ಕೆಲವರದು ಬಾಯಿ ಬಿಟ್ಟರೆ ಬೊಂಬಾಯಿ, ಮಾತು ನಿಲ್ಲಿಸುವುದೇ ಇಲ್ಲ!!

By: Deepak M
Subscribe to Boldsky

ಸಂಗಾತಿಯ ಹಿತವಾದ ನುಡಿಗಳನ್ನು ಕೇಳಿದಾಗ ಅದರಿಂದ ನೀವು ಒಳ್ಳೆಯ ಅನುಭವವನ್ನು ಪಡೆಯುತ್ತೀರಿ. ಅದರೆ ನಿಮ್ಮ ಸಂಗಾತಿ ಎಲ್ಲಾ ಸಮಯದಲ್ಲೂ ಹೆಚ್ಚು ಮಾತನಾಡುವ ಹವ್ಯಾಸವನ್ನು ಹೊಂದಿದ್ದರೆ ನಿಮಗೆ ಅವನು ಅಥವಾ ಅವಳು ಎಷ್ಟು ತಲೆ ತಿನ್ನುತ್ತಿದ್ದಾನೆ/ತಿನ್ನುತ್ತಿದ್ದಾಳೆ ಎಂದು ಅನಿಸುವುದು ಸಹಜ. ಅಲ್ಲದೆ ಸಂಗಾತಿ ನಿಮ್ಮ ಸ್ನೇಹಿತರೊಂದಿಗೂ ಸಹ ಗಂಟೆಗಳವರೆಗೆ ಮಾತನಾಡುತ್ತಿದ್ದರೆ ಅದು ನಿಮಗೆ ಮುಜುಗರ ಎನಿಸಬಹುದು. ಅಲ್ಲದೆ ಅವರು ನಿಮ್ಮ ಸಂಗಾತಿಯನ್ನು ತಲೆ ತಿನ್ನುವವನು/ತಿನ್ನುವಾಕೆ ಎಂದುಕೊಳ್ಳಬಹುದು ಜೊತೆಗೆ ಹಾಗೆಯೇ ಕರೆಯಲುಬಹುದು.

ಹೌದು, ಹೆಚ್ಚು ಮಾತನಾಡುವ ವ್ಯಕ್ತಿ ಬಹಳ ಬೇಗ ಬೇಸರವನ್ನು ತರಿಸಬಹುದು. ಅದರೆ ನಿಮ್ಮ ಸಂಗಾತಿ ನಿಜವಾಗಿಯೂ ಹೆಚ್ಚು ಮಾತನಾಡುವುದು ಇಷ್ಟಪಟ್ಟರೆ ಸರಿ ಹಾಗೆ ಅಂತ ನೀವು ಬಹಳ ಬೇಗ ತೀರ್ಮಾನಕ್ಕೆ ಬರಬೇಡಿ. ನಿಮ್ಮ ಸಂಗಾತಿ ಏಕೆ ಹೆಚ್ಚು ಮಾತನಾಡುತ್ತಾನೆ ಅಥವಾ ಮಾತನಾಡುತ್ತಾಳೆ ಎಂಬುದನ್ನು ವಿಶ್ಲೇಷಿಸಲು ಕೆಲವು ಮಾರ್ಗಗಳಿವೆ. ಅದನ್ನು ಈ ಕೆಳಗೆ ನೀಡಲಾಗಿದೆ ಅದನ್ನು ಒಮ್ಮೆ ಓದಿ....

ಮಾತಿಗೆ ಬ್ರೇಕೇ ಇಲ್ಲದಿರುವುದು!

ಮಾತಿಗೆ ಬ್ರೇಕೇ ಇಲ್ಲದಿರುವುದು!

ಕೆಲವು ಜನರು ಹೆಚ್ಚು ಮೌನವಾಗಿರಲು ಬಯಸುತ್ತಾರೆ. ಅದರೆ ಮತ್ತೆ ಕೆಲವರು ತಾವು ಯಾವುದೇ ಸ್ಥಳದಲ್ಲಿ ಇರಲಿ ಸದಾ ಮಾತನಾಡಲು ಇಷ್ಟುಪಡುತ್ತಾರೆ. ಅವರ ಮಾತುಗಳೆ ಅವರನ್ನು ಹೆಚ್ಚು ಶಕ್ತಿಯುತವಾಗಿ ಮತ್ತು ಸಂತೋಷದಾಯವಾಗಿರುವಂತೆ ಮಾಡುತ್ತದೆ. ಇಂತಹ ಬಹಿರ್ಮುಖಿಗಳು ಅಥವಾ ಹೆಚ್ಚು ಮಾತನಾಡುವ ವ್ಯಕ್ತಿಗಳು ಇತರರೊಂದಿಗೆ ಹೆಚ್ಚು ಕಾಲ ಸಂವಹನ ನಡೆಸಿದಾಗ ಮಾತ್ರ ಆಯಾಸಗೊಳ್ಳುತ್ತಾರೆ. ಆದ್ದರಿಂದ ನಿಮ್ಮ ಸಂಗಾತಿ ಹೆಚ್ಚು ಮಾತನಾಡಿದರೆ ಅವರು ತಮ್ಮಲ್ಲೆ ಬಬ್ಬರನೊಬ್ಬರು ಬಹಿಷ್ಕರಿಸುವ ಸಾಧ್ಯತೆ ಇರುತ್ತದೆ.

ನಿಮ್ಮ ಸಂಗಾತಿ ಬಬ್ಬ ನಾರ್ಸಿಸಿಸ್ಟ್!

ನಿಮ್ಮ ಸಂಗಾತಿ ಬಬ್ಬ ನಾರ್ಸಿಸಿಸ್ಟ್!

ನಿಮ್ಮ ಸಂಗಾತಿ ಹೆಚ್ಚಿನ ಸಮಯವನ್ನು ತಮ್ಮ ಬಗ್ಗೆಯೇ ಮಾತನಾಡವುದರಲ್ಲಿ ಕಳೆಯುತ್ತಿದ್ದರೆ ಅಂತಹವರನ್ನು ನಾರ್ಸಿಸಿಸ್ಟ್ ಎಂದು ಕರೆಯುತ್ತಾರೆ. ಕೆಲವು ಜನರು ತಮ್ಮನ್ನು ತಾವು ಇಡೀ ಬ್ರಹ್ಮಾಂಡದ ಕೇಂದ್ರಬಿಂದುವಾಗಿ ಬಿಂಬಿಸಿಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಹಾಗಾಗಿ ಅವರು ತಮ್ಮನ್ನು ಎಲ್ಲಾ ಸಂಭಾಷಣೆಯ ಸಮಯದಲ್ಲಿಯೂ ಮುಖ್ಯ ವಿಷಯವಾಗಿ ಮಾಡುತ್ತಾರೆ.

ಸಂಗಾತಿ ಬಬ್ಬ ಉತ್ತಮ ಮಾತುಗಾರ ಅಥವಾ ಮಾತುಗಾರ್ತಿಯಾಗಿರಬಹುದು

ಸಂಗಾತಿ ಬಬ್ಬ ಉತ್ತಮ ಮಾತುಗಾರ ಅಥವಾ ಮಾತುಗಾರ್ತಿಯಾಗಿರಬಹುದು

ಕೆಲವು ಜನರು ಉತ್ತಮ ಮಾತನಾಡುವ ಕಲೆಯನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಬಳ್ಳೆಯ ಪದಗಳು ಮತ್ತು ಸುಂದರವಾದ ವಾಕ್ಯಗಳನ್ನು ರಚಿಸಿ ಮಾತನಾಡುತ್ತಾರೆ. ಇಂತಹ ಜನರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಸರಾಸರಿ ಮಾತನಾಡುವ ಜನರಿಗಿಂತ ಹೆಚ್ಚು ಮಾತನಾಡುವಂತೆ ತೋರುತ್ತದೆ.

ಇದು ಅಸುರಕ್ಷತೆಯ ಭಾವನೆ ಇರಬಹುದು

ಇದು ಅಸುರಕ್ಷತೆಯ ಭಾವನೆ ಇರಬಹುದು

ಅಭದ್ರತೆ ಮತ್ತು ಅವ್ಯಕ್ತ ಭಯದಂತಹ ಗುಣವುಳ್ಳ ಜನರು ತಮ್ಮ ನಿಜವಾದ ಭಾವನೆಗಳನ್ನು ಮುಚ್ಚಿಟ್ಟುಕೊಂಡು ಅದು ತಿಳಿದರೆ ಅಡ್ಡಿಯಾಗುತ್ತದೆ ಎಂದು ತಿಳಿದು ಇತರರೊಂದಿಗೆ ಹೆಚ್ಚು ಮಾತನಾಡುತ್ತಾರೆ.

ಒತ್ತಡದ ಕಾರಣವಿರಬಹುದು

ಒತ್ತಡದ ಕಾರಣವಿರಬಹುದು

ಕೆಲವು ಜನರು ತಮ್ಮ ಸಮಸ್ಯೆಯನ್ನು ಕುರಿತು ಇತರರೊಂದಿಗೆ ನಿರಂತರವಾಗಿ ಮಾತನಾಡುವ ಮೂಲಕ ತಮ್ಮ ಒತ್ತಡವನ್ನು ಹೊರಹಾಕುವ ಪ್ರವೃತಿಯನ್ನು ಹೊಂದಿರುತ್ತಾರೆ. ಅದರೆ ಅವರು ಇದನ್ನು ತಾವು ಒತ್ತಡಕ್ಕೆ ಒಳಗಾಗಿದ್ದಾಗ ಮಾತ್ರ ಮಾಡುತ್ತಾರೆ.

ಅವರೊಂದಿಗೆ ಹೇಗೆ ವ್ಯವಹರಿಸುವುದು

ಅಷ್ಟಕ್ಕೂ ಇಷ್ಟೊಂದು ಮಾತು ಯಾಕೆ?

ಅಷ್ಟಕ್ಕೂ ಇಷ್ಟೊಂದು ಮಾತು ಯಾಕೆ?

ಮೊದಲಿಗೆ ನಿಮ್ಮ ಸಂಗಾತಿ ಏಕೆ ಹೆಚ್ಚು ಮಾತನಾಡುತ್ತಾರೆ ಎಂಬುದಕ್ಕೆ ಕಾರಣಗಳನ್ನು ಗುರುತಿಸಿ. ಅನಂತರ ನಿಮ್ಮ ಸಂಗಾತಿ ನಿಮ್ಮೊಂದಿಗೆ ಮಾತ್ರವೇ ಅಥವಾ ಇತರರೊಂದಿಗೂ ಈಗೆ ಮಾಡುತ್ತಾರೊ ಎಂಬುದನ್ನು ನೋಡಿ. ಒಂದು ವೇಳೆ ಅವರು ಪ್ರತಿಯೊಬ್ಬರೊಂದಿಗೂ ಹೆಚ್ಚು ಮಾತನಾಡುತ್ತಿದ್ದರೆ ಆಗ ಅವನಿಗೆ ಅಥವಾ ಅವಳಿಗೆ ಕೆಲವು ಥೆರಪಿಯ ಅಗತ್ಯತೆ ಇರುತ್ತದೆ. ನೀವು ನಿಮ್ಮ ಕೆಲಸದಲ್ಲಿ ನಿರತರಾಗಿದ್ದಾಗ ಯಾರಾದರೂ ಹೆಚ್ಚು ಮಾತನಾಡುತ್ತಿದ್ದರೆ ಆಗ ನೀವು ಅವರಿಗೆ ನಿನ್ನ ಮಾತುಗಳನ್ನು ಕೇಳಲು ನನಗೆ ಸಮಯವಿಲ್ಲ ಎಂದು ಯಾವಾಗ ಬೇಕಾದರೂ ಹೇಳಬಹುದು. ಅವರು ಮಾತನಾಡುವ ಆ ಸಮಯ ನಿಮಗೆ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ ಎಂದಾಗ ಅದನ್ನು ಬಹಿರಂಗವಾಗಿ ಅವರಿಗೆ ಹೇಳುವುದು ಒರಟುತನ ಎನ್ನಿಸುವುದಿಲ್ಲ.

English summary

When Your Partner Talks Too Much...

When you hear your partner's soothing words, you tend to feel good. But what if your partner has the habit of talking too much all the time? You would feel as if he or she is eating your head, right? Also if your partner keeps talking for hours together even with your friends, that would get a bit embarrassing too, right? They might label your partner as brain eater!
Story first published: Monday, July 10, 2017, 23:52 [IST]
Subscribe Newsletter