'ಪ್ರಥಮ ಚುಂಬನಂ' ಅಪ್ಪಿತಪ್ಪಿಯೂ ಎಡವಟ್ಟು ಮಾಡಿಕೊಳ್ಳಬೇಡಿ!!

By: Deepu
Subscribe to Boldsky

'ಪ್ರಥಮ ಚುಂಬನಂ ದಂತ ಭಗ್ನಂ' ಎನ್ನುವ ಮಾತಿದೆ. ಯಾಕೆಂದರೆ ಮೊದಲ ಚುಂಬನವು ತುಂಬಾ ಮಹತ್ವದ್ದು ಎಂದು ಹಿಂದಿನವರಿಗೂ ತಿಳಿದಿತ್ತು. ಇದರಿಂದಾಗಿಯೇ ಈ ಮಾತನ್ನು ಹೇಳಿರುವುದು. ನೀವು ಒಬ್ಬರನ್ನು ಎಷ್ಟೇ ಪ್ರೀತಿಸಿದರೂ ಸರಿ. ಆದರೆ ನೀವು ಮೊದಲ ಚುಂಬನವು ತುಂಬಾ ಪ್ರಾಮುಖ್ಯತೆ ಪಡೆದಿರುವುದು. ಪ್ರೀತಿಯಲ್ಲಿ ಮುಳುಗಿರುವವರು ಮೊದಲ ಚುಂಬನಕ್ಕಾಗಿ ಹಾತೊರೆಯುತ್ತಾರೆ. ಕೆಲವೊಂದು ಸಲ ಇದು ಆಕಸ್ಮಿಕವಾಗಿ ನಡೆದು ಹೋಗಬಹುದು. ಆದರೆ ಇದರ ಅನುಭವ ಮಾತ್ರ ಜೀವಮಾನವಿಡಿ ಉಳಿದುಬಿಡುತ್ತದೆ.

ಚುಂಬನದ ಸಮಯದಲ್ಲಿ ಕಣ್ಣು ಮುಚ್ಚಿ ಕೊಳ್ಳುವುದೇಕೆ?

ಇದಕ್ಕಾಗಿಯೇ ಮೊದಲ ಚುಂಬನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮೊದಲ ಚುಂಬನದಲ್ಲಿ ನೀವು ಸಂಗಾತಿಯನ್ನು ಸಂಪೂರ್ಣವಾಗಿ ನಿಮ್ಮತ್ತ ಸೆಳೆಯಬಹುದು. ಮೊದಲ ಚುಂಬನದಿಂದಲೇ ನೀವು ಎಷ್ಟು ಚೆನ್ನಾಗಿ ಚುಂಬಿಸಬಲ್ಲೀರಿ ಎಂದು ತಿಳಿದುಬರುವುದು. ನಿಮ್ಮ ಸಂಪೂರ್ಣ ಪ್ರೀತಿಯು ಈ ಒಂದು ಮುತ್ತಿನಲ್ಲಿ ಅಡಗಿರುವುದು. ನೀವು ಮೊದಲ ಸಲ ನೀಡುವಂತಹ ಮುತ್ತು ಅದು ಸಂಗಾತಿಗೆ ಮುತ್ತಿನ ಹಾರವಾಗಬೇಕು. ಆದರೆ ಕೆಲವರಿಗೆ ಸರಿಯಾಗಿ ಚುಂಬಿಸಲು ಬರುವುದಿಲ್ಲ. ಇಂತವರಿಂದ ಸಂಗಾತಿಗಳು ಕೂಡ ದೂರವಾಗುವರು. ನೀವು ತುಂಬಾ ಕೆಟ್ಟದಾಗಿ ಚುಂಬಿಸುತ್ತೀರಿ ಎನ್ನುವುದು ಸಂಗಾತಿಯ ಈ ಲಕ್ಷಣಗಳಿಂದ ತಿಳಿದುಬರುವುದು...

ಆಕೆ/ಆತ ಹಿಂದೆ ಸರಿಯುವುದು

ಆಕೆ/ಆತ ಹಿಂದೆ ಸರಿಯುವುದು

ಆಕೆ/ಆತನನ್ನು ಚುಂಬಿಸಲು ಬಂದಾಗ ಆತ ಅಥವಾ ಆಕೆ ಹಿಂದೆ ಸರಿಯಲು ಪ್ರಯತ್ನಿಸುವರು. ಚುಂಬಿಸುವ ಕಲೆಯನ್ನು ನೀವು ಮತ್ತಷ್ಟು ಸುಧಾರಿಸಬೇಕು ಎಂದು ಇದು ಸೂಚಿಸುತ್ತದೆ.

ಹಲ್ಲುಗಳ ಮಧ್ಯೆ ಘರ್ಷಣೆ

ಹಲ್ಲುಗಳ ಮಧ್ಯೆ ಘರ್ಷಣೆ

ಮನುಷ್ಯನ ದೇಹದ ರಚನೆ ಮಾಡುವಾಗ ದೇವರು ಕೂಡ ಚುಂಬನದ ಮಧ್ಯೆ ಯಾವ ಅಡೆತಡೆಯು ಬರದಂತೆ ನಿರ್ಮಿಸಿದ್ದಾನೆ. ನೀವು ಚುಂಚಿಸುತ್ತಿರುವಾಗ ಹಲ್ಲುಗಳ ಘರ್ಷಣೆಯಾಗುತ್ತಿದ್ದರೆ ಚುಂಬಿಸುವ ವಿಧಾನ ಬದಲಾಯಿಸಿ.

ಜೊಲ್ಲು ಹರಿಸುವುದು

ಜೊಲ್ಲು ಹರಿಸುವುದು

ಇದು ಹೆಚ್ಚಿನ ಪುರುಷರು ಮಾಡುವಂತಹ ತಪ್ಪಾಗಿದೆ. ಮಹಿಳೆಯರು ಯಾವಾಗಲೂ ಈ ರೀತಿಯ ಚುಂಬನ ಬಯಸುವುದಿಲ್ಲ. ಚುಂಬನದ ಮಧ್ಯೆ ಜೊಲ್ಲು ಹರಿಸಬೇಡಿ. ಚುಂಬನವು ತುಂಬಾ ಸರಳ ಹಾಗೂ ಸ್ವಚ್ಛವಾಗಿರಲಿ. ಮಹಿಳೆ ಇದನ್ನೇ ಬಯಸುವಳು.

ಚುಂಬನದ ಬಳಿಕ ನಿಮ್ಮತ್ತ ನೋಡದೇ ಇರುವುದು

ಚುಂಬನದ ಬಳಿಕ ನಿಮ್ಮತ್ತ ನೋಡದೇ ಇರುವುದು

ನೀವು ಚುಂಬಿಸಿದ ಬಳಿಕ ಆಕೆ ಅಥವಾ ಆತ ನಿಮ್ಮನ್ನು ನೋಡದೆ ಇದ್ದೆ ಆಗ ಚುಂಬನವು ಅವರಿಗೆ ಯಾವುದೇ ರೀತಿಯ ಖುಷಿ ನೀಡಿಲ್ಲವೆಂದು ಅರ್ಥ. ನೇರವಾಗಿ ನೀವು ಇದರ ಬಗ್ಗೆ ಕೇಳಿದರೆ ಆಕೆ/ ಆತ ನಿರಾಕರಿಸಬಹುದು. ಇದರಿಂದ ಚರ್ಚೆ ಆರಂಭವಾಗಬಹುದು. ಇದನ್ನು ಕಡೆಗಣಿಸಿ. ನೀವು ಇದನ್ನು ಅರ್ಥ ಮಾಡಿಕೊಂಡರೆ ಸಾಕು.

ನಾಲಗೆ ಬಳಸುವುದು

ನಾಲಗೆ ಬಳಸುವುದು

ಚುಂಬಿಸುವ ವೇಳೆ ನೀವು ನಾಲಗೆಯನ್ನು ಆಕೆ/ಆತನ ಬಾಯಿಯೊಳಗೆ ಕೊಂಡೊಯ್ಯುತ್ತಿದ್ದರೆ ಇದನ್ನು ತಕ್ಷಣ ನಿಲ್ಲಿಸಿ. ಆಕೆ/ಆತ ತನ್ನ ನಾಲಗೆಯನ್ನು ನಿಮ್ಮ ಬಾಯಿಗೆ ತರುವ ತನಕ ಹೀಗೆ ಮಾಡಬೇಡಿ. ನಾಲಗೆಯ ಸ್ವಲ್ಪ ಭಾಗ ಮಾತ್ರ ಚುಂಬನದಲ್ಲಿ ಒಳಗೊಂಡಿರಬೇಕು.

ಚುಂಬನ ಭಗ್ನ ಮಾಡಲು ಮಾತನಾಡುವುದು

ಚುಂಬನ ಭಗ್ನ ಮಾಡಲು ಮಾತನಾಡುವುದು

ಆಕೆ/ಆತ ಚುಂಬಿಸುತ್ತಿರುವಾಗ ಯಾವುದೇ ಕಾರಣ ನೀಡಿ ಇದನ್ನು ನಿಲ್ಲಿಸಲು ಪ್ರಯತ್ನಿಸಿದರೆ ಆಕೆ/ಆತ ಚುಂಬನವನ್ನು ಆನಂದಿಸುತ್ತಿಲ್ಲವೆಂದು ಅರ್ಥ. ಯಾರು ಕೂಡ ಕೆಟ್ಟದಾಗಿ ಚುಂಬಿಸಲು ಬಯಸುವುದಿಲ್ಲ. ಇದರಿಂದ ಮೇಲಿನ ಲಕ್ಷಣಗಳನ್ನು ಓದಿಕೊಂಡು ನೀವು ಚೆನ್ನಾಗಿ ಮುತ್ತು ನೀಡಲು ಕಲಿಯಿರಿ. ನಿಮ್ಮ ಚುಂಬನವು ಯಾವಾಗಲು ಸ್ಮರಣೀಯವಾಗಿರುವಂತೆ ಮಾಡಿ.

English summary

Signs You Are A Bad Kisser

It might be too uncomfortable to directly ask your date about it. If you want to know whether your partner enjoys your kissing sessions, he/she might let you know about it subtly. But what if he/she is being repellent when it comes to kissing you? Here are a few signs which will tell you that you are a bad kisser.
Subscribe Newsletter