ವನ್ಯಜೀವಿ ದಂಪತಿಯ ಲವ್ ಸ್ಟೋರಿ

Posted By: Hemanth Amin
Subscribe to Boldsky

ಪ್ರೀತಿ ಎಂದರೆ ಏನು ಅನ್ನುವುದು ಪ್ರೀತಿಸಿರುವ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತೇ ಇರುತ್ತದೆ. ಅದು ತಾಯಿ ಪ್ರೀತಿ, ತಂದೆ ಪ್ರೀತಿ ಅಥವಾ ಗೆಳತಿಯ ಪ್ರೀತಿ ಹೀಗೆ ಪ್ರೀತಿ ಅನ್ನೋದು ಮನುಷ್ಯನಿಗೆ ಸಿಕ್ಕೇ ಸಿಗುತ್ತದೆ. ಅದರಲ್ಲೂ ಬಾಲಿವುಡ್ ಸಿನೆಮಾಗಳಲ್ಲಿ ಪ್ರೀತಿಗೆ ವಿವಿಧ ರೀತಿಯ ವ್ಯಾಖ್ಯಾನ ನೀಡುತ್ತಾರೆ. ಪರಸ್ಪರ ಭಿನ್ನ ತತ್ವ ಹಾಗೂ ವೃತ್ತಿ ಮಾಡುತ್ತಿರುವವರಲ್ಲಿ ಪ್ರೀತಿ ಮೂಡುವುದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಇದು ಸರಿಯಾದ ವಾದವಲ್ಲ, ಯಾಕೆಂದರೆ ಒಂದೇ ರೀತಿಯ ಇಷ್ಟ ಹಾಗೂ ವೃತ್ತಿ ಮಾಡುವವರು ಕೂಡ ಪ್ರೀತಿಯಲ್ಲಿ ಮುಳುಗಬಹುದು.

ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು

ಹೀಗೆ ಪ್ರೀತಿ ಮಾಡುವವರಿಗೆ ತಮ್ಮ ವೃತ್ತಿ ಹಾಗೂ ಹವ್ಯಾಸಗಳ ಬಗ್ಗೆ ಮಾತನಾಡಲು ತುಂಬಾ ಇರುತ್ತದೆ. ಹೆಚ್ಚೆಚ್ಚು ಮಾತನಾಡಿದಷ್ಟು ಸಂಬಂಧವು ಗಟ್ಟಿಯಾಗುವುದು ಎನ್ನುವ ಭಾವನೆಯಿದೆ. ಇಂತಹ ಸಂಬಂಧವು ದೀರ್ಘ ಕಾಲ ಬಾಳುವುದು ಎನ್ನಲಾಗುತ್ತಿದೆ. ಈ ಲೇಖನದಲ್ಲಿ ನೀವು ಅಲಿಶಾ ಮತ್ತು ಅಮನ್ ನ ಪ್ರೇಮಕಥೆಯನ್ನು ಓದಿಕೊಳ್ಳಿ. ಈ ಜೋಡಿಯು ತಮ್ಮ ಯಶಸ್ಸಿಗಾಗಿ ಹಲವಾರು ತೊಂದರೆಗಳನ್ನು ಎದುರಿಸಿ ಕೊನೆಗೂ ತಮ್ಮ ಗುರಿ ಸಾಧಿಸಿದ ಕಥೆಯಿದು....

ಅಲೆಮಾರಿ

ಅಲೆಮಾರಿ

ಅಲಿಶಾ ಒಬ್ಬಳು ಬಂಡಾಯಗಾರ್ತಿಯಾಗಿದ್ದಳು. ಬಾಲ್ಯದಿಂದಲೂ ಆಕೆ ಹೀಗೆ ಇದ್ದಳು. ಹೆತ್ತವರಿಗೆ ಆಕೆಯನ್ನು ವೈದ್ಯೆ ಮಾಡಬೇಕೆಂಬ ಆಸೆಯಿತ್ತು. ಆದರೆ ಆಕೆಗೆ ಫೋಟೋಗ್ರಾಫಿಯಲ್ಲಿ ಆಸಕ್ತಿ. ಆಕೆ ಯಾವಾಗಳು ತನಗೆ ತೋಚಿದನ್ನೇ ಮಾಡುತ್ತಲಿದ್ದಳು. ಆಕೆ ವನ್ಯಜೀವಿ ಫೋಟೋಗ್ರಾಫಿಯಲ್ಲಿ ಪ್ರಸಿದ್ಧ ವಿದ್ಯಾಸಂಸ್ಥೆಯಿಂದ ಕೋರ್ಸ್ ಮಾಡಿದಳು.

ವನ್ಯಜೀವಿ ಪ್ರೇಮಿ

ವನ್ಯಜೀವಿ ಪ್ರೇಮಿ

ಬಾಲ್ಯದಿಂದಲೂ ಫ್ಲೋರಾ ಮತ್ತು ಫೌನಾ, ಅಮನ್ ನನ್ನು ಗೇಲಿ ಮಾಡುತ್ತಲಿದ್ದರು. ಅಮನ್ ನ ಗೆಳೆಯರು ಕ್ರಿಕೆಟ್ ಆಡುತ್ತಲಿದ್ದರೆ ಆತ ಮಾತ್ರ ಒಂದು ಮೂಲೆಯಲ್ಲಿ ಬೀದಿ ನಾಯಿಗಳ ಜತೆ ಆಟವಾಡುತ್ತಿದ್ದ. ವರ್ಷಗಳು ಉರುಳಿದಂತೆ ಅಮನ್ ಗೆ ಪ್ರಾಣಿಗಳ ಮೇಲಿನ ಆಸಕ್ತಿ ಹೆಚ್ಚಾಯಿತು. ಪ್ರಾಣಿ ಹಾಗೂ ಪಕ್ಷಿಗಳ ಮೇಲಿನ ಆತನ ಆಸಕ್ತಿಯೇ ಪಕ್ಷಿವಿಜ್ಞಾನ ಕಲಿಯುವಂತೆ ಪ್ರೇರೇಪಿಸಿತು. ಇದರಿಂದ ತುಂಬಾ ಸಣ್ಣ ವಯಸ್ಸಿನಲ್ಲಿಯೇ ಆತ ಪ್ರಸಿದ್ಧ ಪಕ್ಷಿ ತಜ್ಞನಾಗಿಬಿಟ್ಟ.

ಅವರಿಬ್ಬರ ಭೇಟಿ

ಅವರಿಬ್ಬರ ಭೇಟಿ

ದೆಹಲಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಅಮನ್ ಮತ್ತು ಅಲಿಶಾ ಮೊದಲ ಸಲ ಭೇಟಿಯಾದರು. ಇವರಿಬ್ಬರ ಕಂಪೆನಿಗಳು ಪರಸ್ಪರ ಜತೆಗೂಡಿದ್ದವು ಮತ್ತು ಇವರು ಒಂದೇ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಲಿದ್ದರು. ಒರಿಸ್ಸಾದಲ್ಲಿರುವ ಚಿಲ್ಕಾ ಕೊಳಕ್ಕೆ ಪ್ರತೀ ವರ್ಷ ಬರುವಂತಹ ವಲಸೆ ಹಕ್ಕಿಗಳ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ಮಾಡಲು ಅಲಿಶಾ ಮತ್ತು ಅಮನ್ ಅಲ್ಲಿಗೆ ಹೋಗಲಿದ್ದರು. ಈ ಸಭೆಯಲ್ಲಿ ಏನೋ ಒಂದು ರೀತಿಯ ಆಕರ್ಷಣೆಯು ಪರಸ್ಪರರಲ್ಲಿ ಕಾಣಿಸಿಕೊಂಡಿತ್ತು.

ಪ್ರಣಯ

ಪ್ರಣಯ

ಮೊದಲ ಭೇಟಿಯಲ್ಲಿ ಇವರಿಬ್ಬರ ಮಧ್ಯೆ ಅಂತಹ ಪ್ರೀತಿ ಉಂಟು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಎರಡು ತಿಂಗಳ ಕಾಲ ಬೇರೆ ಯಾರೂ ಗೆಳೆಯ-ಗೆಳತಿಯರು ಇಲ್ಲದೆ ಇದ್ದ ಪರಿಣಾಮ ಪರಸ್ಪರ ಜತೆಯಾಗಿ ಹೆಚ್ಚಿನ ಸಮಯ ಕಳೆದು ಹತ್ತಿರವಾದರು. ಈ ಸ್ನೇಹವು ಪ್ರೀತಿಯಲ್ಲಿ ಬದಲಾಯಿತು ಮತ್ತು ಪರಸ್ಪರರನ್ನು ಪ್ರೀತಿಸಲು ತೊಡಗಿದರು. ಎರಡು ತಿಂಗಳ ಪ್ರಾಜೆಕ್ಟ್ ಅವರ ಜೀವನವನ್ನೇ ಬದಲಾಯಿಸಿತು.

ವಾಸ್ತವ

ವಾಸ್ತವ

ಎಲ್ಲದಕ್ಕೂ ಒಂದು ಕೊನೆ ಇರುವಂತೆ ಈ ಪ್ರಾಜೆಕ್ಟ್ ಕೂಡ ಮುಕ್ತಾಯವಾಯಿತು. ಇದರಿಂದ ಅಮನ್ ತನ್ನ ಮನೆ ಮುಂಬಯಿಗೆ ತೆರಳಿದ ಮತ್ತು ಅಲಿಶಾ ಕೊಲ್ಕತ್ತಾದಲ್ಲಿರುವ ತನ್ನ ಕಚೇರಿಗೆ ಹಾಜರಾದಳು. ಅಸಾಮಾನ್ಯವಾದ ವೃತ್ತಿ ಹೊಂದಿರುವಂತಹ ಈ ಇಬ್ಬರು ದೂರವಾಗಿರುವುದು ಅಷ್ಟು ಸುಲಭವಾಗಿರಲಿಲ್ಲ. ಈ ಸಂಬಂಧ ಕೂಡ ಏರಿಳಿತದಲ್ಲಿ ಸಾಗಲು ಆರಂಭವಾಯಿತು. ಎರಡು ವರ್ಷ ಪರಸ್ಪರದಿಂದ ದೂರವಿದ್ದ ಬಳಿಕ ಅಲಿಶಾ ಒಂದು ನಿರ್ಧಾರಕ್ಕೆ ಬಂದು ಮುಂಬಯಿಗೆ ಸ್ಥಳಾಂತರವಾದಳು.

ಮತ್ತೆ ಜತೆಯಾದರು

ಮತ್ತೆ ಜತೆಯಾದರು

ಮುಂಬಯಿಯಂತಹ ಮಹಾನಗರದಲ್ಲಿ ಜೀವನ ಸಾಗಿಸುವುದು ಅಷ್ಟು ಸುಲಭದ ಮಾತಲ್ಲ, ಅದರಲ್ಲೂ ಕೆಲಸ ಹುಡುಕುವುದು ಅಲಿಶಾಗೆ ಕಷ್ಟವಾಯಿತು. ಆದರೆ ಮುಂಬಯಿಯಲ್ಲಿ ಆಕೆಗೆ ತನ್ನ ಪ್ರಿಯತಮನಿಂದ ಹೆಚ್ಚಿನ ಬೆಂಬಲ ಹಾಗೂ ಪ್ರೀತಿ ದೊರಕಿತು. ಇದರಿಂದಾಗಿ ಆಕೆಗೆ ಒಂದು ಕೆಲಸ ಕೂಡ ಸಿಕ್ಕಿತು. ಇಬ್ಬರು ತಮ್ಮ ವೃತ್ತಿ ಜೀವನದಲ್ಲಿ ಸೆಟ್ಲ್ ಆದ ಕಾರಣ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸಿದರು.

ಮದುವೆ ಮತ್ತು ಅದರ ಬಳಿಕದ ಪ್ರಯಾಣ

ಮದುವೆ ಮತ್ತು ಅದರ ಬಳಿಕದ ಪ್ರಯಾಣ

ಅಲಿಶಾ ಹೊಸ ಕೆಲಸ ಪಡೆದುಕೊಂಡ ಬಳಿಕ ಅವರಿಬ್ಬರು ಮದುವೆಯಾಗಲು ನಿರ್ಧರಿಸಿ ಮಲಾಡ್ ನ ಒಂದು ಮಂದಿರದಲ್ಲಿ ಮದುವೆಯಾದರು. ಇದು ತುಂಬಾ ಸರಳ ಹಾಗೂ ಕೇವಲ ಸ್ನೇಹಿತರು, ಮನೆಯವರು ಇದರಲ್ಲಿ ಭಾಗಿಯಾದರು.

ಮದುವೆ ಮತ್ತು ಅದರ ಬಳಿಕದ ಪ್ರಯಾಣ

ಮದುವೆ ಮತ್ತು ಅದರ ಬಳಿಕದ ಪ್ರಯಾಣ

ಇವರಿಬ್ಬರು ಈಗ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ ಮತ್ತು ವನ್ಯಜೀವಿಗಳ ಬಗ್ಗೆ ಇನ್ನಷ್ಟು ಸಂಶೋಧನೆ ಮಾಡುತ್ತಿದ್ದಾರೆ. ಅವರಿಬ್ಬರ ವೈವಾಹಿಕ ಜೀವನವು ಸುಖಸಮೃದ್ಧಿಯಿಂದ ತುಂಬಿರಲಿ ಎಂದು ಹಾರೈಸುವ.

English summary

Love Story: Call Of The Wild Couple

All thanks to Hindi and regional movies, these days, people are often of the belief that love can be found only in the most uncommon of places. Some people even go to the extent of believing that love can be found only in people whose ideologies and professions are completely different from each other. However none of this is true.