ಗರ್ಲ್ ಫ್ರೆಂಡ್ ಹೇರ್ ಕಟ್ ಮಾಡಿಸಿಕೊಂಡರೆ, ಸಿಟ್ಟು ಮಾಡಿಕೊಳ್ಳಬೇಡಿ!

By: Deepak M
Subscribe to Boldsky

ಸಾಮಾನ್ಯವಾಗಿ ಬಹುತೇಕ ಗಂಡಸರು ಉದ್ದ ಜಡೆಯನ್ನು ಹೊಂದಿರುವ ಮಹಿಳೆಯರನ್ನು ಇಷ್ಟಪಡುತ್ತಾರೆ. ಉದ್ದವಾದ, ಹೊಳೆಯುವ, ನೀಳವಾದ ಕೂದಲು ಹೆಂಗಸರನ್ನು ಮತ್ತಷ್ಟು ಅಂದಗಾಣುವಂತೆ ಮಾಡುತ್ತದೆ. ಆದರೆ ಒಂದು ಮಾತು ಹೇರ್ ಕಟ್ ಮಾಡಿಸಿಕೊಂಡ ಹೆಂಗಸರು ಸಹ ಚೆಂದ ಕಾಣುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ! ಉದ್ದನೆಯ ಕೂದಲನ್ನು ಕಾಪಾಡುವ ಮತ್ತು ಆರೈಕೆ ಮಾಡುವ ಗೊಡವೆ ನಮಗೇಕೆ ಎಂದು ಕೆಲವು ಮಹಿಳೆಯರು ಕೂದಲನ್ನು ಕಟ್ ಮಾಡಿಸಿಕೊಳ್ಳುತ್ತಾರೆ.  ಆ....ಭಾವನೆ ಕೆರಳಿಸಿ, ಆತ ಅದೇ ನಿರೀಕ್ಷೆಯಲ್ಲಿ ಇರುತ್ತಾನೆ!!

ಅದರ ಹಿಂದೆ ಹಲವಾರು ಕಾರಣಗಳು ಇರಬಹುದು.ಪುರುಷರಿಗೆ ತಮ್ಮ ಸಂಗಾತಿಗೆ ಉದ್ದ ಕೂದಲು ಇರಬೇಕೆಂಬ ಕೋರಿಕೆ ಇರುತ್ತದೆ. ಆ ಕೂದಲಿನ ಜೊತೆಗೆ ಆಟವಾಡಬೇಕು ಎಂಬ ಆಸೆ ಅವರದು. ಅದಕ್ಕೆ ಹೂವು ಮುಡಿದರೂ ಚೆಂದ, ಮುಡಿಯದಿದ್ದರೂ ಚೆಂದ, ಬಗೆಬಗೆಯ ಜಡೆ ಹಾಕಿದರೆ ಇನ್ನೂ ಚೆನ್ನ. ಜಡೆಯೇ ಹಾಕದಿದ್ದರೂ ಚೆನ್ನ ಎಂಬುದು ಇವರ ಅಭಿಮತ. ಆದರೆ ಒಂದು ವಿಚಾರ ನೆನಪಿಡಿ, ನಿಮ್ಮ ಗರ್ಲ್ ಫ್ರೆಂಡ್ ಕೂದಲು ಕತ್ತರಿಸಿಕೊಂಡಲ್ಲಿ ಈ ಮಾತುಗಳನ್ನು ಅಪ್ಪಿ ತಪ್ಪಿ ಸಹ ಆಕೆಯ ಮುಂದೆ ಹೇಳಬೇಡೀ.... 

ಅಯ್ಯೋ ನಿನಗೆ ಉದ್ದ ಕೂದಲೇ ಚೆನ್ನಾಗಿತ್ತು!

ಅಯ್ಯೋ ನಿನಗೆ ಉದ್ದ ಕೂದಲೇ ಚೆನ್ನಾಗಿತ್ತು!

ನೀವು ಆಕೆ ಉದ್ದ ಕೂದಲಿನಲ್ಲಿ ಸುಂದರ ಕಾಣುತ್ತಿದ್ದಳು ಎಂದು ಹೇಳುವುದಕ್ಕಾಗಿ ಈ ಮಾತನ್ನು ಹೇಳಿರಬಹುದು. ಆದರೆ ನಿಮ್ಮ ಮಾತಿನಿಂದ ಆಕೆ ನೊಂದುಕೊಳ್ಳುತ್ತಾಳೆ. ಏಕೆಂದರೆ ಈಗ ಆಕೆಯ ಹೇರ್ ಸ್ಟೈಲ್‌ನಲ್ಲಿ ಆಕೆ ಚೆನ್ನಾಗಿ ಕಾಣುತ್ತಿಲ್ಲ ಎಂದು ಹೇಳುತ್ತಿದ್ದೀರಿ. ಇದರಿಂದ ಆಕೆಯ ಮೂಡ್ ಹಾಳಾಗುತ್ತದೆ. ಮತ್ತೆ ಆಕೆ ಸರಿ ಹೋಗಲು ಗಂಟೆಗಳು ಅಥವಾ ದಿನಗಳು ಬೇಕಾಗಬಹುದು.

ಅಯ್ಯೋ ದೇವರೇ! ಇದು ಬೆಳೆಯೋದಿಕ್ಕೆ ವರ್ಷಗಳೇ ಬೇಕು!

ಅಯ್ಯೋ ದೇವರೇ! ಇದು ಬೆಳೆಯೋದಿಕ್ಕೆ ವರ್ಷಗಳೇ ಬೇಕು!

ಇದು ಆಕೆಗೆ ಶಾಕ್ ಆಗುತ್ತದೆ! ಆಕೆಗೂ ಗೊತ್ತು ಕೂದಲು ಬೆಳೆಯಲು ವರ್ಷಗಳೇ ಬೇಕು ಎಂದು ಆದರೆ ಆಕೆಯ ಹೇರ್ ಸ್ಟೈಲ್ ಅನ್ನು ನೀವು ಹೊಗಳುವ ಬದಲಿಗೆ ಆಕೆಗೆ ಶಾಕ್ ಕೊಟ್ಟರೆ ಹೇಗೆ? ಆಕೆ ನಿಮ್ಮನ್ನು ಭೇಟಿ ಮಾಡದೆ ಮನೆಯೊಳಗೆ ಇರಬೇಕಾಗಬಹುದು.

ಏನು ಶಾಂಪೂವನ್ನು ಉಳಿಸಬೇಕೆಂದುಕೊಂಡೆಯಾ?

ಏನು ಶಾಂಪೂವನ್ನು ಉಳಿಸಬೇಕೆಂದುಕೊಂಡೆಯಾ?

ಇಂತಹ ಉದಾಸೀನದಿಂದ ಕೂಡಿದ ಮಾತುಗಳು ವಾದ ವಿವಾದಗಳಿಗೆ ದಾರಿ ಮಾಡಿಕೊಡುತ್ತದೆ! ನಿಮ್ಮ ಗರ್ಲ್ ಫ್ರೆಂಡ್ ನಿಮ್ಮನ್ನು ಕೆಲವು ವಾರಗಳವರೆಗೆ ಅಪ್ಪಿಕೊಳ್ಳುವುದೂ ಇಲ್ಲ, ಮುತ್ತನ್ನು ಸಹ ಕೊಡುವುದಿಲ್ಲ!

 ಒಳ್ಳೆಯ ಎಕ್ಸ್‌ಪೆರಿಮೆಂಟ್!

ಒಳ್ಳೆಯ ಎಕ್ಸ್‌ಪೆರಿಮೆಂಟ್!

ಆಕೆಯ ಸ್ಟೈಲ್ ಅನ್ನು ಪ್ರಯೋಗ ಎಂದು ಕರೆಯಬೇಡಿ. ಇದರಿಂದ ಆಕೆಗೆ ನೋವಾಗುತ್ತದೆ ಮತ್ತು ನಿರಾಸೆಯಾಗುತ್ತದೆ! ಆಕೆಗೆ ಇಷ್ಟ ಎಂದು ನೀವು ಒಂದು ಅಡುಗೆ ಮಾಡಿದಾಗ ಆಕೆ ಅದನ್ನು "ಪ್ರಯೋಗ" ಎಂದು ಕರೆದರೆ ನಿಮಗೆ ಹೇಗೆ ಅನಿಸುತ್ತದೆಯಲ್ಲವೇ?

ತುಂಬಾ ಧೈರ್ಯ ಮಾಡಿ ನಿರ್ಧಾರಕ್ಕೆ ಬಂದಿದ್ದೀಯಾ!

ತುಂಬಾ ಧೈರ್ಯ ಮಾಡಿ ನಿರ್ಧಾರಕ್ಕೆ ಬಂದಿದ್ದೀಯಾ!

ಧೈರ್ಯ ಎಂತಹದು ಬಂತು? ಆಕೆಯ ಕೂದಲು! ಆಕೆಯ ಇಷ್ಟ. ಆಕೆ ತನಗೆ ಬೇಕಾದ ಹಾಗೆ ಕೂದಲನ್ನು ಕಟ್ ಮಾಡಿಕೊಂಡರೆ ಧೈರ್ಯ ಎಂದು ಹೇಳಿ ಆಕೆಗೆ ಅವಮಾನ ಮಾಡಬೇಡಿ. ಆಕೆಗೆ ಅಷ್ಟು ಸ್ವಾತಂತ್ರ್ಯ ಇರುತ್ತದೆ.

ಎಷ್ಟು ಕೊಟ್ಟೆ?

ಎಷ್ಟು ಕೊಟ್ಟೆ?

ಆಕೆಯ ಸ್ಟೈಲ್ ಅನ್ನು ದುಡ್ಡಿನಿಂದ ಅಳೆಯಬೇಡಿ. ಆಕೆಯ ಅಂದವನ್ನು ಮಾತ್ರ ಹೊಗಳಿ. ಆಕೆಯ ಸೌಂದರ್ಯಕ್ಕಿಂತ ದುಡ್ಡು ಹೆಚ್ಚಲ್ಲ ಎಂಬುದನ್ನು ನೆನಪಿಡಿ. ದುಡ್ಡಿನ ಮಾತು ಎತ್ತಿದರೆ ಆಕೆಗೆ ನೋವಾಗುತ್ತದೆ.

ನಿನಗೆ ತುಂಡು ಕೂದಲು ಎಂದರೆ ಇಷ್ಟವೇ?

ನಿನಗೆ ತುಂಡು ಕೂದಲು ಎಂದರೆ ಇಷ್ಟವೇ?

ಹೌದು, ಅದಕ್ಕಾಗಿ ತಾನೇ ಆಕೆ ಕಟ್ ಮಾಡಿಸಿರುವುದು. ಅನಾವಶ್ಯಕವಾದ ಮಾತು ಇದು. ಇಂತಹ ಪ್ರಶ್ನೆಗಳು ಆಕೆಗೆ ಮುಜುಗರವನ್ನು ಉಂಟು ಮಾಡುತ್ತವೆ. ನಿಮಗೆ ತುಂಡು ಕೂದಲು ಇಷ್ಟವಿಲ್ಲ ಎಂದು ಈ ಮೂಲಕ ಹೇಳುತ್ತಿರುವಿರಿ.

 ಕೂದಲು ಆಕೆಯ ಇಷ್ಟ

ಕೂದಲು ಆಕೆಯ ಇಷ್ಟ

ಕೂದಲನ್ನು ಹೇಗೆ ಅಲಂಕರಿಸಿಕೊಳ್ಳಬೇಕು ಎಂಬುದು ಆಕೆಗೆ ಗೊತ್ತು. ಅದಕ್ಕಾಗಿ ನೀವು ಒತ್ತಡ ಹೇರಬೇಡಿ. ಆಕೆಯನ್ನು ಆಕೆಯ ಇಷ್ಟದಂತೆ ಬಿಡಿ. ನಿಮ್ಮ ಅಭಿಪ್ರಾಯಗಳನ್ನು ಸಹ ಬೇರೆ ರೀತಿಯಲ್ಲಿ ಹೇಳಬಹುದು. ಅದಕ್ಕಾಗಿ ಆಕೆಗೆ ಮನ ನೋಯಿಸುವಂತೆ ಮಾತನಾಡುವುದನ್ನು ಮೊದಲು ಬಿಡಿ. ಮೊದಲು ಆಕೆಯ ಇಷ್ಟವನ್ನು ಅರಿತುಕೊಳ್ಳಿ. ಆಗ ಎಲ್ಲವೂ ಸುಂದರವಾಗಿ ಕಾಣುತ್ತದೆ.

English summary

Things You Shouldn't Say When Your Girlfriend Cuts Her Hair

If you are a man who is obsessed with long hair, it is better not to display your obsession especially when your girlfriend gets a haircut! Dear men, here are things you shouldn't say when your girlfriend goes for a hair cut!
Subscribe Newsletter