ಪ್ರೀತಿಯಲ್ಲಿ ಬಿದ್ದಿದ್ದರೆ ನಿಮಗೂ ಕೂಡ ಇಂತಹ ಭಾವನೆಯಾಗಿರಬಹುದು!

Posted By: Lekhaka
Subscribe to Boldsky

ಯಾಕೋ ಗೊತ್ತಿಲ್ಲ ಆ ಹುಡುಗನನ್ನು ನೋಡಿದ ಬಳಿಕ ನನಗೆ ಸರಿಯಾಗಿ ನಿದ್ರೆಯೇ ಬರುತ್ತಿಲ್ಲ. ಮನಸ್ಸಿನಲ್ಲಿ ಏನೋ ಒಂಥರಾ ಭಾವನೆ. ಬಾಲಿವುಡ್ ನಲ್ಲಿ ನಟನಟಿಯರು ಹಾಡಿಗೆ ಕುಣಿದಂತೆ ನಾನು ಕೂಡ ಕುಣಿದು ತೇಲಾಡುತ್ತಿರುವಂತೆ ಆಗುತ್ತದೆ. ಮೊದಲ ಸಲದ ಪ್ರೀತಿ ಇದು ಎಂದು ಖಚಿತವಾಗಿ ಹೇಳಬಹುದು. ಹೌದು, ಪ್ರತಿಯೊಬ್ಬ ಹುಡುಗಿ ಕೂಡ ತಾನು ನೋಡಿದಂತೆ ಸಿನಿಮಾಗಳಂತೆ ತನ್ನ ಪ್ರೀತಿಯು ಆಗಬೇಕು ಎಂದು ಬಯಸುತ್ತಾಳೆ. ಆಕೆಗೆ ಆತನ ಕನಸು ಬೀಳುತ್ತಾ ಇರುತ್ತದೆ. ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ. ಹಗಲಿನಲ್ಲೇ ಕನಸು ಕಾಣಲು ಆರಂಭಿಸುತ್ತಾರೆ ಮತ್ತು ಸಹೋದ್ಯೋಗಿಗಳು ನೋಡಿ ತಮಾಷೆ ಮಾಡಬಹುದು.

ಅಧ್ಯಯನಗಳ ಪ್ರಕಾರ ಪ್ರೀತಿಯ ಅಮಲು ಎನ್ನುವುದು ಕೋಕೇನ್ ಚಟದಿಂದ ಮೆದುಳಿನ ಮೇಲೆ ಬೀರುವ ಪರಿಣಾಮದಷ್ಟೇ ಪ್ರಭಾವಶಾಲಿಯಾಗಿರುವುದು. ಪ್ರೀತಿಯಲ್ಲಿ ಬಿದ್ದಾಗ ದೇಹದಲ್ಲಿ ಕೂಡ ಹಲವಾರು ರೀತಿಯ ಬದಲಾವಣೆಗಳು ಆಗುವುದು. ದೇಹದಲ್ಲಿ ಆಕ್ಸಿಟಾಸಿನ್ ಎನ್ನುವ ಸಂತಸದ ಹಾರ್ಮೋನು, ಅಂಡ್ರೆನಲೈನ್ ಎನ್ನುವ ಉತ್ಸಾಹ ಮತ್ತು ವಸ್ಪೊರೆಸ್ಸಿನ್ ಎನ್ನುವ ಟೆರಿಟೋರಿಯನ್ ಹಾರ್ಮೋನ್ ನ್ನು ಬಿಡುಗಡೆ ಮಾಡುವುದು. ಇವೆಲ್ಲವೂ ಪ್ರೀತಿಯ ಭಾವನೆಯ ಮಿಶ್ರಣವಾಗಿದೆ. ಹುಡುಗಿಯರು ಪ್ರೀತಿಯಲ್ಲಿ ಬಿದ್ದಾಗ ಅವರ ಜಗತ್ತೇ ಬದಲಾಗಿ ಬಿಡುವುದು. ಅವರು ತಮ್ಮೊಳಗೆ ಕೂಡ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುವರು. ತಮ್ಮ ಸಂಗಾತಿ ಬಗ್ಗೆ ಭಾವಿಸುವಂತಹ ಹಲವಾರು ರೀತಿಯ ಭಾವನೆಗಳೇ ಇದಕ್ಕೆ ಕಾರಣವಾಗಿದೆ.

ಪ್ರೀತಿಯಲ್ಲಿ ಬಿದ್ದಿದ್ದರೆ ನಿಮಗೆ ಕೂಡ ಇಂತಹ ಭಾವನೆಯಾಗಿರಬಹುದು ಮತ್ತು ಹಿಂದಿನ ವ್ಯಕ್ತಿಯೇ ನೀವಾಗಿದ್ದೀರಾ ಎನ್ನುವುದು ತಿಳಿಯುವುದು. ನಿಮ್ಮ ಜೀವನದಲ್ಲಿ ವಿಶೇಷವಾಗಿರುವ ವ್ಯಕ್ತಿಯು ಪ್ರವೇಶಿಸುವಾಗ ಬದಲಾವಣೆಗಳು ಸಹಜ. ಇದರ ಬಗ್ಗೆ ಚಿಂತೆ ಮಾಡಬೇಕಿಲ್ಲ. ಪ್ರೀತಿಸುವವರಲ್ಲಿ ಕೆಲವೊಂದು ಬದಲಾವಣೆಗಳು ಸಹಜ. ನೀವು ಮೊದಲು ಇಷ್ಟಪಡುತ್ತಿದ್ದ ನಾಟಕೀಯ ಸಿನಿಮಾಗಳ ಬದಲಿಗೆ ರೋಮ್ಯಾಂಟಿಕ್ ಆಗಿರುವ ಸಿನೆಮಾ ನೋಡಬಹುದು. ತಡರಾತ್ರಿ ತನಕ ಮಲಗದೇ ಇರುವುದು ನಿಮಗೆ ಅಭ್ಯಾಸವಾಗಬಹುದು. ತುಂಬಾ ಸುಸ್ತಾಗಿದ್ದರೂ ದೂರ ಪ್ರಯಾಣ ಮಾಡುವುದು ಇಷ್ಟವಾಗಬಹುದು.

ನಿಮ್ಮ ಸಂಗಾತಿಗೆ ಅನುಗುಣವಾಗಿ ನೀವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಹೋಗುತ್ತೀರಿ. ಸಂಬಂಧವೆಂದರೆ ಅರ್ಥಮಾಡಿಕೊಳ್ಳುವುದು ಮತ್ತು ಹೊಂದಾಣಿಕೆ ಮಾಡಿಕೊಳ್ಳುವುದು. ಆದರೆ ಇದೆಲ್ಲವೂ ನಿಮ್ಮನ್ನು ವಾಸ್ತವಿಕ ಜಗತ್ತಿನ ದೂರು ಕೊಂಡುಹೋಗುವುದಿಲ್ಲ. ನೀವು ಪ್ರತಿಯೊಂದು ಕ್ಷಣ ಕೂಡ ನಿಮ್ಮ ಸಂಗಾತಿಯ ಜತೆಗೆ ಇದ್ದೀರಿ ಎನ್ನುವಂತೆ ಭಾವಿಸುವಿರಿ. ಇದೆಲ್ಲವೂ ನಮ್ಮ ಭಾವನಾತ್ಮಕ ಮೆದುಳಿನ ಪರಿಣಾಮ. ಈ ಲೇಖನದಲ್ಲಿ ಕೊಟ್ಟಿರುವಂತಹ ಬದಲಾವಣೆಗಳು ನಿಮ್ಮಲ್ಲಿ ಆಗುತ್ತಿದೆ ಎಂದಾದರೆ ಆಗ ನೀವು ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂದರ್ಥ ಮಾಡಿಕೊಳ್ಳಿ.

ರೋಮ್ಯಾಂಟಿಕ್ ಸಂಗೀತ ಕೇಳುವುದು

ರೋಮ್ಯಾಂಟಿಕ್ ಸಂಗೀತ ಕೇಳುವುದು

ಪ್ರೀತಿಯಲ್ಲಿ ಬಿದ್ದವರು ಯಾವಾಗಲೂ ರೋಮ್ಯಾಂಟಿಕ್ ಆಗಿರುವ ಹಾಡು ಕೇಳುವುದು ಯಾಕೆಂದು ನಿಮಗೆ ಗೊತ್ತಾ? ಯಾಕೆಂದರೆ ನಿಮ್ಮ ಸ್ಥಿತಿ ಮತ್ತು ಈ ಹಾಡಿಗೆ ಸರಿಯಾಗಿ ಹೊಂದಿಕೊಳ್ಳುತ್ತಿರುವುದು. ಇದರಿಂದ ಪ್ರೀತಿಸುವವರು ರೋಮ್ಯಾಂಟಿಕ್ ಹಾಡುಗಳನ್ನು ಹೆಚ್ಚಾಗಿ ಕೇಳುವರು.

ಹಗಲುಗನಸು

ಹಗಲುಗನಸು

ಇದು ಪ್ರೀತಿಯ ಮತ್ತೊಂದು ಅಡ್ಡಪರಿಣಾಮವಾಗಿದೆ. ನೀವು ಹೆಚ್ಚಾಗಿ ಕೆಲಸದ ಕಡೆ ಗಮನವಹಿಸುತ್ತಿರುವ ವ್ಯಕ್ತಿಯಾದರೂ ನಿಮ್ಮ ಹುಡುಗನ ಬಗ್ಗೆ ಹಗಲುಗನಸು ಕಾಣುತ್ತಾ ಇರುತ್ತೀರಿ. ಯಾಕೆಂದರೆ ಆ ವ್ಯಕ್ತಿ ಬಗ್ಗೆ ಯಾವಾಗಲೂ ಚಿಂತಿಸುತ್ತಾ ಇರುತ್ತೀರಿ. ಇದರಿಂದ ಆತನ ಕನಸು ಕಾಣುವುದು ಸಹಜ.

ಸಾಮಾಜಿಕ ಜಾಲತಾಣ ಅಥವಾ ಸ್ನೇಹಿತರನ್ನು ಕಡೆಗಣಿಸುವುದು

ಸಾಮಾಜಿಕ ಜಾಲತಾಣ ಅಥವಾ ಸ್ನೇಹಿತರನ್ನು ಕಡೆಗಣಿಸುವುದು

ನೀವು ಯಾವಾಗಲೂ ಸ್ನೇಹಿತೆಯರೊಂದಿಗೆ ಸುತ್ತುತ್ತಾ ಇರುವವರು. ಆದರೆ ಈಗ ನೀವು ಹೆಚ್ಚಿನ ಸಮಯವನ್ನು ನಿಮ್ಮ ಸಂಗಾತಿ ಜತೆಗೆ ಏಕಾಂಗಿಯಾಗಿ ಕಳೆಯಲು ಬಯಸುವಿರಿ. ಸ್ನೇಹಿತೆಯರ ಬಳಗದಲ್ಲಿ ನೀವು ಯಾವಾಗಲೂ ಹೊರಗಡೆ ಹೋಗುವಂತಹ ಯೋಜನೆಗಳನ್ನು ಹಾಕಿಕೊಳ್ಳುವವರಾದರೆ ಅವರಿಗೆ ನಿಮ್ಮ ಅನುಪಸ್ಥಿತಿ ಖಂಡಿತವಾಗಿಯೂ ಕಾಡಲಿದೆ. ನಿಮ್ಮ ಪ್ರಿಯತಮನಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದೀರಿ ಎಂದು ಅವರು ಭಾವಿಸುವರು.

ಅತಿಯಾದ ಸ್ವಾಮ್ಯತೆ

ಅತಿಯಾದ ಸ್ವಾಮ್ಯತೆ

ನೀವು ಪ್ರೀತಿಸುವಂತಹ ಹುಡುಗ ಯಾವಾಗಲೂ ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಗಮನಹರಿಸಬೇಕೆಂದು ಬಯಸುತ್ತಾ ಇರುತ್ತೀರಿ.ನಿಮ್ಮ ಪ್ರಿಯತಮ ಬೇರೆ ಯಾರ ಬಗ್ಗೆಯೂ ಯೋಚಿಸಬಾರದು ಎನ್ನುವುದು ನಿಮ್ಮ ಆಲೋಚನೆ ಯಾಗಿರುವುದು. ಇದು ನಿಮಗೆ ಹೊಸ ಭಾವನೆಯಾಗಿರಬಹುದು. ಆದರೆ ಇದು ಒಂದು ಮಿತಿಯಲ್ಲಿ ಇದ್ದರೆ ಮಾತ್ರ ಒಳ್ಳೆಯದು.

ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ

ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ

ನೀವು ಯಾವಾಗಲೂ ಬ್ಯೂಟಿ ಪಾರ್ಲರ್ ಗೆ ಹೋಗುವವರಲ್ಲದೆ ಇದ್ದರೂ ಪ್ರೀತಿಯಲ್ಲಿ ಬಿದ್ದ ಬಳಿಕ ನೀವು ಪದೇ ಪದೇ ನಿಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೀರಿ. ನಿಮ್ಮ ಪ್ರಿಯತಮನ ಮುಂದೆ ಯಾವಾಗಲೂ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತೀರಿ. ಇದರಿಂದ ನಿಮ್ಮ ಪ್ರಿಯತಮ ತನ್ನ ಸ್ನೇಹಿತರನ್ನು ದೂರ ಮಾಡಿ ನಿಮ್ಮ ಹಿಂದೆ ತಿರುಗಬಹುದು. ಪ್ರತಿನಿತ್ಯ ನೀವು ಹೆಚ್ಚಿನ ಶ್ರಮ ವಹಿಸಿ ಮೇಕಪ್ ಮಾಡಿಕೊಂಡರೆ ಆಗ ಪ್ರಿಯತಮನು ತಾನು ವಿಶೇಷವೆಂದು ಭಾವಿಸುವನು.

ನಿಮ್ಮ ಸ್ವಭಾವ ಬದಲಾವಣೆ

ನಿಮ್ಮ ಸ್ವಭಾವ ಬದಲಾವಣೆ

ನೀವು ಯಾವಾಗಲೂ ಮನೆಯಲ್ಲೇ ಇರುವಂತಹ ಹುಡುಗಿಯಾಗಿದ್ದು, ನಿಮ್ಮ ಸಂಗಾತಿಗೆ ಸಾಹಸ ಕ್ರೀಡೆಗಳು ತುಂಬಾ ಇಷ್ಟವಾಗಿದ್ದರೆ ಆಗ ನೀವು ಆತನನ್ನು ಸಂತೋಷವಾಗಿರಿಸಲು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೀವು ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗಲು ಸ್ನೇಹಿತರಿಗೆ `ನೋ' ಎಂದಿದ್ದರೂ ಈಗ ಮಾತ್ರ ಹಾಗೆ ಹೇಳಲ್ಲ. ಯಾಕೆಂದರೆ ಪ್ರೀತಿ ಎಲ್ಲವನ್ನು ಬದಲಾಯಿಸಿ ಬಿಡತ್ತೆ ಕಣ್ರೀ.

ಉಡುಪುಗಳ ಬದಲಾವಣೆ

ಉಡುಪುಗಳ ಬದಲಾವಣೆ

ಹುಡುಗಿಯರು ಪ್ರೀತಿಯಲ್ಲಿ ಬಿದ್ದಾಗ ಅವರು ತುಂಬಾ ಗಂಭೀರವಾಗಿರುವರು ಮತ್ತು ಸಣ್ಣ ಸಣ್ಣ ವಿಷಯಗಳತ್ತ ಹೆಚ್ಚಿನ ಗಮನ ಹರಿಸುವರು. ನಿಮ್ಮ ಪ್ರಿಯತಮನಿಗೆ ತುಂಬಾ ಇಷ್ಟವಾಗುವಂತಹ ಉಡುಪಿನಲ್ಲಿ ಕಾಣಿಸಿಕೊಳ್ಳಲು ನೀವು ಬಯಸುವಿರಿ. ಇದಕ್ಕಾಗಿ ನೀವು ನಿಮ್ಮ ಬಟ್ಟೆಬರೆಗಳನ್ನು ಬದಲಾಯಿಸಿ ಬಿಡುತ್ತೀರಿ. ಆತನ ಸಣ್ಣ ಆಕರ್ಷಣೆಗಾಗಿ ನೀವು ದೊಡ್ಡ ಮಟ್ಟದ ಬದಲಾವಣೆ ಮಾಡಿ ದೀರ್ಘ ಕಾಲ ಸಂಬಂಧದ ಸೆಳೆತ ಉಳಿಸಿಕೊಳ್ಳುವಿರಿ.

ನಿಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಗಮನ

ನಿಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಗಮನ

ಒಂದು ಸಲ ಪ್ರೀತಿಯಲ್ಲಿ ಬಿದ್ದ ಬಳಿಕ ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೀರಿ ಮತ್ತು ಸಂಗಾತಿ ಮುಂದೆ ಹೆಚ್ಚು ಫಿಟ್ ಆಗಿ ಕಾಣಿಸಿಕೊಳ್ಳಲು ಬಯಸುವಿರಿ. ನಿಮ್ಮ ಆಹಾರ ಮತ್ತು ತೂಕದ ಬಗ್ಗೆ ಹೆಚ್ಚು ಗಮನಹರಿಸುತ್ತೀರಿ. ಪ್ರೀತಿಯಲ್ಲಿ ಬಿದ್ದಾಗ ಆಗುವಂತಹ ಕೆಲವೊಂದು ಬದಲಾವಣೆಗಳು ನಿಮಗೆ ತಿಳಿದೋ ಅಥವಾ ತಿಳಿಯದೆಯೋ ಆಗುತ್ತಾ ಇರುವುದು. ನೀವು ಹೇಗಿದ್ದಿರೋ ಹಾಗೆ ನಿಮ್ಮನ್ನು ಸಂಗಾತಿಯು ಪ್ರೀತಿಸುತ್ತಾನೆ ಮತ್ತು ಇದರ ಬಗ್ಗೆ ನೀವು ಏನೂ ಮಾಡುವಂತಿಲ್ಲ. ನಮಗಿಂತ ಹೆಚ್ಚಾಗಿ ಬೇರೆ ಜನರ ಬಗ್ಗೆ ಯೋಚಿಸುತ್ತಾ ಇದ್ದರೆ ಆಗ ಪ್ರಿಯತಮನ ಮುಂದೆ ಚೆನ್ನಾಗಿ ಕಾಣಿಸಿಕೊಳ್ಳಲು ಬಯಸುತ್ತೀರಿ. ನಿಮ್ಮ ಸಂಗಾತಿಗೆ ಇಷ್ಟವಿಲ್ಲದೆ ಇರುವುದನ್ನು ಮಾಡಲು ಹೋಗಬೇಡಿ. ನೀವು ಕೆಲವೊಂದು ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡಿದ್ದರೆ ಅದು ಪ್ರೀತಿಯ ಶಕ್ತಿ ಎಂದು ನಿಮ್ಮ ಅರಿವಿಗೆ ಬರುವುದು.

English summary

Why Do Girls Change Their Habits After They Fall In Love?

Falling in love is a wonderful feeling. You get a mixture of feelings every time you see your crush. Your heart beats faster, there are butterflies in your stomach and you are just not able to concentrate on the task at hand. Day dreaming episodes increase and your colleagues always find you lost in thoughts. But did you know that there is a scientific reason behind all these feelings?
Please Wait while comments are loading...
Subscribe Newsletter