Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಕಿಸ್ ಕೊಡುವಾಗ ತಲೆ ಬಲಕ್ಕೆ ತಿರುಗುವುದು ಯಾಕೆ?
ನಿಮ್ಮ ಸಂಗಾತಿಗೆ ಮುತ್ತಿಕ್ಕಲು ಹೋಗುವಾಗ ನಿಮ್ಮ ತಲೆ ಬಲದ ಬದಿಗೆ ತಿರುಗುವುದು ಎನ್ನುವುದನ್ನು ಯಾವತ್ತಾದರೂ ಗಮನಿಸಿದ್ದೀರಾ? ನೀವು ಹೇಗೆ ಗಮನಿಸಲು ಸಾಧ್ಯ. ನೀವು ಮುತ್ತಿನ ಮತ್ತಿನಲ್ಲಿ ಕಳೆದುಹೋಗಿರುತ್ತೀರಿ. ಆದರೆ ಸಂಗಾತಿಗೆ ಮುತ್ತು ನೀಡಲು ಹೋದಾಗ ತಲೆಯು ಬದಲ ಬದಿಗೆ ತಿರುಗುವುದು ಎನ್ನುವುದು ಖಚಿತ.
ಇನ್ನೊಮ್ಮೆ ಕಿಸ್ ನೀಡುವಾಗ ನೀವು ಇದನ್ನು ಪರೀಕ್ಷಿಸಿಕೊಳ್ಳಿ. ಆದರೆ ತಲೆಯು ಬಲದ ಬದಿಗೆ ತಿರುಗುವುದಕ್ಕೆ ವೈಜ್ಞಾನಿಕ ಮತ್ತು ನರವಿಜ್ಞಾನದ ಪ್ರಕಾರ ಕೆಲವೊಂದು ಕಾರಣಗಳು ಕೂಡ ಇದೆ. ನೀವು ಬಲಕ್ಕೆ ತಿರುಗಿದಾಗ ನಿಮ್ಮ ಸಂಗಾತಿ ಕೂಡ ತುಟಿ ತಲುಪಲು ಬಲದ ಬದಿಗೆ ತಿರುಗಬೇಕಾಗುತ್ತದೆ. ಸಂಗಾತಿಯಂತೆ ನಾವು ಕೂಡ ಮಾಡಲು ಬಯಸುವ ಕಾರಣದಿಂದ ಹೀಗೆ ಆಗುತ್ತದೆ ಎಂದು ವಿಜ್ಞಾನವು ಹೇಳುತ್ತದೆ. ಆದರೆ ಇದಕ್ಕೆ ಇನ್ನು ಹಲವಾರು ಕಾರಣಗಳು ಇವೆ. ಅದು ಯಾವುದೆಂದು ತಿಳಿಯಿರಿ....

ಅಧ್ಯಯನಗಳು ಏನು ಹೇಳುತ್ತವೆ
ಹೆಚ್ಚಾಗಿ ಮಹಿಳೆಯರಿಗಿಂತ ಮೊದಲು ಪುರುಷರು ಕಿಸ್ ನೀಡಲು ಮುಂದಾಗುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ಹೀಗೆ ಮಾಡುವಾಗ ಅವರು ತಮ್ಮ ತಲೆಯನ್ನು ಬಲಕ್ಕೆ ತಿರುಗಿಸುವರು. ಇದು ನಮಗೆ ಗೊತ್ತಿಲ್ಲದಂತೆ ನಡೆಯುವಂತೆ ಕ್ರಿಯೆ ಯಾಗಿದೆ. ಆರಂಭದಿಂದ.... ಹಿಂದಿನಿಂದಲೂ ಮನುಷ್ಯರು ಬಲಗೆ ತಿರುಗುವಂತಹ ಸ್ವಭಾವ ಬೆಳೆಸಿಕೊಂಡು ಬಂದಿದ್ದಾರೆ. ಗರ್ಭದಲ್ಲಿರುವ ಭ್ರೂಣದ ತಲೆ ಕೂಡ ಬಲದ ಬದಿಗೆ ತಿರುಗುವುದು. ಬೆಳೆದಂತೆ ನಾವು ಕೂಡ ಯಾವುದೇ ಕ್ರಿಯೆಗಳಿಗೆ ಬಲದ ಕೈ ಅಥವಾ ಬಲದ ಕಾಲನ್ನು ಮೊದಲು ಮುಂದೆ ತರುತ್ತೇವೆ.

ಬೇರೂರಿರುವ ಸ್ವಭಾವಗಳು
ಕೆಲವೊಂದು ಸ್ವಭಾವಗಳು ನಮ್ಮಲ್ಲಿ ಆಳವಾಗಿ ಬೇರೂರಿದೆ. ಇದನ್ನು ನಾವು ಜೀವಮಾನವಿಡಿ ಮುಂದುವರಿಸಿಕೊಂಡು ಹೋಗುತ್ತೇವೆ. ನಮ್ಮ ಮಧ್ಯ ಪ್ರವೇಶವಿಲ್ಲದೆ ನಡೆಯುವಂತಹ ಇಂತಹ ನೈಸರ್ಗಿಕ ಚಟುವಟಿಕೆಗಳನ್ನು ನಾವು ಪ್ರಶ್ನಿಸಲು ಹೋಗುವುದಿಲ್ಲ.

ಅಧ್ಯಯನಗಳು
ಅಧ್ಯಯನದ ಪ್ರಕಾರ ಕೆಲವು ದಂಪತಿಗೆ ಖಾಸಗಿಯಾಗಿ ಕಿಸ್ ಮಾಡಲು ಸೂಚಿಸಲಾಯಿತು. ಅಚ್ಚರಿಯ ವಿಷಯವೆಂದರೆ ಇದರಲ್ಲಿ ಎಲ್ಲಾ ಜೋಡಿಯು ತಮ್ಮ ತಲೆಯನ್ನು ಬಲ ಭಾಗಕ್ಕೆ ತಿರುಗಿಸುವ ಮೂಲಕ ಕಿಸ್ ನೀಡಿದರು. ಕಿಸ್ ನೀಡುವವರು ಹಾಗೂ ಪಡೆಯುವವರು ಮರು ಯೋಚಿಸದೆ ತಲೆಯನ್ನು ಬಲಕ್ಕೆ ತಿರುಗಿಸಿದ್ದರು.

ಆರಂಭಿಕರ ಕ್ರಮ
ಕಿಸ್ ನೀಡಲು ಮುಂದಾಗುವ ವ್ಯಕ್ತಿಯು ತಲೆಯನ್ನು ಬಲ ಭಾಗಕ್ಕೆ ತಿರುಗಿಸಲು ಮುಂದಾದಾಗ ಪಡೆಯುವಂತಹ ವ್ಯಕ್ತಿ ಕೂಡ ತಲೆಯನ್ನು ಬಲ ಭಾಗಕ್ಕೆ ತಿರುಗಿಸುತ್ತಾನೆ.

ಮೆದುಳಿನ ಚಟುವಟಿಕೆ
ಇದು ನೋಡಲು ನಮಗೆ ತುಂಬಾ ಸರಳು ಚಟುವಟಿಕೆಯೆಂದು ಅನಿಸಬಹುದು. ಆದರೆ ಇದರಲ್ಲಿ ಹಲವಾರು ರೀತಿಯ ಮೆದುಳಿನ ಚಟುವಟಿಕೆಗಳು ಒಳಗೊಂಡಿದೆ.

ಹಾರ್ಮೋನುಗಳು
ಟೆಸ್ಟೋಸ್ಟೆರಾನ್ ಮತ್ತು ಡೋಪಿನ್ ನಂತಹ ಹಾರ್ಮೋನುಗಳು ಈ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅಧ್ಯಯನಗಳು ಹೇಳಿವೆ. ಆದರೆ ಯಾವಾಗಲೂ ಎಡಗೈಯಲ್ಲಿ ಕೆಲಸ ಮಾಡುವವರು ಈ ಸಂದರ್ಭದಲ್ಲಿ ಎಡ ಬದಿಗೆ ತಿರುಗಬಹುದು.



Click it and Unblock the Notifications
