ಆಕೆಗೆ ಆ ವಿಷಯದಲ್ಲಿ ಜಾಸ್ತಿ ಆಸಕ್ತಿ ಇರುತ್ತದೆ!, ಆದ್ರೆ ಬಾಯಿಬಿಡಲ್ಲ ಅಷ್ಟೇ!!

Posted By: Deepu
Subscribe to Boldsky

ಹಸಿವು ಬಾಯಾರಿಕೆಯಂತೆಯೇ ಕಾಮಬಯಕೆಯೂ ಮಾನವಸಹಜ ಗುಣವಾಗಿದೆ. ಈ ಬಯಕೆಯನ್ನು ಪೂರ್ಣಗೊಳಿಸಲೆಂದೇ ವಿವಾಹ ವ್ಯವಸ್ಥೆಯನ್ನು ನಮ್ಮ ಸಮಾಜ ನಿರ್ಮಿಸಿದ್ದು ಈ ಮೂಲಕ ಜಗತ್ತಿನಲ್ಲಿ ಸಂತುಲನವನ್ನು ಹಾಗೂ ಮಾನವ ಜನಾಂಗವನ್ನು ಮುಂದುವರೆಸಲು ನಿಯಮವನ್ನು ಮಾಡಲಾಗಿದೆ.

ಅದರಲ್ಲೂ ದಾಂಪತ್ಯ ಸುಖವೆಂಬುದು ಸತಿಪತಿಯರ ನಡುವೆ ವಿನಿಮಯವಾಗುವ ಒಂದು ಅತ್ಯಂತ ಪವಿತ್ರವಾದ ಸಂಬಂಧವಾಗಿದೆ, ವಿವಾಹದ ಬಳಿಕವೇ ದಾಂಪತ್ಯದ ಕಟ್ಟುಪಾಡಿನೊಳಗೇ ಈ ಸಂಬಂಧ ಮುಂದುವರೆಸಲು ನಮ್ಮ ದೇಶದ ಎಲ್ಲಾ ಧರ್ಮಗಳು ಹಾಗೂ ಕಾನೂನು ಅನುಮತಿ ನೀಡುತ್ತದೆ. ಆದರೆ ಮಿಲನದ ವಿಷಯಕ್ಕೆ ಬಂದರೆ ಹೆಂಗಸರ ಪಾಲಿಗೆ ಇದು ತೀರಾ ಮುಜುಗರದ ಸಂಗತಿ! ಆದರೂ ಹೆಂಗಸರು ಈ ಸೆಕ್ಸ್ ನಲ್ಲಿ ತೊಡಗಿಸಿಕೊಳ್ಳುವುದೇ ಇಲ್ಲ ಎಂದರೆ ಅದು ನಗೆಪಾಟಲಿನ ವಿಷಯವಾಗುತ್ತದೆ.

ಹೆಂಗಸರು ಮಿಲನದಲ್ಲಿ ತೊಡಗಿಕೊಳ್ಳಲು ಕೆಲವೊಂದು ಕಾರಣಗಳು ಇವೆ, ಇದನ್ನು ಅರ್ಥ ಮಾಡಿಕೊಳ್ಳುವ ಮೊದಲು ನೀವು ಹೆಂಗಸರ ಮನಸ್ಸಿನ ಒಳಗೆ ಮತ್ತು ಹೊರಗೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಹೆಂಗಸರು ತಮ್ಮ ಆಯ್ಕೆಗಳನ್ನು ಪರಿಗಣಿಸದೆ ಮಿಲನದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಅಪರೂಪ. ಹುಡುಗಿಯರು ಸಹ ತಕ್ಷಣ ಕಾಮನೆಗಳಿಗೆ ಒಳಗಾಗುತ್ತಾರೆ ಎಂಬುದು ಸತ್ಯ.

ಆದರೆ ಇಂತಹ ಪರಿಸ್ಥಿತಿ ಎದುರಾಗುವುದು ತೀರಾ ವಿರಳ. ಹಾಗಾದರೆ ಆಕೆ ಏಕೆ ನಿಮ್ಮೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುತ್ತಾಳೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಅದಕ್ಕೆ ಉತ್ತರ ಹೆಂಗಸರು ಯಾವತ್ತು ನಿಷ್ಪ್ರಯೋಜಕವಾದ ಕೆಲಸವನ್ನು ಮಾಡುವುದಿಲ್ಲ. ಹೆಂಗಸರು ಏಕೆ ಮಿಲನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದಕ್ಕೆ ಕೆಲವೊಮ್ಮೆ ಸ್ವಾರ್ಥ ಕಾರಣವಾದರೆ, ಮತ್ತೊಮ್ಮೆ ಗಂಡಸನ್ನು ಯಾಮಾರಿಸುವ ಸಲುವಾಗಿ ಎಂದು ಹೇಳಲಾಗುತ್ತದೆ! ಆದರೆ ಹೆಂಗಸರು ಬುದ್ಧಿವಂತರು, ಅವರನ್ನು ನೀವು ಮೋಸಗೊಳಿಸಲು ಅಷ್ಟು ಸುಲಭವಲ್ಲ. ಹೆಂಗಸರು ಯಾವಾಗಲು ತಮ್ಮ ಅಗತ್ಯತೆಗಳನ್ನು ಮತ್ತು ನಿರ್ಧಾರಗಳನ್ನು ನಿಖರವಾಗಿ ತಿಳಿದಿರುತ್ತಾರೆ. ಅದರ ಮೂಲಕವೇ ಗಂಡಸನ್ನು ಅಳೆಯುತ್ತಾರಂತೆ!, ಮುಂದೆ ಓದಿ... 

ಆಕೆಗೆ ಸಂತೋಷವಾದಾಗ...

ಆಕೆಗೆ ಸಂತೋಷವಾದಾಗ...

ಹೆಂಗಸರೇನು ಅಜ್ಞಾತ ಗ್ರಹದಿಂದ ಬಂದ ಜೀವಿಗಳಲ್ಲ. ಅವರಿಗೂ ಸಹ ಕಾಮ, ಕ್ರೋಧ, ಮೋಹ ಎಲ್ಲವೂ ಇರುತ್ತವೆ. ದೈಹಿಕ ಸಾಮೀಪ್ಯವು ಅವರನ್ನು ಮತ್ತಷ್ಟು ಪ್ರೇರೇಪಿಸುತ್ತದೆ. ಬೆಂಕಿ ಸಮೀಪ ಇದ್ದ ಬೆಣ್ಣೆ ಕರಗುವಂತೆ, ಇಷ್ಟಪಟ್ಟ ಗಂಡು ಪಕ್ಕದಲ್ಲಿದ್ದರೆ ಹೆಣ್ಣು ಕರಗಿ ನೀರಾಗುತ್ತಾಳೆ, ಇದು ಪ್ರಕೃತಿ ಸಹಜ ಧರ್ಮ. ನೀವು ಆಕೆಗೆ ಮಾಡಿದ ಒಳ್ಳೆಯ ಕೆಲಸ ಅಥವಾ ತೋರುತ್ತಿರುವ ಪ್ರೀತಿಯನ್ನು ನಿಮಗೆ ಪ್ರತಿಯಾಗಿ ನೀಡಲು ಆಕೆ ಮಿಲನವನ್ನು ಆಯ್ದುಕೊಳ್ಳುತ್ತಾಳೆ. ನಿಮ್ಮ ಕಾರ್ಯದಿಂದ ಆಕೆಗೆ ಸಂತೋಷವಾದಾಗ ಅದಕ್ಕಾಗಿ ಆಕೆ ತನ್ನನ್ನೇ ನಿಮಗೆ ಅರ್ಪಿಸಿಕೊಳ್ಳುತ್ತಾಳೆ.

ಆಕೆಯಲ್ಲಿ ಹಾರ್ಮೊನುಗಳು ಬಿಡುಗಡೆಯಾದಾಗ

ಆಕೆಯಲ್ಲಿ ಹಾರ್ಮೊನುಗಳು ಬಿಡುಗಡೆಯಾದಾಗ

ಮುಟ್ಟಿನ ಅವಧಿಯ ನಡುವೆ ಒಂದು ಹಂತದಲ್ಲಿ ಮಹಿಳೆಯರಲ್ಲಿ ಫಲವಂತಿಕೆಯು ರೂಪುಗೊಳ್ಳುತ್ತದೆ, ಇದನ್ನು ಒವುಲೇಟಿಂಗ್ ಎಂದು ಸಹ ಕರೆಯುತ್ತಾರೆ. ಈ ಅವಧಿಯಲ್ಲಿ ಸಹಜವಾಗಿ ಆಕೆಯಲ್ಲಿ ಕಾಮಾಸಕ್ತಿಯು ಕಂಡು ಬರುತ್ತದೆ. ಆಗ ನಡೆಯುವ ಮಿಲನವೇ ಆಕೆಯನ್ನು ಗರ್ಭವತಿಯನ್ನಾಗಿಸುತ್ತದೆ.

ಆಕೆ ಅಷ್ಟು ಸುಲಭವಾಗಿ ಬಾಯಿಬಿಡಲ್ಲ, ನೀವೇ ಮುಂದುವರಿಯಿರಿ!

ಆಕೆ ಅಷ್ಟು ಸುಲಭವಾಗಿ ಬಾಯಿಬಿಡಲ್ಲ, ನೀವೇ ಮುಂದುವರಿಯಿರಿ!

ಹೆಂಗಸರು ತಮಗೆ ಮಿಲನದ ಆಸೆ ಬಂದಿದೆ ಎಂದು ತೋರಿಸುವುದು ವಿರಳ, ಒಂದು ವೇಳೆ ನೀವೇನಾದರು ಆ ಭಾವನೆಯನ್ನು ಅವರಲ್ಲಿ ಹೊರ ಹೊಮ್ಮಿಸಿದ್ದರೆ, ಬಹುಶಃ ಈ ರಾತ್ರಿ ನೀವೇ ಅದೃಷ್ಟಶಾಲಿಗಳು.

ಸ್ವಲ್ಪ ಹೊತ್ತು ಮುದ್ದಾಡಿ!

ಸ್ವಲ್ಪ ಹೊತ್ತು ಮುದ್ದಾಡಿ!

ಹೌದು, ಹೆಂಗಸರಿಗೆ ಗಂಡಸು ಮುದ್ದಾಗಿರದಿದ್ದರು ಪರವಾಗಿಲ್ಲ. ತಮ್ಮನ್ನು ಮುದ್ದಾಡುವ ಮತ್ತು ರಮಿಸುವ ಗುಣವನ್ನು ಅವರು ಹೊಂದಿರಬೇಕು ಎಂದು ಭಾವಿಸುತ್ತಾರೆ. ನೀವು ಅವರನ್ನು ಉತ್ತಮವಾಗಿ ಚುಂಬಿಸಿದರೆ, ಮಿಲನದ ಸುಖ ನಿಮಗೆ ಕಟ್ಟಿಟ್ಟ ಬುತ್ತಿ. ಇನ್ನೇಕೆ ತಡ, ಮುದ್ದಾಡೆಂದಿದೆ ಮಲ್ಲಿಗೆ ಹೂವು.......

ತಮ್ಮ ಗಂಡನನ್ನು ಒಪ್ಪಿಸಲು

ತಮ್ಮ ಗಂಡನನ್ನು ಒಪ್ಪಿಸಲು

ಯಾವುದೋ ಒಂದು ಕೆಲಸ ತನ್ನ ಗಂಡನಿಂದ ಆಗ ಬೇಕಿರುತ್ತದೆ. ಅದಕ್ಕೇ ಈ ಮಹಾನುಭಾವನವರು ಆಗೋಲ್ಲ ಎಂದಿರುತ್ತಾರೆ. ಏನಾದರು ಮಾಡಿ ಒಪ್ಪಿಸುವ ಧಾವಂತಕ್ಕೆ ಬೀಳುವ ಹೆಂಡತಿ, ಗಂಡನೊಂದಿಗೆ ಮಿಲನದಲ್ಲಿ ಪಾಲ್ಗೊಳ್ಳುತ್ತಾಳೆ. ಹೀಗೆ ಕೊಟ್ಟು ತೆಗೆದುಕೊಳ್ಳುವುದು ನಡೆಯುತ್ತ ಇರುತ್ತದೆ ಬಿಡಿ, ಬೆಡ್‍ರೂಮಿನಲ್ಲಿ!

ಕಾಮಾತುರಾಣಂ ನ ಲಜ್ಜಾ ನ ಭಯಂ

ಕಾಮಾತುರಾಣಂ ನ ಲಜ್ಜಾ ನ ಭಯಂ

ಕೇವಲ ಗಂಡಸರು ಮಾತ್ರ ಮೂಡ್ ಬಂದು ದೇಹ ಬಿಸಿಯದಾಗ ಮಿಲನಕ್ಕೆ ಸಿದ್ಧವಾಗುತ್ತಾರೆ ಎಂದು ತಿಳಿಯಬೇಡಿ, ಈ ವಿಷಯದಲ್ಲಿ ಹೆಂಗಸರ ಭಾವನೆಯು ಸಹ ಅದೇ ಆಗಿರುತ್ತದೆ. ಯಾವುದನ್ನು ನಿಯಂತ್ರಿಸಲು ಆಗುವುದಿಲ್ಲವೋ, ಆಗ ಎಲ್ಲರೂ ಆ ಭಾವನೆಗೆ ಶರಣಾಗುತ್ತಾರೆ ಇದಕ್ಕೆ ಸ್ತ್ರೀಯರು ಸಹ ಹೊರತಲ್ಲ. ಹೆಂಗಸರಿಗೆ ಅಧಿಕ ಕಾರ್ಯದೊತ್ತಡದಿಂದ ಉಂಟಾಗುವ ಆಯಾಸದಿಂದ ಮುಕ್ತಿ ಪಡೆಯಲು ಸಿಗುವ ಮಾರ್ಗವೆಂದರೆ ಅದು ಮಿಲನ. ಏಕೆಂದರೆ ಹೆಂಗಸರು ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಮಿಲನದಲ್ಲಿ ಪಾಲ್ಗೊಳ್ಳುವುದು ಸಹಜ.

ರಿಲ್ಯಾಕ್ಸ್ ಬೇಕೆಂದಾಗ

ರಿಲ್ಯಾಕ್ಸ್ ಬೇಕೆಂದಾಗ

ಹೆಂಗಸರಿಗೆ ಅಧಿಕ ಕಾರ್ಯದೊತ್ತಡದಿಂದ ಉಂಟಾಗುವ ಆಯಾಸದಿಂದ ಮುಕ್ತಿ ಪಡೆಯಲು ಸಿಗುವ ಮಾರ್ಗವೆಂದರೆ ಅದು ಮಿಲನ. ಏಕೆಂದರೆ ಹೆಂಗಸರು ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಮಿಲನದಲ್ಲಿ ಪಾಲ್ಗೊಳ್ಳುವುದು ಸಹಜ.

ಪ್ರೀತಿಯ ಪರಾಕಾಷ್ಠೆ

ಪ್ರೀತಿಯ ಪರಾಕಾಷ್ಠೆ

ಹೆಂಗಸರಿಗೆ ಪ್ರೀತಿ ಮತ್ತು ಕಾಮ ಎರಡೂ ಬೇರೆ ಬೇರೆಯಲ್ಲ. ಅವೆರಡು ಅವರ ಪ್ರಕಾರ ಒಂದೇ, ಆಕೆ ನಿಮ್ಮೊಂದಿಗೆ ಮಲಗಲು ಇಷ್ಟಪಟ್ಟಲ್ಲಿ, ಅದು ಆಕೆ ನಿಮಗಾಗಿ ತೋರುತ್ತಿರುವ ಪ್ರೀತಿಯ ಪರಾಕಾಷ್ಠೆ ಎಂದಷ್ಟೇ ಭಾವಿಸಿ.

ನೀವು ಸದಾ ಆಕೆಯನ್ನೇ ಅವಲಂಬಿಸಬೇಕು

ನೀವು ಸದಾ ಆಕೆಯನ್ನೇ ಅವಲಂಬಿಸಬೇಕು

ಗಂಡಸರಿಗೆ ತಮ್ಮ ಹೆಂಡತಿ ಆತನನ್ನೆ " ಅವಲಂಬಿಸಬೇಕು" ಎಂಬ ಭಾವನೆ ಇರುವುದಿಲ್ಲ. ಅದು ಆತನಿಗು ಸಹ ಹಿಡಿಸುವುದಿಲ್ಲ. ಆದರೆ ಹೆಂಗಸರಿಗೆ ಇದರ ವಿರುದ್ಧ ಭಾವನೆಯಿರುತ್ತದೆ. ಆಕೆಗೆ ತನ್ನವರು ಸದಾ ತನ್ನನ್ನೆ ಬಯಸಬೇಕು, ತನ್ನನ್ನೆ ಅವಲಂಬಿಸಬೇಕು ಎಂಬ ಭಾವನೆ ಇರುತ್ತದೆ. ಏಕೆಂದರೆ ನೀವೆಲ್ಲಿ ಆಕೆಯನ್ನು ತ್ಯಜಿಸಿ ಹೋಗುತ್ತೀರೋ ಎಂಬ ಅಭದ್ರತೆ ಮತ್ತು ಭಯ ಆಕೆಯನ್ನು ಕಾಡುತ್ತಿರಬಹುದು. ಅದಕ್ಕಾಗಿ ಆಕೆ ನಿಮ್ಮೊಂದಿಗೆ ಮಲಗಿ ಅದನ್ನು ನಿಮಗೆ ನೆನಪಿಗೆ ತರುವ ಪ್ರಯತ್ನ ಮಾಡುತ್ತಾಳೆ.

English summary

Scientific Reasons Women Should Be Having More love making

Making love is the most basic need of human beings. But then, humans are social animals. We have relationships, love and social institutions like marriages. So sex is not a mindless and instinctive act for human beings, especially for the female species.