For Quick Alerts
ALLOW NOTIFICATIONS  
For Daily Alerts

ನೋಡಿ, ಇದೆಲ್ಲಾ ಸಮಸ್ಯೆಗಳೂ, ಮದುವೆಯ ನಂತರವೇ ಗೊತ್ತಾಗುವುದು!!

By Manu
|

ಮನುಷ್ಯನನ್ನು ನಂಬುವುದು ಹಾಗೂ ಆತನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಮನುಷ್ಯನ ವ್ಯಕ್ತಿತ್ವವೇ ಹಾಗೆ. ಆತ ಯಾವಾಗ, ಯಾವ ರೀತಿ ಬದಲಾಗುತ್ತಾನೆಂದು ತಿಳಿಯುವುದೇ ಇಲ್ಲ. ಜೀವನದಲ್ಲಿ ನಾವು ಹಲವಾರು ಮಂದಿಯನ್ನು ಭೇಟಿಯಾಗುತ್ತೇವೆ ಮತ್ತು ಅವರ ವ್ಯಕ್ತಿತ್ವ ನೋಡಿರುತ್ತೇವೆ. ಕೆಲವರ ವ್ಯಕ್ತಿತ್ವದಿಂದ ನಮಗೆ ಪಾಠ ಕಲಿಯಲು ಸಾಧ್ಯವಾದರೆ ಇನ್ನು ಕೆಲವರ ವ್ಯಕ್ತಿತ್ವವು ನಮಗೆ ಹೇಸಿಗೆ ಮೂಡಿಸಿರುವುದು ಇದೆ. ಇಂತಹ ವ್ಯಕ್ತಿಗಳು ಭೂಮಿ ಮೇಲೆ ಇದ್ದಾರಲ್ಲಾ ಎನ್ನುವ ನಿರಾಶೆಯೂ ನಮಗೆ ಆಗಿರಬಹುದು.

ವ್ಯಕ್ತಿತ್ವದಿಂದ ಜನರನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಬಹುದು. ಆದರೆ ಇದು ಸಂಪೂರ್ಣ ಚಿತ್ರಣವಲ್ಲ, ನಮಗೆ ಸ್ವಲ್ಪ ಮೂಲ ಅರ್ಥ ಮಾಡಿಕೊಳ್ಳಲು ಇದರಿಂದ ಸಾಧ್ಯವಾಗುವುದು. ನಿಮಗೆ ಜೀವನದಲ್ಲಿ ಸಿಕ್ಕಿರುವ ಸಂಗಾತಿಗಳು ಅಥವಾ ಜನರು ಯಾವ ವಿಧದವರು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿ....

ಸೆಲ್ಫಿ ಹುಚ್ಚು

ಸೆಲ್ಫಿ ಹುಚ್ಚು

ಪುರುಷರು ಹಾಗೂ ಮಹಿಳೆಯರಲ್ಲಿ ಸೆಲ್ಫಿ ಚಟ ಇರುವುದು. ಈ ರೀತಿಯ ಸಂಗಾತಿಗಳು ಪ್ರತಿಯೊಂದು ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಾರೆ. ಇದು ಒಂದು ರೀತಿಯ ಸ್ವಯಂ ಗೀಳಾ ಅಥವಾ ಮೊಬೈಲ್ ಮತ್ತು ಕ್ಯಾಮರಾದ ಕಡೆಗಿನ ಗೀಳಾ ಎನ್ನುವ ಬಗ್ಗೆ ನಿಮಗೆ ಚಿಂತೆಯಾಗಬಹುದು.

ಚರ್ಚಿಸುವವರು

ಚರ್ಚಿಸುವವರು

ಈ ರೀತಿಯ ಸಂಗಾತಿಗಳು ಪ್ರತಿಯೊಂದು ಶಬ್ಧವನ್ನು ಕೆಟ್ಟ ಚರ್ಚೆಯಾಗಿ ಬದಲಾಯಿಸುತ್ತಾರೆ. ನೀವು ಹೇಳುವುದನ್ನು ಆಕೆ ಅಥವಾ ಆತ ವಿರೋಧ ಮಾಡಿ ತನ್ನದೇ ವಾದ ಮಂಡಿಸುತ್ತಾನೆ/ಳೆ.

ಕನಸುಗಾರ

ಕನಸುಗಾರ

ಇಂತಹ ಸಂಗಾತಿಗಳು ತಮ್ಮೊಳಗೆ ಮುಳುಗಿರುವರು ಮತ್ತು ಮಾತನಾಡುವುದಿಲ್ಲ. ಆತ/ಆಕೆ ತನ್ನದೇ ಆದ ಜಗತ್ತಿನಲ್ಲಿರುವರು ಮತ್ತು ನಿಮ್ಮ ಸಂತೋಷದ ಬಗ್ಗೆ ಹೆಚ್ಚು ಕಾಳಜಿ ವಹಿಸಲ್ಲ. ಇಂತವರು ತಮ್ಮ ಜೀವನದ ಬಗ್ಗೆ ನಿಮಗೆ ಹೇಳಲ್ಲ ಮತ್ತು ನಿಮ್ಮ ಜೀವನದ ಬಗ್ಗೆ ಯಾವುದೇ ಪ್ರಶ್ನೆ ಕೇಳಲ್ಲ. ನೀವು ಆದಷ್ಟು ಬೇಗ ಆಸಕ್ತಿ ಕಳೆದುಕೊಳ್ಳಲಿದ್ದೀರಿ.

ನಾಟಕೀಯ ವರ್ತನೆ

ನಾಟಕೀಯ ವರ್ತನೆ

ನಾಟಕೀಯವಾಗಿ ವರ್ತಿಸುವವರು ಮಹಿಳೆಯರು ಹಾಗೂ ಪುರುಷರಲ್ಲಿ ಇರುತ್ತಾರೆ. ಈ ವಿಧದ ಜನರು ಯಾವುದೇ ಸಣ್ಣ ವಿಷಯಕ್ಕೂ ದೊಡ್ಡ ರಂಪಾಟ ಮಾಡುವರು. ತನ್ನ ಮನಸ್ಸಿನೊಳಗೆ ಉದ್ವೇಗವನ್ನು ಹೊರಜಗತ್ತಿನ ಮುಂದೆ ತೋರಿಸುವವರೇ ಇಂತಹ ವರ್ಗಕ್ಕೆ ಸೇರಿದವರು. ಈ ವರ್ಗಕ್ಕೆ ಸೇರಿದ ಮಹಿಳೆಯರು ಪ್ರತಿನಿತ್ಯವು ಏನಾದರೊಂದು ನಾಟಕೀಯ ವರ್ತನೆ ತೋರಿಸುತ್ತಲೇ ಇರುವರು.

ಗಂಡುಬೇರಿ ವರ್ತನೆ

ಗಂಡುಬೇರಿ ವರ್ತನೆ

ಆಕೆ ನಿಮ್ಮ ಬಟ್ಟೆ ಹಾಕಿಕೊಂಡು ಬೈಕ್ ಚಲಾಯಿಸಬಹುದು. ಆಕೆಗೆ ಮಹಿಳೆಯರಿಗಿಂತ ಹೆಚ್ಚು ಪುರುಷರು ಸ್ನೇಹಿತರಿರಬಹುದು. ಆಕೆಗೆ ಯಾವತ್ತೂ ನಿಮ್ಮ ನೆರವು ಬೇಕಿಲ್ಲ. ನೇರನುಡಿ, ಸ್ವತಂತ್ರ ಮತ್ತು ಯಾವುದೇ ಬುದ್ಧಿಗೇಡಿ ವರ್ತನೆ ಇಲ್ಲದವರು.

ಅತಿ ಮಾತುಗಾರರು

ಅತಿ ಮಾತುಗಾರರು

ಈ ವರ್ಗಕ್ಕೆ ಸೇರಿದ ಪುರುಷರು ಹಾಗೂ ಮಹಿಳೆಯರು ತುಂಬಾ ಮಾತನಾಡುವವರು. ಇಂತಹ ಸಂಗಾತಿಗಳ ಮಾತು ಕೆಲವೇ ನಿಮಿಷಗಳಲ್ಲಿ ಬೇಸರ ಮೂಡಿಸುವುದು. ಆದರೂ ಗಂಟೆಗಟ್ಟಲೆ ಹರಟುತ್ತಲೇ ಇರುತ್ತಾರೆ. ಇಂತಹ ಸಂಗಾತಿಗಳ ಜತೆ ನೀವು ಕೇವಲ ಕೇಳುಗರಾಗಿರಬೇಕು.

ಪಾರ್ಟಿ ಪ್ರೇಮಿ

ಪಾರ್ಟಿ ಪ್ರೇಮಿ

ಪಾರ್ಟಿ ಇಷ್ಟಪಡುವಂತಹ ಸಂಗಾತಿಗಳು ಮದ್ಯಪಾನಕ್ಕೆ ದಾಸರಾಗಿರುವರು. ವಾಸ್ತವಿಕ ಜೀವನದಿಂದ ದೂರ ಓಡುವವರು ಪಾರ್ಟಿ ಪ್ರಿಯರಾಗಿರುವರು. ಅವರಿಗೆ ಯಾವಾಗಲೂ ಒಳ್ಳೆಯ ಸಮಯ ಬೇಕು. ಇಂತಹ ಸಂಗಾತಿಗಳಿಗೆ ಸುರಕ್ಷಿತ ಭವಿಷ್ಯವಿರಲ್ಲ.

ಬರಹದಲ್ಲಿ ಭಾವನೆ ಹೇಳುವುದು

ಬರಹದಲ್ಲಿ ಭಾವನೆ ಹೇಳುವುದು

ಕೆಲವು ಮಂದಿ ನಿಮ್ಮ ಬದಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಂಡರೂ ಹೆಚ್ಚು ಮಾತನಾಡುವುದಿಲ್ಲ. ಆದರೆ ಮನೆಗೆ ಹೋದ ತಕ್ಷಣ ಅವರಿಂದ ದೊಡ್ಡ ಮೇಲ್ ನಿಮಗೆ ಬರುವುದು. ಇವರು ಹೆಚ್ಚು ಮಾತನಾಡಲ್ಲ, ಬರಹ ಮೂಲಕ ಭಾವನೆ ವ್ಯಕ್ತಪಡಿಸುವರು. ಇಂತವರು ತುಂಬಾ ಪ್ರತಿಭಾವಂತ ಹಾಗೂ ಲೇಖಕರಾಗಿರುವರು.

ಮಾನಸಿಕ

ಮಾನಸಿಕ

ಮೊಬೈಲ್ ಗೆ ಬರುವ ಎಸ್ ಎಂಎಸ್, ಫೇಸ್ ಬುಕ್ ಪೋಸ್ಟ್ ಮತ್ತು ನಿಮ್ಮ ದೈನಂದಿನ ಜೀವನದ ಆಗುಹೋಗುಗಳನ್ನು ಆಕೆ ಪ್ರತೀ ಕ್ಷಣವು ಪರಿಶೀಲಿಸುತ್ತಾ ಇರಬಹುದು. ಆಕೆ ಅಥವಾ ಆತನ ಉದ್ದೇಶ ನಿಮ್ಮ ಮೇಲೆ ನಿಯಂತ್ರಣ ಸಾಧಿಸುವುದು ಅಥವಾ ಬೈಯುವುದು. ನೀವು ಸ್ವಲ್ಪ ತಡವಾದರೂ, ನೀವು ಮೋಸ ಮಾಡುತ್ತೀದ್ದೀರಿ. ನೀವು ಮೊಬೈಲ್ ಕರೆ ಸ್ವೀಕರಿಸದೆ ಇದ್ದರೂ, ನೀವು ಮೋಸ ಮಾಡುತ್ತೀದ್ದೀರಿ. ನಿಮ್ಮನ್ನು ನೀವೂ ರಕ್ಷಿಸಲು ಪ್ರಯತ್ನಿಸಿದರೂ ನೀವು ಮೋಸ ಮಾಡುತ್ತೀದ್ದೀರಿ ಎಂದು ಅರ್ಥ. ನೀವು ಏನೇ ಮಾಡಿದರೂ ನಿಮ್ಮ ಸಂಗಾತಿಗೆ ಅದು ತಪ್ಪಾಗಿ ಕಾಣಿಸುವುದು.

 ಒಳ್ಳೆಯ ಪತ್ನಿಯಾಗಲು ಪ್ರಯತ್ನ

ಒಳ್ಳೆಯ ಪತ್ನಿಯಾಗಲು ಪ್ರಯತ್ನ

ಇಂತಹ ವ್ಯಕ್ತಿತ್ವ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಹದಿಹರೆಯದಲ್ಲಿ ಮದುವೆಯಾಗಿ ಬೇಗನೆ ಮಕ್ಕಳನ್ನು ಹೆರುವ ಮಹಿಳೆಯರಲ್ಲಿ ಇಂತಹ ವ್ಯಕ್ತಿತ್ವ ಕಾಣಿಸುವುದು. ಇವರಿಗೆ ಮದುವೆ ಮತ್ತು ಮಕ್ಕಳು ಜೀವನದ ಮುಖ್ಯ ಧ್ಯೇಯ ಮತ್ತು ಅವರೇ ಸರ್ವಸ್ವ. ಅವರಿಗೆ ಒಳ್ಳೆಯ ಪತ್ನಿ ಎನ್ನುವ ಪಟ್ಟ ಬೇಕಷ್ಟೇ!

English summary

Types Of Partners

Actually, human relationships can't be generalised. But if one has to really study the personality types in human relationships, we may need to broadly group people in several categories. Of course, though such studies aren't accurate, you can get a basic understanding of what a person is by looking at the category. Well, here are a few types of partners or people that you may come across.
Story first published: Tuesday, October 3, 2017, 15:55 [IST]
X