For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಸೆಕ್ಸ್ ವಿಷಯದಲ್ಲಿ ಪುರುಷರಷ್ಟು ಇಂಟರೆಸ್ಟ್ ಹೊಂದಿರುವುದಿಲ್ಲವಂತೆ!

|

ಇತಿಹಾಸದ ಯಾವುದೇ ಸಮಯದಲ್ಲಿ ಮಹಿಳೆಯರಿಗೆ ಮೀಸಲಾದ ಪತ್ರಿಕೆಗಳಲ್ಲಿ ಮಹಿಳೆಯರು ಪುರುಷರಷ್ಟೇ ಸ್ವಚ್ಛಂದತೆ, ಸ್ವಾತಂತ್ರ್ಯ ಹಾಗೂ ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ ಎಂದೇ ಬಿಂಬಿಸುತ್ತಾ ಬರಲಾಗಿದೆ. ವಾಸ್ತವವಾಗಿ ಇದೊಂದು ಮಾರುಕಟ್ಟೆಯ ತಂತ್ರವೇ ಹೊರತು ವಾಸ್ತವ ಬೇರೆಯೇ ಇದೆ. ನಿಜಜೀವನದಲ್ಲಿ ಮಹಿಳೆಯರ ಬಯಕೆಗಳು ಪುರುಷರಿಗಿಂತ ಭಿನ್ನವಾಗಿದ್ದು ಕಾಮದ ವಿಷಯದಲ್ಲಿ ಸಮಯಕ್ಕನುಗುಣವಾಗಿ ಬದಲಾಗುತ್ತಾ ಇರುತ್ತದೆ.

ಒಂದು ವೇಳೆ ನೀವು ಪುರುಷರಾಗಿದ್ದು ಈ ಲೇಖನವನ್ನು ಓದುತ್ತಿರುವಿರಾದರೆ ನಮ್ಮ ಸಹಾನುಭೂತಿಗಳು ನಿಮ್ಮೊಂದಿಗಿವೆ. ಏಕೆಂದರೆ ನಿಮ್ಮ ಸಂಗಾತಿಯನ್ನು ಕಾಮದ ವಿಷಯದಲ್ಲಿ ನೀವು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದ ಕಾರಣ, ಹೆಂಗಸರ ಬುದ್ದಿ ಮೊಣಕಾಲ ಕೆಳಗೆ ಎಂಬ ತೀರ್ಮಾನಕ್ಕೆ ಬಂದುಬಿಡುತ್ತೀರಿ. ವಾಸ್ತವವಾಗಿ ನಿಮಗೆ ಲೈಂಗಿಕ ಬಯಕೆ ಮೂಡಿದಾಗ ನಿಮ್ಮ ಸಂಗಾತಿ ಸಾಂಗತ್ಯಕ್ಕೆ ತಯಾರಿರದಿದ್ದರೆ ನೀವು ನಿರಾಶರಾಗಿ ನಿಮ್ಮ ಬಯಕೆಯನ್ನು ಪೂರೈಸಿಕೊಳ್ಳಲು ಸಂಬಂಧದ ಹೊರಗಿನ ಅವಕಾಶಗಳನ್ನು ಹುಡುಕುತ್ತೀರಿ. ಅದರೆ ಈ ತೀರ್ಮಾನಕ್ಕೆ ಮುನ್ನ ನಿಮ್ಮ ಸಂಗಾತಿಯ ಈ ನಿರಾಕರಣೆಗೇನು ಕಾರಣ ಎಂದು ತಿಳಿದುಕೊಂಡರೆ ನಿಮ್ಮ ತೀರ್ಮಾನ ಖಂಡಿತಾ ಬದಲಾಗುತ್ತದೆ. ಕುತೂಹಲ ತಣಿಸಲು ಮುಂದೆ ಓದಿ....

 ಆಕೆಗೆ ಬೇಕಾಗಿರುವುದು ಅಪ್ಪಟ ಪ್ರೇಮ!

ಆಕೆಗೆ ಬೇಕಾಗಿರುವುದು ಅಪ್ಪಟ ಪ್ರೇಮ!

ಮಹಿಳೆಯರು ಹೆಚ್ಚಾಗಿ ಭಾವುಕರಾಗಿರುತ್ತಾರೆ. ಕೆಲವೊಮ್ಮೆ ಇವರಿಗೆ ಕೇವಲ ತಮಾಷೆ ಮತ್ತು ಮೋಜು ಮಾತ್ರವೇ ಬೇಕಾಗಿರುತ್ತದೆ ಹೊರತು ಇದಕ್ಕಿಂತ ಹೆಚ್ಚೇನೂ ಬೇಕಾಗಿರುವುದಿಲ್ಲ. ಆದರೆ ಈ ನಡವಳಿಕೆಯ ಹಿಂದೆ ಅವರ ಭಾವನೆಗಳು ಪ್ರಮುಖ ಕಾರಣವಾಗಿದ್ದು ನಿಮಗೆ ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರಬಹುದು. ಆಕೆಯ ಸಂತೋಷ, ದುಃಖ, ನಿಮ್ಮ ಬಗ್ಗೆ ಆಕೆಗಿರುವ ಭಾವನೆಗಳು ಮೊದಲಾದ ಸಂಗತಿಗಳು ಆಕೆ ನಿಮ್ಮೊಂದಿಗೆ ದೈಹಿಕವಾಗಿ ಕೂಡಲು ತಯಾರಿದ್ದಾಳೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುತ್ತವೆ. ಬೇಕೆನಿಸಿದಾಗ ಕೂಡುವುದು, ಮುಗಿದ ಬಳಿಕ ಮರೆತುಬಿಡುವುದು ಆಕೆಗೆ ಇಷ್ಟವಾಗದ ಸಂಗತಿಯಾಗಿದೆ. ಒಂದು ವೇಳೆ ಆಕೆ ನಿಮ್ಮನ್ನು ಇನಿತಾದರೂ ಇಷ್ಟಪಡುತ್ತಾಳೆಯೇ ಆದರೆ ಆಕೆ ನಿಮಗಾಗಿ ತನ್ನ ಹೃದಯವನ್ನು ತೆರೆಯುತ್ತಾಳೆ ಹಾಗೂ ನಿಮ್ಮಿಂದ ಅಪ್ಪಟ ಪ್ರೇಮ ಮತ್ತು ಸಂತೋಷವನ್ನು ನಿರೀಕ್ಷಿಸುತ್ತಾಳೆ. ಒಂದು ವೇಳೆ ಇದು ಅಲ್ಲದಿದ್ದರೆ ನೀವು ಬೇರೆ ಬಾಗಿಲು ತಟ್ಟುತ್ತಿದ್ದೀರೆಂದೇ ಅರ್ಥ.

ಆಕೆಗೆ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ

ಆಕೆಗೆ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ

ನೀವು ಇಂದಿನ ರಾತ್ರಿಯನ್ನು ರಸಮಯವಾಗಿ ಕಳೆಯಲು ಇಚ್ಛಿಸಿದ್ದೀರಿ. ಕಾಲವೂ ಸರಿಯಾಗಿದೆ, ಎಲ್ಲಾ ಏರ್ಪಾಡುಗಳೂ ಇವೆ, ಕಟ್ಟುಪಾಡುಗಳನ್ನೂ ನಿರ್ವಹಿಸಿಯಾಗಿದೆ ಅಂದ ಬಳಿಕವೂ ಆಕೆ ನಿಮ್ಮೊಂದಿಗೆ ಕೂಡಲು ತಯಾರಾಗಿದ್ದರೂ ಆಕೆ ಮನಸ್ಸಿನಿಂದ ತಯಾರಾಗಿರುವುದಿಲ್ಲ. ಏಕೆ? ಆಕೆಗೆ ನಿಮ್ಮನ್ನು ಅರ್ಥೈಸಿಕೊಳ್ಳಲು ಹೆಚ್ಚಿನ ಸಮಯಾವಕಾಶ ಬೇಕಾಗಿದೆ. ನಿಮ್ಮೊಂದಿಗೆ ಆಕೆ ಸುರಕ್ಷಿತೆ ಎಂಬ ಭಾವನೆ ಪಡೆಯಲು ಇಚ್ಛಿಸುತ್ತಾಳೆ. ಹೌದು, ಹಾಗಾಗಿ ಇದು ಸಾಧ್ಯವಾಗುವವರೆಗೂ ಆಕೆ ನಿಮ್ಮೊಂದಿಗೆ ರಾತ್ರಿಯ ಊಟ ಮುಗಿಸಿ ಸಿಹಿಚುಂಬನವನ್ನು ನೀಡಿ ಅಲ್ಲಿಗೇ 'ಇಂದಿನ ಕಾರ್ಯಕ್ರಮ ಮುಕ್ತಾಯವಾಯಿತು ನಾಳೆ ಮತ್ತೊಮ್ಮೆ ಇದೇ ಸಮಯಕ್ಕೆ...." ಎಂಬ ವರ್ತನೆ ತೋರಬಹುದು. ಈ ಸಮಯದಲ್ಲಿ ನೀವು ಅಪಾರ ತಾಳ್ಮೆ ವಹಿಸಬೇಕು. ಮರುದಿನ ಅಥವಾ ನಂತರದ ದಿನಗಳಲ್ಲಿ ಯಾವಾಗ ಆಕೆ ತಾನಾಗಿಯೇ ನಿಮ್ಮೊಂದಿಗೆ ತಾನು ಸುರಕ್ಷಿತೆ ಎಂಬ ಭಾವನೆಯನ್ನು ಪಡೆಯುತ್ತಾಳೋ, ಆಗ ತಾನಾಗಿಯೇ ನಿಮ್ಮ ಹತ್ತಿರಕ್ಕೆ ಬರುತ್ತಾಳೆ. ಇದಕ್ಕೂ ಹೊರತಾಗಿ ಯಾವುದೇ ಬಗೆಯಲ್ಲಿ ನೀವು ಬಲವಂತವಾಗಿ ಮುಂದುವರೆಯಲು ಇಚ್ಛಿಸಿದರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು. ನೆನಪಿರಲಿ, ಯಾವುದೇ ಮಹಿಳೆ ಬಲವಂತಕ್ಕೆ ತನ್ನ ಹೃದಯವನ್ನು ನೀಡುವುದಿಲ್ಲ, ಇದು ಕೇವಲ ಹೃದಯಗಳ ಮಿಲನದಿಂದ ಮಾತ್ರವೇ ಸಾಧ್ಯ

ಆಕೆಯ ಗಮನ ಬೇರೆಡೆ ಇರಬಹುದು

ಆಕೆಯ ಗಮನ ಬೇರೆಡೆ ಇರಬಹುದು

ಸಿಟ್ಟು, ಮಾನಸಿಕ ಒತ್ತಡ, ನಿರಾಸೆ, ದಿನವಿಡೀ ಕೆಲಸ ಮಾಡಿ ಸುಸ್ತಾಗಿರುವುದು, ಹತಾಶೆ ಮೊದಲಾದ ಹತ್ತು ಹಲವು ಭಾವನೆಗಳನ್ನು ಆಕೆ ಈ ಕ್ಷಣದಲ್ಲಿ ಅನುಭವಿಸುತ್ತಿದ್ದು ನಿಮ್ಮ ಗಮನಕ್ಕೇ ಬಾರದಿರಬಹುದು. ಪುರುಷರಿಗೆ ಯಾವಾಗ ತಮ್ಮ ಕೆಲಸ ಹಾಗೂ ಮಾನಸಿಕ ಒತ್ತಡದ ಪರಿಸರದಿಂದ ಹೊರಬರುತ್ತಾರೋ ಆಗಲೇ ಒಂದು ಲೋಟ ಬಿಯರ್ ಕುಡಿದು, ಮೈಮುರಿದು ತಮ್ಮನ್ನು ತಾವೇ ಲೈಂಗಿಕ ಕ್ರಿಯೆಗೆ ಸಿದ್ದರಾಗಿಸಿಬಿಡುತ್ತಾರೆ. ಆದರೆ ಮಹಿಳೆಯರ ವಿಷಯದಲ್ಲಿ ಹಾಗಲ್ಲ, ಈ ಕ್ಷಣದಲ್ಲಿ ಮಾನಸಿಕಳಾಗಿ ತಯಾರಾಗಲು ಆಕೆಯ ಭಾವನೆಗಳು ಮತ್ತು ಸಂದರ್ಭಗಳು ಮನಸ್ಸನ್ನು ಆವರಿಸಿರುತ್ತವೆ. ಆಕೆಯನ್ನು ಹುರಿದುಂಬಿಸಲು ಆಕೆಯ ಅಡುಗೆ ಕೆಲಸದಲ್ಲಿ ನೆರವಾಗಿ, ನಯವಾದ ಮಸಾಜ್, ಪಾದಗಳನ್ನು ಒತ್ತುವ ಮೂಲಕ ಆಕೆಯನ್ನು ಸಿದ್ದಪಡಿಸಲು ನೀವು ಯತ್ನಿಸಿದರೂ ಎಲ್ಲಿಯವರೆಗೆ ಆಕೆ ಸ್ವತಃ ಮಾನಸಿಕವಾಗಿ ತಯಾರಾಗುವುದಿಲ್ಲವೋ ಅಲ್ಲಿಯವರೆಗೆ ಈ ಪ್ರಯತ್ನಗಳೂ ಆಕೆಗೆ ಸಿಟ್ಟು ಬರಿಸಲು ಒಂದು ನೆಪವಾಗಿಬಿಡುತ್ತವೆ. ಹಾಗಾಗಿ ಈ ಪ್ರಯತ್ನಗಳೂ ಸದಾ ಕಾರ್ಯಶೀಲವಾಗದು.

ಆಕೆ ದೈಹಿಕವಾಗಿ ಅಷ್ಟೊಂದು ಚಟುವಟಿಕೆಯಿಂದ ಇರದೇ ಇರಬಹುದು

ಆಕೆ ದೈಹಿಕವಾಗಿ ಅಷ್ಟೊಂದು ಚಟುವಟಿಕೆಯಿಂದ ಇರದೇ ಇರಬಹುದು

ಕಪಟ ಸ್ತ್ರೀವಾದಿಗಳ ವಾದಕ್ಕೆ ತದ್ವಿರುದ್ದ ಎಂಬಂತೆ ದೈಹಿಕವಾಗಿ, ಮಹಿಳೆಯರು ಪುರುಷರಷ್ಟು ಸಬಲರಲ್ಲ. ದಿನದ ಹತ್ತು ಹಲವು ಕೆಲಸಗಳ ಬಳಿಕ ರಾತ್ರಿಯ ಸಮಯದಲ್ಲಿ ಆಕೆ ಬಳಲಿ ಬೆಂಡಾಗಿ ಆರಾಮ ಬಯಸಿದರೆ ಇದಕ್ಕೆ ನೀವು ದೂರುವಂತಿಲ್ಲ! ಇದಕ್ಕೆ ಕಾರಣವೂ ಸರಳವಾಗಿದೆ, ಮಹಿಳೆಯರು ಮಾನಸಿಕವಾಗಿ ಹೆಚ್ಚು ಸ್ಥೈರ್ಯವಂತರಾಗಿರುತ್ತಾರೆ. ಪ್ರತಿ ವಿಷಯವನ್ನೂ ಅತಿ ಸೂಕ್ಷ್ಮವಾಗಿ ಗಮನಿಸುವ, ಹತ್ತು ಹಲವು ವಿಷಯಗಳ ಬಗ್ಗೆ ಜಾಗ್ರತೆ ವಹಿಸಬೇಕಾಗಿರುವ ಆಕೆ ದಿನದ ಎಲ್ಲಾ ಸಂದರ್ಭಗಳನ್ನೂ ಎದುರಾಗುವ ಅಪಾಯಗಳನ್ನೂ ಮನಗಂಡು, ಇದು ನಿಜವಾಗಿದ್ದರೂ ಕಾಲ್ಪನಿಕವಾಗಿದ್ದರೂ ಸಹಾ, ಹಲವಾರು ಸಾಧ್ಯತೆಗಳನ್ನು ನಿರೀಕ್ಷಿಸುತ್ತಾ ಕ್ಷಿಪ್ರ ಕ್ಷಣಗಳಲ್ಲಿಯೇ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಪುರುಷರಿಗೆ ಈ ಸೂಕ್ಷ್ಮ ಕೆಲಸಗಳೆಲ್ಲಾ ಅಗಿ ಹೋಗದ ವಿಷಯಗಳು! ಪರಿಣಾಮವಾಗಿ, ದಿನದ ಕೊನೆಯಲ್ಲಿ, ಆಕೆ, ಮುನ್ನಲಿವಿಗೂ ಮುನ್ನವೇ ತೀರಾ ಸುಸ್ತಾಗಿ ಹೋಗಿರುತ್ತಾಳೆ.

ಆಕೆ ತನ್ನನ್ನು ತಾನೇ ಅತಿಯಾಗಿ ವಿವೇಚಿಸಿಕೊಳ್ಳುತ್ತಾಳೆ

ಆಕೆ ತನ್ನನ್ನು ತಾನೇ ಅತಿಯಾಗಿ ವಿವೇಚಿಸಿಕೊಳ್ಳುತ್ತಾಳೆ

ಒಂದು ವೇಳೆ ಆಕೆ ತನ್ನನ್ನು ತಾನೇ ಕಡಿಮೆ ಸೌಂದರ್ಯವತಿ, ಕುರೂಪಿ, ಸ್ಥೂಲದೇಹಿ, ದೇಹದುರ್ಗಂಧವುಳ್ಳವಳು, ಆಕರ್ಷಣೆ ಇಲ್ಲದವಳು, ಯಾರೂ ಮೆಚ್ಚದವಳು ಅಥವಾ ಇನ್ನಾವುದೋ ಕೀಳರಿಮೆಯಲ್ಲಿ ನೋಡಿಕೊಂಡಿದ್ದರೆ ಈ ಭಾವನೆಯೊಂದಿಗೆ ಆಕೆ ಎಂದಿಗೂ ನಿಮ್ಮ ಎದುರು ನಗ್ನಳಾಗಲು ಇಚ್ಛಿಸುವುದಿಲ್ಲ. ಆಕೆ ಇದಕ್ಕೆ ಅನರ್ಹಳು ಎಂದೇ ಭಾವಿಸಬಹುದು. ಕೆಲವೊಮ್ಮೆ ಈ ಭಾವನೆಯಿಂದ ಹೊರಬರಲು ಆಕೆ ಅತ್ಯಂತ ಅನಾಕರ್ಷಕ ಪೈಜಾಮ ಮತ್ತು ಅತಿ ಸಡಿಲವಾದ ಟೀ ಶರ್ಟ್ ಧರಿಸಿ ಕನ್ನಡಿಯನ್ನೂ ನೋಡಿಕೊಳ್ಳದೇ ತನ್ನಲ್ಲಿಯೇ ಮುಳುಗಿರಬಹುದು. ಈ ಸಮಯದಲ್ಲಿ ಆಕೆಯನ್ನು ಲೈಂಗಿಕಕ್ರಿಯೆಗೆ ಆಹ್ವಾನಿಸಿದರೆ ಆಕೆಯ ದುಃಖ ದುಮ್ಮಾನಗಳೆಲ್ಲಾ ಕಣ್ಣೀರ ರೂಪ ಧರಿಸಿ ನಿಮ್ಮನ್ನು ತೋಯಿಸುವುದು ಖಚಿತ ಹಾಗೂ ಆಕೆಯ ಅಶ್ರುಧಾರೆ ನಿಮಗೆ ಸಹಿಸಲಸಾಧ್ಯ ವಾಗಬಹುದು.

ಆಕೆ ತನ್ನದೇ ಮನೋಭಾವದಲ್ಲಿರುತ್ತಾಳೆ

ಆಕೆ ತನ್ನದೇ ಮನೋಭಾವದಲ್ಲಿರುತ್ತಾಳೆ

ಈ ಕ್ಷಣದಲ್ಲಿ ನಿನ್ನ ಮನೋಭಾವ ಹೇಗಿದೆ ಎಂದು ಯಾವುದೇ ಮಹಿಳೆಯನ್ನು ಕೇಳಬೇಡಿ, ಏಕೆಂದರೆ ಆಕೆಗೂ ಇದನ್ನು ವಿವರಿಸಲು ಸಾಧ್ಯವಾಗದೇ ಹೋಗಬಹುದು. ಈ ಕ್ಷಣ ಆಕೆ ಹೇಗಿದ್ದಾಳೆಯೋ ಅದನ್ನು ತಿಳಿದುಕೊಳ್ಳಲು ಖಂಡಿತವಾಗಿಯೂ ಒತ್ತಡ ಹೇರದಿರಿ. ಒಂದು ವೇಳೆ ಪ್ರಯತ್ನಿಸಿದರೂ ಆಕೆಯಿಂದ ಹೊರಡುವ ಪದಗಳು ನಿಮ್ಮಿಂದ ಸಂಭಾಳಿಸಲು ಸಾಧ್ಯವಾಗದೇ ಹೋಗಬಹುದು ಹಾಗೂ ನೀವು ಅತೃಪ್ತರಾಗಿಯೇ ಹಾಸಿಗೆಗೆ ತೆರಳುವುದು ನಿಶ್ಚಿತ! ಹಾಗಾಗಿ ಆಕೆ ಈಗ ಇರುವ ಮನಃಸ್ಥಿತಿಯೂ, ಆಕೆಯ ಭಾವನೆಗಳೂ ನಿಜ ಎಂದು ಒಪ್ಪಿಕೊಳ್ಳಿ ಹಾಗೂ ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಡಿ.

ಆಕೆ ನಿಮ್ಮಿಂದ ಅನ್ಯೋನ್ಯತೆಯನ್ನು ಬಯಸುತ್ತಾಳೆ

ಆಕೆ ನಿಮ್ಮಿಂದ ಅನ್ಯೋನ್ಯತೆಯನ್ನು ಬಯಸುತ್ತಾಳೆ

ಲೈಂಗಿಕ ವಿಷಯದಲ್ಲಿ ಪುರುಷರ ಮತ್ತು ಮಹಿಳೆಯರ ಮೆದುಳುಗಳು ಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಪುರುಷರ ಮೆದುಳು ಭಾವನೆಗಳನ್ನು ತಟಸ್ಥವಾಗಿಸಿ ಈ ಕ್ಷಣದ ಸುಖವನ್ನು ಅನುಭವಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಮಹಿಳೆಯರಿಗೆ ಹಾಗಲ್ಲ, ಇವರಿಗೆ ಲೈಂಗಿಕತೆಯೂ ಒಂದು ಭಾವನೆಯೇ ಆಗಿದ್ದು ಈ ಸಮಯದಲ್ಲಿ ಬೇರಾವುದೋ ಭಾವನೆ ಮನಸ್ಸನ್ನು ಆವರಿಸಿದ್ದರೆ (ಉದಾಹರಣೆಗೆ ದುಃಖ) ಇದನ್ನು ಪ್ರತ್ಯೇಕಿಸಿ ಆ ಸ್ಥಳದಲ್ಲಿ ಕಾಮಭಾವನೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ! ಆಕೆಯೇ ಈ ಕ್ಷಣದಲ್ಲಿ ನನ್ನಿಂದ ಏನನ್ನೂ ನಿರೀಕ್ಷಿಸದಿರಿ ಎಂಬುದನ್ನು "ಈಗ ನನ್ನನ್ನೇನೂ ಕೇಳಬೇಡಿ" ಎಂದು ವಿವರಿಸಿದರೂ ಆಕೆಯ ಮನಸ್ಸಿನಲ್ಲಿ ಯಾವುದೋ ಭಾವನೆ ಬಲವಾಗಿ ಮೂಡಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಆಕೆ ನಿಮ್ಮಿಂದ ಕೇವಲ ಅನ್ಯೋನ್ಯತೆಯನ್ನು ಬಯಸುತ್ತಾಳೆಯೇ ವಿನಃ ನೀವು ಜಗತ್ತಿನ ಅತ್ಯಂತ ಸುಂದರ ಪುರುಷನಾಗಿದ್ದರೂ ನಿಮ್ಮೊಂದಿಗೆ ಕೂಡಲು ಆಕೆ ತಯಾರಾಗುವುದಿಲ್ಲ.

English summary

Reasons Why Women Don't Want Sex As Much As Men

Time and again, women-centric fashion and lifestyle magazines keep reiterating how women want just as much sex as men do; how they are just as promiscuous as men and how women are just as psyched about getting some as men. Truth is, in the real world, that hardly ever plays out to be the case. And I know I speak for most men reading this. Just so you know, our sympathies are with you. But, there are absolutely legit reasons why your woman is not feeling anything down there and no, it has nothing to do with the love dying out. So, before you give up on her and start looking outside of it for some physical solace, read on.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more