ಪ್ರೀತಿಯ ಜೀವನದಲ್ಲಿ ಎರಡನೇ ಅವಕಾಶ ಸಿಕ್ಕಾಗ...

Posted By: Divya pandith
Subscribe to Boldsky

ವಿವಾಹದ ಬಂಧನಕ್ಕೆ ಕಾಲಿಡುತ್ತಿದ್ದೇವೆ ಎಂದರೆ ಪ್ರತಿಯೊಬ್ಬರಿಗೂ ಅದೇನೋ ಒಂದು ಬಗೆಯ ಸಂತೋಷ. ಹೊಸ ಜೀವನದ ಸಂತೋಷವನ್ನು ಆನಂದಿಸುತ್ತಿದ್ದೇವೆ ಎನ್ನುವ ಉತ್ಸಾಹ. ಹೊಸತನ ಎನ್ನುವುದು ಹೊಸ ಪ್ರಪಂಚಕ್ಕೇ ನಮ್ಮನ್ನು ಕರೆದೊಯ್ದಿರುತ್ತದೆ. ಹರೆಯದ ಹುರುಪಲ್ಲಿ ಪ್ರಪಂಚವೆಲ್ಲಾ ಹೊಸತನದಿಂದ ಕಂಗೊಳಿಸುವಂತೆ ಕಾಣುತ್ತದೆ. ಆ ಗುಂಗಿನಲ್ಲೇ ಜೀವನದ ಸಂಗಾತಿಯ ಆಯ್ಕೆ ಮಾಡುತ್ತಾರೆ. ವಿವಾಹ ಎನ್ನುವ ಬಂಧನಕ್ಕೆ ಒಳಗಾಗುತ್ತಾರೆ...

ವಿವಾಹ ಎನ್ನುವುದು ಕೇವಲ ಎರಡು ಹೃದಯಗಳ ಸಮ್ಮಿಲನಕ್ಕೆ ಸೀಮಿತವಾಗಿರುವುದಿಲ್ಲ. ಬದಲಿಗೆ ಎರಡು ಕುಟುಂಬಗಳ ನೋವು ನಲಿವುಗಳು ಸಹ ಒಂದು ವಿವಾಹದ ನಂಟಿನಲ್ಲಿ ಅಡಗಿರುತ್ತದೆ. ಹಾಗಾಗಿ ವಿವಾಹದ ನಂತರ ವಧು-ವರರು ತಮ್ಮ ಪ್ರೀತಿ, ಕರ್ತವ್ಯ ಹಾಗೂ ಕಾಳಜಿಯ ವಿಚಾರದಲ್ಲಿ ಸೂಕ್ತವಾದ ನಿರ್ಣಯ ಹಾಗೂ ನಡತೆಯನ್ನು ತೋರಿಸಬೇಕಾಗುವುದು. ಹಾಗೊಮ್ಮೆ ಇಬ್ಬರಲ್ಲಿ ಒಬ್ಬರ ವರ್ತನೆ ದುರ್ನಡತೆಯಿಂದ ಕೂಡಿದೆ ಎಂದಾದರೆ ಆ ಸಂಬಂಧವು ಬಹುಬೇಗ ಅಂತ್ಯ ಕಾಣುವುದು.

ಸಂಬಂಧದಲ್ಲಿ ಯಾವುದೋ ತಪ್ಪುಗಳು ಅಥವಾ ವಿಚಾರಗಳು ಪ್ರೀತಿಯಲ್ಲಿ ತೊಡಕನ್ನುಂಟುಮಾಡಬಹುದು. ಕೆಲವೊಮ್ಮೆ ಸುಂದರ ಕನಸಿನಿಂದ ಕಟ್ಟಿಕೊಂಡ ಜೀವನ ಕೆಲವೇ ದಿನಗಳಲ್ಲಿ ಒಡೆದು ಚೂರಾಗಬಹುದು. ಅಂತಹ ಸಂದರ್ಭದಲ್ಲಿ ಸನ್ನಿವೇಶಗಳನ್ನು ಹಾಗೂ ಆ ದುಃಖವನ್ನು ಸಹಿಸಲು ಬಹಳ ಕಷ್ಟವಾಗುತ್ತದೆ. ಆದರೆ ಕೆಲವೊಂದು ಅಪರೂಪದ ಘಳಿಗೆಗಳು ಮತ್ತೆ ಹೊಸ ಜೀವನವನ್ನು ಕಟ್ಟಿಕೊಡುವ ಸಾಧ್ಯತೆಗಳೂ ಇರುತ್ತವೆ ಎನ್ನುವುದನ್ನು ನಾವು ಮರೆಯುವಂತಿಲ್ಲ...

ನಿಜಾ, ಆನಂದಿ ಎನ್ನುವ ಬಡ ಹುಡುಗಿಯ ಜೀವನದಲ್ಲಿ ಹೀಗೆಯೇ ಆಯಿತು. ವಿವಾಹ ಎನ್ನುವ ಹೊಸ ಜೀವನ ಹೊಸ ಬದಲಾವಣೆಯನ್ನು ತಂದಿತ್ತಾದರೂ ಅದೇ ಸಮಯದಲ್ಲಿ ಬಹಳಷ್ಟು ನೋವನ್ನೂ ಅನುಭವಿಸಬೇಕಾಯಿತು. ಆದರೆ ಅವಳಿಗೆ ಆ ಉತ್ತಮ ಘಳಿಗೆ ತಂದುಕೊಟ್ಟ ಸುಂದರ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಳು. ಅದು ಅವಳ ಜೀವನವನ್ನು ಮತ್ತೆ ಸರಿಪಡಿಸಿತು... ಹಾಗಾದರೆ ಅವಳ ಜೀವನದ ಕಥೆ ಏನಾಗಿತ್ತು? ಎನ್ನುವುದನ್ನು ನೀವು ತಿಳಿಯಬೇಕಾದರೆಮುಂದಿರುವ ವಿವರಣೆಯನ್ನು ಓದಿ...

ಆನಂದಿಯ ಜೀವನ...

ಆನಂದಿಯ ಜೀವನ...

ಆನಂದಿ 23 ವರ್ಷದ ಯುವತಿ. ಈಕೆ ಚೆನ್ನೈನಲ್ಲಿ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ತನ್ನ ಪದವಿ ವಿದ್ಯಾಭ್ಯಾಸವನ್ನು ಮುಗಿಸಿದ್ದಳು. ಮಗಳ ಸುಂದರ ಬದುಕಿಗಾಗಿ ಅವಳ ಪಾಲಕರು ಎಮ್‍ಬಿಎ ಓದಿರುವ ರಾಘವ ಎನ್ನುವ ಹುಡುಗನಿಗೆ ವಿವಾಹ ಮಾಡಿದರು. ವಿವಾಹದ ನಿಶ್ಚಯ ಹಾಗೂ ತಯಾರಿ ಎಲ್ಲವೂ ಕೇವಲ ಒಂದು ತಿಂಗಳ ಅವಧಿಯಲ್ಲಿಯೇ ನಡೆದು ಹೋಯಿತು... ರಾಘವನ ಜೊತೆ ಮಗಳು ಬಹಳ ಸಂತೋಷದಿಂದ ದಿನ ಕಳೆಯುತ್ತಾಳೆ ಎನ್ನುವ ನಂಬಿಕೆ ಹಾಗೂ ಖುಷಿಯಲ್ಲಿ ಇದ್ದರು....

ಆದರೆ ಅದೃಷ್ಟ ಬೇರೆಯೇ ಆಗಿತ್ತು....

ಆದರೆ ಅದೃಷ್ಟ ಬೇರೆಯೇ ಆಗಿತ್ತು....

ಸುಂದರ ಜೀವನದ ಕನಸು ಕಂಡ ಆನಂದಿಯ ಬದುಕಲ್ಲಿ ಆ ಕನಸುಗಳು ಬಹಳ ದಿನಗಳವರೆಗೆ ಉಳಿದಿರಲಿಲ್ಲ. ನಿತ್ಯವೂ ಕುಡಿದು ಬರುತ್ತಿದ್ದ ರಾಘವನ ಚಟದಿಂದ ಆನಂದಿ ಬೇಸತ್ತಿದ್ದಳು. ವಿವಾಹವಾಗಿ ಎರಡು ತಿಂಗಳಲ್ಲಿಯೇ ರಾಘವ ತನ್ನ ನಿಜ ರೂಪವನ್ನು ತೋರಲು ಪ್ರಾರಂಭಿಸಿದ್ದ. ಜೊತೆಗೆ ಆನಂದಿಗೆ ಹೊಡೆಯುತ್ತಿದ್ದ. ಇದನ್ನು ಸಹಿಸಿಕೊಳ್ಳದ ಆನಂದಿ ವಿವಾಹದ ಜೀವನಕ್ಕೆ ಪೂರ್ಣವಿರಾಮ ಇಡಲು ಮುಂದಾದಳು...

ವಿವಾಹ ಬಂಧನ ಒಡೆಯಿತು...

ವಿವಾಹ ಬಂಧನ ಒಡೆಯಿತು...

ಕುಡಿತದ ಚಟಕ್ಕೆ ದಾಸನಾದ ರಾಘವನವ ಜೊತೆಗೆ ಜೀವನ ಕಷ್ಟವಾದ ಕಾರಣ ಆನಂದಿ ವಿಚ್ಛೇದನಕ್ಕೆ ಮುಂದಾದಳು. ಅವಳ ಈ ಕಾರ್ಯಕ್ಕೆ ಮನೆಯವರ ಅನುಮತಿಯನ್ನು ಪಡೆದಳು. ಕೆಲವು ತಿಂಗಳಲ್ಲಿ ವಿಚ್ಛೇದನವನ್ನು ಪಡೆದಳು. ಸಂಬಂಧ ವಿಚ್ಛೇದನದಲ್ಲಿ ಮುಕ್ತಾಯವನ್ನು ಕಂಡಿತ್ತಾದರೂ ಮನಸ್ಸು ನೋವಿನಿಂದ ಒದ್ದಾಡುತ್ತಿತ್ತು. ಅಲ್ಲದೆ ಬಂಧುಗಳೆಲ್ಲರೂ ತಲೆಗೊಂದರಂತೆ ಮಾತನಾಡಲು ಪ್ರಾರಮಭಿಸಿದರು...

ಚಿಕಿತ್ಸೆಗೆ ಶರಣಾದಳು...

ಚಿಕಿತ್ಸೆಗೆ ಶರಣಾದಳು...

ಮಗಳು ಮಾನಸಿಕವಾಗಿ ಕುಂದಿರುವ ಸ್ಥಿತಿಯನ್ನು ನೋಡಲಾಗದೆ ಪಾಲಕರು ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸಲು ಮುಂದಾದರು. ಅವರ ನಿರೀಕ್ಷೆಯಂತೆ ಆಗಷ್ಟೆ ತನ್ನ ವಿದ್ಯಾಭ್ಯಾಸ ಮುಗಿಸಿ ವೃತ್ತಿಯನ್ನು ಆರಂಭಿಸಿದ ಡಾ. ಅಮನ್ ಕೌಶಿಕ್ ಅವರ ಬಳಿ ಹೋದರು. ಆನಂದಿಗೆ ಥೆರಪಿಯನ್ನು ನೀಡಲು ವೈದ್ಯರು ಪ್ರಾರಂಭಿಸಿದರು. ಸೂಕ್ತ ಚಿಕಿತ್ಸೆಯ ನಂತರ ಆನಂದಿ ಮೊದಲಿನಂತೆಯೇ ಮಾನಸಿಕವಾಗಿ ಚೇತರಿಕೆ ಕಂಡಳು.

ಪಾಲಕರ ನಿರ್ಣಯವಾತ್ತು...

ಪಾಲಕರ ನಿರ್ಣಯವಾತ್ತು...

ಚಿಕ್ಕ ವಯಸ್ಸಿನಲ್ಲಿಯೇ ವಿವಾಹವನ್ನು ಮಾಡಿ ಬಹಳ ಮಾನಸಿಕ ನೋವನ್ನು ಅನುಭವಿಸುವಂತೆ ಮಾಡಿದೆವು, ಮತ್ತೆ ವಿವಾಹ ಎನ್ನುವ ಸುಳಿಗೆ ಸಿಲುಕಿ, ಮಾನಸಿಕ ಗೊಂದಲ ಹಾಗೂ ನೋವಿಗೆ ಒಳಗಾಗಬಾರದು ನಮ್ಮ ಮಗಳು ಎಂದು ಪಾಲಕರು ನಿರ್ಧರಿಸಿದ್ದರು.

ವಿಧಿ ಬೇರೆಯೇ ಹೇಳಿತ್ತು...

ವಿಧಿ ಬೇರೆಯೇ ಹೇಳಿತ್ತು...

ಆನಂದಿಯನ್ನು ಇಷ್ಟ ಪಟ್ಟ ಡಾ. ಅಮನ್ ಆಕೆಯೊಂದಿಗೆ ವಿವಾಹವಾಗಲು ಬಯಸುತ್ತಿದ್ದರು. ಆನಂದಿಯನ್ನು ವಿವಾಹವಾಗುವುದಾಗಿ ಹಾಗೂ ಆಕೆಯ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಆನಂದಿಯ ಪಾಲಕರಲ್ಲಿ ಹೇಳಿದರು. ಅವರ ಮಾತಿಗೆ ಒಪ್ಪಿಗೆಯನ್ನು ಸೂಚಿಸಿದ ಆನಂದಿಯ ತಂದೆ ತಾಯಿ ಅಮನ್ ಜೊತೆ ವಿವಾಹ ಮಾಡಿಕೊಟ್ಟರು.

ಇದೀಗ ಸಂತೋಷದ ಬದುಕನ್ನು ನಡೆಸುತ್ತಿದ್ದಾರೆ...

ಇದೀಗ ಸಂತೋಷದ ಬದುಕನ್ನು ನಡೆಸುತ್ತಿದ್ದಾರೆ...

ಪರಸ್ಪರ ಪ್ರೀತಿಯನ್ನು ಅರಿತುಕೊಂಡು ಜೀವನ ನಡೆಸುತ್ತಿದ್ದ ಈ ಜೋಡಿ ಇದೀಗ ಸುಂದರ ಮಗುವನ್ನು ಪಡೆದುಕೊಂಡಿದ್ದಾರೆ. ಸಂತೋಷದ ಬದುಕನ್ನು ಮುಂದುವರಿಸುತ್ತಿದ್ದಾರೆ...

English summary

Love Story: When Life Gives You A Second Chance

Many of us are of the belief that we need to be perfect in order to please our loved ones. Some of us even go to the extent of thinking that unless and until we are perfect, no one will love us. But that is far from being true. The fact is that when someone loves you genuinely, he or she will love ad accept you with all your flaws and shortcomings.
Story first published: Wednesday, January 24, 2018, 23:31 [IST]