ಪ್ರಿಯತಮೆಗೆ ಹೆಚ್ಚು ಗೆಳೆಯರಿದ್ದರೆ ತಪ್ಪಿಲ್ಲ, ಆದರೆ ಸಂಶಯ ಮಾತ್ರ ಬೇಡ...

By Hemanth
Subscribe to Boldsky

ಪ್ರೀತಿಸುವವರ ಮನಸ್ಸು ಯಾವಾಗಲೂ ಮುಕ್ತವಾಗಿರಬೇಕು ಮತ್ತು ಅದರಲ್ಲಿ ಯಾವುದೇ ಕಪಟ ತುಂಬಿರಬಾರದು ಎನ್ನುವ ಮಾತಿದೆ. ಯಾಕೆಂದರೆ ಪ್ರೀತಿಯಲ್ಲಿ ಒಮ್ಮೆ ಸಂಶಯ ಬಂದರೆ ಅದರಿಂದ ಮೇಲೆ ಬರಲು ಸಾಧ್ಯವೇ ಆಗದು. ಪ್ರೀತಿಸುವವರು ಯಾವಾಗಲೂ ಅಸುರಕ್ಷತೆಯ ಭಾವನೆಯಿಂದ ಬಳಲುತ್ತಾ ಇರುತ್ತಾರೆ. ಯಾಕೆಂದರೆ ನಿಮ್ಮ ಪ್ರಿಯತಮೆ ಜತೆ ಯಾರಾದರೂ ತುಂಬಾ ಆತ್ಮೀಯವಾಗಿ ಮಾತನಾಡಿದರೆ ಅದರಿಂದ ನಿಮ್ಮಲ್ಲಿ ಅಸುರಕ್ಷಿತ ಭಾವನೆ ಕಾಡುವುದು.

ಯಾಕೆಂದರೆ ಇಂದಿನ ದಿನಗಳಲ್ಲಿ ಹುಡುಗಿಯರು ತುಂಬಾ ಆಧುನಿಕತೆ ಮೈಗೂಡಿಸಿಕೊಂಡಿರುತ್ತಾರೆ. ಅವರಿಗೆ ಪ್ರೀತಿ ಪ್ರೇಮದಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಾಗಿರುವುದಿಲ್ಲ. ಅವರಿಗೆ ಹಲವಾರು ಮಂದಿ ಗೆಳೆಯರು ಇರಬಹುದು. ಇದರಿಂದ ನಿಮ್ಮಲ್ಲಿ ಅಸುರಕ್ಷಿತ ಭಾವನೆ ಕಾಡಬಹುದು.

ಆದರೆ ಇದರ ಬಗ್ಗೆ ಮುಕ್ತವಾಗಿ ಮಾತನಾಡಿ ಆಕೆಯೊಂದಿಗಿನ ಸಂಬಂಧವನ್ನು ಅರ್ಥಮಾಡಿಕೊಂಡು ಮುಂದುವರಿಯಬೇಕು. ನಿಮ್ಮ ಸಂಗಾತಿಯು ಸಾಮಾಜಿಕವಾಗಿದ್ದರೆ ಅದರಿಂದ ಹೆಚ್ಚಿನ ಲಾಭವಿದೆ. ಆಕೆಯ ಸಾಮಾಜಿಕ ವೃತ್ತವು ಎಷ್ಟು ಸಣ್ಣದು ಮತ್ತು ದೊಡ್ಡದು ಎನ್ನುವ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬಾರದು.... ಮುಂದೆ ಓದಿ 

ಹುಡುಗಿಗೆ ಹಲವಾರು ಮಂದಿ ಗೆಳೆಯರು ಇದ್ದರೆ ಅದರ ಅರ್ಥವೇನು?

ಹುಡುಗಿಗೆ ಹಲವಾರು ಮಂದಿ ಗೆಳೆಯರು ಇದ್ದರೆ ಅದರ ಅರ್ಥವೇನು?

ಇದರಿಂದ ಆಕೆಗೆ ಪುರುಷರನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಹೆಚ್ಚು ಗೆಳೆಯರು ಇರುವಂತಹ ಮಹಿಳೆಯು, ಪುರುಷರು ಯಾವ ರೀತಿ ಚಿಂತಿಸುತ್ತಾರೆ ಮತ್ತು ಅವರ ವರ್ತನೆ ಹಾಗೂ ಮನಸ್ಸು ಹೇಗಿರುತ್ತದೆ ಎಂದು ತಿಳಿರುವರು. ಈ ಜ್ಞಾನದಿಂದ ಆಕೆ ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು.

ನೀವು ತುಂಬಾ ಸುರಕ್ಷಿತ!

ನೀವು ತುಂಬಾ ಸುರಕ್ಷಿತ!

ಆಕೆ ತುಂಬಾ ಪ್ರಾಮಾಣಿಕ ವ್ಯಕ್ತಿಯೆಂದು ಗೆಳೆಯರು ತಿಳಿದಿರುವ ಕಾರಣದಿಂದ ನೀವು ತುಂಬಾ ಸುರಕ್ಷಿತವಾಗಿರಬಹುದು. ಬೇರೆಯವರು ಆಕೆಗೆ ಕೇವಲ ಗೆಳೆಯರಾಗಿರಬಹುದು. ಆದರೆ ಆಕೆಯ ಹೃದಯ ಗೆದ್ದಿರುವುದು ನೀವು ಮಾತ್ರ. ಇದರಿಂದ ಭೀತಿ ಬಿಟ್ಟುಬಿಡಿ.

ನಿಮಗೆ ಬೆಂಬಲ ಸಿಗುವುದು

ನಿಮಗೆ ಬೆಂಬಲ ಸಿಗುವುದು

ನಿಮಗೆ ಯಾವುದೇ ಸಮಸ್ಯೆಯಾದರೆ ನಿಮ್ಮ ಪ್ರಿಯತಮೆಯ ಗೆಳೆಯರಿಂದ ನೆರವು ಪಡೆಯಬಹುದು. ನೀವು ಕೆಲಸ ಬಿಟ್ಟು ಹೊಸ ಕೆಲಸ ಹುಡುಕುತ್ತಾ ಇದ್ದರೆ ಆಕೆಯ ಗೆಳೆಯರು ನಿಮಗೆ ನೆರವಾಗಬಹುದು. ಇದರಿಂದ ನಿಮಗೆ ಜೀವನದಲ್ಲಿ ಹೆಚ್ಚಿನ ಬೆಂಬಲ ಸಿಗುವುದು.

ಜಗಳ ಕಡಿಮೆ

ಜಗಳ ಕಡಿಮೆ

ಆಕೆ ತನ್ನ ಕೆಲಸ ಹಾಗೂ ಗೆಳೆಯರೊಂದಿಗೆ ಹೆಚ್ಚಿನ ಸಮಯ ವ್ಯಯಿಸುವ ಕಾರಣ ಅಕೆಗೆ ನಿಮ್ಮೊಂದಿಗೆ ಜಗಳ ಮಾಡಲು ಸಮಯ ಸಿಗದು. ಖಾಲಿಯಿರುವ ವ್ಯಕ್ತಿಯ ಮನಸ್ಸು ಯಾವಾಗಲೂ ಕೆಟ್ಟದನ್ನು ಯೋಚಿಸುತ್ತಾ ಇರುವುದು. ಇದರಿಂದ ಆಕೆ ಹಳೆಯ ಜಗಳದ ಬಗ್ಗೆ ಮಾತನಾಡಿ ನಿಮ್ಮ ಮನಸ್ಸನ್ನು ಕೆಡಿಸಲು ಸಾಧ್ಯವಿಲ್ಲ.

ನೀವು ಕೂಡ ಗೆಳತಿಯರೊಂದಿಗೆ ತಿರುಗಾಡಬಹುದು!

ನೀವು ಕೂಡ ಗೆಳತಿಯರೊಂದಿಗೆ ತಿರುಗಾಡಬಹುದು!

ನೀವು ಸಹೋದ್ಯೋಗಿ ಅಥವಾ ಬೇರೆ ಯಾವುದೇ ಗೆಳತಿಯರೊಂದಿಗೆ ಹೊರಗಡೆ ತಿರುಗಾಡಲು ಹೋದರೆ ಆಕೆಗೆ ಯಾವುದೇ ಸಮಸ್ಯೆಯಾಗದು. ಆಕೆ ಕೂಡ ಅವರೊಂದಿಗೆ ಸ್ನೇಹ ಸಂಪಾದಿಸುವಳು.

ಮುಕ್ತ ಮನಸ್ಸು

ಮುಕ್ತ ಮನಸ್ಸು

ಪುರುಷರ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ಮಹಿಳೆಯರು ಮುಕ್ತ ಮನಸ್ಸನ್ನು ಹೊಂದಿರುವರು. ಅವರಿಗೆ ಪುರುಷರ ಸಮಸ್ಯೆ ಬಗ್ಗೆ ತಿಳಿದಿರುತ್ತದೆ ಮತ್ತು ಪುರುಷರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವರು. ಇದರಿಂದ ಹೆಚ್ಚು ಯೋಚಿಸಬೇಡಿ. ಸಂಗಾತಿಗೆ ಗೆಳೆಯರಿದ್ದರೆ ಚಿಂತಿಸಬೇಡಿ.

For Quick Alerts
ALLOW NOTIFICATIONS
For Daily Alerts

    English summary

    What If Your Girl Has Many Guy Friends?

    Is it bad if your girlfriend has a lot of guy friends? If you are a guy whose girlfriend has many male friends, you may have to deal with your insecurities in the initial stages. Of course, it is quite natural to worry about your relationship. But once you understand the positive aspects of your girlfriend, you will breathe easy. In fact, you may even feel better if you know about the advantages of dating a woman who is socially active.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more