For Quick Alerts
ALLOW NOTIFICATIONS  
For Daily Alerts

  ಎತ್ತರವಿರುವ ಮಹಿಳೆಯೆಂದರೆ, ಇವರಿಗೆ ಎಲ್ಲಿಲ್ಲದ ಪ್ರೀತಿಯಂತೆ!

  By Deepu
  |

  ಈ ಲೇಖನ ಓದುತ್ತಿರುವ ಎತ್ತರ ಕಡಿಮೆ ಇರುವ ಮಹಿಳೆಯರಿಗೆ ಚಿಂತಿಸಬೇಕಾದ ಯಾವುದೇ ಕಾರಣವಿಲ್ಲ. ವಾಸ್ತವವಾಗಿ ಪುರುಷರು ಎತ್ತರದ ಮಹಿಳೆಯರನ್ನೇ ಹೆಚ್ಚು ಬಯಸುವುದು ನಿಜವಾದರೂ ಇದು ಆಗಲೇಬೇಕೆಂದಿದ್ದಲ್ಲಿ ಇದುವರೆಗೆ ವಿಶ್ವದ ಯಾವುದೇ ಕಡಿಮೆ ಎತ್ತರದ ಮಹಿಳೆಯರ ವಿವಾಹವೇ ಆಗುತ್ತಿರಲಿಲ್ಲ. ಆದರೆ ಕೊಂಚ ಎತ್ತರ ಇರುವುದು ಯಾವಾಗಲೂ ಒಂದು ಧನಾತ್ಮಕ ಅಂಶ ಎಂದೇ ಪರಿಗಣಿಸಲಾಗಿರುವುದರಿಂದ ಹೈ ಹೀಲ್ಡ್ ಚಪ್ಪಲಿಗಳಿಗೆ ಭಾರೀ ಬೇಡಿಕೆ ಇದೆ.   ಹುಡುಗರಿಗೆ ಮದುವೆ ಎಂದರೆ ಇಷ್ಟವಿಲ್ಲವಂತೆ ನಂಬುತ್ತೀರಾ?

  ಸಾಮಾನ್ಯ ಎತ್ತರಕ್ಕಿಂತಲೂ ಹೆಚ್ಚು ಎತ್ತರವಿರುವ ಮಹಿಳೆಯರು ತಮ್ಮ ಎತ್ತರಕ್ಕೆ ಸೂಕ್ತವಾದ ಉಡುಗೆಗಳನ್ನು ತೊಡುವ ಮೂಲಕ ಪುರುಷರಿಗೆ ಹೆಚ್ಚು ಆಕರ್ಷಕರಾಗಿ ಕಾಣುತ್ತಾರೆ. ಇದರ ಮೂಲಕ ತಮ್ಮ ಪುರುಷರ ಮನದಲ್ಲಿ ತಮಗೆ ಹುಟ್ಟುವ ಮಕ್ಕಳೂ ಎತ್ತರವಾಗಿ ಆರೋಗ್ಯಕರವಾಗಿರುತ್ತಾರೆ ಎಂದು ಚಿಂತಿಸಲೂ ಕಾರಣರಾಗುತ್ತಾರೆ.

  ಮನಃಶಾಸ್ತ್ರಜ್ಞರ ಪ್ರಕಾರ ಎತ್ತರವಿರುವ ಮಹಿಳೆಯರತ್ತ ಪುರುಷರ ನೋಟ ಧಾವಿಸುವುದಕ್ಕೆ ಇದೊಂದು ಪ್ರಬಲ ಕಾರಣವಿರಬಹುದು. ಆದರೆ ವಿವಿಧ ಸಮೀಕ್ಷೆಗಳ ಫಲಿತಾಂಶಗಳು ಮಾತ್ರ ಬೇರೆಯೇ ವಿವರಗಳನ್ನು ನೀಡುತ್ತವೆ. ಇವು ಮನಃಶಾಸ್ತ್ರಜ್ಞರ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿವೆ.   ರೋಮ್ಯಾನ್ಸ್ ಅತಿಯಾದರೆ, ಹುಡುಗರಿಗೆ ಇಷ್ಟವಾಗುವುದಿಲ್ಲವಂತೆ!

  ಒಂದು ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಕಾರ ಹೆಚ್ಚಿನ ಪುರುಷರು ತಮಗಿಂತಲೂ ಎತ್ತರದಲ್ಲಿ ಕೊಂಚ ಕಡಿಮೆ ಇರುವ ಮಹಿಳೆಯರನ್ನೇ ಆಯ್ದುಕೊಂಡರೆ ಕೇವಲ 17% ರಷ್ಟು ಪುರುಷರು ಮಾತ್ರ ತಮಗಿಂತಲೂ ಹೆಚ್ಚು ಎತ್ತರವಿರುವ ಮಹಿಳೆಯರನ್ನು ಅಪೇಕ್ಷಿಸಿದ್ದಾರೆ. ಆದ್ದರಿಂದ ಒಂದು ವೇಳೆ ನಿಮ್ಮ ಆಫೀಸ್‪ನಲ್ಲಿರುವ ಪುರುಷ ಸಹೋದ್ಯೋಗಿಗಳು ನಿಮಗಿಂತಲೂ ಹೆಚ್ಚು ಎತ್ತರವಿರುವ ಮಹಿಳೆಯರತ್ತ ತಮ್ಮ ನೋಟವನ್ನು ಹರಿಸಿದರೆ ಚಿಂತಿಸಬೇಡಿ, ಇವರು ಸಹಜವಾಗಿ ಸುಮ್ಮನೇ ನೋಡುತ್ತಿದ್ದರಬಹುದೇ ಹೊರತು ವಿವಾಹದ ವಿಷಯ ಬಂದಾಗ ತಮಗಿಂತಲೂ ಕಡಿಮೆ ಎತ್ತರದವರನ್ನೇ ಬಯಸುವುದು ಈಗ ಖಚಿತವಾಗಿದೆ. ಆದರೂ ಎತ್ತರದ ಮಹಿಳೆಯರು ಹೆಚ್ಚು ಪುರುಷರ ಆಕರ್ಷಣೆಯನ್ನೇಕೆ ಪಡೆಯುತ್ತಾರೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

  ಅವರು ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ

  ಅವರು ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ

  ಆತ್ಮವಿಶ್ವಾಸಕ್ಕೂ ಎತ್ತರಕ್ಕೂ ಯಾವುದೇ ತಾಳಮೇಳವಿಲ್ಲ. ಆದರೆ ಪುರುಷರು ಎತ್ತರದ ಮಹಿಳೆಯರು ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ವಾಸ್ತವವಾಗಿ ಎತ್ತರದ ಮಹಿಳೆಯರು ಈ ವಿಷಯ ಅರಿತಿದ್ದು ಸ್ವಾಭಾವಿಕವಾಗಿಯೇ ಅವರ ಹಾವಭಾವಗಳಲ್ಲಿ ಆತ್ಮವಿಶ್ವಾಸ ತುಂಬಿರುತ್ತದೆ.

  ಇವರ ಕಾಲುಗಳು ನೀಳವಾಗಿರುತ್ತವೆ!

  ಇವರ ಕಾಲುಗಳು ನೀಳವಾಗಿರುತ್ತವೆ!

  ವಾಸ್ತವವಾಗಿ ಎತ್ತರಕ್ಕೆ ದೇಹಕ್ಕಿಂತಲೂ ಕಾಲುಗಳೇ ಹೆಚ್ಚಿನ ಪಾತ್ರ ವಹಿಸುತ್ತವೆ. ಪುರುಷರೆಲ್ಲರೂ ಈ ನೀಳ ಕಾಲುಗಳಿಗೆ ಮನಸೋಲುತ್ತಾರೆ. ಹೆಣ್ಣಿನಲ್ಲಿ ಆಕರ್ಷಕವಾಗಿದ್ದು ಸವಿಹಕ್ಕೆ ಕಾರಣವಾಗಿರುವ ಅಂಗಗಳಲ್ಲಿ ಕಾಲುಗಳೂ ಪ್ರಮುಖವಾಗಿದ್ದು ನೀಳ ಕಾಲುಗಳ ಒಡತಿಯರನ್ನು ಹೆಚ್ಚಿನ ಪುರುಷರು ಆರಾಧಿಸುತ್ತಾರೆ.

  ಇವರನ್ನು ಎಲ್ಲರೂ ತಕ್ಷಣ ಗುರುತಿಸುತ್ತಾರೆ

  ಇವರನ್ನು ಎಲ್ಲರೂ ತಕ್ಷಣ ಗುರುತಿಸುತ್ತಾರೆ

  ಎತ್ತರದ ಮಹಿಳೆಯರು ಎಲ್ಲೇ ಹೋಗಲಿ, ಸುತ್ತ ಮುತ್ತಲ ಪುರುಷರ ನೋಟವನ್ನು ಅನಾಯಾಸವಾಗಿ ಪಡೆದುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಹೆಚ್ಚು ಜನರಿರುವ ಗುಂಪಿನಲ್ಲಿ ಇವರು ಎದ್ದು ಕಾಣಲು ಇವರ ಎತ್ತರವೇ ಕಾರಣವಾಗಿದೆ.

  ಕೆಲವರಿಗೆ ಇವರು ಸುಪರ್ ಮಾಡೆಲ್‌ಗಳಾಗಿ ಕಾಣುತ್ತಾರೆ

  ಕೆಲವರಿಗೆ ಇವರು ಸುಪರ್ ಮಾಡೆಲ್‌ಗಳಾಗಿ ಕಾಣುತ್ತಾರೆ

  ಮಹಿಳೆಯ ಮೈಮಾಟವೇ ಮಾನದಂಡವಾಗಿರುವ ಉದ್ಯೋಗಗಳಲ್ಲಿ, ಉದಾಹರಣೆಗೆ ಜಾಹೀರಾತು ಜಗತ್ತು, ಚಿತ್ರರಂಗ, ಗಗನಸಖಿ ಇತ್ಯಾದಿಗಳಲ್ಲಿ ಮಹಿಳೆಯರ ಎತ್ತರ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಅತಿ ಹೆಚ್ಚಿನ ಸಂಭಾವನೆ ಪಡೆಯುವ ರೂಪದರ್ಶಿಗಳು ನೀಳಕಾಯ ಹೊಂದಿದ್ದು ಇವರನ್ನೊಂದು ಆದರ್ಶರಾಗಿ ಪುರುಷರು ಕಾಣುತ್ತಾರೆ.

  ಎತ್ತರದ ಮಹಿಳೆ ಗಿಡ್ಡ ಸ್ಕರ್ಟ್ ತೊಟ್ಟಾಗ....

  ಎತ್ತರದ ಮಹಿಳೆ ಗಿಡ್ಡ ಸ್ಕರ್ಟ್ ತೊಟ್ಟಾಗ....

  ಈ ತೊಡುಗೆಯಲ್ಲಿ ಎತ್ತರದ ಮಹಿಳೆಯ ಆಗಮನವಾದಾಗ ಸುತ್ತಮುತ್ತಲ ಪುರುಷರು ತಮ್ಮ ಊಟವನ್ನೂ ಮರೆತು ಇವರತ್ತ ದಿಟ್ಟಿಸುವ ನೋಟ ಬೀರುವುದನ್ನು ಸಮೀಕ್ಷೆಗಳು ಸಾಬೀತುಪಡಿಸಿವೆ. ಇದೇ ಸಮಯದಲ್ಲಿ ಇವರ ಜೊತೆಗಿರುವ ಮಹಿಳೆಯರು ಅಸೂಯೆ ಅನುಭವಿಸುವುದನ್ನೂ ಸಮೀಕ್ಷೆಗಳು ದೃಢೀಕರಿಸಿವೆ.

  ಹೆಚ್ಚಿನ ಕಾಳಜಿಯನ್ನು ಪಡೆಯಲು ನೆರವಾಗುವ ಎತ್ತರ

  ಹೆಚ್ಚಿನ ಕಾಳಜಿಯನ್ನು ಪಡೆಯಲು ನೆರವಾಗುವ ಎತ್ತರ

  ಸಾಮಾನ್ಯವಾಗಿ ಮಹಿಳೆಯರು ಆಗಮಿಸಿದಾಗ ಅವರ ಸೇವೆಯಲ್ಲಿ ಯಾವುದೇ ರೀತಿಯಲ್ಲಿ ಕಡಿಮೆಯಾಗದಂತೆ ಪುರುಷ ಕಾರ್ಯಕರ್ತರು ಅಥವಾ ಅತಿಥೇಯರು ವರ್ತಿಸುತ್ತಾರೆ. ಆದರೆ ಈ ಮಹಿಳೆ ಎತ್ತರವಾಗಿದ್ದರೆ ಈ ಕಾಳಜಿ ಅತಿರೇಕಕ್ಕೇರುತ್ತದೆ.

  ಹೆಚ್ಚಿನ ಕಾಳಜಿಯನ್ನು ಪಡೆಯಲು ನೆರವಾಗುವ ಎತ್ತರ

  ಹೆಚ್ಚಿನ ಕಾಳಜಿಯನ್ನು ಪಡೆಯಲು ನೆರವಾಗುವ ಎತ್ತರ

  ಎಷ್ಟೋ ಸಂದರ್ಭದಲ್ಲಿ ಇವರ ಸೇವೆಗೆಂದು ಗಲ್ಲಾಪೆಟ್ಟಿಗೆಯಲ್ಲಿ ಕುಳಿತಿದ್ದ ಮಾಲೀಕರೇ ಖುದ್ದಾಗಿ ಆಗಮಿಸಿ ತಮ್ಮ ಗ್ರಾಹಕರಿಗೆ ಏನು ಬೇಕೆಂದು ವಿಚಾರಿಸುವುದು, ಫ್ಯಾನ್ ತಿರುಗುವ ಗತಿಯನ್ನು ಹೆಚ್ಚಿಸುವುದು, ತಮ್ಮಲ್ಲಿರುವ ಅತ್ಯುತ್ತಮ ಸ್ಥಳವನ್ನು ತೋರಿಸಿವುದು ಮೊದಲಾದ ವರ್ತನೆಗಳಿಂದ ಅವರ ಮನಸ್ಸನ್ನು ಗೆಲ್ಲಲು ಯತ್ನಿಸುತ್ತಾರೆ.

  ಸಂಬಂಧದಲ್ಲಿ ಎತ್ತರಕ್ಕೆ ಎಷ್ಟು ಮಹತ್ವವಿದೆ?

  ಸಂಬಂಧದಲ್ಲಿ ಎತ್ತರಕ್ಕೆ ಎಷ್ಟು ಮಹತ್ವವಿದೆ?

  ತಮ್ಮ ನೀಳಕಾಯದಿಂದ ಪುರುಷನ ಗಮನ ಪಡೆಯುವಲ್ಲಿ ಈ ಮಹಿಳೆಯರು ನೂರಕ್ಕೆ ನೂರು ಅಂಕಗಳನ್ನು ಪಡೆದರೂ ಸಂಬಂಧದ ವಿಷಯ ಬಂದಾಗ ಮಾತ್ರ ನೀಳಕಾಯ ಯಾವುದೇ ಪಾತ್ರ ವಹಿಸದಿರುವುದು ಸ್ಪಷ್ಟವಾಗುತ್ತದೆ.

  ಸಂಬಂಧದಲ್ಲಿ ಎತ್ತರಕ್ಕೆ ಎಷ್ಟು ಮಹತ್ವವಿದೆ?

  ಸಂಬಂಧದಲ್ಲಿ ಎತ್ತರಕ್ಕೆ ಎಷ್ಟು ಮಹತ್ವವಿದೆ?

  ಇದು ವಿವಾಹಪೂರ್ವಕ್ಕೆ ಓರ್ವ ವ್ಯಕ್ತಿಯನ್ನು ಆಯ್ದುಕೊಳ್ಳಲು ಒಂದು ಲಕ್ಷಣವಾಗಿತ್ತೇ ಹೊರತು ವಿವಾಹದ ಬಳಿಕ ಎತ್ತರಕ್ಕೆ ಯಾವುದೇ ಮಹತ್ವ ಕಂಡುಬರದೇ ನಿಜವಾದ ಸಂಬಂಧಕ್ಕೆ ಅಗತ್ಯವಾದ ಬದ್ಧತೆ, ಪ್ರೀತಿ ವಿಶ್ವಾಸ, ತ್ಯಾಗಮನೋಭಾವ, ಸಂಗಾತಿಯ ಸ್ವಭಾವವನ್ನು ಅರಿತು ಬಾಳುವ ಮೊದಲಾದ ಗುಣಗಳೇ ಪ್ರಮುಖವಾಗುತ್ತದೆ.ಆದ್ದರಿಂದ ಎತ್ತರ ಹೆಚ್ಚಿರದ ಮಹಿಳೆಯರು ಎತ್ತರದ ಬಗ್ಗೆ ಯಾವುದೇ ಚಿಂತೆ ಮಾಡಬೇಕಾಗಿಲ್ಲ.

   

  English summary

  Why All Men Crave For Tall Women

  Short women don't need to worry reading this. Though men like tall women, it doesn't mean that height is the only important factor they consider. But height is surely a plus point. Tall women tend to carry themselves well and most of the dressing styles suit them well. And then subconsciously, men tend to think that a tall wife can guarantee tall children. Now, let us discuss some reasons why tall women are attractive.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more