ಗಡ್ಡಧಾರಿ ಪುರುಷರಿಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು!

By: manu
Subscribe to Boldsky

ಮಹಿಳೆಯರಿಗೆ ಏನು ಇಷ್ಟ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರತಿ ಮಹಿಳೆಯ ಆಯ್ಕೆ ಭಿನ್ನವಾಗಿರುತ್ತದೆ. ಪುರುಷರ ವೇಷಭೂಷಣದ ಬಗ್ಗೆ ಪ್ರತಿ ಮಹಿಳೆಯರೂ ಭಿನ್ನವಾದ ಅಭಿಪ್ರಾಯ ಹೊಂದಿರುತ್ತಾರೆ. ಕೆಲವು ಮಹಿಳೆಯರು ಗಡ್ಡಧಾರಿ ಪುರುಷರನ್ನು ಇಷ್ಟಪಡುತ್ತಾರೆ.  ಗಡ್ಡ ಬೆಳೆಸಲು ನೀರು-ಗೊಬ್ಬರದ ಅಗತ್ಯವಿಲ್ಲ..!

ಸಾಮಾನ್ಯವಾಗಿ ಗಡ್ಡ ಎಂದರೆ ಒರಟು, ತರಚುವ ಅನುಭವ ನೀಡುವ ಚರ್ಮ ಎಂಬ ಅಭಿಪ್ರಾಯವನ್ನು ಹೊಂದಿರುವ ಕಾರಣ ಹೆಚ್ಚಿನ ಪುರುಷರು ಗಡ್ಡವನ್ನು ನಿವಾರಿಸಿ ನುಣ್ಣನೆಯ ಚರ್ಮವನ್ನು ಪ್ರಕಟಿಸಲು ಇಚ್ಛಿಸುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಎರಡು ದಿನಕ್ಕಿಂತ ಹೆಚ್ಚು ಕಾಲ ಬೋಳಿಸದ ಗಡ್ಡದ ಪುರುಷರೇ ಹೆಚ್ಚು ಇಷ್ಟ. ಈ ಗಡ್ಡ ಚುಚ್ಚುತ್ತದೆ ಎಂದು ಉಳಿದ ಮಹಿಳೆಯರು ದೂರು ನೀಡಿದರೂ ಕೆಲವರಿಗೆ ಮಾತ್ರ ಈ ಚುಚ್ಚುವಿಕೆಯೇ ಹೆಚ್ಚು ಇಷ್ಟವಾಗುತ್ತದಂತೆ! ಗಡ್ಡ ಆಕರ್ಷಕವಾಗಿ ಬೆಳೆಯಲು ಈ ಚಿಕಿತ್ಸೆ ಮಾಡಿ

ಗಡ್ಡವೂ ಇರಬೇಕು, ಚುಚ್ಚಲೂ ಬಾರದು ಎಂದು ಬಯಸುವ ಮಹಿಳೆಯರ ಇಚ್ಛೆಯನ್ನು ಪೂರೈಸಲು ಪುರುಷರು ತಮ್ಮ ಗಡ್ಡವನ್ನು ಸೂಕ್ತ ಶಾಂಪೂ ಮತ್ತು ಕಂಡೀಶನ್‌ನಿಂದ ಆರೈಕೆ ನೀಡಿದರೆ ಸೌಮ್ಯ ತಲೆಗೂದಲಿನಂತೆ ಗಡ್ಡದ ಕೂದಲೂ ಸೌಮ್ಯವಾಗಿದ್ದು ನುಣುಪಾದ ಅನುಭವ ನೀಡುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...  

ಮಾಹಿತಿ #1

ಮಾಹಿತಿ #1

ಕೆಲವು ಸಂಶೋಧನೆಗಳ ಪ್ರಕಾರ ಗಡ್ಡವನ್ನು ಇಷ್ಟಪಡುವ ಮಹಿಳೆಯರ ತಂದೆ, ಅಜ್ಜ ಅಥವಾ ಆಕೆಯ ಆಪ್ತರಲ್ಲಿ ಯಾರಾದರೂ ಗಡ್ಡವನ್ನು ಹೊಂದಿದ್ದು ಆ ವ್ಯಕ್ತಿತ್ವವನ್ನು ಆಕೆ ತನ್ನ ಪುರುಷನಲ್ಲಿಯೂ ಕಾಣಬಯಸುತ್ತಾಳೆ. ಇದು ಗಡ್ಡವನ್ನು ಇಷ್ಟಪಡಲು ಪ್ರಮುಖವಾದ ಕಾರಣವಾಗಿದೆ.

ಮಾಹಿತಿ #2

ಮಾಹಿತಿ #2

ಇನ್ನೂ ಕೆಲವು ಸಮೀಕ್ಷೆಗಳ ಪ್ರಕಾರ ಗಡ್ಡವಿರುವ ಗದ್ದವನ್ನು ಮಹಿಳೆಯರ ಚರ್ಮಕ್ಕೆ ತಗಲಿಸಿದಾಗ ಹೆಚ್ಚಿನ ಕಚಗುಳಿ ನೀಡುತ್ತಿದ್ದು ಈ ಕಚಗುಳಿಯನ್ನು ಇವರು ಹೆಚ್ಚು ಇಷ್ಟಪಡುತ್ತಾರೆ.

ಮಾಹಿತಿ #3

ಮಾಹಿತಿ #3

ಗಡ್ಡವೆಂದರೆ ಪುರುಷರಿಗೆ ಮೀಸಲಾದ ಲಕ್ಷಣವಾಗಿದ್ದು ಗಡ್ಡವಿರುವ ಮೂಲಕ ತಮ್ಮ ಪುರುಷನಲ್ಲಿ ಆಕರ್ಷಣೆಯನ್ನು ಕಾಣುತ್ತಾರೆ. ಗಡ್ಡವಿಲ್ಲದೇ ಇದ್ದರೆ ಈ ಲಕ್ಷಣದಲ್ಲಿ ಏನೋ ಕೊರತೆ ಎಂದು ಇವರಿಗೆ ಅನ್ನಿಸುತ್ತದೆ.

ಮಾಹಿತಿ #4

ಮಾಹಿತಿ #4

ಸಾಮಾನ್ಯವಾಗಿ ಪ್ರಾಪ್ತ ವಯಸ್ಸು ತಲುಪಿದ ಬಳಿಕವೇ ಗಡ್ಡ ಮೂಡುವ ಕಾರಣ ಗಡ್ಡವಿರುವ ಪುರುಷ ಪ್ರಾಪ್ತನಾಗಿದ್ದು ಮಹಿಳೆಯ ರಕ್ಷಣೆಯ ಹೊಣೆ ಹೊರಲು ಸಮರ್ಥನಿದ್ದಾನೆ ಎಂದು ಮಹಿಳೆಯರು ಭಾವಿಸುತ್ತಾರೆ.

ಮಾಹಿತಿ #5

ಮಾಹಿತಿ #5

ತಮ್ಮ ಪುರುಷನ ಗಡ್ಡವಿರುವ ಮತ್ತು ಗಡ್ಡವಿಲ್ಲದ ಎರಡೂ ಚಿತ್ರಗಳನ್ನು ಮಹಿಳೆಯರಿಗೆ ತೋರಿಸಿದಾಗ ಹೆಚ್ಚಿನವರು ಗಡ್ಡವಿರುವ ಚಿತ್ರವನ್ನೇ ಹೆಚ್ಚು ಇಷ್ಟಪಟ್ಟಿರುವುದನ್ನು ಗಮನಿಸಲಾಗಿದೆ. ಗಡ್ಡವಿರುವ ಪುರುಷ ಹೆಚ್ಚು ಬಲಶಾಲಿ ಹಾಗೂ ಸಮರ್ಥ ಎಂಬ ಭಾವನೆಯನ್ನು ಪಡೆಯುತ್ತಾರೆ.

ಮಾಹಿತಿ #6

ಮಾಹಿತಿ #6

ಗಡ್ಡವಿಲ್ಲದೇ ಇರುವುದು ಹೆಣ್ಣುಮಕ್ಕಳ ಲಕ್ಷಣ, ಗಡ್ಡವಿರುವುದು ಪುರುಷರ ಲಕ್ಷಣ ಎಂದು ಕೆಲವು ಮಹಿಳೆಯರು ಬಲವಾಗಿ ನಂಬಿದ್ದು ನುಣ್ಣನೆ ಬೋಳಿಸಿರುವ ಗಡ್ಡದ ಪುರುಷರನ್ನು ಇವರು ಇಷ್ಟಪಡುವುದಿಲ್ಲ.

 
English summary

Why Some Women Prefer Beards

Not all women are alike. So, we cannot generalise that all women like or dislike beards. But yes, there are some women who like beards for many reasons. We shall discuss them. Firstly, the reason behind some women hating beards could be the kind of sensation that stubble creates when kissing. Stubble which is 2 days old can pierce like needles on the skin when kissing. That irritates any woman
Subscribe Newsletter