ಆ ಸಮಯದಲ್ಲಿ ಸಂಗಾತಿಯ ಮೌನವೇಕೆ?

Posted By: Arshad
Subscribe to Boldsky

ಮಿಲನದ ಸಮಯದಲ್ಲಿ ತಮ್ಮ ಸಂಗಾತಿಯಿಂದ ಅಪಾರವಾದ ಪ್ರತಿಕ್ರಿಯೆಯನ್ನು ಬಯಸುತ್ತಾರೆ. ಈ ಕ್ರಿಯೆಯಲ್ಲಿ ಮಹಿಳೆಯ ಮುಲುಗುವಿಕೆ ಪುರುಷನಿಗೆ ಅಪಾರವಾದ ಆನಂದವನ್ನೂ ಹಾಗೂ ತೃಪ್ತಿಯನ್ನೂ ನೀಡುತ್ತದೆ. ಆದರೆ ಕೆಲವು ಮಹಿಳೆಯರು ಈ ಸಮಯದಲ್ಲಿ ಬಾಯಿಗೆ ಬೀಗ ಹಾಕಿಕೊಂಡಂತೆ ಇದ್ದುಬಿಡುತ್ತಾರೆ.

ಆಗ ಪುರುಷ ಈ ಮೌನವನ್ನು ಅಪಾರ್ಥ ಕಲ್ಪಿಸಿಕೊಂಡು ತನ್ನಲ್ಲೇನೋ ಕೊರತೆಯಿದೆ ಎಂದೇ ಭಾವಿಸುತ್ತಾನೆ. ಕೆಲವರಂತೂ ತಮ್ಮ ಪುರುಷತ್ವದ ಬಗ್ಗೆಯೇ ಅನುಮಾನ ಪಡಲು ತೊಡಗುತ್ತಾರೆ.ಹೆಚ್ಚಿನವರು ಇದನ್ನೊಂದು ಸೋಲೆಂದು ಒಪ್ಪಿಕೊಳ್ಳದೇ ಮಹಿಳೆಯನ್ನೇ ಮೌನವಾಗಿರುವುದಕ್ಕೆ ದೂಷಿಸುತ್ತಾರೆ. ಆದರೆ ತಾಳಿ, ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಈ ಮೌನಕ್ಕೆ ನಿಜವಾದ ಕಾರಣಗಳೇನಿರಬಹುದು ಎಂಬುದನ್ನು ಕಂಡುಕೊಳ್ಳಿ... 

ಆ ಸದ್ದನ್ನು ಬೇಕಂತೆಯೇ ನಿಯಂತ್ರಿಸುತ್ತಾರೆ!!

ಆ ಸದ್ದನ್ನು ಬೇಕಂತೆಯೇ ನಿಯಂತ್ರಿಸುತ್ತಾರೆ!!

ಈ ಬಗ್ಗೆ ನಡೆದ ಹಲವಾರು ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ಕಾಮಕೂಟದ ಪರಾಕಾಷ್ಠೆಯ ಸಮಯದಲ್ಲಿ ಎಲ್ಲಾ ಮಹಿಳೆಯರು ಮುಲುಗುವ ಸದ್ದು ಹೊರಡಿಸುವುದಿಲ್ಲ. ಆದ್ದರಿಂದ ನಿರಾಳರಾಗಿ, ಕೆಲವರಿಗೆ ಮುಲುಗುವುದು ಒಂದು ಅಭ್ಯಾಸವಾಗಿರಬಹುದಷ್ಟೇ ಹೊರತು ಇದು ಕಡ್ಡಾಯಲ್ಲ.

ಸದ್ದು ಹೊರಬರದಂತೆ ಎಚ್ಚರ ವಹಿಸುತ್ತಾರೆ!

ಸದ್ದು ಹೊರಬರದಂತೆ ಎಚ್ಚರ ವಹಿಸುತ್ತಾರೆ!

ಕೆಲವು ಮಹಿಳೆಯರು ಮೌನವಾಗಿಯೇ ಮುಲುಗುತ್ತಾರೆ ಹಾಗೂ ತಮ್ಮ ಸದ್ದು ಹೊರಬರದಂತೆ ಎಚ್ಚರ ವಹಿಸುತ್ತಾರೆ. ಏಕೆಂದರೆ ಈ ಸದ್ದು ಹೊರಬರುವ ಮೂಲಕ ಕೆಟ್ಟತನವನ್ನು ಪ್ರಕಟಿಸಿದಂತಾಗುತ್ತದೆ ಹಾಗೂ ಇದು ಚೆನ್ನಾಗಿರದು ಎಂದು ಭಾವಿಸುತ್ತಾರೆ.

ಸದ್ದು ಹೊರಬರದಂತೆ ಎಚ್ಚರ ವಹಿಸುತ್ತಾರೆ!

ಸದ್ದು ಹೊರಬರದಂತೆ ಎಚ್ಚರ ವಹಿಸುತ್ತಾರೆ!

ಕೆಲವು ಸಂದರ್ಭಗಳಲ್ಲಿ ತಮ್ಮ ಮುಲುಗುವಿಕೆಯನ್ನು ಅಕ್ಕಪಕ್ಕದ ಕೋಣೆಯಲ್ಲಿರುವ ಇತರ ಕುಟುಂಬ ಸದಸ್ಯರು ಅಥವಾ ಅಕ್ಕ ಪಕ್ಕದ ಮನೆಯವರು ಕೇಳಬಹುದು ಎಂಬ ಅನುಮಾನವನ್ನು ಹೆಚ್ಚಿನ ಮಹಿಳೆಯರು ಹೊಂದಿರುತ್ತಾರೆ. ಈ ಬಗ್ಗೆ ಎಚ್ಚರಿಕೆಯ ಕ್ರಮವಾಗಿ ಇವರು ಬಲವಂತವಾಗಿಯಾದರೂ ಸರಿ, ಮುಲುಗುವಿಕೆಯ ಸದ್ದು ಹೊರಡದಂತೆ ಎಚ್ಚರ ವಹಿಸುತ್ತಾರೆ.

ಅಂತರ್ಮುಖಿ ವ್ಯಕ್ತಿಯಾಗಿದ್ದರೆ

ಅಂತರ್ಮುಖಿ ವ್ಯಕ್ತಿಯಾಗಿದ್ದರೆ

ಅಂತರ್ಮುಖಿ ವ್ಯಕ್ತಿತ್ವದ ವ್ಯಕ್ತಿಗಳು ಸಾಮಾನ್ಯವಾಗಿ ಮೌನವಾಗಿಯೇ ಇದ್ದು ಸದ್ದು ಹೊರಡಿಸದೇ ತಮ್ಮದೇ ಕ್ರಮದಲ್ಲಿ ಪ್ರಚೋದನೆಯ ಸಾರವನ್ನು ಅನುಭವಿಸುತ್ತಿರುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿ ಅಂತರ್ಮುಖಿ ವ್ಯಕ್ತಿಯಾಗಿದ್ದರೆ ಇದು ಸ್ವಾಭಾವಿಕವಾಗಿದೆ.

ಒಂದು ವೇಳೆ ಒಪ್ಪಿಗೆಯಿಲ್ಲದಿದ್ದರೆ...

ಒಂದು ವೇಳೆ ಒಪ್ಪಿಗೆಯಿಲ್ಲದಿದ್ದರೆ...

ಕಾಮಕೂಟದಲ್ಲಿ ಮುನ್ನಡೆ ಪಡೆಯುವುದನ್ನು ಕೆಲವು ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ. ಒಂದು ವೇಳೆ ಕಾಮಕೂಟದಲ್ಲಿ ಪರಸ್ಪರ ಚರ್ಚಿಸಿ ಇಬ್ಬರೂ ಒಪ್ಪಿಕೊಂಡು ಇಬ್ಬರಿಗೂ ಅಪ್ಯಾಯವಾಗಿರುವ ಕಾರ್ಯಗಳಿಗೆ ತೊಡಗಿಕೊಳ್ಳದಂತಹ ವಾತಾವರಣದಲ್ಲಿ ಬೆಳೆಯದೇ ಬಂದ ಮಹಿಳೆಯರು ಒಪ್ಪಿಗೆಯಿಲ್ಲದೇ ಕೂಟದಲ್ಲಿ ಭಾಗಿಯಾದ ತಪ್ಪಿತಸ್ಥ ಭಾವನೆಯಿಂದಲೂ ಮುಲುಗುತ್ತಾರೆ. ಇದು ಅವರ ಮನಃಸ್ಥಿತಿಯ ಪ್ರತೀಕವಾಗಿದೆ.

ಮೌನವಾಗಿಯೇ ಅನುಭವಿಸುತ್ತಿದ್ದರೆ...

ಮೌನವಾಗಿಯೇ ಅನುಭವಿಸುತ್ತಿದ್ದರೆ...

ಅಂತಿಮವಾಗಿ, ಈ ಕ್ರಿಯೆಯ ಪೂರ್ಣ ವಿವರಗಳು ಅಷ್ಟು ಮುಖ್ಯವಲ್ಲ. ಆದರೆ ಪರಸ್ಪರ ಒಬ್ಬರಿಗೊಬ್ಬರ ಅರ್ಪಣೆ ಮುಖ್ಯ. ಎಷ್ಟರವರೆಗೆ ನಿಮ್ಮ ಸಂಗಾತಿ ನಿಮ್ಮ ಸಾಮೀಪ್ಯದ ಹಿತವನ್ನು ಅನುಭವಿಸುತ್ತಿರುತ್ತಾರೋ ಅಷ್ಟರ ಮಟ್ಟಿಗೆ ಈ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ. ಈ ಕ್ರಿಯೆಯನ್ನು ಆಕೆ ಮೌನವಾಗಿಯೇ ಅನುಭವಿಸುತ್ತಿದ್ದರೆ ಆಕೆಯನ್ನು ಹಾಗೆಯೇ ಅನುಭವಿಸಲು ಬಿಡಿ.

English summary

Is Your Partner Silent During Lovemaking?

Men generally expect a lot from women when they work hard in bed. When the woman makes lot of noise during the act, it is like an incentive to the man. But some women tend to be silent during the whole act. And in such cases, men wonder whether they are doing it wrong. Some men think that they are incapable of offering pleasure.