ಆತನನ್ನು ನಂಬಿ ಮೋಸಹೋದೆ, ಈಗ ಏಡ್ಸ್ ರೋಗ ನನ್ನನ್ನು ಆವರಿಸಿದೆ..

Posted By: Deepu
Subscribe to Boldsky
ಪ್ರತಿಯೊಬ್ಬ ಹುಡುಗಿಯೂ ಈ ವಿಡಿಯೋ ನೋಡ್ಲೇಬೇಕು | Oneindia Kannada

ಆಕೆ ನೋಡಲು ತೆಳ್ಳಗೆ, ಬೆಳ್ಳಗೆ, ಚಲ್ಲು ಚಲ್ಲಾದ ಮಾತು, ಒಮ್ಮೆ ನಕ್ಕಿದರೆ ಸಾಕು ಆಕೆಯ ಸೌಂದರ್ಯಕ್ಕೆ ಪಾರವೇ ಇಲ್ಲವೇನೋ ಎನ್ನುವ ಹಾಗೆ ಶೋಭಿಸುತ್ತಿದ್ದಳು... ಕಾಲೇಜಿನ ಮೆಟ್ಟಿಲು ಏರುತ್ತಿದ್ದಂತೆ ಸೌಂದರ್ಯದ ಕಾಳಜಿ, ಸ್ನೇಹಿತ ಸಂಖ್ಯೆ ಎಲ್ಲವೂ ಹೆಚ್ಚಿತ್ತು. ಹಾಗೆಯೇ ಹೊಸದಾಗಿ ಕೊಂಡ ಮೊಬೈಲ್‍ನಲ್ಲಿ ಸಾಮಾಜಿಕ ತಾಣಗಳಲ್ಲಿ ಖಾತೆಯನ್ನು ತೆರೆದಿದ್ದಳು. ಅವಳು ಹಾಕುತಿದ್ದ ಫೋಟೋ, ಸಂದೇಶ ಎಲ್ಲವೂ ಅನೇಕರನ್ನು ಸೆಳೆಯುತ್ತಿತ್ತು...

ಹೀಗೆ ದಿನಗಳು ಸಾಗಿರುವಾಗ ಆಕೆಗೆ ಒಬ್ಬ ಹುಡುಗನ ಪರಿಚಯವಾಯಿತು. ಅವನ ಖಾತೆಯಲ್ಲಿ ಹಾಕಿರುವ ಫೋಟೋ, ಸಂದೇಶ ಹಾಗೂ ಅವನ ಆಸಕ್ತಿಯು ಇವಳಿಗೆ ಇಷ್ಟವಾಯಿತು. ಅವನ ಸ್ನೇಹಕ್ಕೆ ಸಮ್ಮತಿ ಸೂಚಿಸಿದಳು... ನಂತರ ಇಬ್ಬರ ನಡುವೆಯೂ ನಿತ್ಯದ ಸಂಭಾಷಣೆ ಪ್ರಾರಂಭವಾಯಿತು. ನಿತ್ಯದ ಚಿಕ್ಕಪುಟ್ಟ ವಿಚಾರವನ್ನೂ ಹಂಚಿಕೊಳ್ಳಲು ಪ್ರಾರಂಭಿಸಿದರು.... ಮುಂದೆ ಓದಿ..

ಅವಳು ಸಂಪೂರ್ಣವಾಗಿ ಇವನಿಗೆ ಸೋತು ಹೋದಳು!

ಅವಳು ಸಂಪೂರ್ಣವಾಗಿ ಇವನಿಗೆ ಸೋತು ಹೋದಳು!

ಸ್ನೇಹ ಗಟ್ಟಿಯಾಗುತ್ತಿದ್ದಂತೆ ಒಮ್ಮೆ ಭೇಟಿಯಾಗಲು ನಿರ್ಧರಿಸಿದರು. ಅದರಂತೆಯೇ ಪಾರ್ಕ್ ಒಂದರಲ್ಲಿ ಮುಖ ಪರಿಚಯ ಮಾಡಿಕೊಳ್ಳಲು ನಿರ್ಧರಿಸಿದರು. ಅವರ ಆ ಪರಿಚಯದ ಸಮಯವು ಬಲು ಮುದ ಹಾಗೂ ಸಂತೋಷವನ್ನುಂಟುಮಾಡಿತ್ತು. ಡೇಟಿಂಗ್‍ನಲ್ಲಿ ಕುಳಿತ ಇವಳ ಕಣ್ಣು ಪದೇ ಪದೇ ವನ ಕಂಗಳಲ್ಲಿ ಅಡಗಿರುವ ಪ್ರೀತಿಯನ್ನು ಹುಡುಕುತ್ತಿತ್ತು. ನವಿರಾಗಿ ಆಕೆಯ ಕೈಯನ್ನು ಹಿಡಿದು, ಪ್ರೀತಿಯ ನೋಟವನ್ನು ಆತ ಬೀರುತ್ತಿದ್ದ... ಇದು ಅವಳಿಗೆ ಸಂತೋಷ ಹಾಗೂ ಒಂದು ಬಗೆಯ ಖುಷಿಯನ್ನು ನೀಡುತ್ತಿತ್ತು...

ಒಂದು ದಿನ ಹೋಟೆಲ್ ರೂಮ್ ನಲ್ಲಿ...

ಒಂದು ದಿನ ಹೋಟೆಲ್ ರೂಮ್ ನಲ್ಲಿ...

ಇಂತಹ ಒಂದು ಸುಂದರ ಕ್ಷಣಗಳನ್ನು ಕಳೆದುಕೊಳ್ಳಲು ಇಬ್ಬರಿಗೂ ಮನಸ್ಸಾಗಲಿಲ್ಲ... ಇನ್ನಷ್ಟು ಸಮಯ ಕಳೆಯಬೇಕೆಂದು ಹೋಟೆಲ್ ಒಂದರ ಪ್ರವೇಶ ಪಡೆದರು. ಆತ ಆಕೆಯನ್ನು ಅತ್ಯಂತ ಪ್ರೀತಿಯಿಂದ ಕಾಣುವುದು, ಅವಳ ಯೋಗಕ್ಷೇಮದ ಬಗ್ಗೆ ವಿಚಾರಿಸುವುದು ಎಲ್ಲವೂ ಅವಳಿಗೆ ಇಷ್ಟವಾಗುತ್ತಿತ್ತು... ಹೀಗೆ ರೂಮಿನಲ್ಲಿ ಸ್ವಲ್ಪ ಸಮಯ ಕಳೆಯುತ್ತಿದ್ದಂತೆ ಆತನ ಕೈ ಬೆರಳುಗಳು ಅವಳ ಮುಂಗುರುಳನ್ನು ಸರಿಪಡಿಸುವುದು ಹಾಗೂ ಕೆನ್ನೆಯನ್ನು ಸವರಲು ಪ್ರಾರಂಭಿಸಿತು. ಇದು ಅವಳಿಗೆ ಒಂದು ಬಗೆಯ ಖುಷಿಯನ್ನು ಹಾಗೂ ನಾಚಿಕೆಯನ್ನು ಉಂಟುಮಾಡುತ್ತಿತ್ತು...

ತುಟಿಗೆ ಚುಂಬಿಸಲು ಪ್ರಾರಂಭಿಸಿದ!

ತುಟಿಗೆ ಚುಂಬಿಸಲು ಪ್ರಾರಂಭಿಸಿದ!

ಆಕೆ ಇನ್ನೇನು ಮತ್ತೆ ವಾಸ್ತವಕ್ಕೆ ಬರಬೇಕು ಎನ್ನುವಷ್ಟರಲ್ಲಿ ಅವಳ ತುಟಿಗೆ ಚುಂಬಿಸಲು ಪ್ರಾರಂಭಿಸಿದ... ತನ್ನ ಭಾವನೆಯ ನಿಯಂತ್ರಣವನ್ನು ಕಳೆದುಕೊಂಡ ಆಕೆ ಸುಲಭವಾಗಿ ಅವನ ಥೆಕ್ಕೆಯಲ್ಲಿ ಪರವಶಳಾದಳು...

ಅವನೇ ತನ್ನ ಪಂಚ, ಅವನು ಬಿಟ್ಟರೆ ನನಗೆ ಬೇರೇನೂ ಬೇಡ..

ಅವನೇ ತನ್ನ ಪಂಚ, ಅವನು ಬಿಟ್ಟರೆ ನನಗೆ ಬೇರೇನೂ ಬೇಡ..

ಕೆಲ ಸಮಯದಲ್ಲಿ ಅತಿಯಾದ ಆಯಾಸದಿಂದ ಮಲಗಿರುವ ಅವಳಿಗೆ ಅವನೇ ಒಂದು ಗ್ಲಾಸ್ ನೀರನ್ನು ತಂದುಕೊಟ್ಟ... ಅದನ್ನು ಕುಡಿಯುವಾಗ ಅವಳ ಮನಸ್ಸು ಮತ್ತೆ ಮತ್ತೆ ಅವನ ಸಾಂಗತ್ಯವನ್ನು ಬಯಸುತ್ತಿತ್ತು... ಇನ್ನೇನು ತನ್ನ ಪ್ರಪಂಚವೇ ಅವನು... ಅವನೊಂದಿಗೆಯೇ ತನ್ನ ಜೀವನ ಅಂದುಕೊಂಡಳು...

ಅವನ ಮಾತಿಗೆ ಅವನು ಸೋತು ಹೋದಳು..

ಅವನ ಮಾತಿಗೆ ಅವನು ಸೋತು ಹೋದಳು..

ಅವಳ ಆ ಭಾವನೆಗೆ ನೀರೆರೆಯುವಂತೆ ಆತ ಒಂದು ಟ್ಯಾಕ್ಸಿಯನ್ನು ತರಿಸಿ, ಆಕೆಯನ್ನು ಅದರಲ್ಲಿ ಹೋಗುವಂತೆ ಹೇಳಿದ... ಜೊತೆಗೆ ಆಕೆಯ ಕೈಯಲ್ಲಿ ಒಂದಿಷ್ಟು ಹಣವನ್ನು ನೀಡಿ, ಹಣೆಗೆ ಇನ್ನೊಮ್ಮೆ ಚುಂಬನ ನೀಡಿ, ಕೆನ್ನೆಯನ್ನು ಸವರಿ, ಮನೆಗೆ ಕಳುಹಿಸಿಕೊಟ್ಟ... ಮನೆಗೆ ಬಂದ ಈಕೆ ಬಂದು ಮುಟ್ಟಿದ್ದೇನೆ ಎನ್ನುವ ಸಂದೇಶವನ್ನು ಅವನಿಗೆ ಕಳುಹಿಸಿದಳು... ಅದಕ್ಕೆ ಅವನು ಟೇಕ್ ಕೇರ್ ಎನ್ನುವ ಉತ್ತರ ನೀಡಿ... ಕೈ ತೊಳೆದುಕೊಂಡ...

ಕೊನೆಗೆ ಆ ಕಹಿ ಸತ್ಯಗೊತ್ತಾದಾಗ...

ಕೊನೆಗೆ ಆ ಕಹಿ ಸತ್ಯಗೊತ್ತಾದಾಗ...

ಬಾಯಲ್ಲಿ ನೀರಿನ ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು... ಅದರ ಪರೀಕ್ಷೆಗೆಂದು ಆಸ್ಪತ್ರೆಗೆ ಹೋಗಿದ್ದಳು... ಅಲ್ಲಿ ಎಲ್ಲಾ ತರಹದ ಪರೀಕ್ಷೆಯನ್ನು ಮಾಡಿದರು... ಮತ್ತೆ ಆಕೆಯಲ್ಲಿ ವೈದ್ಯರು "ಕ್ಷಮಿಸಿ, ನೀವು ಎಚ್ ಐ ವಿ ಸೋಂಕನ್ನು ಹೊಂದಿದ್ದೀರಿ" ಎಂದರು... ಕುರುಡು ಪ್ರೀತಿಗೆ ಬಲಿಯಾಗದೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಸಂಭೋಗ ಹೊಂದುವ ಮೊದಲು ಕಾಂಡಮ್ ಬಳಸಿ...

ಪ್ರಪಂಚವೆಲ್ಲಾ ಸುಂದರವಾಗಿ ಕಾಣುತ್ತದೆ....

ಪ್ರಪಂಚವೆಲ್ಲಾ ಸುಂದರವಾಗಿ ಕಾಣುತ್ತದೆ....

ಹದಿಹರೆಯಕ್ಕೆ ಕಾಲಿಟ್ಟಾಗ ಪ್ರಪಂಚವೆಲ್ಲಾ ಸುಂದರವಾಗಿ ಕಾಣುತ್ತದೆ. ಬಣ್ಣ ಬಣ್ಣದ ಕನಸು, ಆಕರ್ಷಣೆ ಎನ್ನುವ ಹೊಸ ಅನುಭವ ಎಲ್ಲವೂ ಹೊಚ್ಚ ಹೊಸದನ್ನು ಸೃಷ್ಟಿಸುತ್ತದೆ. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಉಲ್ಲಾಸ, ಲವಲವಿಕೆ ಎಲ್ಲವೂ ನಮ್ಮನ್ನು ಖುಷಿಯಿಂದ ಇಡುತ್ತದೆ. ಅದರಲ್ಲೂ ಆಧುನಿಕತೆಯ ಪಥದಲ್ಲಿ ಇರುವ ನಮ್ಮ ಸಮಾಜದಲ್ಲಿ ಏನಿಲ್ಲಾ ಎಲ್ಲವೂ ಇದೆ. ತಂತ್ರಜ್ಞಾನ-ವಿಜ್ಞಾನ ಎಲ್ಲವೂ ನಮಗೆ ಅನುಕೂಲವನ್ನು ತಂದುಕೊಡುತ್ತದೆ.

ಮಹಿಳೆಯರೇ ಇರಲಿ ಎಚ್ಚರ...

ಮಹಿಳೆಯರೇ ಇರಲಿ ಎಚ್ಚರ...

ಕೆಲವು ಮಹಿಳೆಯರು ಇಂದು ಯೌವನ ಎನ್ನುವ ಹುಮ್ಮಸ್ಸಲ್ಲಿ ತಮ್ಮ ತನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲು ಬೇಸರ ಎನಿಸುತ್ತದೆ. ಕೆಲವೊಮ್ಮೆ ನಿಮ್ಮ ಅಜಾಗರೂಕತೆ ಹಾಗೂ ಮುಗ್ಧತೆಯೇ ನಿಮ್ಮ ಬಾಳನ್ನು ಹಾಳು ಮಾಡಬಹುದು. ಆದಷ್ಟು ನಿಮ್ಮ ವರ್ತನೆ ಹಾಗೂ ನಡವಳಿಕೆಯನ್ನು ಮಿತಿಯಲ್ಲಿ ಇರಿಸಿಕೊಳ್ಳಿ. ಇಲ್ಲವಾದರೆ ಜೀವನವೆಲ್ಲಾ ನರಕ ಸದೃಶವಾಗುವುದು.

ಮಹಿಳೆಯರೇ ಇರಲಿ ಎಚ್ಚರ...

ಮಹಿಳೆಯರೇ ಇರಲಿ ಎಚ್ಚರ...

ಹೌದು, ಇಂದು ಬಹುತೇಕ ಯುವಕರು ಮೊಬೈಲ್ ಹಾಗೂ ಸಾಮಾಜಿಕ ತಾಣ ಎನ್ನುವುದರಲ್ಲಿಯೇ ಸಮಯ ಕಳೆಯುತ್ತಿರುತ್ತಾರೆ. ಇಂದಿನ ಯುವಕರಿಗೆ ಹೇಳುವುದೊಂದೇ ಮಾತು ಯಾವುದೇ ಕೆಲಸದಲ್ಲಿ ಮುಳುಗಿದ್ದರೂ ಸರಿ... ಜೀವನದಲ್ಲಿ ಉದ್ಯೋಗ, ಕರ್ತವ್ಯ ಮತ್ತು ವಾಸ್ತವದ ಅರಿವನ್ನು ಮರೆಯದಿರಿ.... ನಿಮ್ಮ ಲೈಂಗಿಕ ಸಂಪರ್ಕವನ್ನು ವಿವಾಹದ ನಂತರವೇ ಆರಂಭಿಸಿ... ಆರೋಗ್ಯಕರ ವ್ಯಕ್ತಿಯೊಂದಿಗೆ ಉತ್ತಮ ಸಂಬಂಧ ಹಾಗೂ ಸುರಕ್ಷತೆಯ ಜೀವನ ನಡೆಸಿ...

English summary

i-met-this-boy-on-facebook-he-made-me-hiv-positive

How now a days youngsters see love. changes in love memories youngsters were not in love they were addicted. they go to any extent to achieve his girl. Its the another face of love. There are so many incidents which we cannot even imagine. Every Girl must read this story...