Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ಸುಮ್ ಸುಮ್ನೆ ಬಡಾಯಿ ಕೊಚ್ಚಿ ಕೊಳ್ಳಬೇಡಿ-ಆಕೆಗೆ ಇಷ್ಟವಾಗಲ್ಲ!
ಸಾಮಾಜಿಕ ಜಾಲತಾಣಗಳು ತುಂಬಾ ಏರುಗತಿಯಲ್ಲಿರುವಂತಹ ಸಮಯದಲ್ಲಿ ಮಹಿಳೆಯರು ಕೂಡ ಪುರುಷರ ಕಡೆ ಬೇಗನೆ ಆಕರ್ಷಿತರಾಗುತ್ತಾರೆ ಎಂದು ನೀವು ಭಾವಿಸಿರಬಹುದು. ಆದರೆ ಮಹಿಳೆಯರು ಆಕರ್ಷಿತರಾಗಲು ಪುರುಷರಲ್ಲಿ ಕೂಡ ಕೆಲವೊಂದು ಗುಣಗಳು ಇರಲೇಬೇಕು. ಸುಮ್ಮನೆ ಮಹಿಳೆಯರು ಪುರುಷರ ಕಡೆ ಆಕರ್ಷಿತರಾಗುವುದಿಲ್ಲ.
ಮಹಿಳೆಯರಿಗೆ ಕೂಡ ತಮ್ಮ ಸಂಗಾತಿ ಹೀಗೆ ಇರಬೇಕು ಮತ್ತು ಆತನ ವರ್ತನೆಗಳಿಂದ ತನಗೆ ನೋವು ಆಗಬಾರದು ಎನ್ನುವ ಭಾವನೆಯಿರುತ್ತದೆ. ಅದರಲ್ಲೂ ಮಹಿಳೆಯರನ್ನು ಸೆಳೆಯಬೇಕೆಂದು ಕನಸು ಕಟ್ಟಿಕೊಂಡು ಕುಳಿತಿರುವ ಪುರುಷರು ಈ ಲೇಖನ ಓದಲೇಬೇಕು.
ಯಾಕೆಂದರೆ ಇದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವಾಗಿದೆ. ಈ ಲೇಖನದಲ್ಲಿ ಮಹಿಳೆಯರಿಗೆ ಅಸ್ಯಹಕರವೆಂದು ಭಾವಿಸುವ ಪುರುಷರ ಕೆಲವೊಂದು ವಿಚಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದುತ್ತಾ ಸಾಗಿ....

ನನ್ನ ಜೀವನಕ್ಕಿಂತ ಜಾಸ್ತಿ ನಿನ್ನನ್ನು ಪ್ರೀತಿಸುತ್ತೇನೆ ಕಣೆ!
ನಿಮ್ಮ ಪ್ರೇಮವನ್ನು ಆಗಾಗ, ಸಂದರ್ಭಾನುಸಾರ ಪ್ರಕಟಿಸಿದರೆ ಸಾಕು. ಅದು ಬಿಟ್ಟು ಘಳಿಗೆ ಘಳಿಗೆಗೂ ಸಂದೇಶಗಳನ್ನು ರವಾನಿಸುತ್ತಾ ಇರುವುದನ್ನು ಯಾವುದೇ ಯುವತಿ ಸಹಿಸಲಾರಳು.

ತನ್ನ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು
ಕೆಲವರಿಗೆ ಭಾರೀ ಹಣ ಖರ್ಚು ಮಾಡಿ ದರ್ಪ ತೋರಿಸುವ, ತಮ್ಮ ಅಥವಾ ತಮ್ಮ ತಂದೆಯ ಬಳಿ ಭಾರೀ ಹಣ ಇರುವ ಬಗ್ಗೆ, ತಮ್ಮಲ್ಲಿರುವ ಧನಕನಕ, ಭೂಮಿ, ಸಂಪತ್ತಿನ ಬಗ್ಗೆ ಕೊಚ್ಚಿಕೊಳ್ಳುವುದು ಅಭ್ಯಾಸವಾಗಿರುತ್ತದೆ. ಅಷ್ಟೇ ಅಲ್ಲ, ಕೆಲವರಿಗೆ ತಮ್ಮ ರೂಪ ಲಾವಣ್ಯ ಅಲಂಕಾರದ ಬಗ್ಗೆ ಕೊಚ್ಚಿಕೊಳ್ಳುವುದು, ಎದುರಿಗಿರುವವರ ಸೌಂದರ್ಯವನ್ನು ಹೊಗಳುವ ಚಟವೂ ಇರುತ್ತದೆ. ಈ ಅಭ್ಯಾಸಗಳನ್ನೂ ಯುವತಿಯರು ಇಷ್ಟಪಡುವುದಿಲ್ಲ.

ನಿನ್ನ ಸಂಬಳ ಎಷ್ಟು?
ಆಕೆಯ ಸಂಬಳವನ್ನು ತಿಳಿದುಕೊಳ್ಳುವ ತವಕ ನಿಮಗೆ ಯಾಕೆ? ಆಕೆ ತುಂಬಾ ನೇರನಡೆನುಡಿಯ ವ್ಯಕ್ತಿಯಾದರೆ ಖಂಡಿತವಾಗಿಯೂ ಪ್ರತಿಕ್ರಿಯಿಸಬಹುದು. ಕೆಲವು ಮಹಿಳೆಯರು ಪ್ಯಾಷನ್‌ಗಾಗಿ, ಇನ್ನು ಕೆಲವು ಮಹಿಳೆಯರು ಆರ್ಥಿಕ ಸುರಕ್ಷತೆಗಾಗಿ ಕೆಲಸ ಮಾಡುತ್ತಾರೆ. ಆದರೆ ನೀವು ಅವರನ್ನು ಸಂಬಳದಿಂದ ಅಳೆಯಲು ಪ್ರಯತ್ನಿಸಿದರೆ ಅದು ಖಂಡಿತವಾಗಿಯೂ ತಪ್ಪಾಗುತ್ತದೆ. ಆಕೆಯ ಹಣದ ಮೇಲೆ ನೀವು ಕಣ್ಣಿಟ್ಟಿದ್ದೀರಿ ಎಂದು ಆಕೆಗೆ ಅನಿಸಬಹುದು.

ತೂಕವೆಷ್ಟು?
ಮಹಿಳೆಯ ವಯಸ್ಸನ್ನು ಕೇಳಬಾರದು ಎನ್ನುವ ಅಲಿಖಿತ ಕಾನೂನೇ ಇದೆ. ಆದೆರೆ ಆಕೆಯ ತೂಕವನ್ನು ಕೇಳುವುದು ನೀವು ಮಾಡುವಂತಹ ದೊಡ್ಡ ತಪ್ಪಾಗಿದೆ. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಹಿಳೆಯರು ತಮ್ಮ ವಯಸ್ಸನ್ನು ಹೇಳಿಕೊಳ್ಳುತ್ತಾರೆ. ಆದರೆ ಆಕೆಯ ತೂಕದ ಬಗ್ಗೆ ಯಾರಾದರೂ ಮಾತನಾಡಿದರೆ ಆಗ ಖಂಡಿತವಾಗಿಯೂ ಆಕೆಯಿಂದ ನಕಾರಾತ್ಮಕ ಉತ್ತರ ಬರಬಹುದು.

ಮಾಜಿ ಪ್ರೇಯಸಿಯ ದೂರು
ಆತ ತನ್ನ ಮಾಜಿ ಪ್ರೇಯಸಿಯನ್ನು ದೂರುತ್ತಾ ಇದ್ದರೆ ಖಂಡಿತವಾಗಿಯೂ ನಿಮ್ಮನ್ನು ದೂರುತ್ತಾನೆ. ಇಂತಹ ವ್ಯಯಕ್ತಿಯಿಂದ ದೂರ ಹೋಗುವುದು ಒಳ್ಳೆಯದು.



Click it and Unblock the Notifications
