For Quick Alerts
ALLOW NOTIFICATIONS  
For Daily Alerts

  ಆತ ಸಿಕ್ಕಾಪಟ್ಟೆ ಆಕೆಯನ್ನು ಲವ್ ಮಾಡಿದ-ಕೊನೆಗೆ ಆಗಬಾರದೇ ನಡೆದು ಹೋಯಿತು!

  By Arshad
  |

  ಇಂದಿನ ದಿನದಲ್ಲಿ ಹದಿಹರೆಯದ ಹುಡುಗರ ಮಾತುಕತೆಯ ನಡುವೆ ಜಿಎಫ್ ಎಂದು ಬರುತ್ತಿರುತ್ತದೆ. ಜಿಎಫ್ ಅಂದರೆ ಗರ್ಲ್ ಫ್ರೆಂಡ್. ಇಲ್ಲಿ ಪ್ರತಿಯೊಬ್ಬರಿಗೂ ಜಿ ಎಫ್ ಇರಲೇಬೇಕು, ಇಲ್ಲದಿದ್ದವರು ಈ ಜಗತ್ತಿನಲ್ಲಿರಲು ನಾಲಾಯಕ್ಕು ಎಂಬ ವಾತಾವರಣವನ್ನು ಇಂದಿನ ಯುವಜನತೆ ಹರಡಿಸಿಬಿಟ್ಟಿದ್ದಾರೆ.

  ಈ ವಲಯದಲ್ಲಿ ತಾವೂ ಹಿಂದೆ ಬೀಳಬಾರದೆಂದು ಜಿಎಫ್ ಇಲ್ಲದೇ ಇರುವ ಹುಡುಗರೂ ಕಲ್ಪನೆಯ ಹುಡುಗಿಯನ್ನೇ ಪ್ರಕಟಿಸಿ ತಮ್ಮ ಇರುವಿಕೆಯನ್ನು ಖಚಿತಗೊಳಿಸುತ್ತಾರೆ. ಅಲ್ಲದೇ ತಮಗೆ ಇಷ್ಟವಾದ ಹುಡುಗಿಯೆದುರು ಪ್ರೇಮನಿವೇದನೆಯನ್ನೂ ಮಾಡಿಕೊಳ್ಳುತ್ತಾರೆ.ಆದರೆ ಇಂದಿನ ಇಂಟರ್ನೆಟ್ ಯುಗದಲ್ಲಿ ಏನೇನು ನಡೆಯುತ್ತಿದೆ ಎಂಬ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ವಾಸ್ತವ ನಮ್ಮ ಕಲ್ಪನೆಗೂ ಮೀರಿದ್ದು ಅಚ್ಚರಿ ಮೂಡಿಸುತ್ತದೆ. ಪ್ರೇಮ ನಿವೇದನೆಯ ಬಳಿಕ ಇಲ್ಲ ಎನ್ನಿಸಿಕೊಂಡ ಯುವಕನೊಬ್ಬನ ಕಥೆ ಇಲ್ಲಿದೆ ಕೇಳಿ..

  ಕಾಲೇಜ್ ಲವ್

  ಕಾಲೇಜ್ ಲವ್

  ಈ ಯುವಕ ಖ್ಯಾತ ಕಾಲೋಜೊಂದರಲ್ಲಿ ಓದುತ್ತಿದ್ದಾನೆ. ಕಳೆದ ವರ್ಷ ಈತ ತನ್ನ ಸಹಪಾಠಿಯಾಗಿದ್ದ ಯುವತಿಯೊಬ್ಬಳನ್ನು ಮೋಹಿಸಿದ್ದ. ಈಕೆ ತನ್ನವಳಾಗಬೇಕು ಎಂದು ನಿತ್ಯವೂ ಮನದಲ್ಲಿಯೇ ಮಂಡಿಗೆ ಮೆಲ್ಲುತ್ತಿದ್ದ. ನಿತ್ಯವೂ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದ.

  ಆದರೆ ಆತನಿಗೆ ಹೇಳಿಕೊಳ್ಳಲು ಧೈರ್ಯ ಬರುತ್ತಿಲ್ಲ!

  ಆದರೆ ಆತನಿಗೆ ಹೇಳಿಕೊಳ್ಳಲು ಧೈರ್ಯ ಬರುತ್ತಿಲ್ಲ!

  ಒಂದು ದಿನ ಈತನ ಸ್ನೇಹಿತ ಪ್ರೇಮದ ಬಗ್ಗೆ ಆಕೆಯಲ್ಲಿ ನೇರವಾಗಿ ನಿವೇದಿಸಿಕೊಳ್ಳುವಂತೆ ಸಲಹೆ ಮಾಡಿದ. ಒಂದು ವೇಳೆ ಆಕೆ ನಿರಾಕರಿಸಿದರೆ? ಈ ದ್ವಂದ್ವ ಮನದಲ್ಲಿ ಎದುರಾಗುತ್ತಿದ್ದಂತೆಯೇ ಈತ ಅಧೀರನಾಗುತ್ತಿದ್ದ.

  ಆತ ಓದಿನಲ್ಲಿ ತುಂಬಾ ವೀಕ್!

  ಆತ ಓದಿನಲ್ಲಿ ತುಂಬಾ ವೀಕ್!

  ಈತ ಕಲಿಕೆಯಲ್ಲಿ ಕೊಂಚ ಹಿಂದಿದ್ದು ಕಡೆಯ ಬೆಂಚ್ ನಲ್ಲಿಯೇ ಕುಳಿತುಕೊಳ್ಳುತ್ತಿದ್ದ. ಸರಿಯಾಗಿ ಓದದೇ ಇರುವ ಕಾರಣ ಈತನ ಶಿಕ್ಷಕರು, ಸಹಪಾಠಿಗಳಿಂದ ಹಾಗೂ ಪಾಲಕರಿಂದ ಸದಾ ನಿಂದನೆ ಪಡೆಯುತ್ತಿದ್ದ ಹಾಗೂ ಪರೀಕ್ಷೆಯಲ್ಲಿಯೂ ಕಡಿಮೆ ಅಂಕ ಪಡೆಯುತ್ತಿದ್ದ. ಇಂತಹ ಹುಡುಗನನ್ನು ಆಕೆ ಮೆಚ್ಚಿಯಾಳೆಯೇ ಎಂದು ಈತ ತನ್ನ ಸ್ನೇಹಿತರೊಂದಿಗೆ ಅವಲತ್ತುಕೊಳ್ಳುತ್ತಿದ್ದ.

  ಕೊನೆಗೂ ಧೈರ್ಯ ಮಾಡಿಕೊಂಡು ಆಕೆತಯೊಂದಿಗೆ ಮಾಡಲು ನಿರ್ಧರಿಸಿದ

  ಕೊನೆಗೂ ಧೈರ್ಯ ಮಾಡಿಕೊಂಡು ಆಕೆತಯೊಂದಿಗೆ ಮಾಡಲು ನಿರ್ಧರಿಸಿದ

  ಒಂದು ದಿನ, ಕಡೆಯ ಸೆಮಿಸ್ಟರ್ ನ ಕಡೆಯ ಪರೀಕ್ಷೆಯ ಹಿಂದಿನ ದಿನ ಆಕೆಗೆ ಕರೆ ಮಾಡಿ ತನಗೆ ನಿನ್ನೊಂದಿಗೆ ಮಾತನಾಡಲಿಕ್ಕಿದೆ ಎಂದ. ಏನು ಮಾತಾಡಲಿಕ್ಕಿತ್ತು ಎಂದು ಕೇಳಿದ್ದಕ್ಕೆ ಆತ ತಾನು ಆಕೆಯ ಬಗ್ಗೆ ಏನು ಯೋಚಿಸುತ್ತೇನೆ, ತನ್ನ ಸ್ನೇಹಿತರು ಏನು ಹೇಳುತ್ತಾರೆ ಇತ್ಯಾದಿ. ಇದಕ್ಕೊಪ್ಪದ ಆಕೆ ಇಲ್ಲ ಎಂದಾಗ ಇದು ತುಂಬಾ ಅರ್ಜೆಂಟು, ತನಗೆ ಮಾತನಾಡಲೇ ಬೇಕು ಎಂದು ಹಠ ಹಿಡಿದಾಗ ಆಕೆ ಒಪ್ಪಿಕೊಳ್ಳುತ್ತಾಳೆ. ಈತ ತನ್ನ ಬಗ್ಗೆ ಹಲವು ವಿಷಯಗಳನ್ನು ಹೇಳಿಕೊಳ್ಳುತ್ತಾನೆ. ತಾನು ಆಕೆಯನ್ನೇಕೆ ಮೆಚ್ಚುತ್ತಿದ್ದೇನೆ ಎಂಬ ಬಗ್ಗೆ ಹಲವು ವಿವರ ನೀಡುತ್ತಾನೆ.

  ಆತನ ಮಾತು ಕೇಳಿ ಆಕೆಗೆ ಶಾಕ್!

  ಆತನ ಮಾತು ಕೇಳಿ ಆಕೆಗೆ ಶಾಕ್!

  ಈಕೆಗೆ ಆತನ ಮಾತುಗಳು ದಿಗ್ಭ್ರಮೆ ಮೂಡುಸುತ್ತವೆ. ಆಕೆ ಅಲ್ಲಿ ನಿಲ್ಲದೇ ಓಡಿಹೋಗುತ್ತಾಳೆ

  ಆಕೆಯ ಉತ್ತರಕ್ಕಾಗಿ ತುಂಬಾನೇ ಚಡಪಡಿಸಿದ..

  ಆಕೆಯ ಉತ್ತರಕ್ಕಾಗಿ ತುಂಬಾನೇ ಚಡಪಡಿಸಿದ..

  ಆಕೆಯ ನಡವಳಿಕೆ ಈತನಿಗೆ ಸಿಟ್ಟು ಬರಿಸುತ್ತದೆ. ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ಇನ್ನಷ್ಟು ಪ್ರಯತ್ನಪಡುತ್ತಾನೆ. ಒಂದು ದಿನ ಆಕೆ ಕಾಲೇಜಿನ ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಆತ ಅಲ್ಲಿ ನೇರವಾಗಿ ಬಂದು ಒಪ್ಪಿಗೆಯೋ ಇಲ್ಲವೇ ಎಂದು ನೇರವಾಗಿ ಕೇಳುತ್ತಾನೆ.

  ಇನ್ನೊಬ್ಬ ಹುಡುಗನ ಎಂಟ್ರಿ!

  ಇನ್ನೊಬ್ಬ ಹುಡುಗನ ಎಂಟ್ರಿ!

  ಈಗ ಇಲ್ಲಿ ಇನ್ನೊಬ್ಬ ಹುಡುಗನ ಪ್ರವೇಶವಾಗುತ್ತದೆ. ಆತ ಕಾಲೇಜಿನ ಸೀನಿಯರ್ ವಿದ್ಯಾರ್ಥಿಯಾಗಿದ್ದು ಆತ ಚಿಕ್ಕ ದನಿಯಲ್ಲಿ ಆ ಯುವತಿಯೊಂದಿಗೆ ಮಾತನಾಡುತ್ತಾನೆ.

  ಇಲ್ಲಿಂದ ಇನ್ನೊಂದು ಪ್ರಾಬ್ಲಂ ಸಾರ್ಟ್!

  ಇಲ್ಲಿಂದ ಇನ್ನೊಂದು ಪ್ರಾಬ್ಲಂ ಸಾರ್ಟ್!

  ಈಕೆ ಮೆಲುದನಿಯಲ್ಲಿ ಈ ಹುಡುಗನ ಬಗ್ಗೆ ವಿವರ ನೀಡಿ ಅಲ್ಲಿಂದ ನಿರ್ಗಮಿಸುತ್ತಾಳೆ. ಬಳಿಕ ಈ ಸೀನಿಯರ್ ನಿನಗೆ ಈ ಹುಡುಗಿ ಗೊತ್ತೇ"? ಹೌದು, ಈಕೆ ನನ್ನ ಸಹಪಾಠಿಯಾಗಿದ್ದಾಳೆ ಎನ್ನುತ್ತಾನೆ ಈ ಹುಡುಗ. ಅದಕ್ಕೆ ಆ ಸೀನಿಯರ್, ಹೌದು, ಈಗ ಈ ತರಗತಿಯಲ್ಲಿದ್ದಾಳೆ, ನಾಳೆ ನನ್ನ ಹೆಂಡತಿಯಾಗಲಿದ್ದಾಳೆ ಗೊತ್ತೇ? ಎಂದು ಪ್ರಶ್ನಿಸುತ್ತಾನೆ.

  ಸಿಕ್ಕಾಪಟ್ಟೆ ಗೊಂದಲ

  ಸಿಕ್ಕಾಪಟ್ಟೆ ಗೊಂದಲ

  ಹೌದೇ? ನನಗೆ ಗೊತ್ತಿರಲಿಲ್ಲ ಎಂದು ಈ ಹುಡುಗ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಮನದಲ್ಲಿ ಮಾತ್ರ ಈ ಹುಡುಗಿ ಈ ಸೀನಿಯರ್ ನನ್ನು ಹೇಗೆ ಒಪ್ಪಿಕೊಂಡಳು, ನನಗಿಂತ ಆತ ಹೇಗೆ ಉತ್ತಮನಿರಬಹುದು, ನನ್ನನೇಕೆ ಆಕೆ ನಿರಾಕರಿಸಿದಳು? ನನ್ನಲ್ಲೇನು ನ್ಯೂನತೆ ಇದೆ? ಇವೆಲ್ಲಾ ಮನದಲ್ಲಿ ಮೂಡುವ ಯೋಚನೆಗಳು.

  ಆಕೆ ನನ್ನನ್ನು ಒಪ್ಪುವುದಿಲ್ಲವೇ?

  ಆಕೆ ನನ್ನನ್ನು ಒಪ್ಪುವುದಿಲ್ಲವೇ?

  ಈಗ ಈತ ಪೂರ್ಣವಾಗಿ ದ್ವಂದ್ವದಲ್ಲಿದ್ದಾನೆ. ಆಕೆ ನನ್ನವಳಲ್ಲವೇ? ಆದರೆ ಆಕೆ ಆ ಸೀನಿಯರ್ ವಿದ್ಯಾರ್ಥಿಯನ್ನು ಪ್ರೀತಿಸುತ್ತಾಳೆ, ಏಕೆ? ಈ ಪ್ರಶ್ನೆಯನ್ನು ಆತ ಬಾರಿ ಬಾರಿ ತನ್ನನೇ ಪ್ರಶ್ನಿಸಿಕೊಳ್ಳುತ್ತಾನೆ, ಆದರೆ ಉತ್ತರವಿಲ್ಲ. ಆದರೂ, ಆಕೆಯನ್ನು ತಾನು ಪ್ರೀತಿಸುತ್ತಿದ್ದೇನೆ, ಆಕೆ ನನ್ನವಳು, ಆಕೆ ನನಗೆ ಬೇಕು ಎಂದೆಲ್ಲಾ ಆತನ ಯೋಚನೆಗಳಾಗಿವೆ.

  ನಿನ್ನನ್ನು ಬಿಟ್ಟು ನನ್ನಿಂದ ಇರಲು ಸಾಧ್ಯವಲ್ಲ!

  ನಿನ್ನನ್ನು ಬಿಟ್ಟು ನನ್ನಿಂದ ಇರಲು ಸಾಧ್ಯವಲ್ಲ!

  ಆಕೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲಾಗದೇ ಆತ ಮತ್ತೊಮ್ಮೆ ಆಕೆಯ ಬಳಿ ಹೋಗುತ್ತಾನೆ ಹಾಗೂ ತಾನು ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಳ್ಳುತ್ತಾನೆ. ಆಕೆ ಈತನ ನಿವೇದನೆಯನ್ನು ನಿರಾಕರಿಸಿ ಸೀನಿಯರ್ ವಿದ್ಯಾರ್ಥಿ ಯಾರು ಗೊತ್ತೇ ಎಂದು ಎಲ್ಲರೆದುರು ದೊಡ್ಡ ದನಿಯಲ್ಲಿ ಅವಹೇಳನ ಮಾಡುತ್ತಾಳೆ. ಈಗ ಎಲ್ಲರ ಗಮನ ಇತ್ತ ಹರಿಯುತ್ತದೆ. ಇದರಲ್ಲಿ ಕಾಲೇಜಿನ ಸಿಬ್ಬಂದಿವರ್ಗವೂ ಇರುತ್ತದೆ. ಈಗ ತಲೆಗೊಂದು ಮಾತು ಪ್ರಕಟಗೊಳ್ಳುತ್ತದೆ. ಇತರ ಕಾಲೇಜಿನ ಹುಡುಗರ ಪ್ರಸಂಗಗಳೂ ಉಲ್ಲೇಖಿಸಲ್ಪಡುತ್ತವೆ.

  ಆಕೆಯನ್ನು ಬಿಟ್ಟು ಇರಲು ಇವನಿಗೆ ಸಾಧ್ಯವೇ ಆಗುತ್ತಿರಲಿಲ್ಲ..

  ಆಕೆಯನ್ನು ಬಿಟ್ಟು ಇರಲು ಇವನಿಗೆ ಸಾಧ್ಯವೇ ಆಗುತ್ತಿರಲಿಲ್ಲ..

  ಈತನಿಗೆ ಮತಿಭ್ರಮಣೆಯಾದಂತಾಗುತ್ತದೆ. ಆಕೆಯ ಮೇಲೆ ಸಿಟ್ಟೂ ಬರುತ್ತದೆ. ಅಷ್ಟಕ್ಕೂ ನನನ್ನು ತಿರಸ್ಕರಿಸಿದ್ದೇಕೆ? ಮತ್ತೊಮ್ಮೆ ಆಕೆಗೆ ಕರೆ ಮಾಡುತ್ತಾನೆ. ಆಕೆ ಏನೇ ಸಮಾಧಾನ ಹೇಳಿದರೂ ಈತ ಕೇಳಿಸಿಕೊಳ್ಳದ ಸ್ಥಿತಿಯಲ್ಲಿಲ್ಲದೇ ಒಂದೇ ಮಾತನ್ನು ಬಾರಿಬಾರಿ ಪುನರಾವರ್ತಿಸುತ್ತಾನೆ. ನನ್ನನ್ನೇಕೆ ತಿರಸ್ಕರಿಸಿದೆ? ಕಾಟ ತಡೆಯಲಾರದೇ ಆಕೆ ಫೋನ್ ಕಟ್ ಮಾಡುತ್ತಾಳೆ.

  ಪದೇ ಪದೇ ಆಕೆಗೆ ಫೋನ್ ಮಾಡಲು ಶುರು ಮಾಡುತ್ತಾನೆ..

  ಪದೇ ಪದೇ ಆಕೆಗೆ ಫೋನ್ ಮಾಡಲು ಶುರು ಮಾಡುತ್ತಾನೆ..

  ಆತ ಆಕೆಯ ಮೊಬೈಲಿಗೆ ಇನ್ನೂ ಹಲವಾರು ಬಾರಿ ಕರೆ ಮಾಡುತ್ತಾನೆ, ಆಕೆ ಸ್ವೀಕರಿಸುವುದಿಲ್ಲ. ಬಳಿಕ ಆಕೆಯ ಮನೆಗೆ ಧಾವಿಸುತ್ತಾನೆ. ಮನೆಯ ಹೊರಗಿನಿಂದ ಮತ್ತೆ ಮತ್ತೆ ನಿವೇದಿಸಿಕೊಳ್ಳುತ್ತಾನೆ. ನಿಮ್ಮ ಮನೆಯಲ್ಲಿ ಯಾರು ಯಾರಿದ್ದಾರೆ ಎಲ್ಲಾ ಗೊತ್ತು, ನಿಮ್ಮ ಮನೆಯವರಿಗೆ ಕೇಳಿ ನೋಡು ಎಂದೆಲ್ಲಾ ಮನವೊಲಿಸಿಕೊಳ್ಳಲು ಯತ್ನಿಸುತ್ತಾನೆ.

  ಆದಷ್ಟು ಆಕೆಯ ಮನವೊಲಿಸಲು ಪ್ರಯತ್ನಿಸುತ್ತಾನೆ

  ಆದಷ್ಟು ಆಕೆಯ ಮನವೊಲಿಸಲು ಪ್ರಯತ್ನಿಸುತ್ತಾನೆ

  ಮುಂದಿನ ದಿನಗಳಲ್ಲಿಯೂ ಹಲವು ಬಾರಿ ತನ್ನ ನಿವೇದನೆಯ ಪ್ರಯತ್ನ ಮುಂದುವರೆಸುತ್ತಾನೆ. ಒಮ್ಮೆ ಸಂದರ್ಭ ಸಿಕ್ಕಾಗಿ ಆಕೆಯ ಕುತ್ತಿಗೆಯನ್ನು ಹಿಸುಕಲೂ ಯತ್ನಿಸುತ್ತಾನೆ.

  ಕೊನೆಗೆ ಆಗಬಾರದೇ ಆಗಿ ಹೋಯಿತು!

  ಕೊನೆಗೆ ಆಗಬಾರದೇ ಆಗಿ ಹೋಯಿತು!

  ಈತನ ಹಿಡಿತದಿಂದ ಪಾರಾಗಲು ಆಕೆ ತನ್ನೆಲ್ಲಾ ಪ್ರಯತ್ನಗಳನ್ನು ನಡೆಸುತ್ತಾಳೆ. ಒಂದು ಬಾರಿ ಆಕೆ ಸಿಟ್ಟಿನಿಂದ ಆತನಿಗೆ ಹೊಡೆದೂ ಬಿಡುತ್ತಾಳೆ. ಈ ಸಮಯದಲ್ಲಿ ಅವರು ಕಟ್ಟಡದ ಬಾಲ್ಕನಿಯಲ್ಲಿದ್ದು ಹೊಡೆತದ ಆಘಾತದಿಂದ ಜೋಲಿ ತಪ್ಪಿ ಈ ಬಾಲಕ ಕೈಬೀಸಿದಾಗ ಪಕ್ಕದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಅಕಸ್ಮಾತ್ತಾಗಿ ಸ್ಪರ್ಶಿಸಿಬಿಡುತ್ತಾನೆ. ಈಗ ಎದುರಾದ ವಿದ್ಯುದಾಘಾತಕ್ಕೆ ಆತ ಎಸೆಯಲ್ಪಡುತ್ತಾನೆ. ಬಳಿಕ ಒಂದು ಕೈ ಮತ್ತು ಒಂದು ಕಾಲು ಕಳೆದುಕೊಳ್ಳುತ್ತಾನೆ

  ಎಲ್ಲಾ ಹುಡುಗಾಟದ ಹುಚ್ಚು...

  ಎಲ್ಲಾ ಹುಡುಗಾಟದ ಹುಚ್ಚು...

  ಈ ಘಟನೆಯ ಎಂಟು ವರ್ಷಗಳ ಬಳಿಕ ಹದಿಹರೆಯದಲ್ಲಿ ಆದ ಹುಡುಗಾಟದ ಪರಿಣಾಮದ ಬಗ್ಗೆ ನೆನೆಸಿಕೊಂಡು ಜೀವಮಾನವಿಡೀ ಕೊರಗುವಂತಾಯ್ತು ಎಂದು ನಿಟ್ಟುಸಿರು ಬಿಡುತ್ತಾನೆ. ದೇವರು ಒಂದು ರೀತಿಯಲ್ಲಿ ನನಗೆ ಈ ಶಿಕ್ಷೆ ನೀಡಿ ಒಳ್ಳೆಯದನ್ನೇ ಮಾಡಿದ್ದಾನೆ. ಇಲ್ಲದಿದ್ದರೆ ಆ ಸಮಯದಲ್ಲಿ ತನ್ನ ಮನದಲ್ಲಿ ಇನ್ನೂ ಬೇರೆ ಯೋಚನೆಗಳು ಬರುತ್ತಿದ್ದವು. ಆಕೆಯ ಮುಖದ ಮೇಲೆ ಆಸಿಡ್ ಎರಚಬೇಕು. ಆಕೆಯನ್ನು ಕೊಲೆ ಮಾಡಬೇಕು ಎಂದೆಲ್ಲಾ ಯೋಚಿಸುತ್ತಿದ್ದೆ, ಈ ಶಿಕ್ಷೆಯ ಮೂಲಕ ಹಾಗೇನೂ ಆಗದೇ ಹೋಗಿತ್ತು. ಆಗುವುದೆಲ್ಲಾ ಒಳ್ಳೆಯದಕ್ಕೇ ಎಂಬ ವೇದಾಂತದ ಮಾತಿನೊಂದಿಗೆ ಆತ ತನ್ನ ಕಥೆಯನ್ನು ಮುಗಿಸುತ್ತಾನೆ.

  English summary

  Story about Boy shares his first love

  How now a days youngsters see love. changes in love memories youngsters were not in love they were addicted. they go any extend to achive his girl.its the another face of love. there is so many incidents which you didnt imagine.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more