For Quick Alerts
ALLOW NOTIFICATIONS  
For Daily Alerts

ಗಾಳಿಯಲ್ಲಿ ಹುಟ್ಟಿದ ಪ್ರೀತಿ ಜೀವನವನ್ನೇ ತೇಲಿಸಿತು!

By Divya Pandith
|

ಪ್ರೀತಿಯೇ ಹಾಗೆ... ಯಾರನ್ನೂ ಹೇಳಿ ಕೇಳಿ ಬರಯವುದಿಲ್ಲ. ಹೇಗೋ ನಮ್ಮ ಮನಸ್ಸನ್ನು ತಟ್ಟುತ್ತದೆ. ಕ್ಷಣಾರ್ಧದಲ್ಲಿ ಮನಸ್ಸನ್ನು ಆವರಿಸಿರುತ್ತದೆ. ಮರುಗಳಿಗೆಯಿಂದಲೇ ಅದೇ ನಮ್ಮ ಉಸಿರಾಗಿ ಜೀವಿಸುತ್ತದೆ. ಹೇಳಬೇಕೆಂದರೆ ಪ್ರೀತಿಗೆ ಸೋಲದ ವ್ಯಕ್ತಿಗಳು ಈ ಪ್ರಪಂಚದಲ್ಲಿ ಯಾರೂ ಇರಲಿಕ್ಕಿಲ್ಲ. ಒಂದು ವಯಸ್ಸಿಗೆ ಬಂದಾಗ ಪ್ರೀತಿಯ ಗುಂಗಿಗೆ ಒಳಗಾಗುವುದು, ನಿಸರ್ಗದ ಸುಂದರ ದೃಶ್ಯಗಳೊಡನೆ ತಮ್ಮ ಪ್ರೀತಿಯ ಹೋಲಿಕೆ ಮಾಡುವುದು, ಪ್ರೀತಿಗಾಗಿ ಏನನ್ನಾದರೂ ಒಮ್ಮೆಲೇ ಸಾಧಿಸುತ್ತೇನೆ ಎನ್ನುವ ಕಲ್ಪನೆಗೆ ಜಾರುವುದು ಎಲ್ಲವೂ ಸಾಮಾನ್ಯವಾಗಿರುತ್ತದೆ.

ಬೆಳದಿಂಗಳ ತಂಪನ್ನು ನೀಡುವ ಆ ಚಂದ್ರನಿಗೆ ತನ್ನ ಪ್ರೀತಯ ಹೋಲಿಕೆ ಮಾಡುತ್ತಾ, ತಂಗಾಳಿಯ ಆ ಸುಂದರ ಮಂದವಾದ ಚಳಿಯಲ್ಲಿ ಮೈಮರೆಯುವುದು, ಪ್ರೀತಿಯ ಕ್ಷಣಗಳನ್ನು ನೆನೆಯುತ್ತ ಕಳೆದು ಹೋಗುವ ಪರಿಯು ಜೀವನದ ಒಂದು ಸುಂದರ ಘಟ್ಟ ಎನ್ನಬಹುದು. ನಾವು ಅಂದುಕೊಂಡ ಅಥವಾ ಬಯಸಿದ ಪ್ರೀತಿ ನಮ್ಮ ಪಾಲಿಗೆ ದೊರೆಯಿತು ಎಂದರೆ ಆ ಆನಂದ ಹೋಲಿಕೆಗೆ ನಿಲುಕದ್ದಾಗುತ್ತದೆ. ನಮ್ಮ ಸುತ್ತಲಿನ ಸಮಾಜದಲ್ಲಿ ಜಾತಿ-ಧರ್ಮ ಎನ್ನುವ ತಾರತಮ್ಯ ಗಳಿರುವುದರಿಂದ ಅದೆಷ್ಟೋ ಪ್ರೇಮಿಗಳು ತಮ್ಮ ಪ್ರೀತಿಯನ್ನು ಕಳೆದುಕೊಂಡಿದ್ದಾರೆ. ಕೆಲವು ಅದೃಷ್ಟವಂತರು ಮಾತ್ರ ತಮ್ಮ ಪ್ರೀತಿಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ ಎನ್ನಬಹುದು.

ಹೌದು, ಹದಿಹರೆಯದಲ್ಲಿ ಹುಟ್ಟಿದ ಮುಗ್ಧ ಪ್ರೀತಿ ಸಾಮಾನ್ಯವಾಗಿ ಮುಂದುವರಿಯುವುದಿಲ್ಲ. ವ್ಯಕ್ತಿಯ ಓದು, ವೃತ್ತಿ, ಕುಟುಂಬ ಎನ್ನುವ ಜವಾಬ್ದಾರಿಯ ನಿರ್ವಹಣೆ ಹಾಗೂ ಕೆಲವು ಕಟ್ಟುಪಾಡುಗಳಿಗೆ ಅನುಗುಣವಾಗಿ ಹುಟ್ಟಿದ ಪ್ರೀತಿಯನ್ನು ಮರೆಯಲು ಪ್ರಯತ್ನಿಸುವುದು ಅಥವಾ ಅದರಿಂದ ದೂರಾಗುವ ಪ್ರಯತ್ನಗಳು ಹೆಚ್ಚಾಗಿರುತ್ತದೆ. ಒಂದು ಜೀವದ ಜವಾಬ್ದಾರಿಯನ್ನು ನಿರ್ವಹಿಸಬಲ್ಲೆ ಎನ್ನುವಂತಹ ವಿಶ್ವಾಸ ನಮಗೆ ಬಂದಾಗ ಮತ್ತು ಆರ್ಥಿಕವಾಗಿ ಸಮರ್ಥವಾಗಿದ್ದಾಗ ಒಂದು ಜೀವದ ಮುಂದೆ ನಮ್ಮ ಪ್ರೀತಿಯ ಸಂಕಲ್ಪವನ್ನು ಇಡುವುದರಲ್ಲಿ ತಪ್ಪಿಲ್ಲ. ಅದು ವಿವೇಕಯುತವಾದ ನಿರ್ಧಾರ ಎನಿಸಿಕೊಳ್ಳುತ್ತದೆ. ಅಂತಹ ಒಂದು ಮುಗ್ಧ ಪ್ರೀತಿಯು ಆ ವಿಮಾನ ಯಾನದಲ್ಲಿ ಹುಟ್ಟಿಕೊಂಡಿತು... ಕೇವಲ ಮೊದಲ ನೋಟದಲ್ಲಿಯೇ ಪ್ರೀತಿಗೆ ಶರಣಾದ ಅರುಣ್ ತನ್ನ ಪ್ರೀತಿಗಾಗಿ ಏನೆಲ್ಲಾ ಮಾಡಿದ ನೋಡಿ...

ಅವರ ಪ್ರೀತಿ ಹುಟ್ಟಿದ್ದು...

ಅವರ ಪ್ರೀತಿ ಹುಟ್ಟಿದ್ದು...

ಆ ಎರಡು ಹೃದಯದ ಪ್ರೇಮ ಗೀತೆ ಮಿಡಿದಿದ್ದು ಭೂಮಿಯಿಂದ ಸರಿ ಸುಮಾರು 10,000 ಅಡಿ ಎತ್ತರದಲ್ಲಿ. ಮನಸ್ಸನ್ನು ಕಾಡಿದ ಆ ಪ್ರೀತಿಗಾಗಿ ಆತ ಕೊಂಚ ಚಿಂತೆಯನ್ನೂ ಮಾಡಲಿಲ್ಲ. ಹುಟ್ಟಿದ ಪ್ರೀತಿಯನ್ನು ಆಕೆಯ ಮುಂದಿಟ್ಟ... ಆ ನಿರ್ಮಲ ಪ್ರೀತಿಯನ್ನು ಆಕೆ ಹೇಗೆ ಸ್ವೀಕರಿಸಿದಳು ಎನ್ನುವುದು ಸಹ ಕುತೂಹಲವೆ...

ಅವಳು ಬಂದ ದಾರಿ...

ಅವಳು ಬಂದ ದಾರಿ...

ಅವಳು ನೋಡಲು ಸುಂದರಿ ಹಾಗೂ ಬುದ್ಧಿವಂತ ಹುಡುಗಿ. ಗಗನಸಖಿಯಾಗುವ ಕನಸು ಅವಳದ್ದು. ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಗಗನಸಖಿಯ ತರಬೇತಿಯನ್ನು ಪಡೆದು ಉತ್ತೀರ್ಣಳಾದಳು. ಅವಳ ಕನಸಂತೆ ಪ್ರತಿಷ್ಠಿತ ಸಂಸ್ಥೆಯಾದ ಏರ್ ಇಂಡಿಯಾದಲ್ಲಿ ಗಗನ ಸಖಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು.

 ಅದು ಅವನ ಕಥೆ

ಅದು ಅವನ ಕಥೆ

ಅರುಣ್ ಮೂಲತ: ತಮಿಳುನಾಡಿನ ಹುಡುಗ. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದವನು. ಐಐಟಿ ಮತ್ತು ಜೆಇಇಯಲ್ಲಿ ಮೊದಲ ಬಾರಿಗೇ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಆದರೆ ತನ್ನದೇ ಆದ ಶ್ರದ್ಧೆಯನ್ನು ತೋರುವ ಮೂಲಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದನು. ನಂತರ ತನ್ನ ವೃತ್ತಿ ಜೀವನ ನಡೆಸಲು ಪ್ರಾರಂಭಿಸಿದನು.

 ಅವನ ಹೆಜ್ಜೆ...

ಅವನ ಹೆಜ್ಜೆ...

ದೆಹಲಿಯಲ್ಲಿ ಐಐಟಿ ಮಿಗಿಸಿ ಬೆಂಗಳೂರು ಮೂಲದ ಬಹು ಅಂತಾರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಂಸ್ಥೆಯ ಕೆಲಸದ ನಿಮಿತ್ತ ಆಗಾಗ ಪ್ರಯಾಣ ಮಾಡಬೇಕಿತ್ತು. ಒಮ್ಮೆ ಹೀಗೆ ಪ್ರಯಾಣ ಮಾಡುವಾಗ ಅವನಲ್ಲಿ ಒಂದು ಪ್ರೀತಿ ಹುಟ್ಟಿತು..

ಅವರಿಬ್ಬರ ಭೇಟಿ...

ಅವರಿಬ್ಬರ ಭೇಟಿ...

ಆತ ಕೆಲಸಕ್ಕಾಗಿ ವಿಮಾನ ಪ್ರಯಾಣ ಬೆಳೆಸಿದ್ದ. ಈಕೆ ಸ್ಮøತಿ ತನ್ನ ಕೆಲಸದ ನಿಮಿತ್ತ ಪ್ರಯಾಣಿಕರಿಗೆ ಸೇವೆಯನ್ನು ಸಲ್ಲಿಸುತ್ತಿದ್ದಳು. ಸ್ಮøತಿಯ ಕೆಲಸ ಹಾಗೂ ಅವಳ ಹಾವ ಭಾವಕ್ಕೆ ಅರುಣ್ ನ ಮನಸ್ಸನ್ನು ಗೆದ್ದಿತ್ತು. ಅವನು ಅವಳನ್ನು ಕಂಡ ಮೊದಲ ನೋಟದಲ್ಲಿಯೇ ಅವಳ ಪ್ರೀತಿಗೆ ಬಿದ್ದಿದ್ದ. ಅದನ್ನು ಅವಳಿಗೆ ಹೇಳಬೇಕು, ಅವಳನ್ನೇ ತನ್ನ ಸಂಗಾತಿಯಾಗಿ ಪಡೆಯಬೇಕು ಎನ್ನುವ ಹಂಬಲವನ್ನು ಹೊಂದಿದ. ಅವನ ಮನಸ್ಸಿನ ಆಸೆಯಂತೆ ವಿಮಾನದಿಂದ ಇಳಿಯುವುದರೊಳಗೆ ಅವಳ ಸಂಪರ್ಕಿಸಲು ಫೋನ್ ನಂಬರ್ ಪಡೆದುಕೊಳ್ಳಲು ಬಯಸಿದ.

 ಅವನು ಕೇಳಿ ಬಿಟ್ಟ...

ಅವನು ಕೇಳಿ ಬಿಟ್ಟ...

ಅವನ ಆತ್ಮ ವಿಶ್ವಾಸ ಹಾಗೂ ನಿರ್ಮಲ ಪ್ರೀತಿಯ ಕಾರಣಕ್ಕಾಗಿ ನನ್ನ ಕೈ ಹಿಡಿದು ತನ್ನನ್ನು ವಿವಾಹವಾಗುವೆಯಾ? ಎಂದು ಕಳಿದ... ಅವನ ವರ್ತನೆ ಹಾಗೂ ಪ್ರೀತಿಯ ಪರಿ ಅವಳ ಮನಸ್ಸನ್ನು ಗೆದ್ದಿತು. ಆಕೆ ಅದಕ್ಕೆ ಸಮ್ಮತಿ ಸೂಚಿಸಿದಳು. ಇಬ್ಬರ ಮನೆಯಲ್ಲೂ ಅವರ ಪ್ರೀತಿಯ ಬಗ್ಗೆ ಅಷ್ಟಾಗಿ ಯಾವುದೇ ವಿರೋಧಗಳಿರಲಿಲ್ಲ. ಆ ಕಾರಣದಿಂದ ದಿನದಿಂದ ದಿನಕ್ಕೆ ಇಬ್ಬರ ನಡುವೆ ಸಂಭಾಷಣೆಗಳು ಹೆಚ್ಚ ತೊಡಗಿತು.

 ಇದೀಗ ಅವರದ್ದು ಸುಖ ಜೀವನ...

ಇದೀಗ ಅವರದ್ದು ಸುಖ ಜೀವನ...

ಎರಡು ಹೃದಯವು ಒಬ್ಬರನ್ನೊಬ್ಬರು ಅರಿತು ಕೊಂಡವು. ಅಂತೆಯೇ ಎರಡು ಕುಟುಂಬದವರನ್ನು ಒಪ್ಪಿಸಿತು. ಇದೀಗ ಪ್ರೀತಿಯ ಸುಖ ಜೀವನವನ್ನು ನಡೆಸುತ್ತಿದ್ದಾರೆ.

English summary

Love Story: When Love Is In The Air

Usually, we see that for any love story to take shape, it takes ages. The process is a slow and cumbersome one.However, one must remember that it is not always the case all the time. There are times when the arrow of Cupid strikes all of a sudden. May be, that is what is known as 'love at first sight'. In such cases, sometimes you just know that the other person is 'just right' for you. At times like that, there is no point of waiting and one can jump into the holy matrimony of marriage with utmost confidence.
Story first published: Monday, January 22, 2018, 20:14 [IST]
X
Desktop Bottom Promotion