ಪ್ರೇಮಿಗಳ ದಿನದ ಉಡುಗೊರೆ, ಕೊಂಚ ಭಿನ್ನವಾಗಿದ್ದರೇ ಚಂದ!

By: Hemanth
Subscribe to Boldsky

ವ್ಯಾಲೆಂಟೈನ್ಸ್(ಪ್ರೇಮಿಗಳ ದಿನ) ದಿನವೆಂದರೆ ವಿಶ್ವದೆಲ್ಲೆಡೆಯ ಪ್ರೇಮಿಗಳಿಗೆ ಏನೋ ಸಂಭ್ರಮ. ಪ್ರೇಮಿಗಳು ಪರಸ್ಪರ ಉಡುಗೊರೆಯನ್ನು ವಿನಿಮಯ ಮಾಡಿಕೊಂಡು ಈ ದಿನವನ್ನು ಆಚರಿಸುತ್ತಾರೆ. ಕೆಲವರು ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾರೆ. ಇದಕ್ಕಾಗಿಯೇ ಈ ದಿನ ತುಂಬಾ ವಿಶೇಷವಾಗಿರುವಂತದ್ದಾಗಿದೆ. ಪ್ರೇಮಿಗಳ ದಿನಾಚರಣೆ: ನಿಬ್ಬೆರಗಾಗಿಸುವ ರಂಜನೀಯ ಸಂಗತಿಗಳು!

ಕೆಲವು ಪ್ರೇಮಿಗಳು ಈ ದಿನದಂದು ವಿದೇಶಗಳಿಗೆ ಪ್ರಯಾಣ ಮಾಡಿ ಸಂಭ್ರಮವನ್ನು ವಿಶೇಷವಾಗಿಸುತ್ತಾರೆ. ಆದರೆ ಪ್ರೇಮಿಗಳ ದಿನದಂದು ಉಡುಗೊರೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ ಪ್ರೇಮಿಗಳ ದಿನದಂದು ಕೊಡುವಂತಹ ಕೆಲವೊಂದು ಉಡುಗೊರೆಗಳ ಬಗ್ಗೆ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ನೀವು ಕೂಡ ಪ್ರೇಮಿಗೆ ಇದನ್ನು ಉಡುಗೊರೆಯಾಗಿ ನೀಡಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿಕೊಳ್ಳಿ ಮತ್ತು ಉಡುಗೊರೆಯ ಅರ್ಥವನ್ನು ತಿಳಿದುಕೊಳ್ಳಿ....  

ಚಾಕ್ಲೇಟ್

ಚಾಕ್ಲೇಟ್

ಪ್ರೇಮಿಗಳ ದಿನದಂದು ಉಡುಗೊರೆಯಾಗಿ ನೀಡುವಂತಹ ಚಾಕಲೇಟ್ ಮಹಿಳೆಯರಂತೆ ತುಂಬಾ ಮೌಲ್ಯಯುತ, ದಿವ್ಯ ಹಾಗೂ ಸೂಕ್ಷ್ಮವಾಗಿರುವಂತದ್ದಾಗಿದೆ. ಚಾಕಲೇಟ್ ಕಾಮೋತ್ತೇಜಕ ಆಹಾರವಾಗಿದ್ದು, ಇದು ಇಂದ್ರಿಯ ಸುಖದ ಆಸೆಯನ್ನು ಹೆಚ್ಚಿಸುತ್ತದೆ. ಇದರಿಂದ ಪ್ರೇಮಿಗಳು ಸಾಂಪ್ರದಾಯಿಕ ಉಡುಗೊರೆ ಚಾಕಲೇಟ್ ನ್ನು ಪರಸ್ಪರ ವಿನಿಮಯ ಮಾಡುತ್ತಾರೆ.

ಗುಲಾಬಿ

ಗುಲಾಬಿ

ಗುಲಾಬಿಯು ಪ್ರೇಮ ಮತ್ತು ಮೋಹದ ಸಂಕೇತವಾಗಿದೆ. ಕೆಂಪು ಗುಲಾಬಿಯು ಸಾಂಪ್ರದಾಯಿಕ ಪ್ರೇಮಿಗಳ ದಿನಾಚರಣೆಯ ಉಡುಗೊರೆಯಾಗಿದೆ. ಇದನ್ನು ಪ್ರೇಮಿಯು ತನ್ನ ಪ್ರಿಯತಮೆಗೆ ನೀಡುತ್ತಾನೆ. ಕೆಂಪು ಬಣ್ಣವನ್ನು ಹೃದಯಕ್ಕೆ ಹೋಲಿಸಲಾಗಿದೆ. ಇದರಿಂದ ವಿಶೇಷ ದಿನದಂದು ಕೆಂಪು ಗುಲಾಬಿಯನ್ನು ವಿನಿಮಯ ಮಾಡಲಾಗುತ್ತದೆ.

ಕರಡಿ ಗೊಂಬೆ

ಕರಡಿ ಗೊಂಬೆ

ಕರಡಿ ಗೊಂಬೆಯನ್ನು ಪ್ರೇಮಿಗಳ ದಿನದಂದು ಉಡುಗೊರೆಯಾಗಿ ನೀಡುವ ಕಾರಣವೆಂದರೆ ಇದು ಬಿಸಿ ಅಪ್ಪುಗೆಯ ಸಂಕೇತವಾಗಿದೆ. ನಿಮ್ಮ ಪ್ರೇಮಿಗೆ ಏನಾದರೂ ವಿಶೇಷವಾಗಿರುವುದನ್ನು ನೀಡಲು ಬಯಸುವುದಾದರೆ ಇದು ಒಳ್ಳೆಯ ಆಯ್ಕೆ.

ಕಾರ್ಡ್‌ಗಳು

ಕಾರ್ಡ್‌ಗಳು

ನೀವು ಹೃದಯ ಹಾಗೂ ಆತ್ಮದಿಂದ ಪ್ರೀತಿಸುವ ಮತ್ತು ನಿಜವಾಗಿಯೂ ಕಾಳಜಿ ಇದೆಯೆಂದು ತೋರಿಸಲು ಪ್ರೇಮಿಗಳ ದಿನದ ಕಾರ್ಡ್ ತುಂಬಾ ಜನಪ್ರಿಯವಾಗಿದೆ. ಪ್ರೇಮಿಗೆ ನೀವು ನೀಡುವಂತಹ ಸಾಂಪ್ರದಾಯಿಕ ಉಡುಗೊರೆ ಇದಾಗಿದೆ.

ಪ್ರೇಮ ಪತ್ರಗಳು

ಪ್ರೇಮ ಪತ್ರಗಳು

ನೀವು ಹೃದಯದಿಂದ ಎಷ್ಟು ಪ್ರೀತಿಸುತ್ತೀರಿ ಎಂದು ತೋರಿಸಲು ಪ್ರೇಮ ಪತ್ರಗಳನ್ನು ಬರೆಯುವುದು ಒಳ್ಳೆಯದು. ಇದು ಪ್ರೇಮಿಗಳ ದಿನದಂದು ನೀವು ಪ್ರೇಮಿ ಅಥವಾ ಪ್ರಿಯತಮೆಗೆ ನೀಡುವಂತಹ ಸಾಂಪ್ರದಾಯಿಕ ಉಡುಗೊರೆಯಾಗಿದೆ.

ಹೃದಯಾಕಾರದ ಲಾಕೆಟ್

ಹೃದಯಾಕಾರದ ಲಾಕೆಟ್

ಎರಡು ಹೃದಯಗಳು ಒಂದಾಗುವ ಭಾವನೆ ತುಂಬಾ ವಿಶೇಷವಾಗಿರುವಂತದ್ದಾಗಿದೆ. ಹೃದಯಾಕಾರದ ಲಾಕೆಟ್ ಅನ್ನು ಪ್ರೇಮಿಗಳ ದಿನದಂದು ನೀವು ಸಂಗಾತಿಗೆ ಉಡುಗೊರೆಯಾಗಿ ನೀಡಬಹುದು.

 
English summary

Meaning Of Traditional Valentine's Day Gifts

Today, Boldsky shares with you the meaning of traditional Valentine's Day gifts which couples buy. We are sure that this year, you will surely give your partner one of these traditional Valentine's gifts.
Please Wait while comments are loading...
Subscribe Newsletter