For Quick Alerts
ALLOW NOTIFICATIONS  
For Daily Alerts

  ಸಂಸಾರದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಸಾಮಾಜಿಕ ತಾಣವೂ ಕಾರಣ!!

  By Arshad
  |

  ಇಂದು ಸಾಮಾಜಿಕ ತಾಣಗಳ ಮೂಲಕ ನಮ್ಮ ಹಳೆಯ, ಕಳೆದುಹೋದ ಸ್ನೇಹಿತರೆಲ್ಲಾ ನಿಧಾನವಾಗಿ ಒಬ್ಬೊಬ್ಬರಾಗಿ ಪ್ರಕಟವಾಗುತ್ತಾ ಬಂದಂತೆ ನಮಗೂ ಅವರ ಹಿಂದಿನ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುವ ಬಯಕೆಯೂ ಸ್ವಾಭಾವಿಕವಾಗಿ ಆಗಿಯೇ ಆಗುತ್ತದೆ. ನಿಮಗೂ ಹೀಗೇ ಹಳೆಯ ಸ್ನೇಹಿತರೊಬ್ಬರು ಸಿಕ್ಕರೆ ಫ್ರೆಂಡ್ ರಿಕ್ವೆಸ್ಟ್ ಎಂಬ ಕೋರಿಕೆಯನ್ನು ಸಲ್ಲಿಸುತ್ತೀರಿ ತಾನೇ?

  ಆದರೆ ಎಲ್ಲಿಯವರೆಗೆ ಈ ಕೋರಿಕೆ ನಿಮ್ಮ ಸಂಗಾತಿಗೆ ಕಳುಹಿಸುವುದು ಸಲ್ಲದು ಎಂದು ತಜ್ಞರು ಸಲಹೆ ಮಾಡುತ್ತಾರೆ. ಏಕೆಂದರೆ ಈ ಕೋರಿಕೆಯಲ್ಲಿ ಕೆಲವಾರು ಅಡ್ಡಪರಿಣಾಮಗಳಿದ್ದು ನಿಮ್ಮ ಸಂಬಂಧದಲ್ಲಿ ಹಾಗೂ ಮನಃಶಾಂತಿಯನ್ನು ಕದಡಬಹುದು. ಅಷ್ಟೇ ಅಲ್ಲ, ಕ್ಷುಲ್ಲುಕ ಕಾರಣವೊಂದೇ ನಿಮ್ಮ ವರ್ಷಗಳ ಗಾಢ ಸಂಬಂಧದ ನಡುವೆ ಹುಳಿ ಹಿಂಡಲೂ ಸಾಧ್ಯವಿದೆ. ಬನ್ನಿ, ತಜ್ಞರು ಏಕೆ ಹೀಗೆ ಹೇಳುತ್ತಿದ್ದಾರೆ ಎಂಬುದನ್ನು ನೋಡೋಣ...

  ನಿಮಗೆ ಅರ್ಥವೇ ಇಲ್ಲದ ತಲೆಬಿಸಿಗಳು ಎದುರಾಗಬಹುದು

  ನಿಮಗೆ ಅರ್ಥವೇ ಇಲ್ಲದ ತಲೆಬಿಸಿಗಳು ಎದುರಾಗಬಹುದು

  ಉದಾಹಾರಣೆಗೆ ನಿಮ್ಮ ಸಂಗಾತಿ ಬೇರೆ ಸುಂದಯ ಯುವತಿಯರ ಚಿತ್ರಗಳಿಗೆ ಲೈಕ್ ಕ್ಲಿಕ್ ಮಾಡಿ ತನ್ನ ಇಷ್ಟಗಳನ್ನು ವ್ಯಕ್ತಪಡಿಸಿರಬಹುರು. ಆದರೆ ಯಾವುದೇ ಯುವತಿ ತಾನು ಮೆಚ್ಚಿದ ಪುರುಷ ಬೇರೆ ಯುವತಿಯರನ್ನು ಮೆಚ್ಚುವುದನ್ನು ಸರ್ವಥಾ ಇಷ್ಟಪಡುವುದಿಲ್ಲ. ಹೆಚ್ಚಿನವರು ಇದನ್ನು ನೇರವಾಗಿ ತೋರ್ಪಡಿಸಿಕೊಳ್ಳದೇ ಇದ್ದರೂ ಮನಸ್ಸಿನಾಳದಲ್ಲಿ ಈ ಭಾವನೆ ಇದ್ದೇ ಇರುತ್ತದೆ.

  ನಿಮಗೆ ಅರ್ಥವೇ ಇಲ್ಲದ ತಲೆಬಿಸಿಗಳು ಎದುರಾಗಬಹುದು

  ನಿಮಗೆ ಅರ್ಥವೇ ಇಲ್ಲದ ತಲೆಬಿಸಿಗಳು ಎದುರಾಗಬಹುದು

  ಒಂದು ವೇಳೆ ನಿಮ್ಮ ಸಂಗಾತಿ ಬೇರೆ ಮಹಿಳೆಯರೊಂದಿಗೆ ಮಾತುಕತೆ ಪ್ರಾರಂಭಿಸಿರುವುದನ್ನು ನೀವು ಸಾಮಾಜಿಕ ತಾಣದಲ್ಲಿ ಗಮನಿಸಿದರೆ ಅಥವಾ ಬೇರೆ ಮಹಿಳೆಯರ ಬಗ್ಗೆ ತನ್ನ ಅನಿಸಿಕೆಗಳನ್ನು ವ್ಯಕ್ತ್ಯಪಡಿಸತೊಡಗಿದರೆ ಇದಕ್ಕೆ ಕಾರಣವೇನೇ ಇದ್ದರೂ ನಿಮಗೆ ಕೆಲವು ಘಂಟೆಗಳ ಕಾಲವಾದರೂ ಮನಃಶಾಂತಿ ಕದಡಲು ಸಾಕಾಗುತ್ತದೆ. ಆದ್ದರಿಂದ ನಿಮ್ಮ ಸ್ನೇಹಿತರ ಪಟ್ಟಿಯಿಂದ ನಿಮ್ಮ ಸಂಗಾತಿಯನ್ನು ಹೊರಗಿಡುವುದೇ ಕ್ಷೇಮ.

  ನಿಮ್ಮ ಮನಸ್ಸು ವ್ಯತಿರಿಕ್ತವಾಗಿ ಯೋಚಿಸಬಹುದು

  ನಿಮ್ಮ ಮನಸ್ಸು ವ್ಯತಿರಿಕ್ತವಾಗಿ ಯೋಚಿಸಬಹುದು

  ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಇಂದಿನ ದಿನಗಳಲ್ಲಿ ಈ ಸಾಮಾಜಿಕ ತಾಣಗಳಿಂದಾಗಿಯೇ ಹೆಚ್ಚು ಹೆಚ್ಚಾಗಿ ಸಂಬಂಧಗಳಲ್ಲಿ ಬಿರುಕು ಮೂಡುತ್ತಿದೆ. ಹೌದು, ಸಾಮಾಜಿಕ ತಾಣದಲ್ಲಿ ತನ್ನ ಸಂಗಾತಿ ಅಥವಾ ಸಂಗಾತಿಯಾಗುವವ/ಳು ಏನು ಮಾಡುತ್ತಿದ್ದಾರೆ ಎಂಬುದನ್ನು ಸತತವಾಗಿ ಹಿಂಬಾಲಿಸುವ, ತನ್ನ ಬೆನ್ನ ಹಿಂದೆ ಅವರ ಚಟುವಟಿಕೆಗಳು ಏನಿರುತ್ತವೆ ಎಂಬ ಅನುಮಾನದ ಭೂತ ಹೊಕ್ಕು ನಿಧಾನವಾಗಿ ಸಂಬಂಧಗಳು ಹಳಸುತ್ತಾ, ಈ ಬಗ್ಗೆ ನಡೆಸುವ ವಿಚಾರಣೆಗಳು ಈ ಹಳಸುವಿಕೆಗೆ ಇನ್ನಷ್ಟು ಹುಳಿಯನ್ನು ಹಿಂಡಬಹುದು.

  ನಿಮ್ಮ ಖಾಸಗಿತನ ಹಾಗೂ ಅವರ ಖಾಸಗಿತನಕ್ಕೆ ಆದ್ಯತೆ ನೀಡಿ

  ನಿಮ್ಮ ಖಾಸಗಿತನ ಹಾಗೂ ಅವರ ಖಾಸಗಿತನಕ್ಕೆ ಆದ್ಯತೆ ನೀಡಿ

  ನಿಮ್ಮ ಗೆಳೆಯರ ವಲಯದಲ್ಲಿ ನಿಮ್ಮ ಸಂಗಾತಿಯನ್ನು ಸೇರಿಸದೇ ಇರುವ ಮೂಲಕ ಅವರ ಅತ್ಯಂತ ಖಾಸಗಿ ಜೀವನದಲ್ಲಿ ನುಸುಳದಿರಲು ಹಾಗೂ ನಿಮ್ಮ ಖಾಸಗಿ ಸಮಯದಲ್ಲಿ ಅವರಿಗೆ ಮೂಗು ತೂರಿಸಲು ಅವಕಾಶ ನೀಡದಿರುವ ಮೂಲಕ ಇಬ್ಬರೂ ತಮ್ಮ ತಮ್ಮ ಖಾಸಗಿ ಸಮಯಗಳನ್ನು ಅನುಭವಿಸಲು ಸಾಧ್ಯ. ವಾಸ್ತವವಾಗಿ ಯಾವಾಗ ಈ ವಲಯದಲ್ಲಿ ನಿಮ್ಮ ಸಂಗಾತಿ ಸೇರಿಸಲ್ಪಡುತ್ತಾರೋ, ಆಗಲೇ ಇಬ್ಬರಿಗೂ ಖಾಸಗಿ ಸಮಯವೆಂಬುದೇ ಇರುವುದಿಲ್ಲ, ನಿಮಗೆ ಮಾತ್ರವಲ್ಲ, ಗುಂಪಿನಲ್ಲಿರುವ ಇತರರೂ ನಿಮ್ಮ ಖಾಸಗಿ ಸಮಯವನ್ನು ಕೆದಕಬಹುದು.

  ನಿಮ್ಮ ಚಿತ್ರ ಕೊಂಚ ಉದ್ರೇಕಕಾರಿಯಾಗಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ

  ನಿಮ್ಮ ಚಿತ್ರ ಕೊಂಚ ಉದ್ರೇಕಕಾರಿಯಾಗಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ

  ಪ್ರತಿ ಯುವತಿಗೂ ತಾನು ಅತಿ ಸುಂದರಳಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಇರುತ್ತದೆ. ಇದಕ್ಕಾಗಿ ಕೊಂಚ ಭಿನ್ನ ವಿನ್ಯಾಸ ಅಥವಾ ಉಡುಗೆಯನ್ನು ತೊಟ್ಟು ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸಬಹುದು. ಇತರ ಸ್ನೇಹಿತರು ಇದನ್ನು ಮೆಚ್ಚುಗೆಯ ರೂಪದಲ್ಲಿ ಸ್ವೀಕರಿಸಿದರೂ ನಿಮ್ಮ ಸಂಗಾತಿ ಇದನ್ನು ಸ್ವೀಕರಿಸಲಾರರು. ಆದ್ದರಿಂದ ನಿಮ್ಮ ಸ್ನೇಹಿತವಲಯದಲ್ಲಿ ಸಂಗಾತಿ ಇಲ್ಲದಿದ್ದರೆ ನಿಮಗೂ ನಿರಾಳ.

  ಆತ ಯಾವಾಗ ಆನ್ಲೈನ್ ಇರುತ್ತಾನೆಂದು ನಿಮಗೆ ತಿಳಿಯಲಾರದು

  ಆತ ಯಾವಾಗ ಆನ್ಲೈನ್ ಇರುತ್ತಾನೆಂದು ನಿಮಗೆ ತಿಳಿಯಲಾರದು

  ನಿಮ್ಮ ಸಂಗಾತಿ ಯಾವಾಗ ಆನ್ಲೈನ್ ಇರುತ್ತಾರೆ, ಯಾವಾಗ ಇರುವುದಿಲ್ಲ ಎಂಬ ಸಂಗತಿಯನ್ನು ಕೆದಕುವುದೇ ಮೊದಲಾಗಿ ನಿಮ್ಮ ಮನಃಶಾಂತಿಯನ್ನು ಕೆಡಿಸಬಹುದು. ಕೆಲವೊಮ್ಮೆ ರಾತ್ರಿ ತಡವಾಗಿ ಆನ್ಲೈನ್ ಇದ್ದರೆ ಈತ ಇಷ್ಟು ಹೊತ್ತಿನಲ್ಲಿ ಏಕೆ ಆನ್ಲೈನ್ ಇದ್ದಾನೆ? ಯಾರೊಂದಿಗೆ ಇಡಿಯ ರಾತ್ರಿ ಚಾಟ್ ಮಾಡುತ್ತಿರುತ್ತಾನೆ ಎಂಬೆಲ್ಲಾ ನಿರರ್ಥಕ ಯೋಚನೆಗಳು ನಿಮ್ಮ ನಿದ್ದೆಯನ್ನು ಕೆಡಿಸಬಹುದು. ಒಂದು ವೇಳೆ ಆತ ನಿಮ್ಮ ವಯಲದಲ್ಲಿ ಇಲ್ಲದಿದ್ದರೆ ಆತನ ತೀರಾ ವೈಯಕ್ತಿಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ.

  ಜೀವನದಲ್ಲಿ ಶಾಂತಿ ತುಂಬಿರುತ್ತದೆ

  ಜೀವನದಲ್ಲಿ ಶಾಂತಿ ತುಂಬಿರುತ್ತದೆ

  ಯಾವುದೇ ಸಂಬಂಧ ಗಟ್ಟಿಗೊಳ್ಳಲು ಪರಸ್ಪರ ವಿಶ್ವಾಸ ಹಾಗೂ ಬದ್ದತೆಯೇ ಅಗತ್ಯ. ತನ್ನ ಸಂಗಾತಿ ತನಗೆ ಬದ್ದನಾಗಿದ್ದಾನೆ ಎಂದು ಖಚಿತವಾದರೆ ಆತನ ಮೇಲೆ ಗೂಢಾಚಾರಿಕೆ ಮಾಡುವ ಅಗತ್ಯವೇ ಇಲ್ಲ. ಆದರೆ ಸ್ನೇಹಿತವಲಯದಲ್ಲಿದ್ದಾಗ ಆತನ ಯಾವುದೇ ಚಟುವಟಿಕೆಗಳನ್ನು ಇಣುಕಿ ನೋಡುವ ಅವಕಾಶ ಇದ್ದೇ ಇರುವ ಕಾರಣ ಯಾವುದೋ ಒಂದು ಚಟುವಟಿಕೆ ಅನುಮಾನಾಸ್ಪದವಾಗಿ ಮೂಡಿ ಬಂದು ಇದನ್ನು ಕೆದಕುವ ಪ್ರಯತ್ನ ಅಶಾಂತಿಯ ಬೀಜವನ್ನು ಬಿತ್ತಬಹುದು. ಒಂದು ವೇಳೆ ನಿಮ್ಮ ಸಂಗಾತಿಯ ಮೇಲೆ ನಿಮಗೆ ನಂಬಿಕೆ ಇದ್ದರೆ ಆತನೊಂದಿಗೆ ನೇರವಾಗಿ ಮಾತನಾಡಿ ಅನುಮಾನಗಳನ್ನು ಪರಿಹರಿಸಿಕೊಳ್ಳುವುದೇ ಉತ್ತಮ. ನಿಮ್ಮ ನಡುವೆ ಈ ಸಾಮಾಜಿಕ ತಾಣದ ಹುಳಿ ಬೇಡವೇ ಬೇಡ.

  English summary

  Why It Is Better Not To Follow Your Partner On Facebook

  Today, almost everyone is on Facebook. So, even your partner is also on Facebook. So, would you like to send him a friend request in order to add him? Well, it is not advisable to add your partner on social media platforms. It has certain side effects that might impact your relationship and peace of mind too. Are you wondering how such a small step could hamper the quality of your rock-solid relationship?Well, then you must read the reasons given below.
  Story first published: Monday, July 24, 2017, 23:37 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more