For Quick Alerts
ALLOW NOTIFICATIONS  
For Daily Alerts

ಪುರುಷರು ಸೆಕ್ಸ್ ಬಳಿಕ ಯಾಕೆ ನಿದ್ರೆಗೆ ಜಾರುತ್ತಾರೆ ಗೊತ್ತೇ?

By Hemanth
|

ಲೈಂಗಿಕ ಕ್ರಿಯೆ ಬಳಿಕ ಹೆಚ್ಚಾಗಿ ಪುರುಷರು ಬೇಗ ನಿದ್ರೆಗೆ ಜಾರುತ್ತಾರೆ ಎನ್ನುವುದು ಮಹಿಳೆಯರು ದೂರು. ಇದು ಸಹಜ ಕೂಡ. ಯಾಕೆಂದರೆ ತನ್ನನ್ನು ಕೆಲವು ಗಂಟೆಗಳಿಂದ ಮುದ್ದಾಡಿದ ಬಳಿಕ ಈಗ ಕ್ಲೈಮ್ಯಾಕ್ಸ್ ತಲುಪಿದ ಬಳಿಕ ನೇರವಾಗಿ ಮಲಗಿ ಬಿಡುವುದು ಯಾವ ನ್ಯಾಯ ಎಂದು ಮಹಿಳೆಯರು ಕೇಳುತ್ತಾರೆ. ಮಹಿಳೆಯರು ಲೈಂಗಿಕ ಕ್ರಿಯೆ ಮುಗಿದ ಬಳಿಕವೂ ಮುದ್ದಾಡಬೇಕೆಂದು ಬಯಸುವರು. ಆದರೆ ಪುರುಷರು ಮಾತ್ರ ನಿದ್ರೆಗೆ ಜಾರುವರು.

ತೃಪ್ತಿದಾಯಕವಾದ ಲೈಂಗಿಕ ಕ್ರಿಯೆ ಬಳಿಕ ಪುರುಷರು ಮಲಗಲು ಕೆಲವು ಜೈವಿಕ ಕಾರಣಗಳು ಕೂಡ ಇದೆ. ಪುರುಷರು ಲೈಂಗಿಕ ಕ್ರಿಯೆ ಬಳಿಕ ತುಂಬಾ ಬಳಲಿರುವ ಕಾರಣದಿಂದಾಗಿ ಅವರು ನಿದ್ರಿಸಲು ಬಯಸುವರು ಎಂದು ಅಧ್ಯಯನಗಳು ಕೂಡ ಹೇಳಿವೆ. ಪುರುಷರ ವೀರ್ಯವು ಹೊರಹೋದಾಗ ದೇಹದಲ್ಲಿ ವಿವಿಧ ರೀತಿಯ ಹಾರ್ಮೋನುಗಳು ಮತ್ತು ರಾಸಾಯನಿಕಗಳು ಬಿಡುಗಡೆಯಾಗುವುದು. ಇದು ಅವರನ್ನು ನಿದ್ರೆಗೆ ಪ್ರೇರೇಪಿಸುವುದು ಮತ್ತು ಎರಡನೇ ಸುತ್ತಿನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ ಇರುವುದು. ಪುರುಷರ ವೀರ್ಯ ಹೊರಹೋದ ವೇಳೆ ದೇಹದಲ್ಲಿ ಈ ಹಾರ್ಮೋನುಗಳು ಬಿಡುಗಡೆಯಾಗುವುದು.

ಪ್ರೊಲ್ಯಾಕ್ಟಿನ್

ಪ್ರೊಲ್ಯಾಕ್ಟಿನ್

ಲೈಂಗಿಕ ತೃಪ್ತಿಯು ಈ ಹಾರ್ಮೋನ್ ನ್ನು ಬಿಡುಗಡೆ ಮಾಡುವುದು. ಪ್ರೊಲ್ಯಾಕ್ಟಿನ್ ಅರೆನಿದ್ರಾವಸ್ಥೆ ಉಂಟು ಮಾಡುವುದು. ಈ ಹಾರ್ಮೋನು ವಿರುದ್ಧ ಹೋರಾಡಬೇಕಿದ್ದರೆ ಮತ್ತು ಮತ್ತೆ ಹಾಸಿಗೆಯಲ್ಲಿ ಕುಣಿದಾಡಲು ನಿಮಗೆ ಡೊಪಮೈನ್ ಬೇಕು. ಡೊಪಮೈನ್ ಮನಸ್ಥಿತಿ ಹೆಚ್ಚಿಸಿ, ಪ್ರೊಲ್ಯಾಕ್ಟಿನ್ ಕಡಿಮೆ ಮಾಡುವುದು.

ಆಕ್ಸಿಟಾಸಿನ್

ಆಕ್ಸಿಟಾಸಿನ್

ಈ ಹಾರ್ಮೋನ್ ಕೂಡ ಬಿಡುಗಡೆಯಾಗುವುದು ಮತ್ತು ದೇಹವು ಆರಾಮ ಮಾಡಲು ನೆರವಾಗುವುದು. ಇದರಿಂದ ಲೈಂಗಿಕ ಕ್ರಿಯೆ ಬಳಿಕ ಪುರುಷರಲ್ಲಿ ನಿದ್ರೆಯ ಭಾವನೆ ಬರುವುದು.

ವಸೊಪ್ರೆಸ್ಸಿನ್

ವಸೊಪ್ರೆಸ್ಸಿನ್

ಈ ಹಾರ್ಮೋನು ರಕ್ತನಾಳಗನ್ನು ಬಿಗಿಗೊಳಿಸುವುದು ಮತ್ತು ದೇಹದಲ್ಲಿ ಸಂತುಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಹಾರ್ಮೋನು ನೇರವಾಗಿ ಮೆದುಳಿನಲ್ಲಿ ಬಿಡುಗಡೆಯಾಗುವುದು ಮತ್ತು ದೇಹಕ್ಕೆ ಆರಾಮ ನೀಡುವುದು.

ನರಸಂವಾಹಕಗಳು

ನರಸಂವಾಹಕಗಳು

ಸೆರೊಟಿನಿನ್, ನೊರ್ಪೈನ್ಫ್ರಿನ್ ಮತ್ತು ನೈಟ್ರಿಕ್ ಆಕ್ಸೈಡ್: ಇವುಗಳು ಪ್ರಮುಖ ನರಸಂವಾಹಕಗಳಾಗಿರುವುದು ಮತ್ತು ದೇಹವನ್ನು ಆರಾಮವಾಗಿಡುವುದು. ನೈಟ್ರಿಕ್ ಆಕ್ಸೈಡ್ ಶಿಶ್ನದಲ್ಲಿ ಬಿಡುಗಡೆಯಾಗುವುದು.

ದೈಹಿಕ ವ್ಯಾಯಾಮ

ದೈಹಿಕ ವ್ಯಾಯಾಮ

ಮಹಿಳೆಯರಿಗೆ ಹೋಲಿಸಿದರೆ ಲೈಂಗಿಕ ಕ್ರಿಯೆ ವೇಳೆ ಪುರುಷರು ಹೆಚ್ಚು ದೇಹವನ್ನು ಬಳಸುವರು. ಇದರಿಂದ ಲೈಂಗಿಕ ಕ್ರಿಯೆ ವೇಳೆ ಪುರುಷರು ಆಯಾಸಗೊಳ್ಳುವರು.

ಆತ ಆಧ್ಯಾತ್ಮಿಕ ಭಾವನೆ ಕಳಕೊಂಡ

ಆತ ಆಧ್ಯಾತ್ಮಿಕ ಭಾವನೆ ಕಳಕೊಂಡ

ತಾಂತ್ರಿಕ ಲೈಂಗಿಕತೆಯು ಆಧ್ಯಾತಿಕತೆಯನ್ನು ಕೇಂದ್ರೀಕರಿ ಸಿರುವುದು. ಎರಡು ದೇಹಗಳು ಒಂದಾಗುವುದು ತುಂಬಾ ಪವಿತ್ರ ಕ್ರಿಯೆ ಮತ್ತು ಶಕ್ತಿ ಬಿಡುಗಡೆಯಾಗುವ ಜಾಗೃತಿ ಮೂಡಿಸುದು ಮತ್ತು ಜೋಡಿಗೆ ವಿಭಿನ್ನ ಅನುಭವ ಪ್ರಾಪ್ತಿಯಾಗುವುದು.

ಲೈಂಗಿಕತೆ ಮತ್ತು ಪರಾಕಾಷ್ಠೆಯು ಆಧ್ಯಾತ್ಮಿಕ ಜಾಗೃತಿಯ ಮೈಲಿಗಲ್ಲು, ಇದು ಪುರುಷ ಹಾಗೂ ಮಹಿಳೆಯ ಶಕ್ತಿಯ ಸಂಘಟನೆಯನ್ನು ಪ್ರತಿನಿಧಿಸುವುದು. ಲೆಯ್ನರ್ ಮತ್ತು ಗೋಲ್ಡ್ ಬರ್ಗ್ ಸಲಹೆಯಂತೆ ಪುರುಷರ ಪರಾಕಾಷ್ಠೆಯು ಬಾಹ್ಯ ವಾಗಿರುವುದು ಮತ್ತು ಇದು ಶಕ್ತಿಯ ವ್ಯಯಕ್ಕೆ ಕಾರಣವಾಗುವುದು. ಅದೇ ಮಹಿಳೆಯರ ಪರಾಕಾಷ್ಠೆಯು ಶಕ್ತಿಯು ಒಳಗೆ ಸ್ಪೋಟಗೊಳ್ಳುವುದು. ಇದರಿಂದಾಗಿ ಮಹಿಳೆಯರಿಗೆ ಹೆಚ್ಚಿನ ಶಕ್ತಿ ವ್ಯಯವಾಗದು. ಮಹಿಳೆಯರು ಗಂಟೆಗಟ್ಟಲೆ ಮುದ್ದಿಸಲು ತಯಾರಾಗಿರುವರು.

ಆತ ಮಾತನಾಡಲು ತಯಾರಾಗಿರಲ್ಲ

ಆತ ಮಾತನಾಡಲು ತಯಾರಾಗಿರಲ್ಲ

ಮಹಿಳೆಯರು ತಮ್ಮ ಅನುಭವದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಯಸುವರು. ಇದರಿಂದಾಗಿ ಅವರು ಲೈಂಗಿಕ ಕ್ರಿಯೆ ಬಳಿಕ ಮಾತನಾಡಲು ಬಯಸುವರು ಎಂದು ಮೊಂಟ್ರೆಲಾದಲ್ಲಿ ಲೈಂಗಿಕ ಚಿಕಿತ್ಸೆಯಲ್ಲಿ ತಜ್ಞೆಯಾಗಿರುವ ಮನಶಾಸ್ತ್ರಜ್ಞೆ ಲಾರಿ ಬೆಟಿಟೊ ತಿಳಿಸುತ್ತಾರೆ.

ಆತನನ್ನು ಎಚ್ಚರವಾಗಿಡಲು ಮೂರು ವಿಧಾನಗಳು

ಆತನನ್ನು ಎಚ್ಚರವಾಗಿಡಲು ಮೂರು ವಿಧಾನಗಳು

*ಲೈಂಗಿಕ ಕ್ರಿಯೆ ಬಳಿಕ ಮುದ್ದಾಡುವುದನ್ನು ಹೆಚ್ಚಿಸಲು

ಉಪಾಹಾರ, ಮಧ್ಯಾಹ್ನ ಊಟ ಅಥವಾ ರಾತ್ರಿ ಊಟದ ಮೊದಲು ನಿಮ್ಮ ಪ್ರೀತಿಯ ಆಟ ಆರಂಭಿಸಿ. ಹಸಿವಾಗಿದ್ದರೆ ಆತನಿಗೆ ನಿದ್ರೆ ಬರದು. ಇದರ ಬಳಿಕ ಆಮ್ಲೆಟ್ ಅಥವಾ ಕ್ಯಾಂಡಲ್ ಲೈಟ್ ಡಿನ್ನರ್ ಕೊಡಿ.

*ಆತನ ಫೇವರಿಟ್ ಟಿವಿ ಕಾರ್ಯಕ್ರಮ ಆರಂಭವಾಗುವ ಮೊದಲೇ ಸಂಜೆ ವೇಳೆ ನೀವು ಈ ಬಗ್ಗೆ ಸಂಜ್ಞೆಗಳನ್ನು ಕೊಡಿ. ತುಂಬಾ ಬಸವಳಿದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ.

ಲೈಂಗಿಕ ಕ್ರಿಯೆ ಬಳಿಕ ಎಷ್ಟು ಹೊತ್ತು ಮುದ್ದಾಡಬೇಕು ಎನ್ನುವ ಸಮಯದಲ್ಲಿ ಹೊಂದಾಣಿಕೆ ಮಾಡಿ.

*ನಿಮಗೆ 30 ನಿಮಿಷಗಳ ತನಕ ಮಾತನಾಡಲು ಇದ್ದರೆ ಆತ ಕೇವಲ ಐದು ನಿಮಿಷ ನೀಡುತ್ತಾನೆ. ಇದರ ಬದಲು ನೀವು 15 ನಿಮಿಷ ತೆಗೆದುಕೊಳ್ಳಿ.

ಇದು ಎಲ್ಲವೂ ಆತನಿಂದಾಗಿಯಲ್ಲ!

ಇದು ಎಲ್ಲವೂ ಆತನಿಂದಾಗಿಯಲ್ಲ!

ಪುರುಷರು ಹಾಗೂ ಮಹಿಳೆಯರು ಇಬ್ಬರು ಲೈಂಗಿಕ ಕ್ರಿಯೆ ಬಳಿಕ ತುಂಬಾ ನಿರಾಳ, ಆರಾಮ ಮತ್ತು ನಿದ್ರಿಸುವ ಮನಸ್ಸನ್ನು ಹೊಂದಿರುವರು ಎಂದು ಮಾನವ ಲೈಂಗಿಕತೆ ಮತ್ತು ಮನಶಾಸ್ತ್ರಜ್ಞ ರೋಜರ್ ಆರ್. ಹಾಕ್ ಬರೆಯುತ್ತಾರೆ. ನಮ್ಮ ಇನ್ನೊಬ್ಬರು ಲೈಂಗಿಕತೆ ತಜ್ಞರು ಮಾತ್ರ ಸ್ವಲ್ಪ ಭಿನ್ನ ಅಭಿಪ್ರಾಯ ವ್ಯಕ್ತ ಪಡಿಸುವರು. ಎಲ್ಲಾ ಪುರುಷರು ಲೈಂಗಿಕ ಕ್ರಿಯೆ ಬಳಿಕ ನಿದ್ರೆಗೆ ಜಾರಲ್ಲ. ಕೆಲವರು ಮುದ್ದಾಡುವರು ಅಥವಾ ಮಾತುಕತೆಯಲ್ಲಿ ತೊಡಗಿಕೊಳ್ಳುವರು ಎಂದು ಡಾ. ಮೆಕೆಂಝಿ ಹೇಳುತ್ತಾರೆ. ಕೆಲವೊಂದು ಸಲ ಮಹಿಳೆಯರು ಬೇಗನೆ ನಿದ್ರೆಗೆ ಜಾರುತ್ತಾರೆ ಎನ್ನುತ್ತಾರೆ ಅವರು.

ಇದು ಎಲ್ಲವೂ ಆತನಿಂದಾಗಿಯಲ್ಲ!

ಇದು ಎಲ್ಲವೂ ಆತನಿಂದಾಗಿಯಲ್ಲ!

ಲೈಂಗಿಕ ಕ್ರಿಯೆ ಬಳಿಕ ನೀವು ಸಂಗಾತಿ ಜತೆಗೆ ಮೈಲಿಗಟ್ಟಲೆ ಜತೆಯಾಗಿ ನಡೆಯಬೇಕೆಂದಿಲ್ಲ. ಹೀಗೆ ಮಾಡದಿದ್ದರೆ ನಿಮ್ಮ ಸಂಬಂಧವು ಬಲಗೊಳ್ಳಲ್ಲ ಅಥವಾ ನೀವು ಪ್ರೀತಿಸುತ್ತಿಲ್ಲವೆಂದಲ್ಲ. ಅಂತಿಮವಾಗಿ ಹೇಳುವುದಾದರೆ ಆತ ನಿದ್ರೆಗೆ ಜಾರುವುದು ಆತನಿಗೆ ಎಷ್ಟು ತೃಪ್ತಿ ಸಿಕ್ಕಿದೆ ಎನ್ನುವುದರ ಸೂಚನೆ ಕೂಡ!

English summary

The Science Behind Why Men Always Fall Asleep After Sex

Women prefer to cuddle after sex, but men would rather doze off. Most women consider this a sign as a man’s lack of interest in the relationship. But, there is a biological reason that men tend to feel sleepy after raunchy or satisfying sex.Post-coitus sleep is not a myth, but there is research that proves men experience exhaustion and need to sleep after sexual intercourse.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more