For Quick Alerts
ALLOW NOTIFICATIONS  
For Daily Alerts

ಪ್ರೀತಿ ಒಂದು ಮಾದಕ ಔಷಧಿಯಿದ್ದಂತೆ! ಏಕೆಂದು ಗೊತ್ತೇ?

By Arshad
|

ನೀವು ಎದುರಿಸುವ ಭೀತಿ, ಮನದಲ್ಲಿ ಉಂಟಾಗುವ ಗೊಂದಲ, ಉಕ್ಕುತ್ತಿದ್ದು ತಡೆಯಲಾರದ ಭಾವನೆಗಳು ಮೊದಲಾದವುಗಳನ್ನು ಇಂದು ವಿಜ್ಞಾನ ಚೆನ್ನಾಗಿ ವಿವರಿಸಬಲ್ಲುದು. ಇದು ನಿಮ್ಮಲ್ಲಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ವಾಸ್ತವವಾಗಿ ಪ್ರೀತಿ ಒಂದು ವ್ಯಸನ ಇದ್ದಂತೆ! ನೀವು ಅಪಾರವಾಗಿ ಪ್ರೀತಿಸುವ ವ್ಯಕ್ತಿಗೆ ಏನು ಬೇಕಾದರೂ ನೀಡಬಯಸುವ ಮನೋಭಾವ ಹೊಂದಿದ್ದರೆ ಇದಕ್ಕೆ ಏನು ಕಾರಣ ಎಂಬುದನ್ನು ವಿಜ್ಞಾನ ವಿವರಿಸುತ್ತದೆ.

ಹೌದು, ಪ್ರೀತಿ ಒಂದು ಮಾದಕ ಔಷಧಿಯಿದ್ದಂತೆ! ಸತತವಾದಂತೆ ಇದು ವ್ಯಸನಕ್ಕೆ ತಿರುಗುತ್ತದೆ. ಇದು ಒಳ್ಳೆಯದೋ ಕೆಟ್ಟದ್ದೋ? ಇದು ನೀವು ಪ್ರೀತಿಸುವ ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ಒಳ್ಳೆಯ ಸಂಬಂಧಗಳು ನಿಮ್ಮ ಜೀವನವನ್ನು ಸ್ವರ್ಗವಾಗಿಸಿದರೆ ಕೆಟ್ಟ ಸಂಬಂಧಗಳು ಜೀವನವನ್ನೇ ನರಕವಾಗಿಸಬಹುದು. ಆದ್ದರಿಂದ ಪ್ರೀತಿಯ ವ್ಯಸನಕ್ಕೆ ಬೀಳುವ ಮುನ್ನ ನಿಮ್ಮ ಪ್ರೀತಿಗೆ ಆ ವ್ಯಕ್ತಿ ಅರ್ಹರೋ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಬೇಕು.

ಒಂದು ವೇಳೆ ನೀವು ಪ್ರೀತಿಸುವ ವ್ಯಕ್ತಿಯೂ ನಿಮ್ಮನ್ನು ಅಷ್ಟೇ ಪ್ರೀತಿಸುತ್ತಿದ್ದರೆ ನಿಮ್ಮ ಜೀವನ ಸುಖದ ಉತ್ತುಂಗದಲ್ಲಿದೆ ಎಂದು ತಿಳಿಯಬಹುದು. ಪ್ರೀತಿ ಅಸಾಧ್ಯವಾದುದನ್ನೂ ಮಾಡಿ ತೋರಿಸುವ ಪರಿಯನ್ನು ವಿಜ್ಞಾನಿಗಳು ಮತ್ತು ಕಲಾವಿದರು ಸದಾ ಚಕಿತ ದೃಷ್ಟಿಯಿಂದಲೇ ಗಮನಿಸುತ್ತಾ ಬಂದಿದ್ದಾರೆ. ಬನ್ನಿ, ಈ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ...

ಪ್ರೀತಿಗೆ ಕಣ್ಣಿಲ್ಲ!

ಪ್ರೀತಿಗೆ ಕಣ್ಣಿಲ್ಲ!

ನಮ್ಮ ಮೆದುಳಿನಲ್ಲಿ ತಾರ್ಕಿಕವಾಗಿ ಹಾಗೂ ತರ್ಕಬಾಹಿರ ಬದಿಗಳಿವೆ. ಇದರಲ್ಲಿ ಪ್ರೀತಿ ತರ್ಕಬಾಹಿರ ಬದಿಯ ಯೋಚನೆಗಳಾಗಿದ್ದು ಇದನ್ನೇ ನಾವು ಹೃದಯ ಎಂದು ಕರೆಯುತ್ತೇವೆ. ಪ್ರೀತಿಯಲ್ಲಿದ್ದಾಗ, ಲಾಭಕ್ಕೆ, ಸ್ವಾರ್ಥಕ್ಕೆ ಜಾಗ ಇರುವುದಿಲ್ಲ. ಹೌದು, ಪ್ರೀತಿಗೆ ಕಣ್ಣಿಲ್ಲ ಎಂದು ಇದಕ್ಕೇ ಹೇಳುವುದು.

ಆ ರೋಮಾಂಚನವೇ ಬೇರೆ!

ಆ ರೋಮಾಂಚನವೇ ಬೇರೆ!

ಅಪಾರವಾಗಿ ಪ್ರೀತಿಸುವ ವ್ಯಕ್ತಿಗಳ ಮೆದುಳಿನ ಚಟುವಟಿಕೆಯನ್ನು ಗಮನಿಸಿದ ವಿಜ್ಞಾನಿಗಳು ಇವರಲ್ಲಿ ಪ್ರೀತಿಯ ಮನೋಭಾವ ಅತಿ ಹೆಚ್ಚಿನ ಮೌಲ್ಯವನ್ನು ಪಡೆದಿರುವುದನ್ನು ಗಮನಿಸಿದರು. ತಾವು ಪ್ರೀತಿಸುವ ವ್ಯಕ್ತಿಯ ಬಗ್ಗೆ ಬರೆಯ ಯೋಚಿಸುವುದರಿಂದ ಅಥವಾ ಇವರ ಹೆಸರು ಕೇಳಿದರೇ ಸಾಕು ಇವರು ಪುಳಕಿತಗೊಳ್ಳುತ್ತಿದ್ದರು.

ಆ ರೋಮಾಂಚನವೇ ಬೇರೆ!

ಆ ರೋಮಾಂಚನವೇ ಬೇರೆ!

ಪ್ರೀತಿಯಲ್ಲಿರುವ ವ್ಯಕ್ತಿಗಳ ಯೋಚನಾಶಕ್ತಿ ಸ್ಪಷ್ಟವಾಗಿ ಏಕಿರುವುದಿಲ್ಲ? ಈ ಬಗ್ಗೆ ಅಧ್ಯಯನ ನಡೆಸಿದ ವಿಜ್ಞಾನಿಗಳಿಗೆ ಕಂಡುಬಂದ ಅಚ್ಚರಿಯ ವಿಷಯವೆಂದರೆ ಪ್ರೀತಿಯಲ್ಲಿರುವ ವ್ಯಕ್ತಿಗಳ ಮೆದುಳಿನ ಮುಂದಿನ ಭಾಗ ತನ್ನ ಸಾಮಾನ್ಯ ಸಾಮರ್ಥ್ಯಕ್ಕೂ ಕಡಿಮೆ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ. ಒಂದರ್ಥದಲ್ಲಿ ಪ್ರೀತಿ ಈ ಭಾಗದ ಮೇಲೆ ಮಂಕು ಕವಿದಿರುವಂತೆ ಮಾಡುತ್ತದೆ. ಪರಿಣಾಮವಾಗಿ ಇವರು ನಿರ್ಧಾರಗಳನ್ನು ಕೈಗೊಳ್ಳುವ ಕ್ಷಮತೆಯನ್ನು ಉಳಿದವರಿಗಿಂತ ಕಡಿಮೆ ಹೊಂದಿರುತ್ತಾರೆ.

ವಿಜ್ಞಾನಿಗಳ ಪ್ರಕಾರ..

ವಿಜ್ಞಾನಿಗಳ ಪ್ರಕಾರ..

ನಿಮ್ಮ ಪ್ರೀತಿಪಾತ್ರದ ಚಿತ್ರವನ್ನು ನೋಡಿದರೂ ಸಾಕು, ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಕೊನೆ ಬೀಳುತ್ತದೆ. ವಿಜ್ಞಾನಿಗಳ ಪ್ರಕಾರ ಇವರ ಮೆದುಳಿನ ಕೆಲವು ಭಾಗಗಳು ಆ ಚಿತ್ರವನ್ನು ನೋಡಿದಾಕ್ಷಣ ಉಳಿದೆಲ್ಲಾ ಭಾವಗಳು ಮರೆಯಾಗುತ್ತವೆ. ಇದೇ ಕಾರಣಕ್ಕೆ ಕೆಲವು ವಾಹನ ಚಾಲಕರು ವಾಹನದ ವೇಗಮಿತಿಯ ಮುಳ್ಳು ಒಂದು ಹಂತ ಮೀರುವ ಸ್ಥಳದಲ್ಲಿ ತಮ್ಮ ಪ್ರೀತಿಪಾತ್ರರ ಚಿಕ್ಕ ಚಿತ್ರವೊಂದನ್ನು ಅಂಟಿಸಿರುತ್ತಾರೆ.

ಮನಬಿಚ್ಚಿ ಮಾತನಾಡಬೇಕು ಅನಿಸುತ್ತದೆ...

ಮನಬಿಚ್ಚಿ ಮಾತನಾಡಬೇಕು ಅನಿಸುತ್ತದೆ...

ತಮ್ಮ ಪ್ರೀತಿಪಾತ್ರರ ಬಗ್ಗೆ ಹೇಳಿಕೊಳ್ಳುವುದರಲ್ಲಿ ಇವರು ಸಾರ್ಥಕ ಭಾವನೆಯನ್ನು ಅನುಭವಿಸುತ್ತಾರೆ. ಇವರಲ್ಲಿ ಋಣಾತ್ಮಕ ಗುಣಗಳಿದ್ದರು ಸಹಾ! ಏಕೆಂದರೆ ಈ ಸ್ಥಿತಿಯಲ್ಲಿ ನಿಮ್ಮ ತಾರ್ಕಿಕ ಯೋಚನಾಭಾವ ಪ್ರೀತಿಯ ಮುಸುಕು ಹೊದ್ದಿರುವಂತೆ ಅನ್ನಿಸುತ್ತದೆ. ಆ ವ್ಯಕ್ತಿ ಇತರರಿಗೆ ಎಷ್ಟೇ ಕೆಟ್ಟವರಾಗಿದ್ದರೂ ನಿಮಗೆ ಮಾತ್ರ ಇವರೊಂದಿಗೆ ಮನಬಿಚ್ಚಿ ಮಾತನಾಡಬೇಕು ಹಾಗೂ ಒಳ್ಳೆಯ ವ್ಯಕ್ತಿಯೇ ಎಂದು ಅನ್ನಿಸುತ್ತದೆ. ಕಳ್ಳನ ಹೆಂಡತಿಗೆ ಕಳ್ಳನೇ ಹೀರೋ ಅಲ್ಲವೇ?

ಮನದಲ್ಲಿ ಮೂಡುವ ಆ ಸಂಚಲನ

ಮನದಲ್ಲಿ ಮೂಡುವ ಆ ಸಂಚಲನ

ನಮ್ಮ ಮನದಲ್ಲಿ ಮೂಡುವ ಭಯವನ್ನು ನಿಯಂತ್ರಿಸುವ ಮೆದುಳಿನ ಭಾಗ ಪ್ರೀತಿಯ ಸಮಯದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದೇ ಕಾರಣಕ್ಕೆ ಪ್ರೀತಿಪಾತ್ರರು ಕೇಳುವ ಯಾವುದೇ ಕೋರಿಕೆಯನ್ನು ಪೂರೈಸಲು ಇವರು ಹಿಂದೆ ಸರಿಯುವುದಿಲ್ಲ. ಬರೆಯ ಒಂದು ಹೂವು ತರಲು ಭೀಮ ಹಿಮಾಯಲಕ್ಕೆ ಹೋಗಲಿಲ್ಲವೇ? ಈ ವಿಷಯವನ್ನು ಆಧರಿಸಿ ಅದೆಷ್ಟು ಸಿನೆಮಾಗಳು ತಯಾರಾಗಿಲ್ಲ!

ಪ್ರೀತಿ ಒಂದು ಮಾದಕ ದ್ರವ್ಯದಂತೆ...

ಪ್ರೀತಿ ಒಂದು ಮಾದಕ ದ್ರವ್ಯದಂತೆ...

ವಿಜ್ಞಾನಿಗಳ ಪ್ರಕಾರ ಮಾದಕ ಪದಾರ್ಥಗಳಾದ ಕೋಕೇಯ್ನ್ ಮತ್ತಿತರ ವ್ಯಸನಕಾರಿ ವಸ್ತುಗಳ ಸೇವನೆಯಂತೆಯೇ ಪ್ರೀತಿಯೂ ಸಹಾ ಒಂದು ಬಗೆಯ ವ್ಯಸನವಾಗಿದೆ. ಇದೇ ಕಾರಣಕ್ಕೆ ಇದನ್ನೊಂದು ಮಾದಕ ಔಷಧಿ ಎಂದೂ ಕರೆಯಬಹುದು.

ಮನದಲ್ಲಿ ಮೂಡುವ ಅಪಾರವಾದ ಆನಂದ, ಸುಖಭಾವನೆ, ಸುರಕ್ಷತೆ

ಮನದಲ್ಲಿ ಮೂಡುವ ಅಪಾರವಾದ ಆನಂದ, ಸುಖಭಾವನೆ, ಸುರಕ್ಷತೆ

ನಿಮ್ಮನ್ನು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಚುಂಬಿಸಿದಾಗ ನಿಮ್ಮ ದೇಹದಲ್ಲಿ ಒಸರುವ ಕೆಲವು ರಾಸಾಯನಿಕಗಳು ನಿಮ್ಮ ಮನದಲ್ಲಿ ಅಪಾರವಾದ ಆನಂದ, ಸುಖಭಾವನೆ, ಸುರಕ್ಷತೆ ಹಾಗೂ ಆತನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಪ್ರೀತಿ ಒಂದು ವ್ಯಸನ ಎಂದು ಹೇಳಬಹುದು. ಆದರೆ ಪ್ರೀತಿಯಲ್ಲಿದ್ದಾಗ ನೀವು ಒಳ್ಳೆಯ ಭಾವನೆಯನ್ನು ಹೊಂದುವುದು ಹಾಗೂ ಯಾವಾಗ ಈ ಪ್ರೀತಿ ದ್ವೇಶಕ್ಕೆ ಬದಲಾಗುತ್ತದೆಯೋ ಆಗ ನಿಮ್ಮೊಳಗಿನ ರಾಕ್ಷಸ ವಿಜೃಂಭಿಸುವುದು ಏಕೆ ಎಂಬುದನ್ನು ಇದುವರೆಗೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಪ್ರೀತಿಯಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಈ ಜೀವನ ಸ್ವರ್ಗಸಮಾನವಾಗಿದೆ.

English summary

Why Love Affects Your Brain Like a Drug

Love is the highest goal of your life if you have landed in the right person's lap. Scientists and artists have always wondered why love acts like a drug on the system. And here are some insights...
X
Desktop Bottom Promotion