Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಆಕೆ ಹುಡುಗರೊಂದಿಗೆ ಬೆರೆಯುತ್ತಾ ಇದ್ದರೆ ಇರ್ಲಿ ಬಿಡಿ, ಡೋಂಟ್ ವರಿ!
ಪ್ರೀತಿಸುವವರ ಮನಸ್ಸು ಯಾವಾಗಲೂ ಮುಕ್ತವಾಗಿರಬೇಕು ಮತ್ತು ಅದರಲ್ಲಿ ಯಾವುದೇ ಕಪಟ ತುಂಬಿರಬಾರದು ಎನ್ನುವ ಮಾತಿದೆ. ಯಾಕೆಂದರೆ ಪ್ರೀತಿಯಲ್ಲಿ ಒಮ್ಮೆ ಸಂಶಯ ಬಂದರೆ ಅದರಿಂದ ಮೇಲೆ ಬರಲು ಸಾಧ್ಯವೇ ಆಗದು. ಪ್ರೀತಿಸುವವರು ಯಾವಾಗಲೂ ಅಸುರಕ್ಷತೆಯ ಭಾವನೆಯಿಂದ ಬಳಲುತ್ತಾ ಇರುತ್ತಾರೆ.
ಯಾಕೆಂದರೆ ನಿಮ್ಮ ಪ್ರಿಯತಮೆ ಜತೆ ಯಾರಾದರೂ ತುಂಬಾ ಆತ್ಮೀಯವಾಗಿ ಮಾತನಾಡಿದರೆ ಅದರಿಂದ ನಿಮ್ಮಲ್ಲಿ ಅಸುರಕ್ಷಿತ ಭಾವನೆ ಕಾಡುವುದು. ಯಾಕೆಂದರೆ ಇಂದಿನ ದಿನಗಳಲ್ಲಿ ಹುಡುಗಿಯರು ತುಂಬಾ ಆಧುನಿಕತೆ ಮೈಗೂಡಿಸಿಕೊಂಡಿರುತ್ತಾರೆ. ಅವರಿಗೆ ಪ್ರೀತಿ ಪ್ರೇಮದಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಾಗಿರುವುದಿಲ್ಲ. ಅವರಿಗೆ ಹಲವಾರು ಮಂದಿ ಗೆಳೆಯರು ಇರಬಹುದು. ಇದರಿಂದ ನಿಮ್ಮಲ್ಲಿ ಅಸುರಕ್ಷಿತ ಭಾವನೆ ಕಾಡಬಹುದು...
ಈಗೆಲ್ಲಾ ಆಗುವುದು ಮಾಮೂಲು.. ಯಾಕೆಂದರೆ ಇತ್ತೀಚಿನ ಕಾಲವೇ ಹಾಗೆ ಆಗಿ ಹೋಗಿದೆ!! ಅದರಲ್ಲೂ ನೀವು ಇಷ್ಟಪಟ್ಟ ಹುಡುಗಿಯ ಹತ್ತಿರ ಅಥವಾ ನಿಮ್ಮ ಪ್ರೇಯಸಿಯ ಸನಿಹ ಒಬ್ಬ ಹುಡುಗ ಬಂದರೂ ನಿಮ್ಮಲ್ಲಿ ಅಭದ್ರತೆ ಎನ್ನುವುದು ಕಾಡುತ್ತಾ ಇರುತ್ತದೆ. ನಿಮ್ಮನ್ನು ಬಿಟ್ಟು ನಿಮ್ಮ ಪ್ರೇಯಸಿ ಬೇರೆ ಯಾವ ಹುಡುಗನ ಜತೆಗೂ ಮಾತನಾಡಬಾರದು ಎನ್ನುವ ಅಲಿಖಿತ ನಿಯಮ ನಿಮ್ಮದಾಗಿರುವುದು.
ಆದರೆ ನಿಮ್ಮ ಪ್ರೇಯಸಿಗೆ ಹೆಚ್ಚೆಚ್ಚು ಹುಡುಗರು ಸ್ನೇಹಿತರು ಇದ್ದಷ್ಟು ಒಳ್ಳೆಯದು. ಇದನ್ನು ಕೇಳಿ ನೀವು ಬೆಚ್ಚಿ ಬೀಳಬಹುದು!! ಆದರೆ ಇದು ನಿಜ. ನಿಮ್ಮ ಪ್ರೇಯಸಿಗೆ ಹೆಚ್ಚಿನ ಹುಡುಗರು ಸ್ನೇಹಿತರಾಗಿರುವ ಧನಾತ್ಮಕ ಅಂಶಗಳ ಬಗ್ಗೆ ತಿಳಿದುಕೊಂಡರೆ ಖಂಡಿತವಾಗಿಯೂ ನೀವು ಖುಷಿಪಡುತ್ತೀರಿ. ಸಾಮಾಜಿಕವಾಗಿ ತುಂಬಾ ಚಟುವಟಿಕೆಯಲ್ಲಿರುವ ಹುಡುಗಿಯನ್ನು ನೀವು ಪ್ರೇಮಿಸಿದರೆ ಆಗ ಹಲವಾರು ರೀತಿಯ ಲಾಭಗಳು ನಿಮಗೆ ಆಗಲಿದೆ. ಸ್ನೇಹವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅದು ನಿಮಗೆ ಹೆಚ್ಚಿನ ಲಾಭ ನೀಡಲಿದೆ. ಸಾಮಾಜಿಕವಾಗಿ ಆಕೆ ಹೆಚ್ಚು ಹುಡುಗರೊಂದಿಗೆ ಬೆರೆಯುತ್ತಾ ಇದ್ದರೆ ನೀವು ಚಿಂತಿಸಬೇಕಿಲ್ಲ....
ಪ್ರೇಯಸಿಗೆ ಹೆಚ್ಚಿನ ಹುಡುಗರು ಸ್ನೇಹಿತರು ಇರುವ ಅರ್ಥವೇನು?
ಇಂತಹ ಹುಡುಗಿಯರು ಪುರುಷರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವರು. ಹೆಚ್ಚಿನ ಪುರುಷ ಸ್ನೇಹಿತರು ಇರುವ ಹುಡುಗಿಯರು, ಪುರುಷರು ಹೇಗೆ ಚಿಂತಿಸುವರು, ವರ್ತಿಸುವರು ಮತ್ತು ಹೇಗೆ ಕಾರ್ಯವಹಿಸುವರು ಎಂದು ತಿಳಿಯುವರು. ಇದರಿಂದ ಆಕೆಗೆ ನಿಮ್ಮನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆರವಾಗಬಹುದು.
ಆಕೆಯ ಸುರಕ್ಷತೆ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ
ಕಚೇರಿಯಲ್ಲಿ ತುಂಬಾ ಹೊತ್ತಾದರೆ ಆಕೆಯನ್ನು ಮನೆಗೆ ಬಿಡಲು ಸ್ನೇಹಿತರು ಇರುವರು. ಆಕೆ ಅನಾರೋಗ್ಯಕ್ಕೆ ಒಳಗಾದರೆ ನೀವು ಆಕೆಯ ಆರೈಕೆಗೆ ಧಾವಿಸುವ ಮೊದಲು ಸ್ನೇಹಿತರು ನೆರವಾಗುವರು. ಇದರಿಂದ ನಿಮ್ಮ ಮೇಲಿನ ಹೊರೆಯು ಕಡಿಮೆಯಾಗುವುದು.
ಆಕೆಯ ಸುರಕ್ಷತೆ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ
ಆಕೆ ನಿಮ್ಮೊಂದಿಗೆ ತುಂಬಾ ಪ್ರಾಮಾಣಿಕವಾಗಿದ್ದಾಳೆಂದು ತಿಳಿದಿರುವ ಕಾರಣ ಆಕೆ ಸ್ನೇಹಿತರ ಜತೆ ತಿರುಗಲು ಹೋದರೂ ನಿಮಗೆ ಸುರಕ್ಷಿತ ಭಾವನೆಯಾಗುವುದು. ಆಕೆ ಎಲ್ಲಾರೊಂದಿಗೆ ಸ್ನೇಹಭಾವದಿಂದ ಇರುವಳು. ನೀವು ಮಾತ್ರ ಆಕೆಯ ಹೃದಯ ಗೆದ್ದವರು.
ನಿಮಗೆ ಬೆಂಬಲ ಸಿಗುವುದು
ನೀವು ತುಂಬಾ ಸಮಸ್ಯೆಯಲ್ಲಿದ್ದಾಗ ಆಕೆಯ ಸ್ನೇಹಿತರ ಬಳಗದಿಂದ ನಿಮಗೆ ನೆರವು ಸಿಗಬಹುದು. ನೀವು ಕೆಲಸ ಬದಲಾಯಿಸಲು ಬಯಸಿದ್ದರೆ ಆಕೆಯ ಸ್ನೇಹಿತರು ಬೇರೆ ಕಂಪೆನಿಯಲ್ಲಿ ನಿಮಗೆ ಕೆಲಸದ ಬಗ್ಗೆ ತಿಳಿಸಬಹುದು. ಇದರಿಂದ ಜೀವನದಲ್ಲಿ ನಿಮಗೆ ಹೆಚ್ಚಿನ ಬೆಂಬಲವೂ ಲಭ್ಯವಾಗುವುದು.
ಜಗಳ ಕಡಿಮೆ
ಆಕೆ ತನ್ನ ಕೆಲಸ ಮತ್ತು ಸ್ನೇಹಿತರ ಜತೆ ಹೆಚ್ಚು ವ್ಯಸ್ತವಾಗಿರುವ ಕಾರಣ ನಿಮ್ಮೊಂದಿಗೆ ಜಗಳ ಮಾಡಲು ಆಕೆಗೆ ಸಮಯ ಸಿಗದು. ಖಾಲಿಯಾಗಿರುವ ಮೆದುಳು ಯಾವಾಗಲೂ ಪಿಶಾಚಿಗಳಿಗೆ ಆಸ್ಥಾನವಾಗಿರುವುದು. ಇದರಿಂದ ಆಕೆ ಸುಮ್ಮನೆ ಕುಳಿತುಕೊಂಡು ಹಳೆ ಜಗಳ ಕೆದಕಿ ನಿಮ್ಮ ದಿನ ಹಾಳು ಮಾಡುವಂತಿಲ್ಲ.
ನಿಮ್ಮ ಸ್ನೇಹಿತೆಯರ ಜತೆ ತಿರುಗಲು ಅನುಮತಿ
ನೀವು ನಿಮ್ಮ ಮಹಿಳಾ ಸಹೋದ್ಯೋಗಿ ಅಥವಾ ಸ್ನೇಹಿತೆಯೊಂದಿಗೆ ತಿರುಗಾಡಿದರೆ ಆಕೆಗೆ ಸಂಶಯ ಬರದು. ಆಕೆ ಕೂಡ ಅವರೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುವಳು.
ಪುರುಷ ಗೆಳೆಯರಿದ್ದರೆ ಇರಲಿ ಬಿಡಿ. ಡೋಂಟ್ ವರಿ!
ಪುರುಷರ ಬಗ್ಗೆ ತಿಳಿದಿರುವ ಮಹಿಳೆಯರು ವಿಶಾಲ ಹೃದಯ ಮತ್ತು ಮುಕ್ತ ಮನಸ್ಸು ಹೊಂದಿರುವರು. ಅವರಿಗೆ ಪುರುಷರ ಸಮಸ್ಯೆ ಬಗ್ಗೆ ಹೆಚ್ಚು ತಿಳಿದಿರುವುದು. ಇದರಿಂದ ಸಹಾನುಭೂತಿ ತೋರಿಸಿ ಅವರೊಂದಿಗೆ ಇರುವರು. ಇದರಿಂದ ಹೆಚ್ಚು ಚಿಂತೆ ಮಾಡಬೇಡಿ. ನಿಮ್ಮ ಪ್ರಿಯತಮೆಗೆ ಹೆಚ್ಚಿನ ಪುರುಷ ಗೆಳೆಯರಿದ್ದರೆ ಇರಲಿ ಬಿಡಿ. ಡೋಂಟ್ ವರಿ!
ಅನುಮಾನ ಮಾತ್ರ ಯಾವತ್ತೂ ಮಾಡಬೇಡಿ..
ಒಂದು ವೇಳೆ ನಿಮ್ಮ ಗೆಳೆಯ ತನ್ನ ಮಹಿಳಾ ಬಾಸ್‌ರನ್ನು ಅತಿ ಹೆಚ್ಚಾಗಿ ಹಚ್ಚಿಕೊಂಡಿದ್ದು ಅತ್ತ ಹೆಚ್ಚಾಗಿ ವಾಲುತ್ತಿರುವ ಬಗ್ಗೆ ನಿಮಗೆ ಅನುಮಾನ ಬಂದರೆ ಇದನ್ನು ನೇರವಾಗಿ ಕೇಳಿ ವಿಷಯವನ್ನು ಸ್ಪಷ್ಟೀಕರಿಸುವುದು ಅಗತ್ಯ ಮತ್ತು ಇದರಲ್ಲಿ ಏನೂ ತಪ್ಪಿಲ್ಲ. ಎಷ್ಟೋ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿನ ಆತ್ಮೀಯತೆ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ.
ಅನುಮಾನ ಬಂದರೆ ಕೂಡಲೇ ಪರಿಶೀಲಿಸಿಕೊಳ್ಳಿ
ಒಂದು ವೇಳೆ ನಿಮ್ಮ ಗೆಳೆಯ ಅಥವಾ ಗೆಳತಿಯ ನಡವಳಿಕೆಯ ಬಗ್ಗೆ ಅನುಮಾನ ಮೂಡಿದ್ದರೆ ಇದನ್ನು ಎದುರುಬದುರಾಗಿ ಕುಳಿತು ಸ್ಪಷ್ಟಪಡಿಸಿಕೊಳ್ಳುವುದು ಅಗತ್ಯ. ಏಕೆಂದರೆ ಒಂದು ವೇಳೆ ಇಬ್ಬರಲ್ಲೊಬ್ಬರಿಗೆ ಮೂರನೆಯ ವ್ಯಕ್ತಿಯ ಪರಿಚಯವಾಗಿ ಅವರ ಗುಣಗಳು ಇವರಿಗಿಂತಲೂ ಮಿಗಿಲಾಗಿ ಕಂಡಿದ್ದರೆ ಆ ಈ ಸಂಬಂಧದ ಬದಲು ಹೊಸ ಸಂಬಂಧವನ್ನು ಹೊಂದುವ ಮನದಾಳದ ಅಭಿಲಾಶೆ ಈಗಿನ ಸಂಬಂಧವನ್ನು ಶಿಥಿಲಗೊಳಿಸಬಹುದು. ಆದರೆ ಈ ಆಕರ್ಷಣೆ ನಿಜವಾಗಿಯೂ ಈಗಿನ ಸಂಬಂಧಕ್ಕಿಂತಲೂ ಗಟ್ಟಿಯಾದುದೇ ಎಂಬುದನ್ನು ಸ್ಪಷ್ಟೀಕರಿಸಲು ಇಬ್ಬರೂ ಎದುರುಬದುರಾಗಿ ಕುಳಿತು ಮಾತನಾಡುವುದು ಅವಶ್ಯ. ಒಂದು ವೇಳೆ ಮೂರನೆಯ ವ್ಯಕ್ತಿಯ ಬಗೆಗಿನ ಆಕರ್ಷಣೆ ನಿಜವೇ ಆಗಿದ್ದರೆ ಮಾತ್ರ ಪ್ರಥಮ ವ್ಯಕ್ತಿ ಈ ಸಂಬಂಧವನ್ನು ಉಳಿಕೊಳ್ಳುವ ಬದಲು ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ. ಒಂದು ವೇಳೆ ಹಾಗೇನೂ ಇಲ್ಲವೆಂದಾದಲ್ಲಿ ಈಗಿರುವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಅಗತ್ಯ.
ನೆನಪಿಡಿ ಸಂಬಂಧದಲ್ಲಿ ಅನುಮಾನ ಯಾವತ್ತೂ ಒಳ್ಳೆಯದಲ್ಲ
ಎಲ್ಲಾ ರೀತಿಯ ಅನುಮಾನಗಳು ಭಯ ಮತ್ತ್ತುಅನಿಶ್ಚಿತತೆಯ ಮೂಲಕವೇ ಮೂಡುತ್ತವೆ. ಅನುಮಾನ ಮೂಡಲು ಹಲವಾರು ಕಾರಣಗಳಿವೆ. ಆದರೆ ಒಂದು ವೇಳೆ ನಿಮ್ಮ ಸಂಬಂಧ ಗಟ್ಟಿಯಾಗಿದ್ದು ನೀವು ನಿಮ್ಮ ಸಂಗಾತಿಯನ್ನು ನಿಜವಾಗಿಯೂ ಪ್ರೀತಿಸುತ್ತಾ ಇದ್ದರೆ ನಿಮ್ಮ ಸಂಗಾತಿಯ ಯಾವುದೇ ಅನುಮಾನವನ್ನು ಪ್ರಕಟಿಸಲು ತಿಳಿಸಿ ಇದಕ್ಕೆ ಸೂಕ್ತವಾದ ಮತ್ತು ಸತ್ಯವಾದ ಉತ್ತರಗಳನ್ನು ನೀಡುವ ಮೂಲಕ ನಿಮ್ಮ ಸಂಬಂಧ ಶಾಶ್ವತವಾಗುವತ್ತ ಮುಂದುವರೆಯುತ್ತದೆ.
ನೆನಪಿಡಿ: ಆದಷ್ಟು ಆಕೆಯ ಮನಗೆಲ್ಲಲು ಪ್ರಯತ್ನಿಸಿ, ಅನಾವಶ್ಯಕ ಇಲ್ಲಿ ಸಂಶಯಕ್ಕೆ ಆಸ್ಪದ ಕೊಡಬೇಡಿ, ನೋಡಿ ನಿಮ್ಮಕೆಯ ಮನಸ್ಸು ಗೆಲ್ಲಲು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ ಮುಂದೆ ಓದಿ...
ಆಕೆಯ ಎಲ್ಲಾ ಕೆಲಸ ಕಾರ್ಯಗಳಿಗೂ ಗೌರವ ನೀಡಿ
ಆಕೆಯ ಅಭಿಪ್ರಾಯ ಕೇಳುವುದು ಹುಡುಗಿಯ ಅಭಿಪ್ರಾಯ ಕೇಳುವುದರಿಂದ ಆಕೆ ನಿಮ್ಮ ಜೀವನದಲ್ಲಿ ಪ್ರಾಮುಖ್ಯತೆ ಪಡೆದಿದ್ದಾಳೆಂದು ತೋರಿಸಿಕೊಡುತ್ತದೆ. ನಿಮ್ಮ ನಿರ್ಧಾರಗಳಲ್ಲಿ ಆಕೆಯನ್ನು ಸೇರಿಸಿಕೊಳ್ಳುವುದರಿಂದ ಆಕೆಗೆ ಪ್ರಾಮುಖ್ಯತೆ ಮತ್ತು ಗೌರವ ನೀಡಿದಂತಹ ಭಾವನೆಯಾಗುತ್ತದೆ. ಆಕೆ ನೀಡುವಂತಹ ಸಲಹೆಯಿಂದಾಗಿ ನಿಮಗೆ ತುಂಬಾ ನೆರವಾಗಬಹುದು. ಯಾಕೆಂದರೆ ಅದರಲ್ಲಿ ಸ್ತ್ರೀ ಸಹಜ ಆಲೋಚನೆ ಇರುತ್ತದೆ ಮತ್ತು ಇದು ವಿಭಿನ್ನ ರೀತಿಯಿಂದ ನಿಮಗೆ
ಲಾಭದಾಯಕವಾಗಿ ಪರಿಣಮಿಸಬಹುದು.
ನೀನು ನನ್ನ ಉತ್ತಮ ಗೆಳತಿ
ನೀನು ನನ್ನ ಉತ್ತಮ ಗೆಳತಿ ಹುಡುಗಿ ನಿಮ್ಮ ಜೀವನದ ಸಂಗಾತಿ ಮಾತ್ರವಲ್ಲದೆ ಒಳ್ಳೆಯ ಗೆಳತಿಯಾಗಿರಬೇಕೆಂದು ಬಯಸುತ್ತಾಳೆ. ಇದರಿಂದ ನೀವು ಯಾವಾಗಲೂ ಆಕೆಗೆ ನೀನು ನನ್ನ ಒಳ್ಳೆಯ ಗೆಳತಿ ಮತ್ತು ಜೀವನದ ನಿಜವಾದ ಪ್ರೀತಿ ಎಂದು ಹೇಳುತ್ತಿರಬೇಕು. ಇದರಿಂದ ಆಕೆಯ ಸೌಂದರ್ಯಕ್ಕೆ ಮಾತ್ರ ನೀವು ಆಕೆಯನ್ನು ಪ್ರೀತಿಸುತ್ತಿಲ್ಲ ಮತ್ತು ಆಕೆಯ ನಡತೆ ಕೂಡ ನಿಮಗಿಷ್ಟವೆಂದು ತಿಳಿಯುತ್ತದೆ...
ಆಕೆ ನೀಡುವಂತಹ ಸಲಹೆಗಳನ್ನೂ ಸ್ವಲ್ಪ ಕೇಳಿ....
ಹುಡುಗಿಯ ಅಭಿಪ್ರಾಯ ಕೇಳುವುದರಿಂದ ಆಕೆ ನಿಮ್ಮ ಜೀವನದಲ್ಲಿ ಪ್ರಾಮುಖ್ಯತೆ ಪಡೆದಿದ್ದಾಳೆಂದು ತೋರಿಸಿಕೊಡುತ್ತದೆ. ನಿಮ್ಮ ನಿರ್ಧಾರಗಳಲ್ಲಿ ಆಕೆಯನ್ನು ಸೇರಿಸಿಕೊಳ್ಳುವುದರಿಂದ ಆಕೆಗೆ ಪ್ರಾಮುಖ್ಯತೆ ಮತ್ತು ಗೌರವ ನೀಡಿದಂತಹ ಭಾವನೆಯಾಗುತ್ತದೆ. ಆಕೆ ನೀಡುವಂತಹ ಸಲಹೆಯಿಂದಾಗಿ ನಿಮಗೆ ತುಂಬಾ ನೆರವಾಗಬಹುದು. ಯಾಕೆಂದರೆ ಅದರಲ್ಲಿ ಸ್ತ್ರೀ ಸಹಜ ಆಲೋಚನೆ ಇರುತ್ತದೆ ಮತ್ತು ಇದು ವಿಭಿನ್ನ ರೀತಿಯಿಂದ ನಿಮಗೆ ಲಾಭದಾಯಕವಾಗಿ ಪರಿಣಮಿಸಬಹುದು.
ಗುಟ್ಟಾಗಿ ಯಾವುದೇ ವಿಷಯಗಳನ್ನು ಮಾಡಿಬೇಡಿ
ಒಂದು ವೇಳೆ ನಿಮ್ಮ ಸಂಬಂಧ ಗಟ್ಟಿಯಾಗಿಯೇ ಇದ್ದರೆ ಪರಸ್ಪರರ ಬಗ್ಗೆ ಅತ್ಯಂತ ಖಾಸಗಿಯಾದ ವಿಷಯಗಳನ್ನೂ ಕೇಳಿ ಸ್ಪಷ್ಟೀಕರಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ ಒಂದು ವೇಳೆ ನಿಮಗೆ ಮೂರನೆಯವರಿಂದ ನಿಮ್ಮ ಮನದನ್ನ ಬೇರೆ ಯಾರನ್ನೋ ಊಟಕ್ಕೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ತಿಳಿದು ಬಂದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ನೇರವಾಗಿಯೇ ಯಾರನ್ನು ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ? ಏನು ವಿಷಯ ಎಂದು ನೇರವಾಗಿ ಕೇಳಿ. ಇದರಿಂದ ದೊರಕುವ ಉತ್ತರದ ಮೂಲಕ ತಲೆಯಲ್ಲಿ ಅನುಮಾನದ ಹುಳಗಳು ಕೊರೆಯುವುದು ತಪ್ಪುತ್ತದೆ ಹಾಗೂ ಅನಾವಶ್ಯಕವಾದ ಗೊಂದಲ ಇಲ್ಲವಾಗುತ್ತದೆ.