For Quick Alerts
ALLOW NOTIFICATIONS  
For Daily Alerts

ನಿಮ್ಮ ಇಂತಹ ತಪ್ಪುಗಳಿಂದಲೇ ಹುಡುಗಿಯ ಮನಸ್ಸು ಮೂಡ್ ಆಫ್ ಆಗುವುದು!

|

ಜೀವನ ಎಂದ ಮೇಲೆ ಅದರಲ್ಲಿ ಬಹಳಷ್ಟು ಪ್ರೀತಿ, ಒಂಚೂರು ಮುನಿಸು, ಆಗಾಗ ಕಷ್ಟಗಳು ಹೀಗೆ ಎಲ್ಲವೂ ಇರಲೇಬೇಕು. ಅದರಲ್ಲೂ ಸಂಗಾತಿಗಳಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಪ್ರೀತಿಯಿಂದ ಇದ್ದರೂ ಕೆಲವೊಮ್ಮೆ ಚಿಕ್ಕ ವಿಷಯಗಳಿಗೆ ಮುನಿಸು ಕಾಣಿಸಿಕೊಳ್ಳುವುದು ಸಹಜ. ಹೀಗಾದಾಗ ಪುರುಷನಿಗೆ ಕಾಡುವ ಒಂದೇ ಒಂದು ದೊಡ್ಡ ಪ್ರಶ್ನೆಯೆಂದರೆ 'ಅವಳೇನು ಬಯಸುತ್ತಾಳೆ?' ಎಂಬುದು. ಎಲ್ಲ ಮುಗಿದುಹೋದ ಮೇಲೆ ಅವಳೇಕೆ ದೂರವಾದಳು ಎಂದು ಬೇಗನೆ ಅರ್ಥವಾಗುವುದೇ ಇಲ್ಲ. ನಿಮ್ಮ ಜೀವದ ಜೀವವಾಗಿರುವ ಅವಳು ಬಿಟ್ಟು ಹೋದಾಗ ಆಗುವ ನೋವು ಅಷ್ಟಿಷ್ಟಲ್ಲ.

ಅದನ್ನು ತಿಳಿದವರೇ ಬಲ್ಲರು. ಆದರೆ ಯಾವೆಲ್ಲ ಕಾರಣಗಳಿಂದ ಪ್ರೀತಿಯ 'ಗರ್ಲ್ ಫ್ರೆಂಡ್' ದೂರಾಗುತ್ತಾಳೆ? ಅಂಥ ಯಾವ ತಪ್ಪುಗಳನ್ನು ಹುಡುಗ ಮಾಡಿದ್ದ? ಈ ಎಲ್ಲ ವಿಷಯಗಳ ಬಗ್ಗೆ ಕೊಂಚ ಚಿಂತಿಸಿ ತಿಳಿದುಕೊಂಡರೆ ಅವಳನ್ನು ಕಳೆದುಕೊಳ್ಳುವ ಸಂದರ್ಭ ಎದುರಾಗದಂತೆ ನೋಡಿಕೊಳ್ಳಬಹುದು. ಅಧ್ಯಯನಗಳ ಪ್ರಕಾರ ಹುಡುಗ ಮಾಡುವ ಪ್ರಮುಖ ತಪ್ಪುಗಳಿಂದ ಅವಳ ಮನಸ್ಸು ಮೂಡ್ ಆಫ್ ಆಗಿ ದೂರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವಂತೆ. ಆ ತಪ್ಪುಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದ್ದು, ಈಗ ತಾನೆ ಪ್ರೀತಿಯಲ್ಲಿ ಬಿದ್ದವರು ನೀವಾಗಿದ್ದರೆ ಓದಿ ಅರ್ಥ ಮಾಡಿಕೊಳ್ಳಿ.

ನಾನೇ ಶ್ರೇಷ್ಠ ಎಂಬುದನ್ನು ಮೊದಲು ಬಿಡಿ!

ನಾನೇ ಶ್ರೇಷ್ಠ ಎಂಬುದನ್ನು ಮೊದಲು ಬಿಡಿ!

ನಿಮ್ಮ ಜೀವನವನ್ನು ಚೆನ್ನಾಗಿ ಕಟ್ಟಿಕೊಳ್ಳುವುದು ಉದಾತ್ತ ವಿಷಯವೇ ಆಗಿದೆ. ಆದರೆ ನನಗಿಂತ ಶ್ರೇಷ್ಠ ಬೇರೆ ಯಾರೂ ಇಲ್ಲ ಎಂಬ ಧೋರಣೆ ಮಾತ್ರ ಎಂದಿಗೂ ಸರಿಯಲ್ಲ. ಪ್ರೀತಿಯಲ್ಲಿ ತಗ್ಗಿ ಬಗ್ಗಿ ನಡೆಯುವುದು ಅನಿವಾರ್ಯ ಎಂಬ ವಾಸ್ತವ ಗೊತ್ತಿರಲಿ. ನಿಮ್ಮ ಹುಡುಗಿಗೆ ಬೇಕಾದ ಪ್ರಾಮುಖ್ಯತೆಯನ್ನು ನೀವು ನೀಡಲೇಬೇಕು. ಅವಳ ಬಗ್ಗೆ ಒಂದಿಷ್ಟು ಕಾಳಜಿ ವಹಿಸಿ ನಾಲ್ಕು ಸಿಹಿ ಮಾತುಗಳನ್ನಾಡುವುದು, ನಿಮ್ಮ ಮನಸಿನಲ್ಲಿ ಅವಳಿಗಾಗಿ ವಿಶೇಷ ಸ್ಥಾನವಿದೆ ಎಂಬುದನ್ನು ತೋರಿಸಿಕೊಡುವುದು ಅಗತ್ಯ. ಇದನ್ನು ಅವಳು ಬಯಸುತ್ತಾಳೆ ಕೂಡ. ಹೀಗಾಗಿ ಪ್ರೀತಿಯ ಸಂಬಂಧದಲ್ಲಿ ನಾನೇ ಶ್ರೇಷ್ಠ ಎಂಬುದು ಅವಳನ್ನು ದೂರ ಮಾಡಿಕೊಳ್ಳುವ ಕಾರಣವಾಗದಂತೆ ಎಚ್ಚರಿಕೆ ವಹಿಸಿ.

ಸಾಮೀಪ್ಯಕ್ಕೂ ಒಂದು ಮಿತಿ ಇರಲಿ

ಸಾಮೀಪ್ಯಕ್ಕೂ ಒಂದು ಮಿತಿ ಇರಲಿ

ಒಲಿದು ಬಂದ ಹುಡುಗಿಯ ಜೊತೆ ಇರುವಾಗ ಮನಸು ಸಾಮೀಪ್ಯಕ್ಕೆ ಹಾತೊರೆಯುವುದು ಸಹಜ. ಆದರೆ ಇದಕ್ಕೂ ಒಂದು ಮಿತಿ ಇರಬೇಕಾಗುತ್ತದೆ. ಮೊದಲ ಭೇಟಿಯಲ್ಲೇ ಅವಳನ್ನು ಮುಟ್ಟುವುದಾಗಲಿ, ಸೆಕ್ಸ್‌ಗೆ ಕರೆಯುವುದಾಗಲಿ ಸರಿಯಾಗಲಾರದು. ಮೊದಲು ಅವಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ. ನಂತರ ತಮಾಷೆ ಹಾಗೂ ಪ್ರೀತಿಯಿಂದಲೇ ಅವಳ ಸಾಮೀಪ್ಯಕ್ಕೆ ಪ್ರಯತ್ನಿಸಿ ನೋಡಿ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗ ಅವಳ ಬಯಕೆಗಳು ನಿಮಗೆ ಅರ್ಥವಾಗಲಾರಂಭಿಸುತ್ತವೆ. ಈ ಹಂತದಲ್ಲಿ ನಿಧಾನವಾಗಿ ಅವಳ ಸಾಮೀಪ್ಯವನ್ನು ಪ್ರೀತಿಯಿಂದಲೇ ಪಡೆಯಬಹುದು ಎಂಬುದು ಗೊತ್ತಿರಲಿ. ಅಷ್ಟೆ ಅಲ್ಲದೆ ಅವಳಾಗಿಯೇ ನಿಮ್ಮ ಬಳಿಗೆ ಬಂದರೆ ಅದಕ್ಕಿಂತ ಇನ್ನೇನು ಬೇಕು? ಅದಕ್ಕಾಗಿ ತಾಳ್ಮೆ ಇರಲಿ.

ವಿಚಿತ್ರ ಡ್ರೆಸ್ ಹಾಕಿಕೊಂಡು ಅವಳೆದುರಿಗೆ ನಿಲ್ಲಬೇಡಿ!

ವಿಚಿತ್ರ ಡ್ರೆಸ್ ಹಾಕಿಕೊಂಡು ಅವಳೆದುರಿಗೆ ನಿಲ್ಲಬೇಡಿ!

ಅವಳ ಜೊತೆಗಿನ ಆರಂಭದ ಭೇಟಿಗಳಲ್ಲಿ ತೀರಾ ವಿಚಿತ್ರವಾಗಿ ಡ್ರೆಸ್ ಮಾಡಿಕೊಳ್ಳುವುದು ಅಗತ್ಯವಿಲ್ಲ. ದೇಹದ ಬೇಡವಾದ ಅಂಗದ ಸೀಳು ತೋರಿಸುವ ಇಳಿಬಿದ್ದ ಜೀನ್ಸ್ ಧರಿಸುವುದು, ಹೊಲಸು ಶೂಸ್, ಕಿತ್ತು ಹೋದ ಹಳೆಯ ಬೆಲ್ಟ್ ಧರಿಸಿಕೊಂಡು ಹೋಗುವುದು ಅಥವಾ ಕೆದರಿದ ಕೂದಲನ್ನು ಹಾಗೆಯೇ ಬಿಟ್ಟುಕೊಂಡು ಅಡ್ಡಾದಿಡ್ಡಿಯಾಗಿರುವುದು, ದೊಡ್ಡ ಗಾತ್ರದ ಕೈಗಡಿಯಾರ ಧರಿಸುವುದು, ಮತ್ತಿನ್ನೇನೋ ಬೇಡವಾದ ಚೇನ್ ಇತ್ಯಾದಿಗಳನ್ನು ಮೈಮೇಲೆ ಹೇರಿಕೊಂಡು ಅವಳ ಮುಂದೆ ನಿಲ್ಲುವುದು ಯಾವತ್ತಿಗೂ ಸರಿಯಲ್ಲ. ಅವಳನ್ನು ಭೇಟಿಯಾಗಲು ಹೋಗುವಾಗ ಆದಷ್ಟೂ ನೀವು ನೀವಾಗಿರಲು ಯತ್ನಿಸಿ. ಇಲ್ಲದಿರುವುದರ ತೋರಿಕೆ ಬೇಕಾಗಿಲ್ಲ. ಸಾದಾ ಉಡುಪು ಧರಿಸಿ ನೀಟಾಗಿದ್ದರೆ ಸಾಕು.

Most Read: ಹೆಂಡತಿಯು ತನ್ನ ಗಂಡನಲ್ಲಿ ಎಂದೂ ಹಂಚಿಕೊಳ್ಳದ ಕೆಲವೊಂದು ಗುಟ್ಟುಗಳು

ಹಿಂದಿನ ’ಗರ್ಲ್ ಫ್ರೆಂಡ್’ ಯಾರೆಂಬುದು ಈಗ ಬೇಕಿಲ್ಲ

ಹಿಂದಿನ ’ಗರ್ಲ್ ಫ್ರೆಂಡ್’ ಯಾರೆಂಬುದು ಈಗ ಬೇಕಿಲ್ಲ

ಅವಳ ಜೊತೆಗಿರುವಾಗ ನಿಮ್ಮ ಹಿಂದಿನ ಗರ್ಲ್ ಫ್ರೆಂಡ್ ಬಗ್ಗೆ ಹೇಳುವುದು, ಮಾತಿಗೊಮ್ಮೆ ಅವಳು ಹೀಗಿದ್ದಳು, ಹಾಗಿದ್ದಳು ಎನ್ನುವುದು, ಅವಳೊಂದಿಗೆ ಈಕೆಯನ್ನು ಹೋಲಿಸುವುದು ಮಾಡಿದರೆ ಇವಳನ್ನೂ ನೀವು ಬೇಗನೆ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಗೊತ್ತಿರಲಿ. ಇವಳ ಜೊತೆಗಿರುವಾಗಲೂ ಹಳೆಯ 'ಗರ್ಲ್ ಫ್ರೆಂಡ್' ಧ್ಯಾನದಿಂದ ನಿಮಗೆ ಏನೂ ದಕ್ಕಲಾರದು. ಒಲಿದು ಬಂದ ಇವಳೂ ದೂರವಾದಾಳು. ಹೀಗಾಗಿ 'ಎಕ್ಸ್' ಫ್ಯಾಕ್ಟರ್ ಪ್ರಸ್ತಾಪಿಸುವ ಮುನ್ನ ಎಚ್ಚರವಿರಲಿ.

ಸೆಕ್ಸ್ ಬಗ್ಗೆಯೇ ಮಾತು ಬೇಕಿಲ್ಲ

ಸೆಕ್ಸ್ ಬಗ್ಗೆಯೇ ಮಾತು ಬೇಕಿಲ್ಲ

ಪ್ರಥಮ ಭೇಟಿಯಲ್ಲೇ ಅವಳೊಂದಿಗೆ ಸೆಕ್ಸ್ ಬಗ್ಗೆ ಮಾತನಾಡುವುದು ಖಂಡಿತ ಸರಿಯಲ್ಲ. ನೀವು ಅವಳಿಂದ ಕೇವಲ ಅದೊಂದನ್ನು ಮಾತ್ರ ಬಯಸುತ್ತಿರುವಿರಿ ಎಂದು ಅವಳಿಗೆ ಅನಿಸಿದರೆ ಅವಳೊಂದಿಗೆ ಬಹುಶಃ ಇನ್ನೊಂದು ಡೇಟ್ ಮಾಡುವುದು ಕಷ್ಟ. ಕೆಲ ಭೇಟಿಗಳ ನಂತರ ಅನ್ಯೋನ್ಯತೆ ಬೆಳೆದು ಸಾಮೀಪ್ಯತೆ ಕೂಡಿದಾಗ ಸೆಕ್ಸ್ ಬಗೆಗಿನ ಮಾತು ತಾವಾಗಿಯೇ ಬರುತ್ತವೆ. ಆ ಕಾಲ ಕೂಡಿ ಬರುವವರೆಗೆ ಸಮಾಧಾನವಿರಬೇಕಾಗುತ್ತದೆ.

Most Read: ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಬೇಕಂತೆ! ಸಂಬಂಧ ಇನ್ನಷ್ಟು ಅನ್ಯೋನ್ಯತೆಯಾಗಿ ಇರುತ್ತದೆಯಂತೆ!

ಸ್ವಚ್ಛತೆ, ಶಿಸ್ತುಗಳು ಜೀವನದ ಅವಿಭಾಜ್ಯ ಅಂಗ

ಸ್ವಚ್ಛತೆ, ಶಿಸ್ತುಗಳು ಜೀವನದ ಅವಿಭಾಜ್ಯ ಅಂಗ

ವ್ಯಕ್ತಿಯೊಬ್ಬನ ಜೀವನದಲ್ಲಿ ಸ್ವಚ್ಛತೆ ಹಾಗೂ ಶಿಸ್ತು ತೀರಾ ಅಗತ್ಯ ಅಂಶಗಳಾಗಿವೆ. ಇದು ಪ್ರೀತಿಯ ಸಂಬಂಧಕ್ಕೂ ಅನ್ವಯಿಸುತ್ತದೆ. ಅದರಲ್ಲೂ ಹುಡುಗಿಯರು ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುತ್ತಾರೆ ಎಂಬುದು ಗೊತ್ತಿರಲಿ. ಹಾಗೆಯೇ ತನ್ನ ಹುಡುಗ ಸ್ವಚ್ಛವಾಗಿ, ಶಿಸ್ತಿನ ಜೀವನ ನಡೆಸುವವನಾಗಿರಬೇಕೆಂದು ಅವರು ಬಯಸುತ್ತಾರೆ. ಯಾರೋ ಕೆಲಸದಾಳು ಬಂದು ಎಲ್ಲವನ್ನೂ ಮಾಡುತ್ತಾರೆ ಬಿಡು, ನಾನೇಕೆ ಕೆಲಸ ಮಾಡಬೇಕೆಂಬ ಧೋರಣೆಯನ್ನು ಹುಡುಗಿಯರು ಸಹಿಸಲಾರರು. ಶಿಸ್ತು ಹಾಗೂ ಸ್ವಚ್ಛವಾಗಿರುವುದು ಸಹ ಅವಳನ್ನು ನಿಮ್ಮತ್ತ ಸೆಳೆಯಲು ಪೂರಕ ಅಂಶಗಳಾಗಿವೆ.

'ಹೇಳಿ ಹೋಗು ಕಾರಣ' ಎಂಬಂತಾಗುವುದು ಬೇಡ

'ಹೇಳಿ ಹೋಗು ಕಾರಣ' ಎಂಬಂತಾಗುವುದು ಬೇಡ

ಪ್ರೀತಿಯ ಅವಳು ಜೀವನದಲ್ಲಿ ಬಂದ ಮೇಲೆ ಅವಳನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಒಲಿದು ಬಂದ ಅವಳು ನಿಮ್ಮದೇ ತಪ್ಪುಗಳಿಂದ ದೂರವಾಗಲು ಬಿಡಬೇಡಿ. ಎಲ್ಲ ಮುಗಿದು ಹೋದ ಮೇಲೆ 'ಹೇಳಿ ಹೋಗು ಕಾರಣ' ಎಂದರೆ ಅದಕ್ಕೇನೂ ಅರ್ಥವಿರಲಾರದು. ಸಿಕ್ಕ ಪ್ರೀತಿಯನ್ನು ಜವಾಬ್ದಾರಿಯಿಂದ ನಿಭಾಯಿಸಿ ಉಳಿಸಿಕೊಳ್ಳಿ.

English summary

things that will turn your girl mood off

Apart from the eternally daunting question, 'what women want' another question that haunts is which of your actions can turn off your woman.So if you already had an amazing first date and looking forward to another, make sure you avoid these cardinal sins, as they would definitely turn off your woman.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more