Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಾಲು- ಜೇನಿನಂತಹ ಸುಖ ಸಂಸಾರಕ್ಕೆ ಸರಳ ಸೂತ್ರಗಳು
ಹೊಸತಾಗಿ ಒಂದು ಸಂಬಂಧದಲ್ಲಿ ಬಂಧಿತರಾದವರಿಗೆ ತಮ್ಮ ತಮ್ಮ ಸಂಗಾತಿಗಳ ಉತ್ತಮ ಗುಣಗಳೇ ಕಣ್ಣಿಗೆ ಕಾಣುತ್ತದೆ. ಆದರೆ ಪ್ರತಿ ಮನುಷ್ಯರಲ್ಲಿಯೂ ಹಲವು ದೌರ್ಬಲ್ಯಗಳಿರುತ್ತವೆ. ಕಾಲ ಕಳೆದಂತೆ ಈ ದೌರ್ಬಲ್ಯಗಳು ಸಂಗಾತಿಯನ್ನು ತಿರಸ್ಕರಿಸಲೂ ಕಾರಣವಾಗಬಹುದು. ನಿಮ್ಮ ಸಂಗಾತಿಯನ್ನು ಅರಿತುಕೊಳ್ಳುವುದು ಮುಖ್ಯವಾದರೆ ಸಂಗಾತಿಗಾಗಿ ತಮ ಕೆಲ ಗುಣಗಳನ್ನು ಬದಲಿಸಿಕೊಳ್ಳಬೇಕಾಗಿ ಬರಬಹುದು.
ಆದರೆ ಈ ಬದಲಾವಣೆ ಕೇವಲ ನಾಟಕ ಎಂದು ಅರಿತ ಬಳಿಕ ಸಂಗಾತಿಯ ಮನ ಮುದುಡಬಹುದು. ನಿಮ್ಮ ಸಂಗಾತಿಯೊಡನೆ ಸುಖಸಂಬಂಧಕ್ಕಾಗಿ ಕೆಲವೊಂದು ಸಂಗತಿಗಳನ್ನು ಅರಿತಿರುವುದು ಅಗತ್ಯವಾಗಿದೆ. ಈ ಲೇಖನದಲ್ಲಿ ಈ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ನೀಡಲಾಗಿದೆ. ಇವುಗಳು ಕೊಂಚ ಕಷ್ಟಕರವೆಂದು ಕಂಡುಬಂದರೂ ನಿಧಾನವಾಗೊ ಒಂದೊಂದೇ ಹೆಜ್ಜೆ ಇಡುತ್ತಾ ಮುಂದಡಿಯಿಡುವುದರಿಂದ ಇದನ್ನು ಸಾಧಿಸುವುದು ಸಾಧ್ಯ.
ಮೊತ್ತ ಮೊದಲು ನೀವು ಉತ್ತಮ ವ್ಯಕ್ತಿಯಾಗಿದ್ದೀರಿ ಎಂಬುದನ್ನು ನಿಮ್ಮ ಸಂಗಾತಿಗೆ ಸ್ಪಷ್ಟಪಡಿಸಬೇಕು. ಇದಕ್ಕಾಗಿ ನಿಮ್ಮಲ್ಲಿ ಬದಲಾವಣೆ ತರುವುದು ಅತಿ ಅಗತ್ಯ. ಬದಲಾಗುವುದು ಎಂದರೆ ನಿಮ್ಮ ಸುತ್ತಮುತ್ತಲ ಜನರು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಬೇಕು, ಮತ್ತು ಈ ಬದಲಾವಣೆ ಅತ್ಯಂತ ಪ್ರಾಮಾಣಿಕವಾಗಿರಬೇಕು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ:

ನಿಮ್ಮಿಂದ ಗೊತ್ತಾಗಿ ಅಥವಾ ಗೊತ್ತಾಗದೇ ತಪ್ಪಾಗಿದ್ದರೂ ಕ್ಷಮೆ ಕೇಳಿ
ಕೆಲವೊಮ್ಮೆ ಅನಾಚೂನವಾಗಿ ನಿಮ್ಮಿಂದ ನಿಮ್ಮ ಸಂಗಾತಿಯ ಮನನೋಯುತ್ತದೆ. ಈ ನೋವಿಗೆ ನೀವು ಪ್ರತ್ಯಕ್ಷರಾಗಿ ಅಥವಾ ಪರೋಕ್ಷವಾಗಿ ಕಾರಣರಾಗಿದ್ದರೂ ಮನಃಪೂರ್ವಕವಾಗಿ ಕ್ಷಮೆಯಾಚಿಸಿ. ಈ ಯಾಚನೆ ತಡವಾಗಬಾರದು! ತಡವಾದಷ್ಟೂ ನಿಮ್ಮ ಸಂಗಾತಿ ನಿಮ್ಮಿಂದ ವಿಮುಖರಾಗುವ ಸಾಧ್ಯತೆಗಳು ಹೆಚ್ಚು. ಕ್ಷಮೆ ಯಾಚಿಸುವುದರಿಂದ ನೀವು ಎಂದಿಗೂ ಕಿರಿಯರಾಗುವುದಿಲ್ಲ, ಬದಲಿಗೆ ನಿಮ್ಮ ಸಂಗಾತಿಯ ದೃಷ್ಟಿಯಲ್ಲಿ ಇನ್ನಷ್ಟು ಬೆಳೆಯುತ್ತೀರಿ. ಸಂಬಂಧ ಮುರಿದು ಬೀಳಲು ಕಾರಣ ಒಂದಾದರೇನು, ನೂರಾದರೇನು?
ಮನಃಪೂರ್ವಕವಾಗಿ ವಂದಿಸಿ
ನಿಮ್ಮ ಸಂಗಾತಿಯಿಂದ ಯಾವುದೇ ರೀತಿಯ ನೆರವು ಬಂದಾಗ ಮನದಾಳದಿಂದ ಧನ್ಯವಾದಗಳನ್ನು ಅರ್ಪಿಸಿ. ಇದು ಕೇವಲ ಒಂದು ಕಪ್ ಟೀ ನೀಡಿದಾಗಲೂ ಬರಬೇಕು. ಇದು ನಿಮ್ಮ ಸಂಗಾತಿ ನಿಮಗಾಗಿ ಇನ್ನೂ ಹೆಚ್ಚಿನದನ್ನು ನೀಡಲು ಪ್ರೇರಣೆ ನೀಡುತ್ತದೆ. ಸಾಧ್ಯವಾದಷ್ಟು ನಿಮ್ಮ ಸಂಗಾತಿಯ ಕೆಲಸಗಳಲ್ಲಿ ನೆರವಾಗಿ. ನಿಮ್ಮ ಸಂಗಾತಿ ನಿಮಗೆ ನೀಡುತ್ತಿರುವ ನೆರವು ಪರಸ್ಪರರಿಗೆ ನೀಡುತ್ತಿರುವ ಪ್ರೀತಿಯೇ ಹೊರತು ಗುಲಾಮ ತನ್ನ ಮಾಲಿಕನಿಗೆ ನೀಡುವ ಸೇವೆಯಲ್ಲ. ನಿಮ್ಮ ಒಂದು ಧನ್ಯವಾದ ನಿಮ್ಮ ಸಂಗಾತಿಯ ಮನದಲ್ಲಿ ಧನ್ಯತೆಯ ಭಾವವನ್ನೂ ನಿಮ್ಮ ಬಗ್ಗೆ ಪ್ರೀತಿಯನ್ನೂ ಹೆಚ್ಚಿಸುತ್ತದೆ.
ನಿಮ್ಮ ಸಂಗಾತಿಯನ್ನು ಮನಃಪೂರ್ವಕವಾಗಿ ಪ್ರೀತಿಸಿ, ಆ ಪ್ರೀತಿಯನ್ನು ವ್ಯಕ್ತಪಡಿಸಿ
ಸಂಗಾತಿಗಳ ನಡುವಣ ಆಕರ್ಷಣೆಗೆ ರೂಪ, ಲಾವಣ್ಯ, ಬಣ್ಣ, ಹಣ, ಅಂತಸ್ತು ಮೊದಲಾದ ಹಲವು ಮಾಧ್ಯಮಗಳಿದ್ದರೂ ಅವುಗಳಿಗಿಂತ ಮಿಗಿಲಾದದ್ದು, ಅಪೂರ್ವವಾದದ್ದು ಮತ್ತು ಬೆಲೆಕಟ್ಟಲಾಗದಂತಹದ್ದು ಎಂದರೆ ಅಪ್ಪಟ ಪ್ರೀತಿಯಾಗಿದೆ. ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಅವರಿಗಾಗಿ ನೀವು ಏನು ಮಾಡುತ್ತೀರಿ ಎಂದು ಹೇಳಿದರೆ ಅದರಂತೆ ನಡೆದುಕೊಳ್ಳಿ. ನಿಮ್ಮ ಸಂಗಾತಿಗಾಗಿ ಸಮಯವನ್ನು ಮೀಸಲಿರಿಸಿ. ಅವರೊಂದಿಗೆ ಕಳೆಯುವ ಕಾಲವನ್ನು ನಿಗದಿಪಡಿಸಿದರೆ ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬೇಡಿ, ನಿಗದಿತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿ.
ನಿಮ್ಮ ಸಂಗಾತಿಯ ಒಳ್ಳೆಯ ಗುಣಗಳನ್ನು ಪ್ರಸ್ತಾಪಿಸಿ ಪ್ರಶಂಶಿಸಿ
ಪ್ರತಿ ಮನುಷ್ಯರಲ್ಲಿಯೂ ಇರುವಂತೆ ನಿಮ್ಮ ಸಂಗಾತಿಯಲ್ಲಿಯೂ ಹಲವು ಉತ್ತಮ ಗುಣಗಳಿರುತ್ತವೆ. ಅವುಗಳನ್ನು ಪ್ರಸ್ತಾಪಿಸಿ ನಿಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿ. ಕೇವಲ ಗುಣದಲ್ಲಿ ಮಾತ್ರವಲ್ಲದೇ, ಅವರ ಆಯ್ಕೆ, ಬಟ್ಟೆ, ಕೇಶವಿನ್ಯಾಸ ಮೊದಲಾದವುಗಳ ಬಗ್ಗೆಯೂ ನಿಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿ. ನಿಮ್ಮ ಸಂಸಾರ ಆನಂದ ಸಾಗರವಾಗಲು ಇಲ್ಲಿದೆ ಸರಳ ಸೂತ್ರ!
ನಿಮ್ಮ ಸಂಗಾತಿಯ ಅಭಿಪ್ರಾಯಗಳನ್ನು ಸ್ವಾಗತಿಸಿ
ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವೂ ಭಿನ್ನವಾಗಿರಬಹುದು. ನಿಮ್ಮ ಸಂಗಾತಿಯ ಅಭಿಪ್ರಾಯವೂ ನಿಮ್ಮ ಅಭಿಪ್ರಾಯಕ್ಕೆ ಪೂರಕವೂ ಆಗಿರಬಹುದು, ವಿರುದ್ಧವೂ ಆಗಿರಬಹುದು. ಒಂದು ವೇಳೆ ವಿರುದ್ಧವಾಗಿದ್ದರೆ ತಕ್ಷಣ ಪ್ರತಿಕ್ರಿಯಿಸಬೇಡಿ, ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಪರಿಗಣಿಸಿ. ಎರಡೂ ಅಭಿಪ್ರಾಯಗಳ ಸಾಧಕ ಬಾಧಕಗಳನ್ನು ಪರಾಮರ್ಶಿಸಿ. ಒಂದು ವೇಳೆ ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಪರಾಮರ್ಶಿಸದೇ ಕಡೆಗಣಿಸಿದರೆ, ನಿಮ್ಮ ಸಂಗಾತಿ ನಿಮ್ಮನ್ನೇ ಕಡೆಗಣಿಸುವ ಅಪಾಯವಿರುತ್ತದೆ.



Click it and Unblock the Notifications
