For Quick Alerts
ALLOW NOTIFICATIONS  
For Daily Alerts

ಅಂದು ನನಗೆ ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಮೂಡಿತು...

|

ಮೊದಲ ನೋಟದಲ್ಲೇ ಪ್ರೀತಿ ಮೂಡಿತು, ನಾವಿಬ್ಬರು ಪ್ರೀತಿಸಲು ಆರಂಭಿಸಿದೆವು ಎಂದು ಕೆಲವು ಪ್ರೇಮಿಗಳು ಹೇಳುವುದಿದೆ. ಆದರೆ ಇದು ಸಾಧ್ಯವೇ ಇಲ್ಲ, ಮೊದಲ ನೋಟದಲ್ಲೇ ಪ್ರೀತಿ ಮೂಡಲು ಸಾಧ್ಯವಿಲ್ಲ. ಒಬ್ಬರ ಕಡೆಗೆ ಆಕರ್ಷಿತರಾದರೆ ಅದು ಕೇವಲ ಕಾಮವೆನ್ನಬಹುದು. ಆದರೆ ನಿಜವಾಗಿಯೂ ಕೆಲವೊಮ್ಮೆ ಮೊದಲ ನೋಟದಲ್ಲೇ ಒಬ್ಬರ ಮೇಲೆ ಪ್ರೀತಿ ಮೂಡಿರುತ್ತದೆ. ಆಕೆ ಅಥವಾ ಆತನನ್ನೇ ತನ್ನ ಜೀವನದ ಸಂಗಾತಿಯನ್ನಾಗಿ ಮಾಡಬೇಕೆಂದು ಬಯಸುತ್ತಾಳೆ.

Love Story in kannada

ಇಂತಹ ಪ್ರೀತಿ ಮೂಡಿದರೆ ಅವರಿಬ್ಬರು ಜೀವನ ಪರ್ಯಂತ ಜತೆಯಾಗಿ ತುಂಬಾ ಪ್ರೀತಿಯಿಂದ ಇರಲು ಬಯಸುವರು. ಎಲ್ಲಾ ರೀತಿಯ ಪರೀಕ್ಷೆಗಳನ್ನು ಎದುರಿಸಿ ಇಂತಹ ಪ್ರೀತಿಯು ಕೊನೆಯ ತನಕ ಉಳಿಯುತ್ತದೆ. ಅಲೋಕ್ ಮತ್ತು ಪ್ರಿಯಾಳ ಪ್ರೀತಿಯು ಇಂತಹ ಸತ್ಯದ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತದೆ. ಮೊದಲ ನೋಟದಲ್ಲಿ ಕಾಣಿಸಿಕೊಂಡ ಪ್ರೀತಿಯನ್ನು ಹೆಚ್ಚಿನವರು ಕೇವಲ ಆಕರ್ಷಣೆಯೆಂದು ಬಿಟ್ಟುಬಿಡುವುದಿದೆ. ಆದರೆ ಅಲೋಕ್ ಮಾತ್ರ ಇದು ಆಕರ್ಷಣೆಗಿಂತ ತುಂಬಾ ಹೆಚ್ಚು ಎಂದು ಅರಿತುಕೊಂಡಿದ್ದ. ಆತನ ನಂಬಿಕೆ ಮತ್ತು ಪ್ರೀತಿಯಿಂದಾಗಿಯೇ ಪ್ರಿಯಾ ಆತನನ್ನು ಪ್ರೀತಿಸಲು ಆರಂಭಿಸಿದಳು. ಪ್ರೀತಿ ಹೇಗೆ ಮೂಡುವುದು ಎನ್ನುವ ಬಗ್ಗೆ ಈ ಲೇಖನವನ್ನು ಓದುತ್ತಾ ಸಾಗಿದಂತೆ ನಿಮಗೆ ಅರ್ಥವಾಗುವುದು.

ಜವಾಬ್ದಾರಿಯ ಮಗ

ಜವಾಬ್ದಾರಿಯ ಮಗ

ದೇಶದ ಪ್ರಸಿದ್ಧ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಲೋಕ್ ಕೆಲವು ತಿಂಗಳಿಗೊಮ್ಮೆ ಮಾತ್ರ ಮನೆಗೆ ಹೋಗಿಬರುತ್ತಿದ್ದ. ಕೆಲವು ದಿನಗಳ ಕಾಲ ಮನೆಯಲ್ಲಿ ತನ್ನ ವಿಧವೆ ತಾಯಿಯೊಂದಿಗೆ ಕಾಲ ಕಳೆಯುತ್ತಿದ್ದ. ಅಲೋಕ್‌ನ ಹಿರಿಯ ಸಹೋದರಿ ಮದುವೆಯಾಗಿ ತನ್ನ ಗಂಡನೊಂದಿಗೆ ಅದೇ ಊರಿನಲ್ಲಿ ವಾಸವಾಗಿದ್ದಳು. ಆಕೆ ಆಗಾಗ ಬಂದು ತಾಯಿಯ ಯೋಗಕ್ಷೇಮ ವಿಚಾರಿಸುತ್ತಿದ್ದಳು. ಆದರೂ ಅಲೋಕ್ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದ.

ಪ್ರೀತಿಯ ಮಾವ

ಪ್ರೀತಿಯ ಮಾವ

ತನ್ನ ಊರಾದ ಲಕ್ನೋಗೆ ಅಲೋಕ್ ಕೆಲವು ತಿಂಗಳಿಗೊಮ್ಮೆ ಹೋಗಿ ಬರುತ್ತಿದ್ದ ಮತ್ತೊಂದು ಕಾರಣವೆಂದರೆ ಆತನ ಸಹೋದರಿಯ ಮಗ ಆಶೀಶ್. ಏಳರ ಹರೆಯದ ಆಶೀಶ್ ಪ್ರತೀ ಬಾರಿ ತನ್ನ ಮಾವ ಅಲೋಕ್ ಏನಾದರೂ ಉಡುಗೊರೆ ತರಬಹುದು ಎಂದು ಕಾಯುತ್ತಾ ಕೂರುತ್ತಿದ್ದ.

ಪೋಷಕರು ಮತ್ತು ಶಿಕ್ಷಕರ ಸಭೆ

ಪೋಷಕರು ಮತ್ತು ಶಿಕ್ಷಕರ ಸಭೆ

ಆಶೀಶ್ ನ ತಂದೆ ಉದ್ಯಮಿಯಾಗಿದ್ದು, ಯಾವಾಗಲೂ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಿದ್ದರು. ಇದರಿಂದ ಪ್ರತೀ ತಿಂಗಳಿಗೊಮ್ಮೆ ನಡೆಯುವಂತಹ ಆಶೀಶ್‌ನ ಶಾಲೆಯ ಪೋಷಕರ ಮತ್ತು ಶಿಕ್ಷಕರ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಆಶೀಶ್ ತಂದೆ ಬದಲಿಗೆ ಅಲೋಕ್ ಅಲ್ಲಿಗೆ ಹೋಗುತ್ತಿದ್ದ. ಆಶೀಶ್ ತನ್ನ ಸೋದರಳಿಯನ ಅಕ್ಕರೆಯ ಮನವಿಗೆ ಇಲ್ಲವೆನ್ನುವಂತಿರಲಿಲ್ಲ. ಶನಿವಾರ ಬೆಳಗ್ಗೆ ಆತ ತನ್ನ ಸೋದರಿಯೊಂದಿಗೆ ಸಭೆಗೆ ಹೋಗಲೇ ಬೇಕಾಯಿತು.

ಕಣ್ಣುಕಣ್ಣು ಬೆರೆತಾಗ....

ಕಣ್ಣುಕಣ್ಣು ಬೆರೆತಾಗ....

ಶಿಕ್ಷಕರ ಮತ್ತು ಪೋಷಕರ ಸಭೆಯಲ್ಲಿ ಅಲೋಕ್, ಪ್ರಿಯಾಳನ್ನು ಮೊದಲ ಸಲ ನೋಡಿದ. ಪ್ರಿಯಾ ಶರ್ಮಾ ಆ ಶಾಲೆಯಲ್ಲಿ ಆಶೀಶ್‌ಗೆ ವಿಜ್ಞಾನದ ಶಿಕ್ಷಕಿಯಾಗಿದ್ದರು. ಆಶೀಶ್‌ನ ಮಾರ್ಕ್ಸ್ ಕಾರ್ಡ್ ನೀಡಿದಾಗ ಅವರಿಬ್ಬರ ಕಣ್ಣುಗಳು ಮೊದಲ ಸಲ ಬೆರೆತವು. ಇದು ಮೊದಲ ನೋಟದಲ್ಲಿ ಉಂಟಾದ ಪ್ರೀತಿ. ಅಲೋಕ್ ತನ್ನ ಮುಂದಿನ ಜೀವನವನ್ನು ಪ್ರಿಯಾಳ ಜತೆ ಕಳೆಯಬೇಕೆಂದು ಆಗಲೇ ನಿರ್ಧರಿಸಿದ.

ಮಾಹಿತಿ ಸಂಗ್ರಹಿಸಿದ

ಮಾಹಿತಿ ಸಂಗ್ರಹಿಸಿದ

ಈ ಸಭೆಯ ಬಳಿಕ ಅಲೋಕ್ ಗೆ ತನ್ನ ಜೀವನಕ್ಕೆ ಏನು ಬೇಕು ಎಂದು ಸ್ಪಷ್ಟವಾಗಿತ್ತು. ಆದರೆ ಪ್ರಿಯಾಳ ಬಗ್ಗೆ ಆತನಿಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಆತ ಪ್ರತೀ ವಾರ ಲಕ್ನೋಗೆ ಪ್ರಯಾಣಿಸಲು ಆರಂಭಿಸಿದ. ಸ್ಥಳೀಯನಾಗಿದ್ದ ಅಲೋಕ್‌ಗೆ ಲಕ್ನೋದಲ್ಲೇ ಹಲವಾರು ಮಂದಿ ಸ್ನೇಹಿತರಿದ್ದರು. ಇದರಿಂದ ಮಾಹಿತಿ ಸಂಗ್ರಹಿಸಲು ಹೆಚ್ಚು ಕಷ್ಟಪಡಲಿಲ್ಲ.

ಸಿನಿಮಾ ನಾಯಕರಂತೆ ಹಿಂಬಾಲಿಸಿದ...

ಸಿನಿಮಾ ನಾಯಕರಂತೆ ಹಿಂಬಾಲಿಸಿದ...

ಕೆಲವು ಸಮಯದ ತನಕ ಅಲೋಕ್ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಹಿಂದಿ ಸಿನಿಮಾ ನಾಯಕರಂತೆ ಹಿಂಬಾಲಿಸಿದ. ಅಲೋಕ್ ನ ಶ್ರಮಕ್ಕೆ ಪ್ರತಿಫಲ ಕೂಡ ಸಿಕ್ಕಿತು. ಅಂತಿಮವಾಗಿ ಪ್ರಿಯಾ ಜತೆ ಮಾತನಾಡಲು ಅವಕಾಶ ಸಿಕ್ಕಿತು.

ಪ್ರೀತಿ ಮುಳ್ಳಿನ ಹಾದಿ

ಪ್ರೀತಿ ಮುಳ್ಳಿನ ಹಾದಿ

ಅಲೋಕ್ ಖುಷಿಯಲ್ಲಿದ್ದರೂ ಎಲ್ಲವೂ ಆತನ ಪರವಾಗಿರಲಿಲ್ಲ. ಯಾಕೆಂದರೆ ಮೊದಲನೇಯದಾಗಿ ಪ್ರಿಯಾ ಆತನನ್ನು ಪ್ರೀತಿಸುತ್ತಿರಲಿಲ್ಲ. ಆಕೆಯ ಪ್ರೀತಿ-ಪ್ರೇಮವೆಂಬುವುದರಲ್ಲಿ ನಂಬಿಕೆಯೇ ಇರಲಿಲ್ಲ. ಆಕೆಯ ಪ್ರಕಾರ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುವುದು ಮತ್ತು ಆಕೆಯ ಪೋಷಕರೇ ಸ್ವರ್ಗದಲ್ಲಿ ಕೂಡ ಆಕೆಯ ವಿವಾಹ ನಿಶ್ಚಯಿಸಿದವರು. ಅವರ ವಿರುದ್ಧವಾಗಿ ಮದುವೆಯಾಗಲು ಆಕೆ ಯಾವತ್ತೂ ತಯಾರಿರಲಿಲ್ಲ.

ಆಕೆಗೆ ಪ್ರೀತಿಯ ನಿವೇದಿಸಿದ

ಆಕೆಗೆ ಪ್ರೀತಿಯ ನಿವೇದಿಸಿದ

ಪ್ರಿಯಾಳ ಮೊಬೈಲ್ ನಂಬರ್ ಪಡೆಯಲು ಅಲೋಕ್‌ಗೆ ತುಂಬಾ ಸಮಯ ಬೇಕಾಯಿತು. ಇಬ್ಬರು ಪರಸ್ಪರ ನಂಬರ್ ಹಂಚಿಕೊಂಡ ಬಳಿಕ ತಡರಾತ್ರಿ ಕರೆಗಳು ಬರಲು ಆರಂಭಿಸಿದವು. ಅಲೋಕ್ ಜತೆ ಡೇಟಿಂಗ್ ಮಾಡಲು ಪ್ರಿಯಾಗೆ ಇಷ್ಟವಿರಲಿಲ್ಲ. ಮದುವೆಯಾಗಬೇಕಿದ್ದರೆ ತನ್ನ ತಂದೆತಾಯಿ ಜತೆಗೆ ಮಾತನಾಡಬೇಕೆಂದು ಆಕೆ ಅಲೋಕ್ ಗೆ ಸ್ಪಷ್ಟವಾಗಿ ಹೇಳಿದ್ದಳು.

ದೊಡ್ಡ ನಿರ್ಧಾರ

ದೊಡ್ಡ ನಿರ್ಧಾರ

ಯಾವುದೇ ಬೇರೆ ಮಾರ್ಗಗಳು ಇಲ್ಲದೆ ಇರುವಾಗ ಅಲೋಕ್ ತನ್ನಿಂದ ಏನು ನಿರೀಕ್ಷಿಸಲಾಗುತ್ತಿತ್ತೋ ಅದನ್ನು ಮಾಡಿದ. ಅಲೋಕ್ ವೈಯಕ್ತಿಕವಾಗಿ ಪ್ರೇಮ ವಿವಾಹದಲ್ಲಿ ನಂಬಿಕೆಯನ್ನಿಟ್ಟಿದ್ದ. ಆದರೆ ಪ್ರಿಯಾ ಮಾತ್ರ ಗುರುಹಿರಿಯರು ನಿಶ್ಚಯಿಸಿದ ಮದುವೆಯಲ್ಲಿ ನಂಬಿಕೆಯನ್ನಿಟ್ಟಿದ್ದಳು. ತನ್ನ ಮೊದಲ ನೋಟದ ಪ್ರೀತಿಯನ್ನು ಕಳೆದುಕೊಳ್ಳಲು ಬಯಸದ ಅಲೋಕ್ ನೇರವಾಗಿ ಪ್ರಿಯಾಳ ತಂದೆ ಮುಂದೆ ಮದುವೆ ಪ್ರಸ್ತಾವವನ್ನಿಟ್ಟ.

ವಿಷಯ ಮತ್ತಷ್ಟು ಜಟಿಲವಾಯಿತು...

ವಿಷಯ ಮತ್ತಷ್ಟು ಜಟಿಲವಾಯಿತು...

ಪ್ರೀತಿ ಪ್ರೇಮ, ಮದುವೆ ಎನ್ನುವುದು ಹೂವಿನ ಮೇಲಿನ ನಡಿಗೆ ಅಲ್ಲವೆನ್ನುವುದು ಅಲೋಕ್ ಗೆ ಈಗ ಅರ್ಥವಾಯಿತು. ಅಲೋಕ್ ತುಂಬಾ ಪ್ರಾಮಾಣಿಕವಾಗಿ ಬಂದು ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡರೂ ಸಹಿತ ಪ್ರಿಯಾಳ ತಂದೆಗೆ ಮಾತ್ರ ಈ ಮದುವೆ ಇಷ್ಟವಿರಲಿಲ್ಲ. ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದ ಪ್ರಿಯಾಳ ತಂದೆ ಲಕ್ನೋದಲ್ಲೇ ನೆಲೆನಿಂತಿರುವ ಯಾರಾದರೂ ತನ್ನ ಮಗಳನ್ನು ಮದುವೆಯಾಗಬೇಕೆಂದು ಬಯಸಿದ್ದರು.

ತನ್ನ ಆಸೆ ಕೈಬಿಟ್ಟ

ತನ್ನ ಆಸೆ ಕೈಬಿಟ್ಟ

ತಂದೆ ಮತ್ತು ಮಗಳು ಇಬ್ಬರು ನಿರಾಕರಿಸಿದ ಕಾರಣ ಅಲೋಕ್ ತನ್ನ ಆಸೆ ಕೈಬಿಟ್ಟ. ಇದರಿಂದ ಆತ ಖಿನ್ನತೆಗೆ ಒಳಗಾದ. ಅಲೋಕ್ ತನ್ನೊಂದಿಗೆ ಸಂಬಂಧವನ್ನು ಕಡಿದುಕೊಂಡಾಗ ಪ್ರಿಯಾಳಿಗೂ ಪ್ರೀತಿಯ ಕಿಡಿ ಕಾಣಿಸಿತು. ಅಲೋಕ್ ತನ್ನನ್ನು ಸಂಪೂರ್ಣಗೊಳಿಸಿದ್ದಾನೆ ಮತ್ತು ಆತನ ಹೊರತಾಗಿ ಈ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಆಕೆ ನಿರ್ಧಾರಕ್ಕೆ ಬಂದಳು.

ಪ್ರಿಯಾ ಪ್ರೀತಿ ಹೇಳಿಕೊಂಡಳು

ಪ್ರಿಯಾ ಪ್ರೀತಿ ಹೇಳಿಕೊಂಡಳು

ಪ್ರಿಯಾ ತನ್ನ ಮನಸ್ಸಿನ ಮಾತನ್ನು ಕೇಳಿ ಅಲೋಕ್ ಗೆ ಕರೆ ಮಾಡಿ ತನ್ನ ಪ್ರೀತಿಯನ್ನು ಹೇಳಿಕೊಂಡಳು. ಇದರ ಬಗ್ಗೆ ತಂದೆಯೊಂದಿಗೂ ಮಾತನಾಡುವುದಾಗಿ ಆಕೆ ಹೇಳಿದಳು. ಆಕೆ ತನ್ನ ತಂದೆಯೊಂದಿಗೆ ಮಾತನಾಡಿದ ಬಳಿಕ ಅವರಿಗೆ ನಿರಾಕರಿಸಲು ಆಗದೆ ಒಪ್ಪಿಕೊಂಡರು.

ಪ್ರಯಾಣ ಮುಂದುವರಿಯಿತು

ಪ್ರಯಾಣ ಮುಂದುವರಿಯಿತು

ಅಲೋಕ್ ಮತ್ತು ಪ್ರಿಯಾ ಮದುವೆಯಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಅವರಿಬ್ಬರು ಈಗ ದೆಹಲಿಯಲ್ಲಿ ವಾಸವಾಗಿದ್ದಾರೆ. ಪ್ರಿಯಾ ಅಲ್ಲೇ ಪ್ರಸಿದ್ಧ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾಳೆ. ತಮ್ಮದೇ ಆದ ಪ್ರಪಂಚ ಕಟ್ಟಿಕೊಂಡಿರುವ ಈ ಜೋಡಿ ಹಕ್ಕಿ ಸಂತೋಷದಿಂದ ಜೀವನ ಸಾಗಿಸುತ್ತಿದೆ. ಇವರಿಬ್ಬರ ಪ್ರೇಮ ಕಥೆ ಕೇಳಿದ ಬಳಿಕ ನಿಜವಾಗಿಯೂ ಮೊದಲ ನೋಟದ ಪ್ರೀತಿ ನಿರಾಕರಿಸಲಾಗದು.

English summary

Love Story : When First Sight Is All It Takes

Most people are of the belief that love cannot happen at first sight. If someone feels a strong attraction towards a particular person, it has to be lust. However, the case has not always been as such. Many a times, the feelings that you have for a particular person at the first sight are the ones that are the most intense and that is what drives a person to attain an individual as his or her life partner. Read on to know more about this story that makes us believe in the concept of love all the more.
X
Desktop Bottom Promotion