ಶಬ್ದಗಳಿಲ್ಲದೆ ಪ್ರೀತಿ ತೋರಿಸುವ ಮಾರ್ಗ ನಿಮಗೆ ಗೊತ್ತಿದೆಯಾ?

By: Divya Pandith
Subscribe to Boldsky

ಶಬ್ದಗಳಿಲ್ಲದೆ ತೋರುವ ವರ್ತನೆಯು ಶಬ್ದಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ಯಾರನ್ನಾದರೂ ತುಂಬಾ ಪ್ರೀತಿಸಿದ್ದರೆ ಸದಾ ಅವರನ್ನು ನೋಡ ಬೇಕು, ಅವರೊಂದಿಗೆ ಮಾತನಾಡಬೇಕು ಎನ್ನುವ ತುಮುಲ ಹೆಚ್ಚುತ್ತಲೇ ಇರುತ್ತದೆ. ಹಾಗೊಮ್ಮೆ ಅವರು ಜನ ಜಂಗುಳಿಯ ಮಧ್ಯೆ ಅಥವಾ ನಿಮ್ಮ ಕುಟುಂಬದವರ ನಡುವೆ ಸಿಕ್ಕಾಗ ಶಬ್ದಗಳ ಮೂಲಕ ಮಾತನಾಡುವುದು ಸ್ವಲ್ಪ ಕಷ್ಟ. ಶಬ್ದಗಳಿಲ್ಲದೆ ತೋರುವ ಪ್ರೀತಿಯು ತುಂಬಾ ಖುಷಿಯನ್ನು ನೀಡುತ್ತದೆ.

ಗಂಡು-ಹೆಣ್ಣಿನ ನಡುವೆ ಮೂಡುವ ಪ್ರೀತಿ-ಪ್ರೇಮವು ಪ್ರಕೃತಿಯ ಒಂದು ಸುಂದರ ಅನುಭವ. ಹಾಗಾಗಿ ಪ್ರೀತಿಗೆ ಎಲ್ಲಾ ಧರ್ಮ-ಜಾತಿ ಹಾಗೂ ಪುರಾಣ ಕಥೆಗಳಲ್ಲೂ ವಿಶೇಷವಾದ ಸ್ಥಾನವನ್ನು ನೀಡಿದ್ದಾರೆ. ವ್ಯಕ್ತಿ ತನ್ನ ಕೊನೆಯುಸಿರು ಇರುವವರೆಗೂ ಪ್ರೀತಿ ಎನ್ನುವ ನಂಬಿಕೆಯ ಮೇಲೆ ಬದುಕುತ್ತಾರೆ. ಒಂದು

ಗಂಡಿಗೆ ಹೆಣ್ಣು ಹಾಗೂ ಒಂದು ಹೆಣ್ಣಿಗೆ ಗಂಡಿನ ಆಸರೆ ಬೇಕಾಗುವುದು. ಅದಕ್ಕಾಗಿಯೇ ಮದುವೆ ಎನ್ನುವ ಪವಿತ್ರ ಬಂಧನವನ್ನು ಬೆಸೆಯುವುದು. ನಾವು ಆಧುನಿಕತೆಗೆ ತೆರೆದುಕೊಂಡಿದ್ದೇವೆ. ಡೇಟಿಂಗ್ ಎನ್ನುವ ಹೊಸ ಪದ್ಧತಿಯನ್ನು ಅನುಸರಿಸುತ್ತೇವೆ ಎಂದು ಹೇಳಬಹುದು. ಡೇಟಿಂಗ್ ಮಾಡುವಾಗ ಯಾರೊಬ್ಬರೂ ನೈಜತೆಯನ್ನು ತೋರುವುದಿಲ್ಲ. ಅಲ್ಲಿ ಪ್ರೀತಿಯ ಹೆಸರಿನಲ್ಲಿ ಹೇಳುವ ಮಾತುಗಳೆಲ್ಲವೂ ಅಷ್ಟು ಬಾಂಧವ್ಯ ತೋರಿಸುವುದಾಗಲೀ ಅಥವಾ ಪ್ರೀತಿಯನ್ನು ಹುಟ್ಟಿಸುವ ಕೆಲಸವನ್ನು ಮಾಡದು. ಅದೇನೇ ಇದ್ದರೂ ವಿವಾಹದ ಚಂದ್ರ ಮಂಚ ಏರಿದಮೇಲೆ ಆರಂಭವಾಗುತ್ತದೆ.

ನಂತರದ ದಿನದಲ್ಲಿ ಪತಿ-ಪತ್ನಿಯರಾಗಿ ಪರಸ್ಪರ ತೋರುವ ಕಾಳಜಿ ವರ್ತನೆಗಳು ಸುಂದರ. ಆದರೆ ಬಹುತೇಕ ಜನರು ವಿವಾಹದ ನಂತರ ಜೀವನ ಇಷ್ಟೇ, ಅದೇ ಜಗಳ, ಮುನಿಸು, ಜವಾಬ್ದಾರಿ ಎನ್ನುವ ಗುಂಗಿನಲ್ಲಿ ನಾನೊಂದು ತೀರಾ... ನೀನೊಂದು ತೀರ ಎಂದು ಬದುಕುತ್ತಾರೆ. ಈ ಸುಂದರ ಸಂಬಂಧಗಳಲ್ಲಿ ಮಾತಿನಲ್ಲಿ ಅಥವಾ ಶಬ್ದದಲ್ಲಿ ಹೇಳಲಾಗದಂತಹ ವರ್ತನೆಯನ್ನು ತೋರಿಸುವುದರಿಂದ ಪ್ರೀತಿಯನ್ನು ಗಟ್ಟಿ ಮಾಡಿಕೊಳ್ಳಬಹುದು. ಜೀವನದಲ್ಲಿ ಸದಾ ಖುಷಿಯಿಂದ ಇರಬಹುದು. ಹಾಗಾದರೆ ಅದ್ಯಾವ ವರ್ತನೆ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನಿಸಿದರೆ ಮುಂದಿರುವ ವಿವರಣೆಯನ್ನು ಓದಿ... 

ಹೀಗೆ ಒಮ್ಮೆ ಮಾಡಿ...

ಹೀಗೆ ಒಮ್ಮೆ ಮಾಡಿ...

ಗಂಡನಿಗೆ ನಿಮ್ಮ ಪ್ರೀತಿಯನ್ನು ತೋರಿಸಬೇಕು ಎಂದು ಕವನ ಅಥವಾ ಹೊಗಳಬೇಕೆಂದೇನೂ ಇಲ್ಲ. ಹೊರಗಡೆ ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣ ಮನೆಕೆಲಸದ ಬಗ್ಗೆ ಅಥವಾ ಅಗತ್ಯ ವಸ್ತುಗಳ ಖರೀದಿ ಪಟ್ಟಿಯನ್ನು ಮುಂದಿಡಬೇಡಿ. ಮನೆಗೆ ಬಂದಾಗ ಸಂತೋಷದಿಂದ ಬರಮಾಡಿಕೊಳ್ಳಿ. ಮೊದಲು ಒಂದು ಗ್ಲಾಸ್ ನೀರನ್ನು ನೀಡಿ...ಸ್ವಲ್ಪ ಸಮಯ ವಿಶ್ರಮಿಸಲು ಬಿಡಿ. ನಂತರ ಅಗತ್ಯ ವಸ್ತುಗಳ ಬಗ್ಗೆ ಮಾತನಾಡಿ. ಯಾವುದೇ ಪದಗಳ ಬಳಕೆ ಮಾಡದೆ ತೋರುವ ಕಾಳಜಿಯು ಪ್ರೀತಿಯನ್ನು ಹೆಚ್ಚಿಸುತ್ತದೆ.

ಒಳ್ಳೆಯ ಕೇಳುಗರಾಗಿ

ಒಳ್ಳೆಯ ಕೇಳುಗರಾಗಿ

ನಮ್ಮವರು ಎಂದಾಗ ನಮಗೆ ತೋಚಿದನ್ನೆಲ್ಲಾ ಹೇಳಿಕೊಳ್ಳಲು ಇಷ್ಟಪಡುತ್ತೇವೆ. ಅದರಲ್ಲೂ ಪತಿ ಎಂದಾಗ ಆಫೀಸ್‍ನಲ್ಲಿ ನಡೆದ ಎಲ್ಲಾ ವಿಚಾರಗಳು, ಅಲ್ಲಿಯ ರಾಜಕೀಯ, ಸ್ನೇಹಿತೆಯ ಸಂಸಾರದ ವಿಚಾರ ಹೀಗೆ ಹಿಂದೆ ಮುಂದೆ ವಿಚಾರ ಮಾಡದೆ ಹೇಳುತ್ತಿರುತ್ತಾರೆ. ಈ ರೀತಿ ಮಾತುಗಳು ನೈಸರ್ಗಿಕವಾಗಿ ಬೇಸರವನ್ನುಂಟು ಮಾಡುವುದು ಸಹಜ. ಆದರೆ ಪತಿಯಾಗಿ ಅವುಗಳನ್ನು ಕೇಳಿಸಿಕೊಂಡು ಪ್ರತಿಕ್ರಿಯಿಸಿದರೆ ಅದು ನೀವು ಶಬ್ದವಿಲ್ಲದೆ ತೋರುವ ಪ್ರೀತಿಯ ಪರಿಯನ್ನು ಬಿಂಬಿಸುತ್ತದೆ.

ಇತರರೊಂದಿಗೆ ಖುಷಿಯಾಗಿರಲು ಬಿಡಿ

ಇತರರೊಂದಿಗೆ ಖುಷಿಯಾಗಿರಲು ಬಿಡಿ

ನೀವು ಅತಿಯಾದ ತಲೆನೋವಿನೊಂದಿಗೆ ಮನೆಗೆ ಬಂದಿದ್ದೀರಾ... ಹೆಂಡತಿಯ ಬಳಿ ತಲೆಯ ಮಸಾಜ್ ಮಾಡುವಂತೆ ಹೇಳಬೇಕು ಎಂದು ಅಂದುಕೊಂಡಿರುತ್ತೀರಿ. ಆದರೆ ನೀವು ಆಕೆಯ ಬಳಿ ಹೇಳುವ ಮೊದಲು ಅವಳು ನಿಮ್ಮ ಬಳಿ ತವರಿಗೆ ಹೋಗುವ ವಿಚಾರ ಮುಂದಿಡುತ್ತಾಳೆ. ನೀವು ನಿಮ್ಮ ತಲೆ ನೋವಿನ ವಿಷಯ ಹೇಳಿದರೆ ಅವರು ಖಂಡಿತ ತಮ್ಮ ನಿರ್ಧಾರವನ್ನು ಬದಲಿಸುತ್ತಾರೆ. ಅದರ ಬದಲು ಅವರು ಅನೇಕ ದಿನದ ಬಳಿಕ ತಂದೆ ತಾಯಿಯನ್ನು ಭೇಟಿಯಾಗಲು ಹೋಗುವುದಕ್ಕೆ ಸಮ್ಮತಿಸುವುದು ನಿಮ್ಮ ಪ್ರೀತಿಯ ತೋರಿಸುವ ಒಂದು ಮೂಕ ಮಾರ್ಗ.

ಅವರ ಅಗತ್ಯವನ್ನು ಅರಿಯಿರಿ

ಅವರ ಅಗತ್ಯವನ್ನು ಅರಿಯಿರಿ

ನಿಮ್ಮ ಬಟ್ಟೆಗಳೆಲ್ಲಾ ಟೆರೆಸ್ ಮೇಲೆ ಒಣಗಲು ಹಾಕಿದ್ದೀರಿ... ಮಳೆ ಹನಿಸಲು ಪ್ರಾರಂಭಿಸಿತು. ನಿಮ್ಮ ಬಟ್ಟೆಯನ್ನು ಮೊದಲು ತೆಗೆಯಬೇಕು ಎಂದು ಮನಸ್ಸು ಹೇಳುವುದು. ಆದರೂ ನೀವು ಮೊದಲು ಹೆಂಡತಿಯ ಬಟ್ಟೆಗಳನ್ನು ತೆಗೆದು ನಂತರ ನಿಮ್ಮ ಬಟ್ಟೆಯನ್ನು ತೆಗೆಯುತ್ತೀರಿ... ಆಗ ನಿಮ್ಮ ಹೆಂಡತಿ ನಿಮ್ಮ ಕೆಲಸವನ್ನು ಗಮನಿಸಿರುತ್ತಿರುತ್ತಾಳೆ. ನಿಮ್ಮ ಈ ಕೆಲಸವೇ ಶಬ್ದಗಳಿಲ್ಲದೆ ತೋರುವ ಕಾಳಜಿ ಹಾಗೂ ಪ್ರೀತಿಯನ್ನು ವ್ಯಕ್ತ ಪಡಿಸುತ್ತದೆ.

ಅಭಿನಂದಿಸಲು ಮರೆಯದಿರಿ

ಅಭಿನಂದಿಸಲು ಮರೆಯದಿರಿ

ಪತ್ನಿ ತಾನು ಹೊಸದಾಗಿ ತೆಗೆದುಕೊಂಡ ಹೊಸದಾದ ದುಬಾರಿ ಕೈಚೀಲವನ್ನು ನಿಮಗೆ ತೋರಿಸಲು ಬರುತ್ತಾಳೆ. ಆಗ ನೀವು ಇದೊಂದು ಹಣ ವ್ಯರ್ಥಮಾಡುವ ವಿಧಾನ ಎಂದು ಕಠಿಣ ಶಬ್ದ ಹೇಳುವುದನ್ನು ಬಿಟ್ಟು, ಸುಂದರವಾಗಿದೆ ಎಂದು ಆಕೆಯನ್ನು ಅಭಿನಂದಿಸಿ. ಆಗ ಅದು ಅವಳ ಭಾವನೆಗೆ ನೀಡುವ ಗೌರವ ಹಾಗೂ ಪ್ರೀತಿಯನ್ನು ತೋರಿಸುತ್ತದೆ.

ನಿರಾಶೆಗೊಂಡಾಗ ಪ್ರೋತ್ಸಾಹಿಸಿ

ನಿರಾಶೆಗೊಂಡಾಗ ಪ್ರೋತ್ಸಾಹಿಸಿ

ನಿಮ್ಮ ಮನೆಯ ವಾಷಿಂಗ್ ಮಷಿನ್ ಹಾಳಾಗಿದೆ. ಅದನ್ನು ಸರಿ ಮಾಡುವ ಪ್ರಯತ್ನವನ್ನು ಪತಿ ಮಾಡುತ್ತಾರೆ. ಆದರೆ ಅದರಲ್ಲಿ ವಿಫಲಾರಗುತ್ತಾರೆ ಎಂದಾದರೆ ಆಗ ಪತ್ನಿಯಾಗಿ ನೀವು ಅವರ ಕೆಲಸದ ಬಗ್ಗೆ ಅಪಹಾಸ್ಯ ಮಾಡ ಬಾರದು. ಬದಲಿಗೆ ನನ್ನ ಕೆಲಸವನ್ನು ಸುಲಭ ಗೊಳಿಸಲು ಇಷ್ಟು ಕಷ್ಟ ಪಟ್ಟಿದ್ದೀರಿ ಎನ್ನುವ ಮಾತುಗಳನ್ನು ಹೇಳಿ ನಿರಾಶೆಗೊಂಡ ಮನಸ್ಸಿಗೆ ಪ್ರೋತ್ಸಾಹ ನೀಡಿ. ಆಗ ನಿಮ್ಮ ಪ್ರೀತಿಯು ಅರ್ಥವಾಗುವುದು.

ದೂರುವ ಬದಲು ಸಮಾಧಾನ ಮಾಡಿ

ದೂರುವ ಬದಲು ಸಮಾಧಾನ ಮಾಡಿ

ಪತ್ನಿ ಇತ್ತೀಚೆಗೆ ಖರೀದಿಸಿದ ದುಬಾರಿ ಮೊಬೈಲ್ ಫೋನ್‍ಅನ್ನು ಕಳೆದುಕೊಂಡಿದ್ದಾರೆ... ಅದನ್ನು ಹೇಗೆ ಹುಡುಕುವುದು? ಏನು ಮಾಡುವುದು ಎನ್ನುವ ಚಿಂತೆಯಲ್ಲಿದ್ದಿದ್ದಾರೆ... ಅಂತಹ ಸಮಯದಲ್ಲಿ ನೀವು ಅವರ ಬೇಜವಾಬ್ದಾರಿ ಅಥವಾ ನಿಷ್ಕಾಳಜಿಯ ಬಗ್ಗೆ ಮಾತನಾಡಬೇಡಿ. ಬದಲಿಗೆ ಕೆಲವೊಮ್ಮೆ ಆಗುತ್ತದೆ ಎನ್ನುವ ಪದಗಳ ಮೂಲಕ ಸಂತೈಸಿ. ಆಗ ನಿಮ್ಮ ಪ್ರೀತಿ ಮತ್ತು ಕಾಳಜಿಯು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

English summary

Ways To Show Love Without Words

Can you show love without saying it? Well, actions speak louder than words! If you love someone deeply, your actions can convey love better than words. And this is true especially after marriage. When you are dating someone, you tend to have that rush working on your system and everything seems lovey-dovey. Read this!
Subscribe Newsletter