For Quick Alerts
ALLOW NOTIFICATIONS  
For Daily Alerts

ವೈವಾಹಿಕ ಜೀವನ ಬಲಿಷ್ಠಗೊಳಿಸಲು 10 ಸೂತ್ರಗಳು

|

ಹಿಂದಿನವರು ವೈವಾಹಿಕ ಜೀವನವನ್ನು ಪ್ರೀತಿ ಹಾಗೂ ನಂಬಿಕೆ ಮೇಲೆ ಮುಂದುವರಿಸಿಕೊಂಡು ಹೋಗಿ ಯಶಸ್ವಿಯಾಗಿದ್ದರು. ಆದರೆ ಎಲ್ಲವೂ ಅಂಗೈಯಲ್ಲೇ ಇರುವಂತಹ ಕಾಲದಲ್ಲಿ ವೈವಾಹಿಕ ಜೀವನ ಎನ್ನುವುದು ಅಡ್ಡಕತ್ತರಿ ಮೇಲಿದೆ. ವೈವಾಹಿಕ ಜೀವನ ಸುಗಮವಾಗಿ ಸಾಗಲು ಏನು ಮಾಡಬೇಕು ಎಂದು ಹಿರಿಯರನ್ನು ಕೇಳುವ ಬದಲು ಇಂಟರ್ನೆಟ್ ನಲ್ಲಿ ವಿಡಿಯೋ ನೋಡುವಂತಹ ಕಾಲ ಬಂದಿದೆ.

ವೈವಾಹಿಕ ಜೀವನ ಸಫಲವಾಗಬೇಕಿದ್ದರೆ ಮೂರು ಅಂಶಗಳು ಅತೀ ಅಗತ್ಯ. ಪ್ರೀತಿ, ನಂಬಿಕೆ ಮತ್ತು ಗೌರವ. ಆದರೆ ಇತರ ಕೆಲವೊಂದು ಅಂಶಗಳು ಕೂಡ ಪತಿ ಅಥವಾ ಪತ್ನಿ ಮೇಲೆ ಪರಿಣಾಮ ಬೀರಬಹುದು. ಇದನ್ನು ಹೆಚ್ಚಿನವರು ಕಡೆಗಣಿಸುತ್ತಲೇ ಇರಬಹುದು. ಆದರೆ ಮರೆತುಹೋಗಿರುವಂತಹ ಈ ವಿಚಾರವನ್ನು ನೀವು ಸರಿಪಡಿಸಿಕೊಂಡರೆ ಆಗ ವೈವಾಹಿಕ ಜೀವನ ಬಲಿಷ್ಠವಾಗುವುದು ಮತ್ತು ಸಂಗಾತಿಗಳು ಪರಸ್ಪರ ಮತ್ತಷ್ಟು ಹತ್ತಿರವಾಗುವರು....

ನಿಮ್ಮಿಷ್ಟದ ತಿಂಡಿಯ ಒಂದು ತುಂಡು ಸಂಗಾತಿಗಿರಲಿ

ನಿಮ್ಮಿಷ್ಟದ ತಿಂಡಿಯ ಒಂದು ತುಂಡು ಸಂಗಾತಿಗಿರಲಿ

ಈ ರೀತಿ ಮಾಡುವುದರಿಂದ ನೀವು ಸಂಗಾತಿ ಮೇಲೆ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದೀರಿ ಎಂದು ಹೇಳಬಹುದು. ಪ್ರತೀ ಸಲ ಇದನ್ನು ನೀವು ಮಾಡಬೇಕೆಂದಿಲ್ಲ. ಆದರೆ ನಿಮ್ಮ ಇಷ್ಟದ ಆಹಾರದ ಒಂದು ತುಂಡು ಅವರಿಗೆ ನೀಡಿದರೆ ಆಗ ಪ್ರೀತಿ ಹೆಚ್ಚಾಗುವುದು.

ನಿಮ್ಮದೇ ಆಗಿರುವ ಖಾಸಗಿ ಆಚರಣೆ ಮತ್ತು ಸಂಪ್ರದಾಯಗಳಿರಲಿ

ನಿಮ್ಮದೇ ಆಗಿರುವ ಖಾಸಗಿ ಆಚರಣೆ ಮತ್ತು ಸಂಪ್ರದಾಯಗಳಿರಲಿ

ಪ್ರತೀ ಸಲ ನಕ್ಷತ್ರ ಬೀಳುತ್ತಿರುವಾಗ ಮಾಡುವಂತಹ ಪ್ರಾರ್ಥನೆಯು ಒಂದೇ ರೀತಿಯಾಗಿದ್ದರೆ ಅಥವಾ ಪ್ರತೀ ತಿಂಗಳಿನ ಒಂದನೇ ತಾರೀಕಿಗೆ ಪರಸ್ಪರರ ಇಷ್ಟದ ಖಾದ್ಯ ಮಾಡುವುದು ಸರಳ. ನಿಮ್ಮದೇ ಆಗಿರುವ ಖಾಸಗಿ ಆಚರಣೆ ಮಾಡಿಕೊಳ್ಳಿ. ಇದು ಸಂಗಾತಿ ಜತೆಗಿನ ಅನ್ಯೋನ್ಯತೆ ಹೆಚ್ಚಿಸುವುದು ಮತ್ತು ನೀವಿಬ್ಬರೇ ಒಳಗೊಂಡಿರುವ ನೆನಪು ಉಂಟು ಮಾಡುವುದು.

ಗುಡ್ ಬೈ ಹೇಳುವಾಗ ಸಿಹಿಮುತ್ತು ನೀಡಲು ಮರೆಯಬೇಡಿ

ಗುಡ್ ಬೈ ಹೇಳುವಾಗ ಸಿಹಿಮುತ್ತು ನೀಡಲು ಮರೆಯಬೇಡಿ

ಕಚೇರಿಗೆ ಹೋಗುತ್ತಿರಲಿ ಅಥವಾ ಬೇರೆ ಯಾವುದೇ ಕೆಲಸಕ್ಕೆ ಹೋಗುತ್ತಿರಲಿ ಪ್ರತೀ ಬೆಳಗ್ಗೆ ಸಂಗಾತಿ ಮನೆಬಿಟ್ಟು ಹೋಗುವ ಮೊದಲು ಸಿಹಿಮುತ್ತು ನೀಡಲು ಮರೆಯಬೇಡಿ. ಇದಕ್ಕೆ ಕೆಲವು ಸೆಕೆಂಡ್ ಬೇಕಾಗಬಹುದು. ಆದರೆ ನಿಮ್ಮಿಬ್ಬರ ಮಧ್ಯೆ ಅನುಬಂಧ ಹೆಚ್ಚಾಗುವುದು ಮತ್ತು ದಿನವಿಡಿ ನೀವು ಪರಸ್ಪರ ನೆನಪು ಮಾಡಿಕೊಳ್ಳುತ್ತಾ ಇರುವಿರಿ.

ಸಂಭ್ರಮದ ಕ್ಷಣಗಳ ಫೋಟೊಗಳನ್ನು ಫ್ರೇಮ್ ಮಾಡಿ

ಸಂಭ್ರಮದ ಕ್ಷಣಗಳ ಫೋಟೊಗಳನ್ನು ಫ್ರೇಮ್ ಮಾಡಿ

ಹೆಚ್ಚಿನ ದಂಪತಿಗಳು ತಮ್ಮ ಮದುವೆ ಫೋಟೊಗಳು ಮತ್ತು ರಜಾದಿನದಲ್ಲಿ ಕಳೆದ ಕ್ಷಣಗಳ ಫೋಟೊಗಳನ್ನು ಫ್ರೇಮ್ ಮಾಡಿಟ್ಟುಕೊಳ್ಳುವರು. ಈ ಸಣ್ಣ ಸಂತೋಷದ ಕ್ಷಣಗಳು ನಿಮ್ಮ ಜೀವನವನ್ನು ತುಂಬಾ ಅರ್ಥಪೂರ್ಣವಾಗಿಸುವುದು. ಫ್ರೇಮ್ ಹಾಕದೆ ಇದ್ದರೆ ಅವುಗಳು ನೆನಪಿನಲ್ಲಿ ಉಳಿಯದು. ದೊಡ್ಡ ಬಾಯಿ ಮಾಡಿಕೊಂಡು ನಿಮ್ಮ ಪತಿ ಮಲಗಿರುವ ಅಥವಾ ಪತ್ನಿಯು ಮೊದಲ ಸಲ ಡ್ರೈವಿಂಗ್ ತರಗತಿ ತೆಗೆದುಕೊಳ್ಳುತ್ತಲಿರುವುದನ್ನು ನೀವು ಊಹಿಸಿಕೊಳ್ಳಿ. ಇದೆಲ್ಲವೂ ನೆನಪನ್ನು ಮರಕಳಿಸುವುದು.

ಸಂಗಾತಿಯು ನಿಮಗೆ ಬಟ್ಟೆ ಅಥವಾ ಆಹಾರವನ್ನು ಆಯ್ಕೆ ಮಾಡಲಿ

ಸಂಗಾತಿಯು ನಿಮಗೆ ಬಟ್ಟೆ ಅಥವಾ ಆಹಾರವನ್ನು ಆಯ್ಕೆ ಮಾಡಲಿ

ನಿಮಗಾಗಿ ಸಂಗಾತಿಯು ಏನನ್ನಾದರೂ ಆಯ್ಕೆ ಮಾಡಲು ಬಿಟ್ಟರೆ ಆತ ಅಥವಾ ಆಕೆ ಸರಿಯಾಗಿರುವುದನ್ನು ಆಯ್ಕೆ ಮಾಡಲ್ಲ. ಆದರೆ ಅಂತಿಮವಾಗಿ ಆಕೆ ಅಥವಾ ಆತ ಆಯ್ಕೆ ಮಾಡುವುದು ಹೇಗೆ ಎಂದು ತಿಳಿಯಲು ಪ್ರಯತ್ನಿಸಬಹುದು. ಇದರಿಂದ ನೀವಿಬ್ಬರು ಮತ್ತಷ್ಟು ಹತ್ತಿರವಾಗಬಹುದು.

ನೀವು ಪ್ರೀತಿಸುವ ದಂಪತಿ ಜತೆಗೆ ಸ್ನೇಹ ಬೆಳೆಸಿ

ನೀವು ಪ್ರೀತಿಸುವ ದಂಪತಿ ಜತೆಗೆ ಸ್ನೇಹ ಬೆಳೆಸಿ

ಮದುವೆ ಅಥವಾ ಯಾವುದೇ ವಿಚಾರವಾಗಿರಲಿ, ಯಶಸ್ಸು ಪಡೆಯಲು ಸರಿಯಾದ ವ್ಯಕ್ತಿಗಳ ಜತೆಗೆ ಇರುವುದು ಅತೀ ಅಗತ್ಯವಾಗಿರುವುದು. ಯಾವುದೇ ಸಂಬಂಧ ಕೂಡ ಏಕಾಂತದಲ್ಲಿ ಇರಲು ಸಾಧ್ಯವಿಲ್ಲ. ಕುಟುಂಬ ಅಥವಾ ಸ್ನೇಹಿತರ ಆಸರೆಯು ಬೇಕೇಬೇಕು. ನಿಮ್ಮಂತೆ ಯೋಚಿಸುವಂತಹ ದಂಪತಿಯೊಂದಿಗೆ ನೀವು ಸ್ನೇಹ ಸಂಪಾದಿಸಿ. ಇವರೊಂದಿಗೆ ನೀವು ಸಮಸ್ಯೆ ಹಂಚಿಕೊಳ್ಳಬಹುದು. ಇದರಿಂದ ಬೆಂಬಲ ಹಾಗೂ ಸಲಹೆ ಸಿಗುವುದು.

ಸಂಗಾತಿಗಾಗಿ ಸಮಯವನ್ನು ಮೀಸಲಿರಿಸಿ

ಸಂಗಾತಿಗಾಗಿ ಸಮಯವನ್ನು ಮೀಸಲಿರಿಸಿ

ಸಂಗಾತಿಗಳ ನಡುವಣ ಆಕರ್ಷಣೆಗೆ ರೂಪ, ಲಾವಣ್ಯ, ಬಣ್ಣ, ಹಣ, ಅಂತಸ್ತು ಮೊದಲಾದ ಹಲವು ಮಾಧ್ಯಮಗಳಿದ್ದರೂ ಅವುಗಳಿಗಿಂತ ಮಿಗಿಲಾದದ್ದು, ಅಪೂರ್ವವಾದದ್ದು ಮತ್ತು ಬೆಲೆಕಟ್ಟಲಾಗದಂತಹದ್ದು ಎಂದರೆ ಅಪ್ಪಟ ಪ್ರೀತಿಯಾಗಿದೆ. ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಅವರಿಗಾಗಿ ನೀವು ಏನು ಮಾಡುತ್ತೀರಿ ಎಂದು ಹೇಳಿದರೆ ಅದರಂತೆ ನಡೆದುಕೊಳ್ಳಿ. ನಿಮ್ಮ ಸಂಗಾತಿಗಾಗಿ ಸಮಯವನ್ನು ಮೀಸಲಿರಿಸಿ. ಅವರೊಂದಿಗೆ ಕಳೆಯುವ ಕಾಲವನ್ನು ನಿಗದಿಪಡಿಸಿದರೆ ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬೇಡಿ, ನಿಗದಿತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿ.

ಯಾವಾಗಲೂ ಮಾತಿಗೆ ತಪ್ಪಬೇಡಿ!

ಯಾವಾಗಲೂ ಮಾತಿಗೆ ತಪ್ಪಬೇಡಿ!

ಕೆಲವೊಮ್ಮೆ ಮಾತು ನೀಡಿ ಸುಲಭವಾಗಿ ಮರೆಯುವುದುಂಟು. ಒಂದು ವೇಳೆ ನಿಮಗೆ ಯಾವುದೋ ಕಾರ್ಯ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ನಯವಾಗಿಯೇ ಈ ಕೆಲಸ ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಎಂದು ತಿರಸ್ಕರಿಸಿ. ಅದರ ಬದಲಿಗೆ ಪ್ರೇಮದ ಭರದಲ್ಲಿ ಅಸಾಧ್ಯವಾದ ಕಾರ್ಯಗಳನ್ನು ಈಡೆರಿಸುವ ಪ್ರಮಾಣ ಮಾಡಿ ಬಳಿಕ ಸಾಧ್ಯವಾಗದೇ ಸಂಗಾತಿಯ ನಿರಾಶೆಯನ್ನು ಪಡೆಯಬೇಡಿ. ಬದಲಿಗೆ ನಿಮ್ಮಿಂದ ಸಾಧ್ಯವಾಗುವ ಪ್ರಮಾಣಗಳನ್ನು ಮಾಡಿ ಪೂರ್ಣಭಾವದಿಂದ ಆ ಪ್ರಮಾಣಗಳನ್ನು ನೆರವೇರಿಸಿ ಸಂಗಾತಿಯ ಸಂತೋಷದಲ್ಲಿ ಭಾಗಿಯಾಗಿ.

ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ

ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ

ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಕಾಲಗಳು ಬಂದೆ ಬರುತ್ತವೆ. ಅದು ಮುಂದೆ ಕೆಲವೊಂದು ಸಂಕೀರ್ಣ ಸನ್ನಿವೇಶಗಳಿಗೆ ಎಡೆಮಾಡಿಕೊಡುವುದು ಸಹಜ. ನಿಮ್ಮ ಜೀವನದ ಕೆಲವೊಂದು ಕಾಲ ಘಟ್ಟಗಳಲ್ಲಿ ನೀವೂ ಕೆಲವೊಂದು ಒತ್ತಡಗಳು ಕಂಡು ಬರುತ್ತವೆ. ನೀವು ನಿಮ್ಮ ಸಂಗಾತಿಯ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರದಲ್ಲಿ ಅಲ್ಲಿ ಏನು ನಡೆದಿದೆಯೋ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯು ಇರಬಹುದು. ಅದಕ್ಕಾಗಿ ನಿಮ್ಮ ಸಂಗಾತಿಯೇ ಇದಕ್ಕೆ ವಿರುದ್ಧವಾಗಿ ಹೋರಾಡಲು ಬಿಟ್ಟು ಬಿಡಿ. ಇಡೀ ಸನ್ನಿವೇಶವನ್ನು ನೀವು ವೈಯುಕ್ತಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಆದರೆ ನೈತಿಕ ಬೆಂಬಲವೊ ಅಥವಾ ಸಲಹೆ ಸೂಚನೆಗಳು ಬೇಕಾಗಿದ್ದಲ್ಲಿ, ಧನಾತ್ಮಕ ನೆಲೆಗಟ್ಟಿನಲ್ಲಿ ಅಗತ್ಯವಾಗಿ ಒದಗಿಸಿ.

ಸಂವಹನ ರೂಢಿಸಿಕೊಳ್ಳಿ

ಸಂವಹನ ರೂಢಿಸಿಕೊಳ್ಳಿ

ಸುಮಾರು ಜನರು ತಮ್ಮ ಸಂಗಾತಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳುವ ಕೆಲಸ ಮಾಡುವುದಿಲ್ಲ. ಇದರಿಂದಲೆ ಬಹುತೇಕ ಸಮಸ್ಯೆಗಳು ಉದ್ಭವಿಸುವುದು. ಇಬ್ಬರ ನಡುವೆ ಇರುವ ಈ ಹೊಂದಾಣಿಕೆಯ ಸಮಸ್ಯೆಯೆ ಇಬ್ಬರಿಗು ನಿರಾಸೆಯನ್ನು ತಂದು ಕೊಡುತ್ತದೆ. ಇದು ಅಷ್ಟು ಅಗತ್ಯವೇ ಎಂದು ಕೇಳುತ್ತೀರಾ? ಹೌದು, ಇದರ ಅಗತ್ಯ ಪ್ರತಿಯೊಬ್ಬರಿಗು ಇರುತ್ತದೆ. ಒಬ್ಬರ ಮನಸ್ಸಿನಲ್ಲಿ ಇರುವುದನ್ನು ಇನ್ನೊಬ್ಬರು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಸಾಕು, ನಿಮ್ಮ ಸಮಸ್ಯೆ ಅರ್ಧ ಪರಿಹಾರವಾಗುತ್ತದೆ. ಇದರಿಂದ ಸುಮಾರು ಸಮಯ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಗಂಡ -ಹೆಂಡತಿಯರ ಮಧ್ಯೆ ಸಂವಹನವು ಗುಪ್ತಗಾಮಿನಿಯಂತೆ ಇರಬೇಕು, ಆಗ ನೋಡಿ ನಿಮ್ಮ ಸಂಬಂಧ ಎಷ್ಟು ಗಾಢವಾಗುತ್ತದೆಯೆಂದು.

English summary

10 tricks would make your marriage stronger

You might have read or listened to innumerable pieces of advice on how to make a marriage works. These would generally stress on the importance of trust, mutual respect and love but there are a lot of other things that go unnoticed which can have a lasting impact on a spouse. Doing these often-ignored things can make a marriage stronger and bring the two people a little closer than they already are.
Story first published: Monday, September 10, 2018, 20:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more