ಇದು ಇಬ್ಬರ ನಡುವಿನ ಲೈಂಗಿಕ ಒತ್ತಡವೇ?

Posted By: hemu
Subscribe to Boldsky

ಲೈಂಗಿಕ ಒತ್ತಡವೆಂದರೇನು? ನೀವೊಂದು ಕಡೆಗೆ ಕಾಫಿ ಕುಡಿಯಲು ಹೋಗುತ್ತೀರಿ ಎಂದಿಟ್ಟುಕೊಳ್ಳಿ. ಅಲ್ಲಿ ಕ್ಯಾಶ್ ಕೌಂಟರ್ ನಲ್ಲಿ ಕುಳಿತಿರುವ ಸುಂದರ ಮಹಿಳೆ ಕಡೆ ನೀವು ದಿಟ್ಟಿಸಿ ನೋಡುತ್ತೀರಿ. ಆಕೆ ಕೂಡ ನೋಡುತ್ತಾಳೆ. ಇಬ್ಬರೂ ನಗುತ್ತೀರಿ. ಮುಂದಿನ ದಿನಗಳಲ್ಲಿ ನೀವು ಆ ಕಾಫಿ ಶಾಪ್‌ಗೆ ಪದೇ ಪದೇ ಹೋಗಲು ಆರಂಭಿಸುತ್ತೀರಿ. ನಿಮ್ಮಿಬ್ಬರ ಮಧ್ಯೆ ಅದೇ ನಗು ಮುಂದುವರಿಯುವುದು. ನೀವು ಆಕೆಯೊಂದಿಗೆ ಹಾಸಿಗೆ ಹಂಚಿಕೊಂಡು ಮಲಗುವ ಕನಸು ಕಾಣುತ್ತೀರಿ. ಆದರೆ ಇದಕ್ಕಿಂತ ಹೆಚ್ಚು ಏನೂ ನಡೆಯುವುದಿಲ್ಲ. ಇಂತಹ ಅನುಭವ ನಿಮಗೂ ಆಗಿರುವುದು.

ಮೊದಲನೇಯದಾಗಿ ಲೈಂಗಿಕ ಒತ್ತಡವೆಂದರೇನು? ಇದು ತುಂಬಾ ಬಲಿಷ್ಠ ದೈಹಿಕ ಆಕರ್ಷಣೆಯಾಗಿದೆ. ಸಾಮಾಜಿಕವಾಗಿ ಬೆರೆಯುವಾಗ ಇಬ್ಬರ ನಡುವಿನ ದೈಹಿಕ ಆಸೆಯಲ್ಲದೆ ಬೇರೇನೂ ಅಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಇದು ಮುಂದಿನ ಹಂತಕ್ಕೆ ಹೋಗುವುದೇ ಇಲ್ಲ. ಇಬ್ಬರು ಸಹೋದ್ಯೋಗಿಗಳ ಮಧ್ಯೆ ಇಂತಹ ಆಕರ್ಷಣೆ ಕಾಣಿಸಬಹುದು. ಬುಕ್ಕಿಂಗ್ ಕಾರ್ಕ್ ಮತ್ತು ಗ್ರಾಹಕನ ಮಧ್ಯೆ ಇದು ನಡೆಯಬಹುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಇದು ಸಂಭವಿಸಬಹುದು.

ಸ್ನೇಹಿತರ ಮಧ್ಯೆ, ಇಬ್ಬರು ವ್ಯಕ್ತಿಗಳ ಮಧ್ಯೆ ಇದು ನಡೆಯಬಹುದು. ಹಲವಾರು ಕಾರಣಗಳಿಂದಾಗಿ ಹೆಚ್ಚಿನ ಸಂದರ್ಭದಲ್ಲಿ ಇದು ಮುಂದಿನ ಹಂತಕ್ಕೆ ಹೋಗುವುದೇ ಇಲ್ಲ. ಇದು ಸಂಪೂರ್ಣವಾಗಿ ದೈಹಿಕ ಆಕರ್ಷಣೆಯಾಗಿರುವ ಕಾರಣ ಲೈಂಗಿಕ ಒತ್ತಡ ಅನುಭವಿಸಬಹುದು. ಈ ಅನುಭವದ ಬಗ್ಗೆ ಕೆಲವೊಂದು ಸತ್ಯಗಳನ್ನು ಈ ಲೇಖನ ಮೂಲಕ ತಿಳಿದುಕೊಳ್ಳಿ.... 

ನೀವು ಆಕರ್ಷಣೆಗೆ ಒಳಗಾಗಬಹುದು

ನೀವು ಆಕರ್ಷಣೆಗೆ ಒಳಗಾಗಬಹುದು

ಆಕೆಗೆ ಆಸಕ್ತಿಯಿದೆಯೆಂದು ನಿಮಗೆ ತಿಳಿದಿದೆ ಮತ್ತು ನೀವು ಆಕರ್ಷಿತರಾಗಿದ್ದೀರಿ ಎಂದು ಆಕೆಗೆ ತಿಳಿದಿರುತ್ತದೆ. ಆದರೆ ಮುಂದಕ್ಕೆ ಕೊಂಡೊಯ್ಯಲು ನೀವಿಬ್ಬರು ಯಾವುದೇ ಕ್ರಮ ತೆಗೆದುಕೊಳ್ಳಲ್ಲ. ನೀವಿಬ್ಬರು ತುಂಬಾ ನಾಚಿಗೆ ಸ್ವಭಾವದವರಾಗಿರಬಹುದು. ಆಕೆಗೆ ಮದುವೆಯಾಗಿರಬಹುದು ಮತ್ತು ತನ್ನ ಪತಿಗೆ ಮೋಸ ಮಾಡಲು ಇಚ್ಛಿಸದಿರಬಹುದು.

ಎಲ್ಲರಿಗೂ ಇಂತಹ ಅನುಭವವಾಗುವುದು....

ಎಲ್ಲರಿಗೂ ಇಂತಹ ಅನುಭವವಾಗುವುದು....

ಇಂತಹ ಒಂದು ಸ್ಥಿತಿ ನೀವು ಎದುರಿಸಿದ್ದೀರಿ ಎಂದು ತಿಳಿಯುವುದು ಹೇಗೆ? ಆಕೆಯ ಎದುರಿನಲ್ಲಿ ಇದ್ದಾಗ ನಿಮ್ಮ ಎದೆ, ಹೊಟ್ಟೆ ಮತ್ತು ಗುಪ್ತಾಂಗಗಳಲ್ಲಿ ಒಂದು ವಿಚಿತ್ರವಾದ ಅನುಭವವಾಗಲಿದೆ. ನಿಮ್ಮ ಎದೆಬಡಿತವು ಹೆಚ್ಚಾಗಲಿದೆ ಮತ್ತು ಆ ವ್ಯಕ್ತಿಯೊಂದಿಗೆ ಮಲಗಲು ನೀವು ಬಯಸುತ್ತೀರಿ.ನೀವು ಆಕೆಯನ್ನು ತದೇಕಚಿತ್ತದಿಂದ ನೋಡುತ್ತಾ ಇರುತ್ತೀರಿ ಮತ್ತು ಆಕೆ ಕೂಡ ಇದೇ ರೀತಿಯಲ್ಲಿ ನೋಡುತ್ತಿರುವಳು. ಕೆಲವೊಂದು ಸಲ ನಿಮ್ಮನ್ನು ತಿಂದು ಬಿಡುವಷ್ಟರ ಮಟ್ಟಿಗೆ ಆಕೆ ನಿಮ್ಮ ಮೇಲೆ ದೃಷ್ಟಿ ಬೀರಬಹುದು. ಬಲಿಷ್ಠ ದೈಹಿಕ ಆಕರ್ಷಣೆಗೆ ಕಾರಣಗಳು ಏನು? ನೀವು ಇದನ್ನು ವಿಶ್ಲೇಷಿಸಿದರೆ ನಿಮಗೆ ಯಾವುದೇ ಸುಳಿವು ಸಿಗದು.

ದೇಹಭಾಷೆ

ದೇಹಭಾಷೆ

ದೇಹಭಾಷೆ ಕೂಡ ಬದಲಾಗುವುದು. ತುಂಬಾ ದೂರದಿಂದ ನೀವಿಬ್ಬರು ನೋಡುತ್ತಲಿದ್ದರೂ ನಿಮ್ಮನ್ನು ನೀವು ಆಕರ್ಷಕವಾಗಿಸಲು ದೇಹಭಾಷೆ ಬದಲಾಗಬಹುದು.

ಏನೋ ಮಿತಿಮೀರಿದೆ

ಏನೋ ಮಿತಿಮೀರಿದೆ

ಆಕೆಯನ್ನು ನೀವು ತದೇಕಚಿತ್ತದಿಂದ ನೋಡುವಾಗ ಏನೋ ನಿಮ್ಮ ಮೇಲೆ ಪ್ರಭಾವ ಬೀರಿದೆ ಎಂದೆನಿಸಬಹುದು. ನಿಮ್ಮಲ್ಲಿ ಮೊನಚಾದ ಭಾವನೆ ಮೂಡಬಹುದು. ಆಕೆಯೊಂದಿಗೆ ಮಾತನಾಡುವಾಗ ನಿಮ್ಮ ಸ್ವರ ಬದಲಾಗಬಹುದು ಮತ್ತು ನಿಮಗೆ ಅರಿವಿಲ್ಲದಂತೆ ನೀವು ತುಂಬಾ ಸೆಕ್ಸಿ ಸ್ವರದಲ್ಲಿ ಆಕೆಯೊಂದಿಗೆ ಮಾತನಾಡಲು ಬಯಸಬಹುದು.

ನಿಮ್ಮ ಸ್ನೇಹಿತರು ಏನು ಹೇಳುವರು

ನಿಮ್ಮ ಸ್ನೇಹಿತರು ಏನು ಹೇಳುವರು

ನಿಮ್ಮಿಬ್ಬರನ್ನು ದೂರದಿಂದ ನೋಡುತ್ತಿರುವ ಸ್ನೇಹಿತರು ಕೂಡ ನಿಮ್ಮಲ್ಲಿ ಆಗುತ್ತಿರುವಂತಹ ಬದಲಾವಣೆ ಬಗ್ಗೆ ಹೇಳಬಹುದು. ನಿಮ್ಮಲ್ಲಿನ ತುಂಬಾ ಬಲಿಷ್ಠ ದೈಹಿಕ ಆಕರ್ಷಣೆ ಬಗ್ಗೆ ಅವರು ನಿಮಗೆ ತಿಳಿಸಬಹುದು.

ತುಂಟ ಆಲೋಚನೆಗಳು

ತುಂಟ ಆಲೋಚನೆಗಳು

ಆಕೆಯೊಂದಿಗೆ ಮಾತನಾಡುವಾಗ ನಿಮ್ಮ ಮನಸ್ಸಿನಲ್ಲಿ ಕೆಲವೊಂದು ದುಷ್ಟ ಆಲೋಚನೆಗಳು ಬರಬಹುದು. ಆಕೆಯ ತುಟಿಗಳನ್ನು ಕಚ್ಚುವುದು ಮತ್ತು ದೇಹದ ಪ್ರತಿಯೊಂದು ಭಾಗಗಳ ಮೇಲೆ ಮುತ್ತಿಕ್ಕುವ ಬಗ್ಗೆ ಆಲೋಚಿಸಬಹುದು. ಇದು ತುಂಬಾ ತೀವ್ರ ದೈಹಿಕ ಆಕರ್ಷಣೆಯ ಚಿಹ್ನೆಗಳಾಗಿವೆ. ಇದೇ ರೀತಿ ಆಕೆಗೂ ಆಗುತ್ತಿರಬಹುದು.

ತುಂಟ ಆಲೋಚನೆಗಳು

ತುಂಟ ಆಲೋಚನೆಗಳು

ಆಕೆಯ ದೇಹಭಾಷೆ ಮತ್ತು ಆಕೆ ಮಾತನಾಡುತ್ತಿರುವ ರೀತಿಯನ್ನು ನೋಡಿದರೆ ಆಕೆಗೂ ನಿಮ್ಮ ಮೇಲೆ ಆಸಕ್ತಿಯಿದೆ ಎಂದು ತಿಳಿಯುವುದು. ಆದರೆ ಇಲ್ಲಿ ಎಲ್ಲವೂ ಕೊನೆಯಾಗುವುದು. ಯಾಕೆಂದರೆ ನೀವು ಕೇಳುವ ಧೈರ್ಯ ಮಾಡಲ್ಲ, ಆಕೆಗೆ ಆಸಕ್ತಿಯಿದೆ ಎಂದು ಅವಳೂ ಹೇಳಲ್ಲ.

English summary

How To Know If There Is Sexual Tension Between Two

Intense physical attraction signs are easy to identify. Imagine this situation. You go to the coffee shop and stare at the woman who sits at the cash counter. She too stares and smiles. You become a regular customer and enjoy the mutual stares and smiles. But the story never goes anywhere though you dream about sleeping with her. Didyou ever have such an experience? Firstly, what is sexual tension? It is very strong physical attraction. It is nothing but physical desire between two people that arises during social interactions. In most of the cases, it may never go to the next level.