For Quick Alerts
ALLOW NOTIFICATIONS  
For Daily Alerts

  ಮದುವೆಯ ವಿಚಾರದಲ್ಲಿ ಗಡಿಬಿಡಿಬೇಡ!! ಯಾವುದಕ್ಕೂ ಈ ಸಂಗತಿಗಳು ನೆನಪಿರಲಿ...

  By Deepu
  |
  देवउठनी एकादशी : इस साल शादी के हैं सिर्फ 14 मुहूर्त |Marriage muhurat in 2017| Boldsky

  ಮಾನವ ಯಾವತ್ತಿದ್ದರೂ ಸಂಘ ಜೀವಿ. ಆತನಿಗೆ ಹೆಚ್ಚು ಕಾಲ ಏಕಾಂಗಿಯಾಗಿ ಇರಲು ಸಾಧ್ಯವಿಲ್ಲ. ಜೀವನದ ಪ್ರತಿಯೊಂದು ಘಟ್ಟದಲ್ಲಿ ಆತನಿಗೆ ಬೇರೆಯವರ ನೆರವ ಬೇಕೇಬೇಕು. ಅದರಲ್ಲೂ ಯೌವನದ ದಿನಗಳಲ್ಲಿ ನಾವು ಯಾರೊಂದಿಗೆ ಇರುತ್ತೇವೆ ಮತ್ತು ಮುಂದಿನ ಜೀವನವನ್ನು ಅವರೊಂದಿಗೆ ಸಾಗಿಸಲು ಬದ್ಧರಾಗಿದ್ದೇವೆಯಾ ಎನ್ನುವುದನ್ನು ತಿಳಿಯುವುದು ಮುಖ್ಯ. ಯಾಕೆಂದರೆ ನಾವು ತೆಗೆದುಕೊಳ್ಳುವಂತಹ ಒಂದು ನಿರ್ಧಾರವು ಸಂಪೂರ್ಣ ಜೀವನದ ಮೇಲೆ ಪರಿಣಾಮ ಬೀರುವುದು. ನಮ್ಮ ಆಯ್ಕೆ ಸರಿಯಾಗಿದ್ದರೆ ಜೀವನ ಕೂಡ ಸುಗಮವಾಗಿ ಸಾಗುವುದು. ಜೀವನವೆಂದ ಮೇಲೆ ಸಣ್ಣಪುಟ್ಟ ಮನಸ್ತಾಪಗಳು ಇದ್ದೇ ಇರುವುದು. ಆದರೆ

  ಇದನ್ನು ಅರಿತುಕೊಂಡು ಹೊಂದಾಣಿಕೆಯಿಂದ ಜೀವನ ಸಾಗಿಸಿದರೆ ಯಾವುದೇ ಸಮಸ್ಯೆಯಾಗದು.

  ವೈವಾಹಿಕ ಜೀವನ ಸಂತೋಷವಾಗಿರಬೇಕೆಂದರೆ ಸರಿಯಾದ ಸಂಗಾತಿಯ ಆಯ್ಕೆ ಅತೀ ಅಗತ್ಯ ಎಂದು ಅಧ್ಯಯನಗಳು ಹೇಳಿವೆ. ಸರಿಯಾದ ಸಂಗಾತಿ ಹಾಗೂ ಬೆಂಬಲ ನಿಮಗೆ ಸಿಕ್ಕಿದರೆ ಆಗ ಖಂಡಿತವಾಗಿಯೂ ಜೀವನದಲ್ಲಿ ನೀವು ಉನ್ನತಿಯನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯು ಜವಾಬ್ದಾರಿಯುತ, ಪ್ರೌಢ, ಅರ್ಥಮಾಡಿಕೊಳ್ಳಬಲ್ಲ ಮತ್ತು ನಿಮ್ಮ ಹಾಗೂ ನಿಮ್ಮ ಭಾವನೆ, ಗುರಿ ಮತ್ತು ಸುಖದುಃಖಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಂದಿನ ಯುವಜನಾಂಗವು ತುಂಬಾ ಚಂಚಲ ಮನಸ್ಥಿತಿಯವರು. ವಿವಿಧ ಕಾರಣಗಳಿಂದ ಅವರು ಬೇರೆ ವ್ಯಕ್ತಿ ಕಡೆಗೆ ಬೇಗನೆ ಆಕರ್ಷಿತರಾಗುವರು. ಸಂಬಂಧದಲ್ಲಿದ್ದರೂ ಕೆಲವೊಮ್ಮೆ ಮತ್ತೊಬ್ಬ ವ್ಯಕ್ತಿಯ ಕಡೆಗೆ ಆಕರ್ಷಿತರಾಗುವುದು ಸಾಮಾನ್ಯವೆನ್ನುವಂತಾಗಿದೆ.

  ನೀವು ತುಂಬಾ ದೀರ್ಘ ಸಮಯದಿಂದ ಯಾರೊಂದಿಗಾದರೂ ಒಳ್ಳೆಯ ಸಂಬಂಧವನ್ನು ಕಾಯ್ದುಕೊಂಡಿದ್ದರೆ ಅದು ಒಳ್ಳೆಯದು. ಆದರೆ ಮದುವೆ ಎನ್ನುವುದು ತುಂಬಾ ಸೂಕ್ಷ್ಮ ನಿರ್ಧಾರವಾಗಿದೆ. ಇದರ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ನಿಮ್ಮ ಒಂದು ನಿರ್ಧಾರ ಜೀವನವನ್ನೇ ಬದಲಾಯಿಸಬಹುದು ಅಥವಾ ಜೀವನದ ಮೇಲೆ ಪರಿಣಾಮ ಬೀರಬಹುದು. ಸಂಗಾತಿ ಜತೆ ನೀವು ಮದುವೆ ಪ್ರಸ್ತಾವವನ್ನು ಇಡುವ ಮೊದಲು ಯಾವ ರೀತಿಯ ಅಂಶಗಳನ್ನು ಗಮನಿಸಿಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದರ ಬಗ್ಗೆ ತಿಳಿಯಿರಿ.

   ನಿಮ್ಮಿಬ್ಬರ ಜೀವನದ ಗುರಿ ಒಂದೇ ಆಗಿದೆಯಾ?

  ನಿಮ್ಮಿಬ್ಬರ ಜೀವನದ ಗುರಿ ಒಂದೇ ಆಗಿದೆಯಾ?

  ಮದುವೆ ವೇಳೆ ನೀವು ಪರಿಗಣಿಸಬೇಕಾದ ಪ್ರಮುಖ ವಿಚಾರವೆಂದರೆ ನಿಮ್ಮ ಸಂಗಾತಿ ಮದುವೆ ಬಳಿಕ ವೃತ್ತಿಯಲ್ಲಿ ಮುಂದುವರಿಯುತ್ತಾರೆಯಾ ಎನ್ನುವುದು. ನಿಮ್ಮ ಜೀವನದಲ್ಲಿ ಪ್ರಮುಖ ಗುರಿ ಯಾವುದು? ನೀವು ವೃತ್ತಿಯಲ್ಲಿ ಬದಲಾವಣೆ ಬಯಸಿದರೆ ಆಗ ನಿಮ್ಮ ಸಂಗಾತಿ ಭಾವನಾತ್ಮಕ ಹಾಗೂ ಆರ್ಥಿಕವಾಗಿ ಬೆಂಬಲ ನೀಡಬಹುದೇ? ನೀವಿಬ್ಬರು ಜತೆಯಾಗಿ ಇರುವುದು ಮತ್ತು ಭವಿಷ್ಯದಲ್ಲಿ ಯಶಸ್ಸು ಪಡೆಯುವುದನ್ನು ನೋಡುತ್ತೀರಾ? ಈ ಎಲ್ಲಾ ಪ್ರಶ್ನೆಗಳಿಗೆ ಹೌದು ಎನ್ನುವ ಉತ್ತರವಿದ್ದರೆ ಮದುವೆ ನಿರ್ಧಾರದಲ್ಲಿ ಮುಂದೆ ಸಾಗಿ.

  ನಿಮ್ಮಿಬ್ಬರ ಜೀವನದ ಗುರಿ ಒಂದೇ ಆಗಿದೆಯಾ?

  ನಿಮ್ಮಿಬ್ಬರ ಜೀವನದ ಗುರಿ ಒಂದೇ ಆಗಿದೆಯಾ?

  ಭಾರತದಲ್ಲಿ ಮದುವೆ ಎನ್ನುವುದು ಕೇವಲ ಎರಡು ಜೀವಗಳ ಮಿಲನವಲ್ಲ. ಇದು ಎರಡು ಕುಟುಂಬಗಳನ್ನು ಒಟ್ಟು ಸೇರಿಸುತ್ತದೆ. ಇಲ್ಲಿ ಕುಟುಂಬವು ಮುಖ್ಯವಾಗಿರುವುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಗಾತಿಯು ಹೊಂದಾಣಿಕೆಯಲ್ಲಿರಬೇಕು. ಇಲ್ಲವಾದಲ್ಲಿ ಕೆಲವೊಂದು ಕೌಟುಂಬಿಕ ಕಾರ್ಯಕ್ರಮಗಳು ನಿಮಗಿಬ್ಬರಿಗೆ ಮುಜುಗರ ಉಂಟುಮಾಡಬಹುದು. ನಿಮ್ಮ ಸಂಗಾತಿಯನ್ನು ಕುಟುಂಬದವರು ಒಪ್ಪದೇ ಇದ್ದರೆ ಅದು ಬೇಡವೆನ್ನುವ ಅರ್ಥ.

  ಸಂಗಾತಿಯು ನಿಮ್ಮ ಆಸಕ್ತಿಯನ್ನು ಆಕೆ/ಆತನಿಗಿಂತ ಹೆಚ್ಚೆಂದು ಪರಿಗಣಿಸುತ್ತಾಳೆ/ನಾ?

  ಸಂಗಾತಿಯು ನಿಮ್ಮ ಆಸಕ್ತಿಯನ್ನು ಆಕೆ/ಆತನಿಗಿಂತ ಹೆಚ್ಚೆಂದು ಪರಿಗಣಿಸುತ್ತಾಳೆ/ನಾ?

  ವೈವಾಹಿಕ ಜೀವನದಲ್ಲಿ ಕೆಲವೊಂದು ಸಂದರ್ಭದಲ್ಲಿ ಸಂಗಾತಿಯು ನೀವು ಬಯಸಿರುವುದನ್ನು ಮಾಡಲು ಬಿಡಬೇಕಾದ ಸಂದರ್ಭ ಬರಬಹುದು. ಇದಕ್ಕಾಗಿ ಆತ/ಆಕೆ ಯಾವುದೇ ರೀತಿಯ ತ್ಯಾಗ ಮಾಡಬೇಕೆನ್ನುವುದು ಇದರ ಅರ್ಥವಲ್ಲ. ಅವರು ಕೇವಲ ಸಂಬಂಧಕ್ಕೆ ಹೆಚ್ಚು ಬೆಲೆ ನೀಡುತ್ತಿದ್ದಾರೆ ಎನ್ನುವುದೇ ಇದರರ್ಥ.

  ಸಂಬಂಧದ ಬಗ್ಗೆ ಸಂಗಾತಿಗೆ ಗಂಭೀರತೆ ಇದೆಯಾ ಮತ್ತು ಇದರಲ್ಲಿ ಮುಂದುವರಿಯಲು ಬಯಸುತ್ತಾರೆಯಾ?

  ಸಂಬಂಧದ ಬಗ್ಗೆ ಸಂಗಾತಿಗೆ ಗಂಭೀರತೆ ಇದೆಯಾ ಮತ್ತು ಇದರಲ್ಲಿ ಮುಂದುವರಿಯಲು ಬಯಸುತ್ತಾರೆಯಾ?

  ನಿಮ್ಮ ಜತೆಗೆ ಜೀವನ ಸಾಗಿಸುವ ಬಗ್ಗೆ ಸಂಗಾತಿಯು ಸೂಚನೆ ನೀಡಿದ್ದಾನೆಯಾ? ನಿಮ್ಮ ಜತೆಗೆ ಆತ/ಆಕೆ ಜೀವನಪೂರ್ತಿ ಇರಬೇಕೆಂದು ಆಕೆ/ಆತ ಯಾವುದಾದರೂ ಸುಳಿವು ನೀಡುತ್ತಿದ್ದಾರೆಯಾ? ಹೀಗೆ ಇದ್ದರೆ ನೀವು ಮುಂದುವರಿಯಿರಿ. ನಿಮ್ಮ ಸಂಗಾತಿಗೆ ಇನ್ನು ಹೆಚ್ಚಿನ ಸಮಯ ಬೇಕಿದ್ದರೆ ಅಥವಾ ಬದ್ಧತೆಗೆ ತಯಾರಿಲ್ಲದೆ ಇದ್ದರೆ ನಿಮ್ಮ ನಿವೇದನೆ ತಿರಸ್ಕೃತವಾಗಬಹುದು.

  ಸಂಗಾತಿಯು ನಿಮಗೆ ತುಂಬಾ ಭಾವನಾತ್ಮಕವಾಗಿ ಬೆಂಬಲ ನೀಡುತ್ತಾಳಾ? ನೆಯಾ?

  ಸಂಗಾತಿಯು ನಿಮಗೆ ತುಂಬಾ ಭಾವನಾತ್ಮಕವಾಗಿ ಬೆಂಬಲ ನೀಡುತ್ತಾಳಾ? ನೆಯಾ?

  ಜೀವನದ ಸಣ್ಣಸಣ್ಣ ವಿಷಯಗಳಿಗೂ ನಿಮ್ಮ ಸಂಗಾತಿ ಜತೆಗೆ ವಾಗ್ವಾದ ಮಾಡುತ್ತಾ ಇದ್ದೀರಾ? ನೀವು ಸರಿಯೆಂದು ಭಾವಿಸಿದ ನಿರ್ಧಾರವನ್ನು ಅವರು ತಪ್ಪೆಂದು ಭಾವಿಸುತ್ತಾರೆಯಾ? ಹೀಗಿದ್ದರೆ ಇದು ಮದುವೆ ಬಳಿಕವೂ ಮುಂದುವರಿಯಲಿದೆ. ನಿಮ್ಮ ಗುರಿಯನ್ನು ತಲುಪಲು ಸಂಗಾತಿಯು ಯಾವತ್ತೂ ನಿಮಗೆ ಅಡ್ಡಿಯಾಗಲಾರರು. ನಿಮ್ಮ ನಿರ್ಧಾರವು ತಪ್ಪಾಗಿದ್ದಾಗ ಆಕೆ/ಆತ ನಿಮ್ಮನ್ನು ಅರ್ಥ ಮಾಡಿಕೊಂಡು ಬೆಂಬಲ ನೀಡಬಹುದು.

  ಗುಟ್ಟುಗಳನ್ನು ನಿಮ್ಮಲ್ಲೇ ಇರಿಸಿಕೊಳ್ಳುತ್ತೀರಾ?

  ಗುಟ್ಟುಗಳನ್ನು ನಿಮ್ಮಲ್ಲೇ ಇರಿಸಿಕೊಳ್ಳುತ್ತೀರಾ?

  ನಿಮ್ಮ ಸಂಗಾತಿ ಮತ್ತು ನಿಮ್ಮಲ್ಲಿ ಕೆಲವೊಂದು ಗುಟ್ಟುಗಳು ಇವೆಯಾ? ಹಾಗಾದರೆ ಎಲ್ಲಾ ಗುಟ್ಟುಗಳನ್ನು ನೀವು ಹೊರಗೆ ಹಾಕುವುದು ತುಂಬಾ ಒಳ್ಳೆಯದು. ಗುಟ್ಟನ್ನು ಹೇಳಿಕೊಳ್ಳುವುದರಿಂದ ನೀವು ಮತ್ತಷ್ಟು ಹತ್ತಿರವಾಗಲಿದ್ದೀರಿ ಮತ್ತು ಪರಸ್ಪರರ ಮಧ್ಯೆ ನಂಬಿಕೆ ಹೆಚ್ಚಾಗಲಿದೆ. ಕೆಲವೊಂದು ಗುಟ್ಟನ್ನು ಗುಟ್ಟಾಗಿಯೇ ಇಟ್ಟುಕೊಳ್ಳಬೇಕು. ಆದರೆ ಗಂಭೀರ ಅನಾರೋಗ್ಯ ಮತ್ತು ಮಾನಸಿಕತೆಗೆ ಸಂಬಂಧಪಟ್ಟ ವಿಷಯಗಳಲ್ಲ.

  ಸಂಗಾತಿ ನಿಮಗೆ ಗೌರವ ನೀಡುತ್ತಾಳೆ?ನಾ?

  ಸಂಗಾತಿ ನಿಮಗೆ ಗೌರವ ನೀಡುತ್ತಾಳೆ?ನಾ?

  ಸಂಬಂಧದಲ್ಲಿ ಪರಸ್ಪರರನ್ನು ಗೌರವಿಸುವುದು ಅತೀ ಅಗತ್ಯವಾಗಿದೆ. ಸಂಗಾತಿಯು ನಿಮ್ಮನ್ನು ಹೀಯಾಳಿಸುತ್ತಿದ್ದರೆ ಅಥವಾ ಯಾವಾಗಲೂ ಅಗೌರವ ಸೂಚಿಸುತ್ತಿದ್ದರೆ ನಿಮ್ಮೊಂದಿಗೆ ಸಂಗಾತಿ ಗಂಭೀರವಾಗಿಲ್ಲವೆಂದರ್ಥ. ನಿಮ್ಮ ಮಾತನ್ನು ಕೇಳದೆ ಇರುವುದು ಅಥವಾ ನಿಮ್ಮ ಅಭಿಪ್ರಾಯವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಇದರ ಸೂಚನೆಗಳು. ಇದು ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟು ಮಾಡಬಹುದು.

  ನಿಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ಸಂಗಾತಿಗೆ ತಿಳಿದಿದೆಯಾ?

  ನಿಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ಸಂಗಾತಿಗೆ ತಿಳಿದಿದೆಯಾ?

  ನಿಮ್ಮ ಸಂಗಾತಿಗೆ ನಿಮ್ಮ ಆಸ್ತಿ, ಸಾಲ, ಕೆಲಸ, ಕಂಪೆನಿಯಲ್ಲಿ ನಿಮ್ಮ ಹುದ್ದೆ ಮತ್ತು ಸಂಬಳದ ಬಗ್ಗೆ ತಿಳಿದಿದೆಯಾ? ನಿಮ್ಮ ಸಂಗಾತಿಗೆ ಹಣಕಾಸಿನ ಎಲ್ಲಾ ವಿಚಾರಗಳು ತಿಳಿಯಬೇಕು ಮತ್ತು ಇದರ ಬಗ್ಗೆ ಅವರಿಗೆ ಸಮಾಧಾನವಿರಬೇಕು. ಹಣಕಾಸಿನ ವಿಚಾರವಾಗಿ ಅವರನ್ನು ಕತ್ತಲೆಯಲ್ಲಿ ಇಟ್ಟರೆ ಮದುವೆ ಬಳಿಕ ಇದು ನಿಮಗೆ ತೊಂದರೆ ಉಂಟು ಮಾಡಬಹುದು.

  ನೀವು ಮತ್ತು ಸಂಗಾತಿ ಪರಸ್ಪರ ಪ್ರೀತಿಸುತ್ತಿದ್ದೀರಾ?

  ನೀವು ಮತ್ತು ಸಂಗಾತಿ ಪರಸ್ಪರ ಪ್ರೀತಿಸುತ್ತಿದ್ದೀರಾ?

  ಯಾವುದೇ ಸಂಬಂಧವು ದೀರ್ಘಕಾಲ ಉಳಿಯಬೇಕಾದರೆ ಪ್ರೀತಿ ಅತೀ ಅಗತ್ಯ. ಸಂಗಾತಿಯನ್ನು ಪ್ರೀತಿಸದೆ ಇದ್ದರೆ ಆಗ ಸಂಬಂಧವು ದೀರ್ಘಕಾಲ ಉಳಿಯದು. ಸಂಗಾತಿಯನ್ನು ನೀವು ಯಾವುದೇ ಕರಾರು ಇಲ್ಲದೆ ಪ್ರೀತಿಸಬೇಕು ಮತ್ತು ಅವರ ನ್ಯೂನ್ಯತೆಗಳನ್ನು ಒಪ್ಪಿಕೊಳ್ಳಬೇಕು. ದೈಹಿಕ ಸೌಂದರ್ಯದ ಮೇಲೆ ನೀವು ಪ್ರೀತಿಸುತ್ತಾ ಇದ್ದರೆ ಆಗ ಅದು ಬೇಗನೆ ಮಬ್ಬಾಗುವುದು. ನಿಮ್ಮ ಪ್ರೀತಿಯು ಅವರೊಂದಿಗೆ ಜೀವನ ಕಳೆಯಲು ಸಾಕಾಗಬಹುದೇ? ಸಂಗಾತಿಯೊಂದಿಗೆ ನಿಮಗೆ ಕೂಡ ವಯಸ್ಸಾಗುತ್ತಾ ಇದೆ ಎನ್ನುವುದರ ಬಗ್ಗೆ ಭೀತಿ ಪಡಬೇಡಿ. ಯಾವಾಗಲೂ ಸಂತೋಷವಾಗಿರಿ.

  English summary

  Things To Tick Before Popping The “Will You Marry Me” Question

  Human beings are essentially social creatures. We need to be in the company of others. But apart from that, all of us long for that special someone in life, whom we want to spend the rest of our lives with. Marriage is a very big step in everyone's life. Committing to one person and sharing your life with them in very complicated, but it is all the more special if you have found the right person. If you are in a relationship since a long time and are both happy and compatible with each other, then it is time to finally pop the question.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more