರದಲ್ಲಿ ಸಮಸ್ಯೆಗಳು ಪ್ರಾರಂಭವಾಗುವುದು. ಈ ಕಪಲ್‌ ಯೋಗ ಇಬ್ಬರ ನಡುವಿನ ಪ್ರೀತಿ, ರೊಮ್ಯಾನ್ಸ್ ಮಾಸದಂತೆ ಕಾಪಾಡಲು ಸಹಕಾರಿ

English summary

Benefits Of Couple Yoga On And Off Mat

Here is benefits of couple yoga on and off mat, read on...
Story first published: Monday, June 21, 2021, 20:47 [IST]
X
Desktop Bottom Promotion