ಮೊದಲ ಭೇಟಿಯಲ್ಲಿ ಪುರುಷನಲ್ಲಿ ಮಹಿಳೆ ಹುಡುಕುವ ಗುಣಗಳು

Posted By: Lekhaka
Subscribe to Boldsky

ಮೊದಲ ಭೇಟಿ ಮತ್ತು ತುಂಬಾ ಅಗತ್ಯವಾಗಿರುವುದು. ನೀವು ಒಬ್ಬಳು ಹುಡುಗಿಯನ್ನು ಮೊದಲ ನೋಟದಲ್ಲೇ ಪ್ರೀತಿಸಲು ಆರಂಭಿಸಬಹುದು. ಇದು ಮೊದಲ ಸಲ ಉಂಟಾದ ಆಕರ್ಷಣೆ ಎನ್ನಬಹುದು. ಆದರೆ ನೀವು ಆಕೆಯನ್ನು ಪ್ರೀತಿಸಲು ಆರಂಭಿಸಿರುವುದು ನಿಜ. ಆದರೆ ಹುಡುಗಿಯರು ಆಗಲ್ಲ. ನಿಮ್ಮನ್ನು ಮೊದಲ ಸಲ ಭೇಟಿ ಮಾಡಿದಾಗ ಅವರು ನಿಮ್ಮಲ್ಲಿರುವ ಹಲವಾರು ಗುಣಗಳು ಹಾಗೂ ಲಕ್ಷಣಗಳನ್ನು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಾ ಇರುತ್ತಾರೆ.

ತಮ್ಮ ಬೇಕು ಬೇಡಗಳ ಪಟ್ಟಿಯು ಅವರ ಮನಸ್ಸಿನಲ್ಲಿ ಪ್ರಿಂಟಾಗುತ್ತಾ ಇರುವುದು. ಇದರಿಂದ ಮೊದಲ ಸಲ ನೀವು ಹುಡುಗಿಯನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದರೆ ಕೆಲವೊಂದು ವಿಷಯಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಯಾಕೆಂದರೆ ಈ ಭೇಟಿಯೇ ನಿಮ್ಮ ಅಂತಿಮ ಭೇಟಿಯಾಗಬಾರದು. ನೀವು ಧರಿಸಿರುವ ಬಟ್ಟೆಯಿಂದ ಹಿಡಿದು ಆಕೆಯೊಂದಿಗೆ ಮಾತನಾಡುವ ರೀತಿ ಪ್ರತಿಯೊಂದನ್ನೂ ಗಮನಿಸಲಾಗುವುದು.

ಗಂಡ-ಹೆಂಡತಿಯರ ನಡುವೆ ಹೀಗೆಲ್ಲಾ ಆದರೆ, ಜೀವನ ಬಲು ಕಷ್ಟ!

ಮೊದಲ ಸಲ ನೀವು ಹುಡುಗಿಯನ್ನು ಭೇಟಿಯಾದಾಗ ಆಕೆಯನ್ನು ಆಕರ್ಷಿಸಲು ಪ್ರಯತ್ನಿಸುವ ಮೊದಲು ಹಲವಾರು ವಿಷಯಗಳನ್ನು ಕಲಿತುಕೊಳ್ಳುವುದು ಅತೀ ಅಗತ್ಯ. ನಿಮ್ಮ ವೈಯಕ್ತಿಕತೆ ಮತ್ತು ವ್ಯಕ್ತಿತ್ವವನ್ನು ಬದಗಿಟ್ಟು ಯಾವುದೇ ಬದಲಾವಣೆ ಮಾಡಲು ಹೋಗಬೇಡಿ. ಮೊದಲ ಭೇಟಿ ವೇಳೆ ಹುಡುಗಿಯು ಹುಡುಗನಲ್ಲಿ ಏನನ್ನು ಹುಡುಕುತ್ತಾಳೆ ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.... 

ಕಣ್ಣುಗಳು

ಕಣ್ಣುಗಳು

ಕಣ್ಣುಗಳು ಆತ್ಮಕ್ಕೆ ಕಿಂಡಿ ಇದ್ದಂತೆ ಎನ್ನುವ ಮಾತಿದೆ. ಇದಕ್ಕೆ ಇರಬೇಕು. ಮೊದಲ ಭೇಟಿ ವೇಳೆ ಹುಡುಗಿಯರು ತನ್ನ ಜತೆಗಾರನ ಕಣ್ಣುಗಳನ್ನೇ ಹೆಚ್ಚು ಗಮನಿಸುವಳು. ಕೆಲವರ ಕಣ್ಣುಗಳ ಆಕಾರ ಸಣ್ಣದು ಹಾಗೂ ಬಣ್ಣ ಬೇರೆಯಾಗಿರುವುದು. ಇದು ನೋಡಲು ತುಂಬಾ ಆಕರ್ಷಕವಾಗಿರುವುದು. ಕೆಲವು ಹುಡುಗಿಯರು ಕಣ್ಣಿನಲ್ಲೇ ಕಣ್ಣಿಟ್ಟು ನೋಡಿಕೊಂಡು ಹುಡುಗನ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವರು. ಕಣ್ಣುಗಳು ತುಂಬಾ ಸುಂದರ, ಆಕರ್ಷಕ ಅಥವಾ ಕ್ರೂರವಾಗಿದೆ ಎಂದು ಬಣ್ಣಿಸುವರು. ಕಣ್ಣಿನಿಂದಲೇ ಮುಂದಿನ ಸಂಬಂಧ ನಿರ್ಧರಿಸುವ ಧೈರ್ಯ ಹುಡುಗಿಯರು ಮಾಡುವರು.

ದೇಹಭಾಷೆ

ದೇಹಭಾಷೆ

ಕಣ್ಣುಗಳಂತೆ ಹುಡುಗನ ದೇಹಭಾಷೆಯು ಎಲ್ಲವನ್ನೂ ಹೇಳಿಬಿಡುವುದು. ಮಹಿಳೆಯರು ಅದರಲ್ಲೂ ಮೊದಲ ಸಲ ಪ್ರೀತಿಸುವ ಹುಡುಗನ ಭೇಟಿಯಾಗುವ ಹುಡುಗಿಯರು ದೇಹಭಾಷೆಗೆ ಹೆಚ್ಚಿನ ಒತ್ತು ನೀಡುವರು. ನೀವು ಕುಳಿತುಕೊಳ್ಳುವ ರೀತಿ, ಆಕೆಯನ್ನು ನೀವು ಸ್ಪರ್ಶಿಸುವ ವಿಧಾನ ಎಲ್ಲವೂ ಆಕೆಗೆ ಒಂದು ಸಂಕೇತ ಕಳುಹಿಸುವುದು. ನೀವು ತುಂಬಾ ಆರಾಮವಾಗಿರಿ. ಆದರೆ ಯಾವುದನ್ನು ನಿಲ್ಲಿಸಲು ಹೋಗಬೇಡಿ ಮತ್ತು ಆತಂಕಕ್ಕೆ ಒಳಗಾಗಬೇಡಿ.

ನಗು

ನಗು

ಪುರುಷರಲ್ಲಿ ಮೊದಲು ಏನನ್ನು ಗಮನಿಸುತ್ತೀರಾ ಎನ್ನುವ ಪ್ರಶ್ನೆಗೆ ಸಿಗುವ ಉತ್ತರ ಅವರ ನಗು. ನೀವು ನಗುವ ರೀತಿ ಮತ್ತು ಎಷ್ಟು ನಗುತ್ತೀರಿ ಎನ್ನುವುದನ್ನು ಹೆಚ್ಚಿನ ಹುಡುಗಿಯರು ಗಮನಿಸುವರು. ಹಿಂದೆ ಮಹಿಳೆಯರು ತುಂಬಾ ಬಲಶಾಲಿ, ಗಂಭೀರವಾಗಿರುವ ಪುರುಷರನ್ನು ಇಷ್ಟಪಡುತ್ತಿದ್ದರು. ಆದರೆ ಇಂದಿನ ಮಹಿಳೆಯರು ಬದಲಾಗಿದ್ದಾರೆ. ತಮ್ಮನ್ನು ನಗಿಸುವ ಹಾಗೂ ಯಾವಾಗಲೂ ನಗಿಸುತ್ತಿರುವ ಪುರುಷರನ್ನು ಇಷ್ಟಪಡುವರು. ನಗು ಮೊದಲ ಭೇಟಿಯ ವಾತಾವರಣದಲ್ಲಿ ಬದಲಾವಣೆ ಉಂಟು ಮಾಡಬಹುದು. ಮನಸ್ಸಿನ ಒಳಗಿಂದ ಬರುವಂತಹ ನಗು ನೀವು ತುಂಬಾ ಆತ್ಮವಿಶ್ವಾಸದಿಂದ ಇರುವ ವ್ಯಕ್ತಿ ಎಂದು ಅವರಿಗೆ ತಿಳಿಸಿಕೊಡಲಿದೆ.

ನೀವು ಧರಿಸಿರುವ ಬಟ್ಟೆಗಳು

ನೀವು ಧರಿಸಿರುವ ಬಟ್ಟೆಗಳು

ಕೇವಲ ಮಹಿಳೆಯರು ಮಾತ್ರ ತಮ್ಮ ಬಟ್ಟೆಗಳ ಬಗ್ಗೆ ಹೆಚ್ಚಿನ ಗಮನಹರಿಸುತ್ತಾ ಇದ್ದರು ಎನ್ನುವ ದಿನಗಳು ಈಗ ದೂರವಾಗಿದೆ. ಇಂದಿನ ದಿನಗಳಲ್ಲಿ ಪುರುಷರು ಕೂಡ ತಮ್ಮ ಬಟ್ಟೆಬರೆ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಪುರುಷರು ಧರಿಸುವಂತಹ ಬಟ್ಟೆಯಲ್ಲಿ ಅವರು ಎಷ್ಟು ಶಿಸ್ತು ಮತ್ತು ಸ್ವಚ್ಛತೆಯವರು ಎಂದು ತಿಳಿದುಬರುವುದು. ನೀವು ಸಂದರ್ಭಕ್ಕೆ ಅನುಗುಣವಾಗಿ ಬಟ್ಟೆಬರೆ ಧರಿಸುವುದು ಅತೀ ಅಗತ್ಯವಾಗಿದೆ. ಬಟ್ಟೆಗಳ ಆಯ್ಕೆ ಕೂಡ ಅತೀ ಅಗತ್ಯವಾಗಿರುವುದು.

ವಾಸನೆ

ವಾಸನೆ

ನಿಮ್ಮ ದೇಹದ ಸುಗಂಧದಿಂದಲೇ ಮಹಿಳೆಯರು ನಿಮ್ಮ ಕಡೆಗೆ ಆಕರ್ಷಿತರಾಗುವುದು ಖಚಿತ. ಇದರಿಂದ ದೇಹದ ಸುಗಂಧವು ತುಂಬಾ ಒಳ್ಳೆಯದಾಗಿರಬೇಕು. ಆದರೆ ನೀವು ತುಂಬಾ ಕೆಟ್ಟ ಡಿಯೋಡ್ರೆಂಟ್ ಬಳಸಬೇಕೆಂದು ನಾವು ಹೇಳುತ್ತಿಲ್ಲ. ಅವರ ಬದಲಿಗೆ ಸ್ವಲ್ಪ ದುಬಾರಿಯಾಗಿರುವ ಒಳ್ಳೆಯ ಗುಣಮಟ್ಟವಿರುವುದನ್ನು ಬಳಸಿ. ಆಫ್ಟರ್ ಶೇವ್ ಕೂಡ ತುಂಬಾ ಒಳ್ಳೆಯ ಸುಗಂಧವಿರುವುದನ್ನು ಬಳಸಿ. ಆಗ ನಿಮ್ಮ ಹುಡುಗಿ ಖಂಡಿತವಾಗಿಯೂ ಒಲಿಯುವಳು.

ಕೂದಲು

ಕೂದಲು

ನಿಮ್ಮ ಕೂದಲಿನ ವಿನ್ಯಾಸವು ವ್ಯಕ್ತಿತ್ವವನ್ನು ಬಿಚ್ಚಿಡುವುದು. ಇಂದಿನ ಕೆಲವೊಂದು ವಿನ್ಯಾಸಗಳು ನಿಮ್ಮ ದೇಹಕ್ಕೆ ಹೊಂದಿಕೊಳ್ಳಬಹುದು. ಆದರೆ ಇದು ಮೊದಲ ಭೇಟಿಗೆ ಹೇಳಿ ಮಾಡಿಸಿರುವುದಲ್ಲ. ಇದರ ಬದಲಿಗೆ ಪ್ರೌಢ ಮತ್ತು ಸ್ವಚ್ಛ ಕೂದಲು ನಿಮ್ಮದಾಗಿರಲಿದೆ. ತುಂಬಾ ಸ್ವಚ್ಛವಾಗಿ ಕತ್ತರಿಸಿಕೊಂಡಿರುವಂತಹ ಕೂದಲು ನಿಮ್ಮ ಹುಡುಗಿಯನ್ನು ಸೆಳೆಯುವುದನ್ನು ಸಂಶಯವೇ ಇಲ್ಲ.

ನೀವು ಎಲ್ಲಿ ನೋಡುತ್ತೀರಿ

ನೀವು ಎಲ್ಲಿ ನೋಡುತ್ತೀರಿ

ನಿಮ್ಮ ಕಣ್ಣುಗಳು ಯಾವ ಕಡೆಗೆ ಇದೆ ಎನ್ನುವುದು ಮಹಿಳೆಯರಿಗೆ ಬೇಗನೆ ತಿಳಿದುಬರುವುದು. ನಿಮ್ಮ ಕಣ್ಣುಗಳು ಬೇರೆ ಮಹಿಳೆಯರನ್ನು ಹುಡುಕುತ್ತಾ ಇದ್ದರೆ ಅದು ಖಂಡಿತವಾಗಿಯೂ ಒಳ್ಳೆಯ ಸೂಚನೆಯಲ್ಲ. ನಿಮ್ಮ ಕಣ್ಣುಗಳು ಕೇವಲ ನಿಮ್ಮ ಹುಡುಗಿಯ ಮೇಲಿರಲಿ. ನಿಮಗೆ ಆಕೆ ಎಷ್ಟು ಮುಖ್ಯ ಎನ್ನುವುದನ್ನು ಹೇಳಿ ಮತ್ತು ಆಕೆಗೆ ನೀವು ನೀಡುತ್ತಿರುವ ಪ್ರಾಮುಖ್ಯತೆ ಇಷ್ಟವಾಗುವುದು. ತುಂಬಾ ದೀರ್ಘ ಸಮಯದವರೆಗೆ ಆಕೆಯನ್ನೇ ನೋಡುತ್ತಾ ಬೇಸರ ಮೂಡಿಸಬೇಡಿ. ಇದು ಒಳ್ಳೆಯ ಸಂಕೇತವಲ್ಲ.

ವೈಯಕ್ತಿಕ ಸ್ವಚ್ಛತೆ

ವೈಯಕ್ತಿಕ ಸ್ವಚ್ಛತೆ

ಪುರುಷರು ತಮ್ಮ ಕಾಳಜಿಯನ್ನು ತಾವೇ ಇಟ್ಟುಕೊಳ್ಳಬೇಕು ಎಂದು ಹೆಚ್ಚಿನ ಮಹಿಳೆಯರು ಬಯಸುವರು. ತಮ್ಮ ಕಾಳಜಿ ಇಟ್ಟುಕೊಳ್ಳದ ವ್ಯಕ್ತಿ ಬೇರೆಯವರನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವ ಭಾವನೆ ಮೂಡುವುದು. ಲೈಂಗಿಕ ಆಕರ್ಷಣೆಗೆ ಅತೀ ಅಗತ್ಯವಾಗಿ ಬೇಕಾಗಿರುವ ವಿಚಾರವೆಂದರೆ ಅದು ವೈಯಕ್ತಿಕ ಸ್ವಚ್ಛತೆ. ನಿಮ್ಮ ವೈಯಕ್ತಿಕ ಸ್ವಚ್ಛತೆ ಒಳ್ಳೆಯದಾಗಿರದೆ ಇದ್ದರೆ ನಿಮ್ಮ ಅದ್ಭುತ ವ್ಯಕ್ತಿತ್ವ ಮತ್ತು ನಗು ಠುಸ್ಸು ಆಗುವುದು. ನೀವು ಡೇಟಿಂಗ್ ಗೆ ಹೋಗುವಾಗ ಕೂದಲು, ಗಡ್ಡ ಸರಿಯಾಗಿ ಕತ್ತರಿಸಿಕೊಳ್ಳಿ. ಉಗುರುಗಳನ್ನು ಉದ್ದಗೆ ಬಿಡಬೇಡಿ ಮತ್ತು ಹಲ್ಲುಗಳು ಹೊಳೆಯುತ್ತಿರಲಿ.

ನೀವು ಖರ್ಚು ಮಾಡುವ ರೀತಿ

ನೀವು ಖರ್ಚು ಮಾಡುವ ರೀತಿ

ಡೇಟಿಂಗ್ ವೇಳೆ ನೀವು ಯಾವ ರೀತಿ ಖರ್ಚು ಮಾಡುತ್ತೀರಿ ಎನ್ನುವುದು ನೀವು ಸಾಮಾನ್ಯವಾಗಿ ಆರ್ಥಿಕತೆಯನ್ನು ಹೇಗೆ ನಿಭಾಯಿಸುತ್ತೀರಿ ಎನ್ನುವುದನ್ನು ನಿರ್ಧರಿಸಿರುವುದು. ಮೊದಲ ಕೆಲವು ಭೇಟಿ ವೇಳೆ ಪುರುಷರೇ ಬಿಲ್ ಮೊತ್ತ ಭರಿಸಬೇಕು ಎನ್ನುವ ಅಲಿಖಿತ ನಿಯಮವಿದೆ. ನೀವು ಸಂಬಂಧದಲ್ಲಿ ಸ್ವಲ್ಪ ಬಲಗೊಂಡ ಬಳಿಕ ನಿಮ್ಮ ಹುಡುಗಿಯು ಬಿಲ್ ಕೊಡಬಹುದು.

ನೀವು ಬೇರೆಯವರೊಂದಿಗೆ ಹೇಗೆ ವರ್ತಿಸುವಿರಿ

ನೀವು ಬೇರೆಯವರೊಂದಿಗೆ ಹೇಗೆ ವರ್ತಿಸುವಿರಿ

ನೀವು ಬೇರೆಯವರೊಂದಿಗೆ ಯಾವ ರೀತಿ ವರ್ತಿಸುತ್ತೀರಿ ಎನ್ನುವುದನ್ನು ಮಹಿಳೆಯು ಗಮನಿಸುವಳು. ಯಾಕೆಂದರೆ ಸಂಬಂಧ ಮುಂದುವರಿದರೆ ಆಕೆಯೊಂದಿಗೆ ನೀವು ಅದೇ ರೀತಿ ವರ್ತಿಸುವಿರಿ. ನೀವು ಯಾವಾಗಲೂ ಬೇರೆ ಜನರೊಂದಿಗೆ ತುಂಬಾ ಒರಟಾಗಿ ವರ್ತಿಸಬೇಡಿ. ಅದರಲ್ಲೂ ಟ್ಯಾಕ್ಸಿ ಚಾಲಕ ಅಥವಾ ವೈಟರ್ ಜತೆಗೆ ತುಂಬಾ ಸಭ್ಯತೆಯಿಂದ ವರ್ತಿಸಿ.

ನೀವು ಮಾತನಾಡುವ ರೀತಿ ಮತ್ತು ಕೇಳುವುದು

ನೀವು ಮಾತನಾಡುವ ರೀತಿ ಮತ್ತು ಕೇಳುವುದು

ನಿಮ್ಮ ಡೇಟಿಂಗ್ ನಲ್ಲಿ ಮಾತು ತುಂಬಾ ಮುಖ್ಯವಾಗಿರುವುದು. ಆದರೆ ನೀವೇ ಮಾತನಾಡುತ್ತಾ ಇದ್ದರೆ ಅದು ಒಳ್ಳೆಯದಲ್ಲ. ಆಕೆ ಮಾತನಾಡುವುದನ್ನು ನೀವು ಕೇಳಬೇಕು. ನೀವೇ ಮಾತನಾಡುತ್ತಾ ಇದ್ದರೆ ಆಗ ಆಕೆಯ ಮನಸ್ಸಿನಲ್ಲಿ ಏನಿದೆ ಎನ್ನುವುದು ತಿಳಿಯುವುದೇ ಇಲ್ಲ. ನೀವು ಆಕೆಯನ್ನು ಮಾತನ್ನು ಕೇಳುವಂತಹ ತಾಳ್ಮೆಯನ್ನು ಹೊಂದಿರುವುದು ಅಗತ್ಯ.

ನಿಮ್ಮ ಸ್ವಭಾವ

ನಿಮ್ಮ ಸ್ವಭಾವ

ಪುರುಷರ ಸ್ವಭಾವವು ತುಂಬಾ ಮುಖ್ಯವಾಗಿರುವುದು. ನೀವು ಇದರಲ್ಲಿ ಸ್ವಲ್ಪ ಎಡವಿದರೂ ಅದರಿಂದ ಹುಡುಗಿಯ ಪ್ರೀತಿ ಕಳೆದುಕೊಳ್ಳಬೇಕಾಗಬಹುದು. ಪುರುಷರು ಯಾವಾಗಲೂ ಸಮಯಕ್ಕೆ ಸರಿಯಾಗಿ ಬರುವರು ಮತ್ತು ಮಹಿಳೆಗೆ ಮೊದಲ ಆದ್ಯತೆ ನೀಡುವರು. ಸಂಭಾವಿತ ಪುರುಷ ಯಾವಾಗಲೂ ಆಕರ್ಷಕನಾಗಿರುವ.

English summary

Things A Girl Notices In A Guy For The First Time

When it comes to the first meetings, first impressions are everything. It is believed that men may not notice everything in detail. But women are notorious for tuning in to the minutest of details when they first meet their potential partners. One thing you can be sure about when the psyche of a girl is in question is that the moment she sees you, she will sub-consciously be ticking off the things she likes and dislikes about you on her mental checklist.