ಪ್ರೀತಿಯಲ್ಲಿ ಬಿದ್ದ ಹುಡುಗಿಯರಿಗೆ ತನ್ನ ಪ್ರಿಯತಮ ಹೇಗೆ ಇದ್ದರೂ ಆತ ಸುಂದರವಾಗಿ ಕಾಣಿಸುತ್ತಾನೆ. ಆತ ನಿಮ್ಮ ಪ್ರೀತಿಯಲ್ಲಿ ಹುಚ್ಚನಂತಾಗಿರುವುದು ನಿಮ್ಮ ಕನಸು ನನಸಾಗಿಸಿರಬಹುದು. ಆದರೆ ಮುದ್ದುತನ ಮತ್ತು ಪ್ರೌಢತೆಯ ಮಧ್ಯೆ ದೊಡ್ಡ ವ್ಯತ್ಯಾಸವಿದೆ ಎಂದು ಅರಿತುಕೊಳ್ಳಬೇಕು.
ಇದನ್ನು ನೀವು ತಿಳಿಯದೆ ಇದ್ದರೆ ಎರಡೆರಡು ಸಲ ಯೋಚಿಸಬೇಕು ಮತ್ತು ಆತನ ನಡವಳಿಕೆ ಸರಿಯಾಗಿ ಗಮನಿಸಬೇಕು. ಪ್ರೀತಿಯಲ್ಲಿ ಬಿದ್ದಾಗ ಪ್ರತಿಯೊಂದು ಕೂಡ ಮುದ್ದು ಮುದ್ದಾಗಿ ಕಾಣಿಸುವುದು. ಆದರೆ ಒಂದು ಹಂತದ ಬಳಿಕ ಮುದ್ದು ಇರುವುದು ಕೂಡ ತುಂಬಾ ಕೆಟ್ಟದಾಗಿ ಗೋಚರಿಸಬಹುದು. ಈ ವಿಷಯಗಳನ್ನು ನೀವು ಗಮನಿಸಿದರೆ ನಿಮ್ಮ ಪ್ರಿಯತಮನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು...
ಆತ ಕುಡಿದು ತೂರಾಡಬಹುದು...ಹುಚ್ಚನಂತೆ...
ಎಲ್ಲಾ ಸಮಯದಲ್ಲೂ ಕುಡಿದು ತೂರಾಡುವುದು ಮತ್ತು ಮಕ್ಕಳಂತೆ ವರ್ತಿಸುವುದು ಸರಿಯಾದ ನಡವಳಿಕೆಯಲ್ಲ. ಆತ ಕವನಗಳನ್ನು ಬರೆದು ನಿಮ್ಮ ಸೌಂದರ್ಯವನ್ನು ಹೊಗಳಬಹುದು. ಆದರೆ ಆತ ಅಮಲೇರಿದ ಸ್ಥಿತಿಯಲ್ಲಿರುತ್ತಾನೆ. ಒಂದು ದಿನ ಇದೆಲ್ಲವೂ ನಿಮಗೆ ತುಂಬಾ ಕೆಟ್ಟದಾಗಿ ಕಾಣಬಹುದು.
ಆತ ಪ್ರತಿಯೊಬ್ಬರನ್ನು ಗೇಲಿ ಮಾಡಬಹುದು
ಆರಂಭದಲ್ಲಿ ಇದು ತುಂಬಾ ತಮಾಷೆಯಾಗಿ ಕಾಣಿಸಬಹುದು. ಆದರೆ ಸಮಯ ಕಳೆದಂತೆ ಇದು ನಿಮಗೆ ಕೂಡ ತುಂಬಾ ಕೆಟ್ಟ ಭಾವನೆ ಮೂಡಿಸಬಹುದು. ಗೇಲಿ ಮಾಡುವುದು ಮತ್ತು ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಪ್ರೌಢತೆಯ ಲಕ್ಷಣವಲ್ಲ. ಆತ ಬೆಳೆಯಬೇಕು.
ಹಣವನ್ನು ನೀರಿನಂತೆ ಖರ್ಚು ಮಾಡುತ್ತಾನೆ
ಹೌದು, ಇದು ನಿಮಗೆ ಖುಷಿ ನೀಡಬಹುದು. ಆದರೆ ಇದೇ ಗುಣವು ಆರ್ಥಿಕ ಮುಗ್ಗಟ್ಟನ್ನು ಉಂಟು ಮಾಡಬಹುದು. ಇದರಿಂದ ಭವಿಷ್ಯಕ್ಕೆ ತೊಂದರೆಯಾಗಬಹುದು. ಇಂದು ಆತ ನಿಮ್ಮ ಉಡುಗೊರೆಗಳಿಗೆ ಹಣ ವ್ಯಯಿಸುತ್ತಾ ಇರಬಹುದು. ಆದರೆ ಮುಂದೆ ಆತ ನಿಮ್ಮಿಬ್ಬರ ಭವಿಷ್ಯಕ್ಕಾಗಿ ಹಣ ಉಳಿಸಬೇಕು.
ಆತ ಕೆಲವು ಮುಟ್ಠಾಳತನದ ಪ್ರಶ್ನೆ ಕೇಳುತ್ತಾನೆಯಾ?
ಕೆಲವು ಸಲ ಹಠಾತ್ ಆಗಿ ಕರೆ ಮಾಡಿ ಅನ್ನ ಮಾಡುವುದು ಹೇಗೆ ಎಂದು ಪ್ರಶ್ನಿಸುತ್ತಾನೆಯಾ? ಇದು ನಿಮಗೆ ತುಂಬಾ ಮುದ್ದಾದ ಪ್ರಶ್ನೆ ಎಂದೆನಿಸಬಹುದು. ಇದು ಸರಿ. ಆದರೆ ಇದೇ ರೀತಿಯ ಪೆದ್ದು ಪೆದ್ದಾದ ಪ್ರಶ್ನೆ ಕೇಳುತ್ತಿದ್ದರೆ ನೋ ಎನ್ನಿ.
ಹಠ ಹಿಡಿಯುತ್ತಾನೆ!
ಇದು ಖಂಡಿತವಾಗಿಯೂ ಮಕ್ಕಳಾಟ. ಮಕ್ಕಳು ಮಾತ್ರ ತಮ್ಮ ವಾದ ಅಥವಾ ಏನಾದರೂ ಪಡೆಯಲು ಹೀಗೆ ಹಠ ಹಿಡಿಯುವರು. ಡೇಟಿಂಗ್ ಮಾಡುವಂತಹ ಪುರುಷರು ಬೆಳೆಯಬೇಕು ಮತ್ತು ಹೇಗೆ ವರ್ತಿಸಬೇಕೆಂದು ಕಲಿಯಬೇಕು. ಆತ ಇದರ ಬಗ್ಗೆ ಮಾತನಾಡಬೇಕು.
ನೀವು ಗಂಭೀರವಾಗಿದ್ದಾಗ ಜೋಕ್ಸ್ ಹೇಳುತ್ತಾನಾ?
ಇದು ಒಳ್ಳೆಯ ವಿಷಯವಲ್ಲ. ಆತ ಪ್ರೌಢನಾಗಬೇಕು. ನೀವು ಚರ್ಚೆ ಮಾಡುತ್ತಿರುವ ವಿಷಯದ ಗಂಭೀರತೆಯನ್ನು ಆತ ಅರ್ಥ ಮಾಡಿಕೊಳ್ಳಬೇಕು.
ನಿಮಗೆ ಮನಸ್ದಿಲ್ಲದಿದ್ದರೆ ತುಂಬಾ ಹತ್ತಿರಕ್ಕೆ ಬರುತ್ತಾನೆಯಾ?
ಆತನ ಈ ಗುಣಗಳನ್ನು ನೀವು ಇಂದು ಇಷ್ಟಪಡಬಹುದು. ಆದರೆ ಮುಂದೆ ನೀವು ತಾಳ್ಮೆ ಕಳೆದುಕೊಂಡು ಆತನ ಕೆನ್ನೆಗೆ ಬಾರಿಸಲು ಬಯಸಬಹುದು.
ಆತ ಚತುರನೆಂದು ತೋರಿಸಿಕೊಳ್ಳುತ್ತಾನಾ?
ತುಂಬಾ ಚತುರನಂತೆ ವರ್ತಿಸಿ ನಿಮ್ಮನ್ನು ಆಕರ್ಷಿಸಲು ಪ್ರಯತ್ನಿಸುವಂತಹದ್ದು ದೀರ್ಘ ಕಾಲ ತನಕ ಉಳಿಯದು. ಆತ ತುಂಬಾ ಬಾಲಕನಂತೆ ವರ್ತಿಸುವ ಬದಲು ಪ್ರೌಢತೆ ಪ್ರದರ್ಶಿಸಬೇಕು ಮತ್ತು ನಿಮ್ಮ ಜೀವನದ ಸಂಗಾತಿಯಾಗಬೇಕು.
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
ಮಹಿಳೆಯಲ್ಲಿ ಪ್ರತಿಯೊಬ್ಬ ಪುರುಷ ಹುಡುಕುವ ಗುಣಗಳು
ಮಹಿಳೆಯರ ಇಂತಹ ಗುಣಗಳಿಗೆಯೇ, ಪುರುಷರು ಕ್ಲೀನ್ ಬೌಲ್ಡ್ ಆಗಿ ಬಿಡುತ್ತಾರೆ!
ಮದುವೆ ಬಳಿಕ ಮಹಿಳೆಯರು ಸಂಪೂರ್ಣವಾಗಿ ಬದಲಾಗಿ ಬಿಡುತ್ತಾರೆ! ಯಾಕೆ ಗೊತ್ತೇ?
ಕಣ್ಣೀರು ತರಿಸುವ 'ಪ್ರೇಮ ಕಥೆ', ಕೊನೆಗೂ ಆ ಜೋಡಿ ಒಂದಾದರು...
ಮದುವೆಗೂ ಮುಂಚೆ ಹೀಗೆಲ್ಲಾ ಮಾಡಬೇಡಿ, ಮುಂದೆ ತೊಂದರೆಯಾಗಬಹುದು!
ಸಂಬಂಧದಲ್ಲಿನ ಹಲವಾರು ವಿಧಗಳು
ಗಂಡ-ಹೆಂಡತಿಯರ ನಡುವೆ ಇಂತಹ ಕಮಿಟ್ಮೆಂಟ್ ಇದ್ದರೆ, ಸುಖವಾಗಿ ಇರುವಿರಿ...
ಪ್ರಿಯತಮೆಗೆ ಅರ್ಪಿಸಬಹುದಾದ ರೋಮ್ಯಾಂಟಿಕ್ ಹಾಡುಗಳು
ಪರಿಸ್ಥಿತಿಗೆ ಅನುಗುಣವಾಗಿ ಪ್ರೀತಿಯ ರೂಪ ಬದಲಾಗುವುದು!
ತನ್ನ ತುಟಿಗಳನ್ನು ಕಚ್ಚಿಕೊಳ್ಳುವ ಮಹಿಳೆ ಅತ್ಯಾಕರ್ಷಕಳಾಗಿ ಕಾಣುತ್ತಾಳಂತೆ! ಏಕೆ?
ಆಕೆ ಎಷ್ಟೇ ಕ್ಲೋಸ್ ಇದ್ದರೂ, ಕೆಲವೊಂದು ವಿಷಯಗಳನ್ನು ಮಾತ್ರ ಹೇಳಲ್ಲ!
ನಿಮ್ಮ ಪ್ರೀತಿಪಾತ್ರರನ್ನು ನಂಬುವ ಮೊದಲು ಅವರು ಕಳುಹಿಸಿರುವ ಸಂದೇಶ ನೋಡಿ...
ಆಕೆಗೆ ಆ ವಿಷಯದಲ್ಲಿ ಜಾಸ್ತಿ ಆಸಕ್ತಿ ಇರುತ್ತದೆ!, ಆದ್ರೆ ಬಾಯಿಬಿಡಲ್ಲ ಅಷ್ಟೇ!!
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ರಾಹುಲ್ ಗಾಂಧಿ ಏಪ್ರಿಲ್ 27ಕ್ಕೆ ಮಂಗಳೂರಿಗೆ, ಪ್ರಣಾಳಿಕೆ ಬಿಡುಗಡೆ
ರಾಹುಲ್ ಗಾಂಧಿಯಿದ್ದ ವಿಮಾನದಲ್ಲಿ ಅನುಮಾನಾಸ್ಪದ ತಾಂತ್ರಿಕ ತೊಂದರೆ, ದೂರು
'ಜೆಡಿಎಸ್ ಗೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ'