Latest Updates
-
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್!
ಏನೇನೋ ಪ್ರಶ್ನೆ ಕೇಳಬೇಡಿ, ನಿಮ್ಮ ಹುಡುಗಿಗೆ ಇಷ್ಟವಾಗಲ್ಲ!
ಹುಡುಗಿಯನ್ನು ಎಷ್ಟೇ ಪ್ರೀತಿಸುತ್ತಿದ್ದರೂ ಆಕೆಯನ್ನು ಭೇಟಿಯಾದಾಗ ಆಕೆಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ತುಂಬಾ ಕಷ್ಟ. ಹುಡುಗರು ತಾವು ಪ್ರೀತಿಸುತ್ತಿರುವ ಹುಡುಗಿಯರನ್ನು ಭೇಟಿಯಾಗುವಾಗ ಯಾವುದೇ ಅನಗತ್ಯ ಪ್ರಶ್ನೆಗಳನ್ನು ಕೇಳಬಾರದು....
ಮೀನಿನ ಹೆಜ್ಜೆ, ನದಿಯ ಮೂಲ ಮತ್ತು ಹೆಣ್ಣಿನ ಮನಸ್ಸನ್ನು ಅರಿತುಕೊಳ್ಳುವುದು ತುಂಬಾ ಕಷ್ಟವೆಂದು ಹಿರಿಯರೊಬ್ಬರು ಹೇಳಿದ್ದಾರೆ. ಯಾಕೆಂದರೆ ಹುಡುಗಿಯರು ತಮ್ಮ ಮನಸ್ಸಿನಲ್ಲಿರುವ ಯಾವುದೇ ಭಾವನೆಗಳನ್ನು ಹೊರಗಡೆ ಹೇಳಿಕೊಳ್ಳುವುದೇ ಇಲ್ಲ. ಇದರಿಂದ ಕೆಲವು ಸಲ ಹುಡುಗಿಯರ ನಡವಳಿಕೆಯಿಂದಾಗಿ ಹುಡುಗರು ತುಂಬಾ ಗಲಿಬಿಲಿಗೊಳ್ಳುತ್ತಾರೆ.
ಹುಡುಗಿಯನ್ನು ಎಷ್ಟೇ ಪ್ರೀತಿಸುತ್ತಿದ್ದರೂ ಆಕೆಯನ್ನು ಭೇಟಿಯಾದಾಗ ಆಕೆಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ತುಂಬಾ ಕಷ್ಟ. ಹುಡುಗರು ತಾವು ಪ್ರೀತಿಸುತ್ತಿರುವ ಹುಡುಗಿಯರನ್ನು ಭೇಟಿಯಾಗುವಾಗ ಯಾವುದೇ ಅನಗತ್ಯ ಪ್ರಶ್ನೆಗಳನ್ನು ಕೇಳಬಾರದು. ಯಾವ ಪ್ರಶ್ನೆಗಳನ್ನು ಕೇಳಬಾರದು ಎಂದು ಬೋಲ್ಡ್ ಸ್ಕೈ ನಿಮಗೆ ಈ ಮೂಲಕ ತಿಳಿಸಿಕೊಡಲಿದೆ...

ತೂಕವೆಷ್ಟು?
ಮಹಿಳೆಯ ವಯಸ್ಸನ್ನು ಕೇಳಬಾರದು ಎನ್ನುವ ಅಲಿಖಿತ ಕಾನೂನೇ ಇದೆ. ಆದೆರೆ ಆಕೆಯ ತೂಕವನ್ನು ಕೇಳುವುದು ನೀವು ಮಾಡುವಂತಹ ದೊಡ್ಡ ತಪ್ಪಾಗಿದೆ. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಹಿಳೆಯರು ತಮ್ಮ ವಯಸ್ಸನ್ನು ಹೇಳಿಕೊಳ್ಳುತ್ತಾರೆ. ಆದರೆ ಆಕೆಯ ತೂಕದ ಬಗ್ಗೆ ಯಾರಾದರೂ ಮಾತನಾಡಿದರೆ ಆಗ ಖಂಡಿತವಾಗಿಯೂ ಆಕೆಯಿಂದ ನಕಾರಾತ್ಮಕ ಉತ್ತರ ಬರಬಹುದು.

ಸಂಬಳ ಎಷ್ಟು?
ಆಕೆಯ ಸಂಬಳವನ್ನು ತಿಳಿದುಕೊಳ್ಳುವ ತವಕ ನಿಮಗೆ ಯಾಕೆ? ಆಕೆ ತುಂಬಾ ನೇರನಡೆನುಡಿಯ ವ್ಯಕ್ತಿಯಾದರೆ ಖಂಡಿತವಾಗಿಯೂ ಪ್ರತಿಕ್ರಿಯಿಸಬಹುದು. ಕೆಲವು ಮಹಿಳೆಯರು ಪ್ಯಾಷನ್‌ಗಾಗಿ, ಇನ್ನು ಕೆಲವು ಮಹಿಳೆಯರು ಆರ್ಥಿಕ ಸುರಕ್ಷತೆಗಾಗಿ ಕೆಲಸ ಮಾಡುತ್ತಾರೆ. ಆದರೆ ನೀವು ಅವರನ್ನು ಸಂಬಳದಿಂದ ಅಳೆಯಲು ಪ್ರಯತ್ನಿಸಿದರೆ ಅದು ಖಂಡಿತವಾಗಿಯೂ ತಪ್ಪಾಗುತ್ತದೆ. ಆಕೆಯ ಹಣದ ಮೇಲೆ ನೀವು ಕಣ್ಣಿಟ್ಟಿದ್ದೀರಿ ಎಂದು ಆಕೆಗೆ ಅನಿಸಬಹುದು.

ಹಿಂದಿನ ಸಂಬಂಧದ ಬಗ್ಗೆ ಒಂದೇ ಪದದಲ್ಲಿ ಉತ್ತರಿಸು
ಆಕೆಯ ಹಿಂದಿನ ಸಂಬಂಧದ ಬಗ್ಗೆ ನೀವು ಕೇಳುವಂತಹ ಯಾವುದೇ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ. ನಿಮ್ಮನ್ನು ಸಂಪೂರ್ಣವಾಗಿ ನಂಬಿದ ಬಳಿಕವಷ್ಟೇ ಆಕೆ ತನ್ನ ಹಿಂದಿನ ಸಂಬಂಧದ ಬಗ್ಗೆ ಹೇಳಬಹುದು. ನೀವಾಗಿಯೇ ಪ್ರಶ್ನೆ ಕೇಳುವ ಬದಲು ಆಕೆ ತನ್ನ ಹಿಂದಿನ ಸಂಬಂಧದ ಬಗ್ಗೆ ಕೇಳುವಂತಹ ಪರಿಸ್ಥಿತಿ ನಿರ್ಮಿಸಿ.

ಮುಖದ ಕೂದಲು ಹೇಗೆ ತೆಗೆಯುತ್ತೀ?
ಮಾತುಕತೆ ವೇಳೆ ಇಂತಹ ಪ್ರಶ್ನೆಯು ಖಂಡಿತವಾಗಿಯೂ ತುಂಬಾ ಗೊಂದಲವನ್ನು ಉಂಟು ಮಾಡಬಹುದು. ಇಂತಹ ವಿಷಯಗಳು ನಿಮಗೆ ತಿಳಿದಿದ್ದರೂ ಇಂತಹ ಪ್ರಶ್ನೆ ಕೇಳುವುದನ್ನು ಆದಷ್ಟು ಕಡೆಗಣಿಸಿ. ಈ ರೀತಿ ಮಾತನಾಡಿದರೆ ಆಕೆ ಖಂಡಿತವಾಗಿಯೂ ಗೊಂದಲಕ್ಕೆ ಸಿಲುಕುತ್ತಾಳೆ.

ನಿನ್ನ ಜಾಗವಾ ಅಥವಾ ನನ್ನದಾ?
ಕೆಲವೊಂದು ವಿಷಯಗಳು ತನ್ನಷ್ಟಕ್ಕೆ ನಡೆಯುತ್ತದೆ. ಇದರ ಬಗ್ಗೆ ಅವಸರ ಮಾಡುವ ಅಗತ್ಯವೇ ಇಲ್ಲ. ಆಕೆ ಇದರ ಬಗ್ಗೆ ಚಿಂತಿಸದೆ ಇರುವಾಗ ನೀವು ಆಕೆಗೆ ಇಂತಹ ಪ್ರಶ್ನೆಯನ್ನು ಕೇಳುವುದು ಮೂರ್ಖರಾದಂತೆ ಮಾಡುವುದು. ಆಕೆಗೆ ತುಂಬಾ ಕುತೂಹಲವಿದ್ದರೆ ಯಾವುದೇ ಸ್ಥಳದ ಬಗ್ಗೆ ಚಿಂತೆ ಮಾಡಲ್ಲ. ಆಕೆಯ ಒಪ್ಪಿಗೆ ಬರುವ ತನಕ ಇಂತಹ ಪ್ರಶ್ನೆ ಕೇಳುವುದನ್ನು ನಿಲ್ಲಿಸಿ.



Click it and Unblock the Notifications