Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೇಮಿಗಳ ದಿನಾಚರಣೆ: ನಿಬ್ಬೆರಗಾಗಿಸುವ ರಂಜನೀಯ ಸಂಗತಿಗಳು!
ಚಳಿಗಾಲದ ರಜಾದಿನಗಳು ಮುಗಿದು ಹೋದವು. ನಮ್ಮ ಹೊಸ ವರ್ಷ, ಮುಂತಾದ ಆಚರಣೆಗಳು ಮುಗಿದು ಹೋದವು ಎಂದು ಕೊರಗಬೇಡಿ. ನಮಗಾಗಿ ಮುಂದೆ ಕಾದಿದೆ ಪ್ರೇಮಿಗಳ ದಿನಾಚರಣೆ. ಈ ಸಂದರ್ಭದಲ್ಲಿ ಪ್ರೇಮಿಗಳ ದಿನಾಚರಣೆಯ ಕುರಿತಾದ ರಂಜನೀಯ ವಿಚಾರಗಳನ್ನು ನಾವು ನಿಮಗಾಗಿ ತಂದಿದ್ದೇವೆ.
ಪ್ರೇಮಿಗಳಿಗಳಿಗಷ್ಟೇ ಅಲ್ಲದೆ ಪ್ರೀತಿಯನ್ನು ಬಯಸುವ, ಪ್ರೀತಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರೀತಿ ಪಾತ್ರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ತಮ್ಮ ಪ್ರೀತಿ ಪಾತ್ರ ಪ್ರಾಣಿ- ಪಕ್ಷಿಗಳಿಗೆ ಹೀಗೆ ತಾವು ಪ್ರೀತಿಸುವ ಪ್ರತಿ ಅಂಶಗಳಿಗೂ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸುದಿನವಿದು. 7 ಜಗತ್ತ್ ಪ್ರಸಿದ್ಧ ಐತಿಹಾಸಿಕ ಲವ್ ಸ್ಟೋರಿ
ಪ್ರೀತಿ ಮತ್ತು ಪ್ರಣಯವನ್ನೆ ತುಂಬಿಕೊಂಡಿರುವ ಈ ಸುಂದರವಾದ ದಿನವನ್ನು ನಾವು ಹೆಂಗಳೆಯರು ಹೇಗೆ ತಾನೆ ಆಚರಿಸದೆ ಇರಲು ಸಾಧ್ಯ. ಹಾಗಾದರೆ ಬನ್ನಿ ಈ ಪ್ರೇಮಿಗಳ ದಿನಾಚರಣೆಯ ಸುತ್ತ ಇರುವ ರಂಜನೀಯ ವಿಚಾರಗಳ ಬಗ್ಗೆ ಒಮ್ಮೆ ಗಮನ ಹರಿಸೋಣ.

ಪ್ರೇಮಿಗಳ ದಿನಾಚರಣೆಯ ಮೂಲ
ಪ್ರೇಮಿಗಳ ದಿನವನ್ನು ಹಿಂದೆ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದರು. ಆದರೆ ಇಂದು ನಾವು ಮಾತಾನಾಡುತ್ತಿರುವ ಪ್ರೇಮಿಗಳ ದಿನಾಚರಣೆಯು ಕ್ರಿ.ಶ 270ರಲ್ಲಿ ಎರಡನೆ ಕ್ಲಾಡಿಯಸ್‍ನ ಅವಧಿಯಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‍ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೆ ಒಬ್ಬಂಟಿಯಾಗಿದ್ದಷ್ಟು ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು. ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‍ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆಬ್ರವರಿ 14ರಂದು ಸೆರೆಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು " ಇಂತಿ ನಿಮ್ಮ ವ್ಯಾಲೇಂಟಿನ್" ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಸತ್ತನು. ಇದು ವ್ಯಾಲೇಂಟಿನ್ಸ್ ಡೇ (ಪ್ರೇಮಿಗಳ ದಿನ) ಎಂದು ಕರೆಯಲ್ಪಡುವ ಈ ದಿನದ ಹಿಂದಿನ ಕುತೂಹಲಕಾರಿ ವಿಚಾರ. ಮುಂದೆ ಓದುತ್ತಿರಿ.

XX
Xಗಳು ಇಂಗ್ಲೀಷಿನ ಕಿಸ್‍ಗಳ ಜೊತೆಗೆ ಸಂಬಂಧ ಹೊಂದಿದೆ ಎಂಬುದು ವಿಶ್ವಕ್ಕೆ ಗೊತ್ತಿರುವ ಸತ್ಯ. ಹಾಗಾದರೆ ಈ X ನ ಕಿಸ್‍ಮತ್ ಏನು? ಹೇಗೆ ಬಂತು ಎಂದಿರಾ? ಇದೆ ಇದಕ್ಕು ಒಂದು ಇತಿಹಾಸ, ಮಧ್ಯಕಾಲೀನ ಯುಗದಲ್ಲಿ ತಮ್ಮ ಹೆಸರನ್ನು ಬರೆಯಲು ಬರದ ಜನರು, ತಮ್ಮ ಹೆಸರಿನ ಸ್ಥಳದಲ್ಲಿ X ಎಂದು ಬರೆದು ಒಂದು ಮುತ್ತನ್ನು ಅಲ್ಲಿ ನೀಡಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುತ್ತಿದ್ದರಂತೆ. ಗೊತ್ತಾಯಿತಲ್ಲ X ಮತ್ತು ಕಿಸ್! ನಿಮ್ಮ ಪ್ರೇಮ ಪತ್ರದಲ್ಲಿ ಇನ್ನು ಮುಂದೆ ಕಿಸ್ ಜೊತೆಗೆ X ಇರಲಿ!!!

ಮಧ್ಯಕಾಲೀನ ಯುಗದಲ್ಲಿ ಪ್ರೇಮಿಗಳ ದಿನಾಚರಣೆ
ಕೆಲವರ ಹೇಳಿಕೆಯ ಪ್ರಕಾರ ಮಧ್ಯಕಾಲೀನ ಯುಗದ ಹುಡುಗಿಯರು ಪ್ರೇಮಿಗಳ ದಿನಾಚರಣೆಯಂದು ವಿಲಕ್ಷಣವಾದ ಆಹಾರಗಳನ್ನು ಸೇವಿಸುತ್ತಿದ್ದರಂತೆ. ಇದರಿಂದ ಅವರಿಗೆ ತಮ್ಮ ಭಾವಿ ಗಂಡನ ಕುರಿತು ಕನಸುಗಳು ಬರುತ್ತಿದ್ದವಂತೆ. ಇದರ ಜೊತೆಗೆ ತಮ್ಮ ಬಾಳ ಸಂಗಾತಿ ಯಾರು ಎಂದು ತಿಳಿದುಕೊಳ್ಳಲು ಬಟ್ಟಲುಗಳ ಮೇಲೆ ಹೆಸರನ್ನು ಸಹ ಬರೆಯುತ್ತಿದ್ದರಂತೆ. ಆನಂತರ ತಮ್ಮ ಬಟ್ಟೆಯ ತೋಳಿನ ಮೇಲೆ ಅವರ ಪ್ರೇಮಿಯ ಹೆಸರನ್ನು ಬರೆದುಕೊಳ್ಳುತ್ತಿದ್ದರಂತೆ. ಹೀಗೆ " to wear your heart on your sleeve'( ನಿಮ್ಮ ಹೃದಯವನ್ನು ನಿಮ್ಮ ತೊಳಿನ ಮೇಲೆ ಧರಿಸಿ) ಎಂಬ ಘೋಷ ವಾಕ್ಯ ಹುಟ್ಟಿಕೊಂಡಿತು.

ಕೆಂಪು ಗುಲಾಬಿ
ಕೆಂಪು ಗುಲಾಬಿಗಳು ಎಲ್ಲೆಡೆಯು ಪ್ರೀತಿ ಮತ್ತು ಮಧುರ ಬಾಂಧವ್ಯಕ್ಕೆ ಚಿಹ್ನೆಯಾಗಿ ಬಳಕೆಯಾಗುತ್ತದೆ. ಬಹುಶಃ ಇದು ರೋಮನ್‍ರ ಪ್ರೀತಿಯ ದೇವತೆಯಾದ ಶುಕ್ರನಿಗೆ ಅತ್ಯಂತ ಪ್ರೀತಿ ಪಾತ್ರ ಹೂವಾಗಿರುವುದರಿಂದ ಈ ಸ್ಥಾನಮಾನ ದೊರೆತಿದೆಯೇನೊ? ಈಗ ನಿಮ್ಮ ಪ್ರೀತಿಯ ಅಗಾಧತೆಯನ್ನು ವ್ಯಕ್ತಪಡಿಸಲು ಎಂತಹ ಹೂವುಗಳು ಬೇಕು ಎಂಬುದನ್ನು ನೀವೇ ಆಲೋಚಿಸಬೇಕು. ಕೇವಲ ಅಮೆರಿಕಾವೊಂದರಲ್ಲೆ ರಾಷ್ಟ್ರೀಯ ರಜಾದಿನವಾದ ಈ ದಿನದಂದು ಸುಮಾರು 189 ದಶಲಕ್ಷ ಗುಲಾಬಿ ಹೂಗಳು ಮಾರಾಟವಾಗುತ್ತವೆಯೆಂದರೆ ನೀವೇ ಊಹಿಸಿ.

ಅಮರ ಮಧುರ ಪ್ರೇಮ, ಅಧರ ಮಧುರ ಚುಂಬನ
2011ರಷ್ಟು ಹಿಂದಕ್ಕೆ ಹೋದಾಗ ನಮಗೆ ಒಂದು ಕುತೂಹಲಕಾರಿ ಸ್ಪರ್ಧೆಯು ಕಂಡು ಬರುತ್ತದೆ. ಅದೆಂದರೆ ಧೀರ್ಘ ಚುಂಬನ ಸ್ಪರ್ಧೆ.ಥೈಲ್ಯಾಂಡ್‍ನಲ್ಲಿ ಫೆಬ್ರವರಿ 14ರಂದು ಈ ಸ್ಪರ್ಧೆ ನಡೆಯುತ್ತದೆ. ಸ್ಪರ್ಧಿಗಳು ಕುಳಿತುಕೊಳ್ಳುವಂತಿಲ್ಲ, ಮಲಗುವಂತಿಲ್ಲ, ಒಬ್ಬರಿಂದ ಒಬ್ಬರು ಬೇರೆಯಾಗುವಂತಿಲ್ಲ. ಒಂದು ವೇಳೆ ಹೀಗೆ ಮಾಡಿದರೆ ಅವರನ್ನು ಸ್ಪರ್ಧೆಯಿಂದ ಹೊರಗೆ ಕಳುಹಿಸಲಾಗುತ್ತದೆ. ಯಾವುದಾದರು ಸ್ಪರ್ಧಿ ನಿಶ್ಶಕ್ತಗೊಂಡರೆ ಅರ್ಧಗಂಟೆ ಅವಧಿಯನ್ನು ಅವರಿಗೆ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಜೋಡಿಯ ದಾಖಲೆ 46 ಗಂಟೆ 24 ನಿಮಿಷದ ಧೀರ್ಘ ಚುಂಬನವಾಗಿರುತ್ತಾದೆ. ಈ ದಾಖಲೆ ಬರೆದ ಜೋಡಿಗೆ 3,200 ಡಾಲರ್ ಮೊತ್ತದ ವಜ್ರದ ಉಂಗುರವನ್ನು ನೀಡಲಾಯಿತು.

ಚಾಕೊಲೇಟ್ ಮುಲಾಮು
1800ಕ್ಕು ಹಿಂದೆ ವೈಧ್ಯರು ಭಗ್ನ ಪ್ರೇಮಿಗಳಿಗೆ ಚಾಕೊಲೇಟನ್ನು ತಿನ್ನುವಂತೆ ಸಲಹೆ ನೀಡುತ್ತಿದ್ದರಂತೆ. ಆಗ ಅದನ್ನು ತಿಂದ ರೋಗಿಗಳು ತಮ್ಮ ಮೊದಲ ಪ್ರೇಮದ ದುರಂತದ ದುಃಖವನ್ನು ಪರಿಹರಿಸಿಕೊಂಡ ಭಾವನೆಯನ್ನು ವ್ಯಕ್ತಪಡಿಸಿದರಂತೆ. ಇದು ನಿಜಕ್ಕು ತಮಾಷೆಯ ವಿಚಾರ, ಇಂದು ಸುಮಾರು ಹುಡುಗಿಯರು ಮತ್ತು ಹೆಂಗಸರು ಚಾಕೊಲೇಟ್ ಎಂದರೆ ಜೀವ ಬಿಡುತ್ತಾರೆ, ಯಾವಾಗ ತಮಗೆ ಪ್ರೀತಿ ಕೈಕೊಡುತ್ತದೊ ಎಂಬ ಭಯವಿರಬಹುದೆ?!

ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸಲಾಯಿತು
ಇಂಗ್ಲೆಂಡಿನ ರಾಜ ಏಳನೆಯ ಹೆನ್ರಿಯು ಫೆಬ್ರವರಿ 14ನ್ನು ಸೆಂಟ್. ವ್ಯಾಲೆಂಟೈನ್ಸ್ ಡೇ ಎಂದು ಘೋಷಿಸಿ, ಅಧಿಕೃತ ರಜಾದಿನವನ್ನಾಗಿ ಘೋಶಣೆ ಮಾಡುವವರೆಗು ಇದು ರಜಾದಿನವಾಗಿರಲಿಲ್ಲ. ಆದರೆ ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ದಿನವನ್ನು ಸಾರ್ವಜನಿಕ ರಜಾದಿನವನ್ನಾಗಿ ಘೋಷಿಸಲಾಗಿದೆ.ಏನೇ ಇರಲಿ ಚಾಕೊಲೇಟ್ ತಿಂದು, ಗುಲಾಬಿ ಹಂಚಿ ಹಾಳಾಗಲು ಅನುವು ಮಾಡಿಕೊಟ್ಟ ರಾಜ ಹೆನ್ರಿಗೆ ನಾವು ಧನ್ಯಾವಾದಗಳನ್ನು ಹೇಳಲೆಬೇಕು.



Click it and Unblock the Notifications