ನಿಮ್ಮ ಪ್ರಿಯಕರ ಹಾಸಿಗೆಯಲ್ಲಿ ವಿಫಲನಾದರೆ ಏನು ಮಾಡುವುದು?

By: Arshad
Subscribe to Boldsky

ಹೀಗೊಂದು ಪ್ರಸಂಗವನ್ನು ಕಲ್ಪಿಸಿಕೊಳ್ಳಿ. ನೀವು ನಿಮ್ಮ ಪ್ರಿಯಕರನನ್ನು ಬಹುಕಾಲದಿಂದ ಪ್ರೀತಿಸುತ್ತಿದ್ದು ಕಡೆಗೂ ದೈಹಿಕವಾಗಿ ಹತ್ತಿರವಾಗಲು ನಿರ್ಧರಿಸಿದ್ದೀರಿ. ಆದರೆ ಏಕಾಂತದ ಕ್ಷಣದಲ್ಲಿ ಪರಸ್ಪರ ಹುಟ್ಟುಡುಗೆಯಲ್ಲಿ ಬೆಸುಗೆಗೊಂಡ ಬಳಿಕ ನಿಮ್ಮ ಪ್ರಿಯಕರ ಹಾಸಿಗೆಯಲ್ಲಿ ತೋರಬೇಕಾದ ಪೌರುಷದಲ್ಲಿ ವಿಫಲನಾದರೆ ಅಥವಾ ನಿಮ್ಮನ್ನು ಸಾಕಷ್ಟು ಉದ್ರೇಕಿಸಲು ವಿಫಲನಾದರೆ ಏನು ಮಾಡುವಿರಿ? ಈತ ನಪುಂಸಕನೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೊತ್ತ ಮೊದಲಾಗಿ ಹುಟ್ಟುವುದು ಸಹಜ.

ಆದರೆ ತಾಳಿ! ಯಾವುದೇ ನಿರ್ಧಾರಕ್ಕೂ ಬರುವ ಮುನ್ನ ಕೆಲವು ವಿಷಯಗಳನ್ನು ಅರಿತುಕೊಳ್ಳಬೇಕು, ಏನೆಂದರೆ ಎಷ್ಟೋ ಸಲ, ಯಾವುದೇ ವೈದ್ಯಕೀಯ ಕಾರಣಗಳಿಲ್ಲದೇ ಇದ್ದರೂ ಕೆಲವು ಪುರುಷರು ತಮ್ಮ ಪ್ರಿಯತಮೆಯನ್ನು ಪರಾಕಾಷ್ಠೆಗೆ ಕರೆದೊಯ್ಯಲು ವಿಫಲರಾಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಆತ ನಿಮ್ಮಿಂದ ತನಗೇ ಬೇಕಾದುದನ್ನು ಪಡೆದುಕೊಳ್ಳುತ್ತಿರಬಹುದು ಹಾಗೂ ನಿಮಗೆ ಬೇಕಾದುದನ್ನು ನೀಡಲು ಅಸಮರ್ಥನಾಗುತ್ತಿರಬಹುದು.

ಈ ಸಂದರ್ಭ ನಿಮ್ಮಲ್ಲಿ ದ್ವಂದ್ವವನ್ನು ಹುಟ್ಟುಹಾಕಬಹುದು. ಎಲ್ಲಾ ವಿಧದಲ್ಲಿಯೂ ನಿಮ್ಮ ಜೋಡಿ ಅನುರೂಪವಾಗಿದ್ದರೂ ಸಮಾಗಮದ ವಿಷಯದಲ್ಲಿ ಮಾತ್ರ ಸೋಲು ಅನುಭವಿಸಬೇಕಾಗಿ ಬರಬಹುದು. ಈ ಸಂದರ್ಭದಲ್ಲಿ ಈ ಸಂಬಂಧವನ್ನು ಮುಂದುವರೆಸುವುದೇ ಅಥವಾ ಇಲ್ಲಿಗೇ ಕೊನೆಗೊಳಿಸುವುದೇ ಎಂಬ ಆಯ್ಕೆ ಎದುರಾಗಬಹುದು.

ಈ ಯೋಚನೆಯೇ ಹೆಚ್ಚಿನವರಲ್ಲಿ ತಾನಿಷ್ಟು ಸ್ವಾರ್ಥಿ ಏಕಾದೆ ಎಂಬ ತಪ್ಪಿತಸ್ಥ ಭಾವನೆಯನ್ನೂ ಹುಟ್ಟಿಸಬಹುದು. ಈ ಸಂಬಂಧ ಮುಂದುವರೆಸಿದರೆ ಪತಿಯಿಂದ ಪಡೆಯಬೇಕಾದ ಪ್ರೇಮವನ್ನು ಶಾಶ್ವತವಾಗಿ ಪಡೆಯದೇ ಹೋಗಬೇಕಾದ ಸಂದರ್ಭವವೂ ಎದುರಾಗಬಹುದು. ಹಾಗಾದರೆ ನಿಮ್ಮ ಪ್ರಿಯಕರ ಹಾಸಿಗೆಯಲ್ಲಿ ವಿಫಲನಾದರೆ ಏನು ಮಾಡುವುದು? ಉತ್ತರಕ್ಕಾಗಿ ಮುಂದೆ ಓದಿ....

ನಿಮ್ಮ ಭಾವನೆಯನ್ನು ಸ್ಪಷ್ಟವಾಗಿ ಹೇಳುವುದರಲ್ಲಿ ತಪ್ಪೇನಿಲ್ಲ!

ನಿಮ್ಮ ಭಾವನೆಯನ್ನು ಸ್ಪಷ್ಟವಾಗಿ ಹೇಳುವುದರಲ್ಲಿ ತಪ್ಪೇನಿಲ್ಲ!

ನೀವು ಸುಖದ ಪರಾಕಾಷ್ಠೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಹಾಗೂ ಇದು ಪ್ರತಿ ಹೆಣ್ಣಿಗೂ ಅಗತ್ಯವಾಗಿ ಬೇಕಾದುದೆಂದು ಸ್ಪಷ್ಟವಾಗಿ ನಿಮ್ಮ ಪ್ರಿಯಕರನಿಗೆ ತಿಳಿಸಿ. ಹೀಗೆ ಹೇಳುವುದರಿಂದ ಆತನ ಮೇಲೆ ಏನಾದರೂ ಪ್ರಭಾವ ಬೀರುತ್ತದೆಯೇ ಗಮನಿಸಿ. ಏಕೆಂದರೆ ಹೀಗೆ ಹೇಳದೇ ಇದ್ದರೇ ಪುರುಷರು ತಮ್ಮ ಸಾಮರ್ಥ್ಯದ ಬಗ್ಗೆ ಯಾವುದೇ ಕೊರತೆ ಇಲ್ಲವೆಂದು ತಿಳಿದುಕೊಂಡು ನಿಮ್ಮ ಅಗತ್ಯಕ್ಕೆ ಬೆಲೆಯನ್ನೇ ನೀಡದೇ ಹೋಗಬಹುದು.

ಇದರಿಂದ ನಿಮ್ಮ ಸಂಬಂಧ ಪ್ರಭಾವಿತವಾಗುತ್ತದೆಯೇ?

ಇದರಿಂದ ನಿಮ್ಮ ಸಂಬಂಧ ಪ್ರಭಾವಿತವಾಗುತ್ತದೆಯೇ?

ನಿಮ್ಮ ಅಗತ್ಯವನ್ನು ಪೂರೈಸದ ಈ ವ್ಯಕ್ತಿಯೊಂದಿಗೆ ಸಂಬಂಧವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ನೀವು ಸುಖವಾಗಿ ಬಾಳಬಲ್ಲಿರೇ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಸಾಮಾನ್ಯವಾಗಿ ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಜೀವನದಲ್ಲಿ ಕೇವಲ ಕಾಮದ ಸುಖವೊಂದೇ ಪ್ರಮುಖವಲ್ಲ, ಇದೊಂದು ಜೀವನದ ಭಾಗವಷ್ಟೇ. ಜೀವನದ ಉಳಿದ ಮಜಲುಗಳನ್ನು ಈ ವ್ಯಕ್ತಿಯೊಂದಿಗೆ ನೀವು ಅತ್ಯಂತ ಸಂತಸದಿಂದ ಮತ್ತು ಪರಿಪೂರ್ಣತೆಯಿಂದ ಅನುಭವಿಸುತ್ತಿದ್ದರೆ ಈ ವ್ಯಕ್ತಿಯನ್ನು ತಕ್ಷಣವೇ ಇಲ್ಲವೆನ್ನಲು ಸಾಧ್ಯವಾಗುವುದಿಲ್ಲ.

ಆತ ನಿಮ್ಮನ್ನು ಮೆಚ್ಚಿಸಲು ಅಗತ್ಯವಾದ ಕ್ರಮ ಕೈಗೊಳ್ಳುತ್ತಿದ್ದಾನೆಯೇ?

ಆತ ನಿಮ್ಮನ್ನು ಮೆಚ್ಚಿಸಲು ಅಗತ್ಯವಾದ ಕ್ರಮ ಕೈಗೊಳ್ಳುತ್ತಿದ್ದಾನೆಯೇ?

ನೀವು ನಿಮ್ಮ ಅಗತ್ಯಗೆ ಹಾಗೂ ಆತನ ಕೊರತೆಯನ್ನು ಸ್ಪಷ್ಟವಾಗಿ ತಿಳಿಸಿದ ಬಳಿಕ ಆತ ತನ್ನ ಕೊರತೆಯನ್ನು ಮನಗಂಡು ಈ ಕೊರತೆಯನ್ನು ನೀಗಿಸಲು ಯಾವುದಾದರೂ ಕ್ರಮವನ್ನು ಕೈಗೊಳ್ಳುತ್ತಿದ್ದಾನೆಯೇ ಎಂದು ಗಮನಿಸಿ. ಒಂದು ವೇಳೆ ಆತ ನಿಮ್ಮ ತೃಪ್ತಿಗಾಗಿ ಯಾವುದಾದರೂ ಕ್ರಮವನ್ನು ಅಳವಡಿಸಿಕೊಂಡರೆ ಆ ಕ್ರಮದಿಂದ ಆತ ಪಡೆಯುವ ಫಲಿತಾಂಶಕ್ಕಿಂತಲೂ ನಿಮ್ಮ ವ್ಯಕ್ತಿತ್ವಕ್ಕೆ ಆತ ನೀಡುವ ಬೆಲೆಯೇ ಹೆಚ್ಚು ಮಹತ್ವದ್ದಾಗುತ್ತದೆ.

ಮುನ್ನಲಿವಿನಲ್ಲಿ ಹೆಚ್ಚು ಸಮಯ ತೊಡಗಿಕೊಳ್ಳಿ

ಮುನ್ನಲಿವಿನಲ್ಲಿ ಹೆಚ್ಚು ಸಮಯ ತೊಡಗಿಕೊಳ್ಳಿ

ಒಂದು ವೇಳೆ ಇದೊಂದು ವಿಷಯ ಬಿಟ್ಟು ಬೇರೆಲ್ಲಾ ವಿಷಯದಲ್ಲಿ ನಿಮ್ಮ ಸಂಬಂಧ ಅತ್ಯಂತ ಮಧುರವಾಗಿದ್ದು ನಿಮ್ಮ ಜೀವನಕ್ಕೆ ಇವರಿಗಿಂತ ಸೂಕ್ತ ವ್ಯಕ್ತಿ ಇನ್ನೊಬ್ಬನಿಲ್ಲ ಎಂದು ಅನ್ನಿಸಿದರೆ ಈಗ ನೀವು ಇದಕ್ಕೆ ಕೆಲವು ಪರ್ಯಾಯಗಳ ಬಗ್ಗೆ ಯೋಚಿಸುವುದು ಸೂಕ್ತ. ಇದರಲ್ಲಿ ಪ್ರಮುಖವಾದುದು ಮುನ್ನಲಿವಿನಲ್ಲಿ ಹೆಚ್ಚಿನ ಸಮಯ ಕಳೆಯುವುದು. ಇದರಿಂದ ಪರಾಕಾಷ್ಠೆಗೆ ತಲುಪದೇ ಇರುವ ಕೊರತೆಯನ್ನು ಸಾಕಷ್ಟು ಮಟ್ಟಿಗೆ ನೀಗಿಸಬಹುದು.

ಈ ಬಗ್ಗೆ ಸುಳ್ಳು ಹೇಳುವ ಅಗತ್ಯವಿದೆಯೇ

ಈ ಬಗ್ಗೆ ಸುಳ್ಳು ಹೇಳುವ ಅಗತ್ಯವಿದೆಯೇ

ನಿಮ್ಮ ಪ್ರಿಯಕರನ ಮನಸ್ಸಿಗೆ ನೋವುಂಟು ಮಾಡದೇ ಇರಲು ನೀವು ಪರಾಕಾಷ್ಠೆ ಪಡೆದೆ ಎಂದು ಸುಳ್ಳು ಹೇಳಬಹುದು. ಈ ಸುಳ್ಳು ಒಂದು ಅಥವಾ ಎರಡು ದಿನ ನಿಮ್ಮ ಮನಸ್ಸನ್ನು ನಿರಾಳವಾಗಿಸಬಹುದು. ಆದರೆ ಜೀವಮಾನವಿಡೀ ಹೀಗೆ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಸುಳ್ಳು ಹೇಳಬೇಡಿ. ಕಹಿಯಾಗಿದ್ದರೂ ಸರಿ, ಸತ್ಯವನ್ನೇ ಹೇಳಿ.

 ಆತನಿಗೆ ಹೆಚ್ಚಿನ ಸಮಯ ನೀಡಬೇಕೆಂದು ಅನ್ನಿಸುತ್ತದೆಯೇ?

ಆತನಿಗೆ ಹೆಚ್ಚಿನ ಸಮಯ ನೀಡಬೇಕೆಂದು ಅನ್ನಿಸುತ್ತದೆಯೇ?

ನಿಮ್ಮ ದೇಹಸಿರಿಯನ್ನು ಆಸ್ವಾದಿಸಲು ಆತನಿಗೆ ಪೂರ್ಣವಾದ ಅವಕಾಶ ನೀಡಿ. ನಿಮ್ಮ ದೇಹದ ಇತರ ಸಂವೇದನೆ ಹೆಚ್ಚಿರುವ ಭಾಗಗಳನ್ನೂ ಅರಿಯಲು, ಈ ಮೂಲಕ ಹೆಚ್ಚಿನ ಸಮಯವನ್ನು ಆತ ಬಳಸಿಕೊಂಡು ಮುಂದುವರೆಯಲು ಪ್ರೇರೇಪಿಸಿ. ಕೆಲವರು ತಡವಾಗಿ ಪ್ರಾರಂಭಗೊಳ್ಳುವ ವ್ಯಕ್ತಿತ್ವದವರಾಗಿದ್ದು ಕೊಂಚ ಕಾದು ಮುಂದುವರೆಯುವ ಕ್ರಮವನ್ನು ಪ್ರಯತ್ನಿಸಿ ನೋಡುವ ಮೂಲಕ ಈ ಶಕ್ತಿಯನ್ನೂ ಪ್ರಕಟಿಸಬಹುದು.

ನೀವು ಕೇವಲ ಸ್ನೇಹಿತರಾಗಿರಲು ಬಯಸುತ್ತೀರಾ?

ನೀವು ಕೇವಲ ಸ್ನೇಹಿತರಾಗಿರಲು ಬಯಸುತ್ತೀರಾ?

ಈ ಬಗ್ಗೆ ಯೋಚಿಸಿ, ನಿಮ್ಮ ಪ್ರಿಯಕರ ಹಾಗೂ ಪುರುಷ ಸ್ನೇಹಿತನ ನಡುವಣ ವ್ಯತ್ಯಾಸವೆಂದರೆ ನಿಮ್ಮ ಪ್ರಣಯ. ಪ್ರಣಯ ಸುಖವನ್ನು ನೀವು ಪ್ರಿಯಕರನಿಂದಲೇ ಪಡೆಯಲು ಸಾಧ್ಯವೇ ಹೊರತು ಪುರುಷ ಸ್ನೇಹಿತನಿಂದಲ್ಲ. ಹಾಗಾದಾಗ ಒಂದು ವೇಳೆ ನಿಮ್ಮ ಪ್ರಿಯಕರ ನಿಮಗೆ ಪ್ರಣಯ ಸುಖವನ್ನು ನೀಡಲು ವಿಫಲಗೊಂಡರೆ ನೀವು ಆತನನ್ನು ಪ್ರಿಯಕರನಂತೆಯೇ ನೋಡುತ್ತೀರೋ ಅಥವಾ ಕೇವಲ ಸ್ನೇಹಿತನಂತೆಯೋ? ಜೀವನದಲ್ಲಿ ಪ್ರಣಯ ಸುಖವಿಲ್ಲದೇ ಹೋದರೆ ಜೀವನ ಸಪ್ಪೆಯಾಗುತ್ತದೆ. ಒಂದು ವೇಳೆ ಈ ಕೊರತೆಯನ್ನು ಬೇರೆ ಯಾವುದಾದರೊಂದು ವಿಧಾನದಿಂದ ತುಂಬಿಕೊಳ್ಳಲು ಸಾಧ್ಯವಾದರೆ ನೀವು ಇದೇ ವ್ಯಕ್ತಿಯೊಂದಿಗೆ ಜೀವನ ಮುಂದುವರೆಸಬಹುದು, ನಿರ್ಧಾರ ಕಡೆಗೂ ನಿಮ್ಮದೇ!

English summary

What To Do When Your Boyfriend Fails In Bed?

What to do when your boyfriend fails in bed? Imagine this: You have dated him since long and have finally decided to get physically intimate with him. But soon after getting naked in the bedroom, you realise that he is not good enough in stimulating you. What would you do? Is my boyfriend impotent? This is the first question that might hit you. But wait! There are many men who don't have any medical issues or impotency. But they could still fail to make a woman reach orgasm!
Subscribe Newsletter