ಪರಸ್ಪರ ಹೊಂದಿಕೊಂಡು ಬಾಳಿದರೆ, ಬದುಕು ನಂದನವನ

By: Hemanth
Subscribe to Boldsky

ಪ್ರೀತಿಸುವುದು ಸುಲಭದ ಕೆಲಸವಲ್ಲ, ಇದು ಪ್ರತಿಯೊಬ್ಬರಿಗೂ ಕರಗತವಾಗಿರುವ ಕಲೆಯೂ ಅಲ್ಲ...! ಎಲ್ಲರಲ್ಲೂ ಪ್ರೀತಿ ಎನ್ನುವುದು ಮೂಡುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಏಕಾಂಗಿಯಾಗಿರುವಾಗ ಎಲ್ಲವೂ ಒಳ್ಳೆಯದು ಎಂದನಿಸುತ್ತದೆ.

ಆದರೆ ಏಕಾಂಗಿಯಾಗಿರುವಾಗ ಯಾರಾದರೂ ಸಂಗಾತಿ ಬೇಕೆಂದು ಅನಿಸುವುದು ಉಂಟು. ಹೆಚ್ಚು ಸಮಯ ಏಕಾಂಗಿಯಾಗಿರುವುದು ತುಂಬಾ ಕಷ್ಟವಾಗಿರುತ್ತದೆ. ಏಕಾಂಗಿಯಾಗಿರುವುದು ನಮ್ಮ ಸಹನೆಯ ಪರೀಕ್ಷೆಯಾಗಿದೆ. ಆದರೆ ಸಂಗಾತಿಯೊಂದಿಗೆ ಇರುವುದು ಕೂಡ ಒಂದು ರೀತಿಯಲ್ಲಿ ಜೀವನದ ಪಾಠವಾಗಿರುತ್ತದೆ. ಸಂಗಾತಿಯೊಂದಿಗೆ ಹೊಂದಿಕೊಳ್ಳುವುದು, ಪರಸ್ಪರರನ್ನು ಅರಿತುಕೊಂಡು ಸಾಗುವುದು ಮುಖ್ಯವಾಗಿರುತ್ತದೆ.   ಹಾಲು- ಜೇನಿನಂತಹ ಸುಖ ಸಂಸಾರಕ್ಕೆ ಸರಳ ಸೂತ್ರಗಳು

ಇದು ಪ್ರತಿಯೊಬ್ಬರಿಗೂ ಸಾಧ್ಯವಾಗದೆ ಇರುವ ಕಾರಣದಿಂದ ಕೆಲವು ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಿ ಸಂಗಾತಿಗಳು ದೂರವಾಗುತ್ತಾರೆ. ನೀವು ಒಳ್ಳೆಯ ಸಂಗಾತಿಯಾಗಬೇಕಾದರೆ ಯಾವೆಲ್ಲಾ ಗುಣಗಳು ನಿಮ್ಮಲ್ಲಿ ಇರಬೇಕು ಮತ್ತು ನೀವು ಒಳ್ಳೆಯ ಸಂಗಾತಿ ಹೌದೋ ಅಲ್ಲವೋ ಎಂದು ತಿಳಿದುಕೊಳ್ಳುವುದು ಹೇಗೆ ಎಂದು ಲೇಖನದ ಮೂಲಕ ತಿಳಿಯಿರಿ....  

ತಪ್ಪುಗಳನ್ನು ಹುಡುಕಬೇಡಿ

ತಪ್ಪುಗಳನ್ನು ಹುಡುಕಬೇಡಿ

ನೀವು ಆಕೆಯನ್ನು ಸಂಪೂರ್ಣವಾಗಿ ಸ್ವೀಕರಿಸಬೇಕು. ಆಕೆಯಲ್ಲಿ ತಪ್ಪುಗಳನ್ನು ಹುಡುಕಬಾರದು. ಕೆಲವೊಮ್ಮೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಆದರೆ ಆಕೆಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ.

ತೀರ್ಪು ನೀಡಬೇಡಿ

ತೀರ್ಪು ನೀಡಬೇಡಿ

ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಗುಣಗಳು ಇರುತ್ತದೆ. ಈ ಗುಣಗಳಿಂದಲೇ ಸಮಾಜವು ಜನರನ್ನು ಒಳ್ಳೆಯವರು ಅಥವಾ ಕೆಟ್ಟವರು ಎಂದು ಪರಿಗಣಿಸುತ್ತದೆ. ಆದರೆ ಇದೆಲ್ಲವೂ ನಿಮಗೆ ಅರ್ಥವನ್ನು ನೀಡಲ್ಲ. ಯಾಕೆಂದರೆ ಸಂಗಾತಿಯ ಬಗ್ಗೆ ನೀವು ತೀರ್ಪು ನೀಡುವಂತಿಲ್ಲ. ಆಕೆಯನ್ನು ಪ್ರೀತಿಸಬೇಕು ಅಷ್ಟೇ.

 ಆಕೆಯನ್ನು ಖುಷಿಯಾಗಿಡುವುದು ನಿಮ್ಮ ಉದ್ದೇಶವಾಗಲಿ

ಆಕೆಯನ್ನು ಖುಷಿಯಾಗಿಡುವುದು ನಿಮ್ಮ ಉದ್ದೇಶವಾಗಲಿ

ಜೀವನವೆಂದರೆ ಪರಸ್ಪರರನ್ನು ಸಂತೋಷವಾಗಿಡುವುದು ತುಂಬಾ ಮುಖ್ಯ. ಆಕೆಯನ್ನು ಎಲ್ಲಾ ಸಮಯದಲ್ಲೂ ಖುಷಿಯಾಗಿಡುವುದು ನಿಮ್ಮ ಉದ್ದೇಶವಾಗಿರಬೇಕು. ನಿಮ್ಮನ್ನು ನೀವು ಸಂತೋಷವಾಗಿಡಿ. ಆದರೆ ಆಕೆಯ ಮುಖದಲ್ಲಿ ಯಾವಾಗಲೂ ನಗು ತುಂಬಿರಲಿ.

ಆಕೆ ತಪ್ಪುಗಳನ್ನು ಹುಡುಕುವ ತನಕ ಕಾಯಬೇಡಿ

ಆಕೆ ತಪ್ಪುಗಳನ್ನು ಹುಡುಕುವ ತನಕ ಕಾಯಬೇಡಿ

ನಿಮ್ಮ ಗುಣ ಅಥವಾ ನಡತೆ ಬಗ್ಗೆ ಆಕೆಗೆ ತೊಂದರೆಯಾಗುತ್ತಾ ಇದ್ದರೆ ಅದನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಆಕೆ ನಿಮ್ಮ ತಪ್ಪುಗಳನ್ನು ಹುಡುಕಿ ಹೇಳುವ ತನಕ ಕಾಯಬೇಡಿ.

ವಾದಗಳನ್ನು ಗೆಲ್ಲಲು ಪ್ರಯತ್ನಿಸಬೇಡಿ

ವಾದಗಳನ್ನು ಗೆಲ್ಲಲು ಪ್ರಯತ್ನಿಸಬೇಡಿ

ಕೆಲವೊಮ್ಮೆ ಮೌನವಾಗಿರುವುದು ಲಾಭವನ್ನು ನೀಡುತ್ತದೆ. ಯಾವಾಗಲೂ ನೀವೇ ಸರಿಯಾಗಿರಬೇಕೆಂದಿಲ್ಲ. ಕೆಲವು ಸಲ ಆಕೆ ಕೂಡ ವಾದ ಗೆಲ್ಲಲಿ ಬಿಡಿ.

ಕ್ಷಮೆ ಕೇಳಲು ಹಿಂಜರಿಯಬೇಡಿ

ಕ್ಷಮೆ ಕೇಳಲು ಹಿಂಜರಿಯಬೇಡಿ

ನೀವು ಸಂಪೂರ್ಣವಾಗಿ ಪರಿಪೂರ್ಣರಾಗಿರುವುದಿಲ್ಲ. ಇದರಿಂದ ಯಾವುದೇ ತಪ್ಪು ಮಾಡಿದರೆ ಅದನ್ನು ಅರ್ಥ ಮಾಡಿಕೊಂಡು ಕ್ಷಮೆ ಕೇಳಲು ಹಿಂಜರಿಯಬೇಡಿ.

 
English summary

Signs You Are An Awesome Partner

Some of us are designed to be a good partner that anyone would love to share life with. And some of us may have to learn how to be a good partner. Living alone may seem to be more comfortable but loneliness is painful. But staying with someone else may require some adjustments but life is joyful when you have a companion. So, how to know whether you are a good partner? Read on to about some signs...
Please Wait while comments are loading...
Subscribe Newsletter