Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
25ರ ಹರೆಯಕ್ಕಿಂತ ಸಣ್ಣ ವಯಸ್ಸಿನ ಹುಡುಗಿಯರು ಸೆಕ್ಸ್ ಬಗ್ಗೆ ತಿಳಿಯಬೇಕಾದ ವಿಚಾರಗಳು
ಪ್ರಕೃತಿಗೆ ಸಹಜವಾಗಿ ಮನುಷ್ಯನ ದೇಹವು ಕೂಡ ಬೆಳವಣಿಗೆಯಾಗುತ್ತಾ ಹೋಗುವುದು. ಹೆಣ್ಣು ಹಾಗೂ ಗಂಡು ಎನ್ನುವ ಎರಡು ಜೀವಗಳು ಈ ಭೂಮಿ ಮೇಲೆ ಎಲ್ಲಾ ಜೀವಿಗಳಲ್ಲೂ ಇದೆ. ಇದಕ್ಕೆ ಮಾನವ ಕೂಡ ಹೊರತಾಗಿಲ್ಲ. ಮನುಷ್ಯರಲ್ಲಿ ಪ್ರಮುಖವಾಗಿ ಹುಡುಗಿಯರು ಬೇಗನೆ ಪ್ರೌಢವಾಸ್ಥೆಗೆ ತಲುಪುವರು.
ಹುಡುಗರಿಗೆ ತಮ್ಮ ಲೈಂಗಿಕತೆ ಬಗ್ಗೆ ಅರಿವು ಮೂಡುವುದು ನಿಧಾನ. ಆದರೆ ಮಹಿಳೆಯರಿಗೆ ತಮ್ಮ 25ರ ಹರೆಯದಲ್ಲೇ ಲೈಂಗಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವರು. ಇದು ಪ್ರಕೃತಿ ಸಹಜ ಕೂಡ. ಈ ವಯಸ್ಸಿಗಿಂತ ಕಡಿಮೆ ಹರೆಯದ ಎಲ್ಲಾ ಮಹಿಳೆಯರು ತಿಳಿದುಕೊಳ್ಳಬೇಕಾದ ಕೆಲವೊಂದು ವಿಚಾರಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ. ಇದು ನಿಮಗೆ ಈಗಾಗಲೇ ತಿಳಿದಿದ್ದರೆ ಇದನ್ನು ನೀವು ಬೇರೆಯವರೊಂದಿಗೆ ಶೇರ್ ಮಾಡಿಕೊಳ್ಳಲು ಮರೆಯಬೇಡಿ....

ಶೃಂಗಾರಮಯವಲ್ಲ
ಸಿನಿಮಾಗಳಲ್ಲಿ ಹೆಚ್ಚಾಗಿ ಸೆಕ್ಸ್ ವಿಚಾರಗಳನ್ನು ತುಂಬಾ ಶೃಂಗಾರಮಯವಾಗಿ ತೋರಿಸಲಾಗುತ್ತದೆ. ಆದರೆ ನಿಜ ಜೀವನದಲ್ಲಿ ಇದು ಖಂಡಿತವಾಗಿಯೂ ಹಾಗಿಲ್ಲ. ನಿಜ ಜೀವನದಲ್ಲಿ ಸೆಕ್ಸ್ ಎನ್ನುವುದು ತುಂಬಾ ಗೊಂದಲಮಯವಾಗಿರುವುದು. ರೂಪದರ್ಶಿಗಳು ಮತ್ತು ನಟಿಯರು ಧರಿಸಿರುವಂತಹ ಉಡುಪುಗಳನ್ನು ಸೆಕ್ಸ್ ವೇಳೆ ನಿಜ ಜೀವನದಲ್ಲಿ ಧರಿಸಲು ಸಾಧ್ಯವಿಲ್ಲ. ಇಂತಹ ಬಟ್ಟೆ ಧರಿಸಿಕೊಂಡು ಸಂಗಾತಿ ಜತೆಗೆ ಈ ವಿಶೇಷ ಸಮಯದಲ್ಲಿ ನೀವು ಆರಾಮದಾಯಕವಾಗಿರಲು ಆಗಲ್ಲ. ನೀವು ಒಂದು ಸಲ ಹೀಗೆ ಮಾಡಬಹುದು. ಆದರೆ ಪ್ರತಿನಿತ್ಯ ಸಾಧ್ಯವಿಲ್ಲ.

ಲೈಂಗಿಕ ಪ್ರಾಧಾನ್ಯತೆ ಬಗ್ಗೆ ತಿಳಿಯದೆ ಇರುವುದು ಸರಿಯಾಗಿದೆ
ನಮ್ಮ ಸಮಾಜವು ಕಪಟ ನಾಟಕವನ್ನಾಡುತ್ತಲಿರುವುದು. ಇಂತಹ ಸಮಯದಲ್ಲಿ ನೀವು ಒಂದು ವಿಚಾರವನ್ನು ಅರ್ಥ ಮಾಡಿ ಕೊಳ್ಳಬೇಕು. 25ರ ಹರೆಯಕ್ಕೆ ಮೊದಲು ನೀವು ಸೆಕ್ಸ್ ನಲ್ಲಿ ಭಾಗಿಯಾಗದೆ ಇದ್ದರೆ ಯಾವುದೇ ತೊಂದರೆಯಿಲ್ಲ. ಸೆಕ್ಸ್ ಅನ್ನುವುದು ಸಂಗಾತಿ ಜತೆಗಿನ ಒಂದು ಮಧುರ ಸಂಬಂಧವಾಗಿದೆ. ನಿಮ್ಮ ಸ್ನೇಹಿತೆಯರು ಹೇಳುತ್ತಾರೆಂದು ಇದರಲ್ಲಿ ಪಾಲ್ಗೊಳ್ಳಬೇಕಿಲ್ಲ. ಲೈಂಗಿಕವಾಗಿ ತೊಡಗಿಕೊಳ್ಳಲು ನೀವು ಸಂಗಾತಿಯನ್ನು ಹೆಚ್ಚು ಅರ್ಥ ಮಾಡಿಕೊಳ್ಳಬೇಕು. ನೀವು ಮೊದಲು ಸಂಗಾತಿಯನ್ನು ತಿಳಿಯಿರಿ. ಇದರ ಬಳಿಕ ಸೆಕ್ಸ್ ಏನು ಎಂದು ತಿಳಿಯಿರಿ.

ಲ್ಯೂಬ್ರಿಕೆಂಟ್ ಮುಖ್ಯ
ಮಹಿಳೆಯರ ಸೆಕ್ಸ್ ಗೆ ಇರುವ ಮುಖ್ಯ ನಿಯಮವಿದು. ಲ್ಯೂಬ್ರಿಕೆಂಟ್ ಅಗತ್ಯವಾಗಿ ಬೇಕು. ನೋವನ್ನು ಕಡಿಮೆ ಮಾಡಿಕೊಳ್ಳಲು ಲ್ಯೂಬ್ರಿಕೆಂಟ್ ಹಚ್ಚಿಕೊಳ್ಳಿ. ಇದು ನಿಮ್ಮ ಸ್ನೇಹಿತೆಯಾಗಿರುವುದು. ಕೆಳಗಿನ ಭಾಗದಲ್ಲಿ ಎಷ್ಟೇ ತೇವಾಂಶವಿದ್ದರೂ ಲ್ಯೂಬ್ರಿಕೆಂಟ್ ಬಳಸುವುದು ಅತೀ ಅಗತ್ಯ ಮತ್ತು ಇದನ್ನು ಅಭ್ಯಾಸ ಮಾಡಿಕೊಳ್ಳಿ.

ಕಾಂಡೋಮ್
ಇದರ ಬಗ್ಗೆ ಯಾವುದೇ ಪುರುಷನು ಚರ್ಚೆ ಮಾಡುತ್ತಲಿದ್ದರೆ ಆಗ ಆತನಿಗೆ ಹೊರಗೆ ಹೋಗುವ ದಾರಿ ತೋರಿಸಬೇಕು. ಯಾಕೆಂದರೆ ನಿಮಗೆ ಮಗು ಬೇಕಿಲ್ಲವೆಂದಾದರೆ ಆಗ ನೀವು ಕಾಂಡೋಮ್ ಹಾಕಲೇಬೇಕು. ಅಸುರಕ್ಷಿತವಾಗಿರುವಂತಹ ಸೆಕ್ಸ್ ನಿಂದ ನಿಮಗೆ ಲೈಂಗಿಕ ರೋಗಗಳು ಬರುವಂತಹ ಸಾಧ್ಯತೆಗಳು ಇವೆ.

ಸೆಕ್ಸ್ ಬಳಿಕ ಮೂತ್ರ ಮಾಡುವುದು
ಸೆಕ್ಸ್ ಬಳಿಕ ಮೂತ್ರ ಮಾಡುವುದು ಸ್ವಚ್ಛತೆ ದೃಷ್ಟಿಯಿಂದ ಒಳ್ಳೆಯದು ಮತ್ತು ಇದನ್ನು ನೀವು ಮರೆಯಬಾರದು. ಮೂತ್ರಕೋಶದ ಸೋಂಕುಗಳು ಸಾಮಾನ್ಯವಾಗಿರುವುದು ಮತ್ತು ಇದು ನಿಮ್ಮ ದೇಹಕ್ಕೆ ಪ್ರವೇಶಿಸದಂತೆ ತಡೆಯಬೇಕು.

ಯಾರು ಮುಖ್ಯ
ನೀವು ಒಬ್ಬ ವ್ಯಕ್ತಿಯನ್ನು ಎಷ್ಟೇ ಪ್ರೀತಿಸಿದರೂ ಕೂಡ ಅವರಿಗಿಂತ ಮೊದಲು ನೀವು ಮತ್ತು ನಿಮ್ಮ ದೇಹಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದರ ಒಂದು ಭಾಗವಾಗಿ ಸೆಕ್ಸ್ ನ್ನು ಸೇರಿಸಿಕೊಳ್ಳಿ. ನಿಮಗೆ ಸೆಕ್ಸ್ ಬಗ್ಗೆ ಆಸಕ್ತಿ ಇಲ್ಲವಾದರೆ ನಿಮ್ಮ ಸಂಗಾತಿಗೆ ಹೇಳಿ.

69 ಸಮಯ ವ್ಯರ್ಥ ಮಾಡುವುದು
69 ಎನ್ನುವುದು ನಿಮಗಿಬ್ಬರಿಗೂ ಸಮಯ ವ್ಯರ್ಥ ಮಾಡುವುದು. ನೀವು ಲೈಂಗಿಕ ಪರಾಕಾಷ್ಠೆ ತಲುಪದೆ ಇರಬಹುದು ಮತ್ತು ಆರಂಭದಲ್ಲಿ ಇದ್ದ ಲೈಂಗಿಕ ಶಕ್ತಿಯು ಕುಂದಿ ಹೋಗಬಹುದು. ಅದಾಗ್ಯೂ, ನೀವು ಇದರ ಬಗ್ಗೆ ನಿರ್ಧರಿಸಬಹುದು. ನಾವು ಯಾವುದೇ ನಿಯಮ ಮಾಡುವವರಲ್ಲ.

ಬಾಯ್ ಫ್ರೆಂಡ್ ಸಮಸ್ಯೆ
ರಜಾ ಪ್ರವಾಸದ ದಿನಗಳಲ್ಲಿ ಬೇರೆಲ್ಲಾ ಜೋಡಿಗಳು ತಮ್ಮ ಸೆಲ್ಫಿಗಳನ್ನು ಹಾಕುತ್ತಿದ್ದರೆ, ನಿಮ್ಮ ಹುಡುಗ ಕೇವಲ ಮೆಸೇಜ್ ಮಾಡುತ್ತಲಿದ್ದರೆ ಆಗ ನಿಮಗೆ ಬೇಕಿರುವ ಹುಡುಗ ಈತನಲ್ಲ. ಆರಂಭದಲ್ಲಿ ಸೆಕ್ಸಿ ಹುಡುಗ ಎನ್ನುವ ಪದ ಆರಂಭದಲ್ಲಿ ಚೆನ್ನಾಗಿ ಕಾಣುವುದು. ಆದರೆ ಇದು ಬಳಿಕ ಭಾವನಾತ್ಮಕ ಹಾಗೂ ದೈಹಿಕವಾಗಿ ನಿಮ್ಮ ಮೇಲೆ ಪರಿಣಾಮ ಬೀರಬಹುದು.

ಲೈಂಗಿಕ ಶಿಕ್ಷಣ
ಇದು ಅತೀ ಅಗತ್ಯ ಮತ್ತು ಅನಿವಾರ್ಯ. ಸೆಕ್ಸ್ ನಲ್ಲಿ ಪಾಲ್ಗೊಳ್ಳುವ ಮೊದಲು ನೀವು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಲೈಂಗಿಕ ಶಿಕ್ಷಣವು ನಿಮಗೆ ಜೀವನದಲ್ಲಿ ದೀರ್ಘಕಾಲದ ತನಕ ನೆರವು ನೀಡಲಿದೆ.



Click it and Unblock the Notifications