Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗಡ್ಡ ಆಕರ್ಷಕವಾಗಿ ಬೆಳೆಯಲು ಈ ಚಿಕಿತ್ಸೆ ಮಾಡಿ
ಗಡ್ಡ, ಮೀಸೆ ಬರುವುದು ಪುರುಷರ ಲಕ್ಷಣ. ಗಡ್ಡ, ಮೀಸೆ ಬಿಡಲು ಇಷ್ಟ ಪಡದವರೂ ಕೂಡ ತಮ್ಮ ಮುಖದಲ್ಲಿ ಗಡ್ಡ- ಮೀಸೆ ಮಂದವಾಗಿ, ಸುಂದರವಾಗಿ ಇರಬೇಕೆಂದು ಬಯಸುತ್ತಾರೆ. ಮಂದವಾಗಿ ಗಡ್ಡ ಬಂದರೆ ಮಾತ್ರ ಪುರುಷರ ಮುಖದ ತ್ವಚೆಯಲ್ಲಿ ವ್ಯತ್ಯಾಸ ಉಂಟಾಗುವುದು. ಗಡ್ಡ ಸರಿಯಾಗಿ ಬರದೆ, ಮಹಿಳೆಯರ ಮುಖದಂತೆ ಕಾಣಲು ಯಾವ ಪುರುಷನೂ ಇಷ್ಟಪಡುವುದಿಲ್ಲ.
ಗಡ್ಡ-ಮೀಸೆ ಮಂದವಾಗಿ ಬೆಳೆಯಲು ಆಗಾಗ ಶೇವ್ ಮಾಡಬೇಕು. ಅದಲ್ಲದೆ ಇಲ್ಲಿ ನಾವು ಗಡ್ಡ ಮಂದವಾಗಿ ಬರುವಂತೆ ಮಾಡುವ ಅತ್ಯಂತ ಪ್ರಯೋಜನಕಾರಿ ವಿಧಾನದ ಬಗ್ಗೆ ಹೇಳಿದ್ದೇವೆ ನೋಡಿ:

Rogaine (ಮಿನ್ ಆಕ್ಸಿಡೈಲ್)
Rogiane (ಮಿನ್ ಆಕ್ಸಿಡೈಲ್) ಈ ಚಿಕಿತ್ಸೆಯ ಮುಖಾಂತರ ಗಡ್ಡ ತುಂಬಾ ಬರುವಂತೆ ಮಾಡಬಹುದು. ಈ ಮದ್ದನ್ನು ಯಾವುದೇ ತ್ವಚೆ ತಜ್ಞರ ಸಲಹೆಯಿಲ್ಲದೆ ಮುಖಕ್ಕೆ ಹಚ್ಚಬಹುದು. ಇದು ನೊರೆ ರೀತಿಯಲ್ಲಿ ಇರುತ್ತದೆ. ಇದನ್ನು ಮುಖಕ್ಕೆ ಹಚ್ಚಿ 4 ಗಂಟೆಗಳ ಕಾಲ ಇಟ್ಟು ನಂತರ ಮುಖ ತೊಳೆಯಬೇಕು. ತುಂಬಾ ಸೂಕ್ಷ್ಮ ತ್ವಚೆಯವರಿಗೆ ಈ ಔಷಧಿ ತುರಿಕೆಯನ್ನುಂಟು ಮಾಡಬಹುದು. ಆದ್ದರಿಂದ ಹಚ್ಚುವ ಮೊದಲು ಮುಖದ ಒಂದು ಭಾಗಕ್ಕೆ ಸ್ವಲ್ಪ ಹಚ್ಚಿ ನೋಡಿ, ತುರಿಕೆ ಕಂಡು ಬರದಿದ್ದರೆ ಈ ಚಿಕಿತ್ಸೆ ನಿಮ್ಮ ಗಡ್ಡದ ಸಾಂದ್ರತೆ ಹೆಚ್ಚಿಸುವಲ್ಲಿ ಸಹಕಾರಿ.
ಮುಖವನ್ನು ಸ್ವಚ್ಛವಾಗಿಡಿ
ಮುಖವನ್ನು ದೂಳಿನಿಂದ ಸಂರಕ್ಷಿಸಿ. ಕೆಲವೊಮ್ಮೆ ಶೇವ್ ಮಾಡಿದಾಗ ತುರಿಕೆ ಉಂಟಾಗಿ ಗುಳ್ಳೆಗಳು ಉಂಟಾಗುತ್ತದೆ, ಆ ಗುಳ್ಳೆಯ ಮೇಲೆ ಕೂದಲು ಹುಟ್ಟುತ್ತದೆ. ಈ ರೀತಿ ಆಗದಿರಲು ತಲೆಹೊಟ್ಟು ನಿವಾರಿಸುವ ಶ್ಯಾಂಪೂ ಬಳಸಿ ವಾರದಲ್ಲಿ ಎರಡು ಬಾರಿ ಗಡ್ಡವನ್ನು ತೊಳೆಯಿರಿ.
ಬಯೋಟಿನ್
ಬಯೋಟಿನ್ ಅಥವಾ ವಿಟಮಿನ್ ಬಿ7 ಕೂಡ ಗಡ್ಡ ಬೆಳೆಯಲು ಸಹಕಾರಿಯಾಗಿದೆ. ಮೊಟ್ಟೆಯ ಬಿಳಿಯಲ್ಲಿ ಅಧಿಕ ಬಯೋಟಿನ್ ಇದೆ. ಬಯೋಟಿನ್ ಮತ್ತು ಮಿನ್ ಆಕ್ಸಿಡೈಲ್ ಮಿಶ್ರಣ ಮಾಡಿದರೆ ಉತ್ತಮ ಫಲಿತಾಂಶ ದೊರೆಯುವುದು.



Click it and Unblock the Notifications
