Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಆನ್‌ಲೈನ್ ಚಾಟಿಂಗ್: ಮೈ-ಮನಸ್ಸಿನಲ್ಲಿ ಅದೇನೋ ಪುಳಕ!
ಇದು ಸೈಬರ್ ಯುಗ. ಇಲ್ಲಿ ಮನುಷ್ಯ ತನ್ನ ಪಕ್ಕದಲ್ಲಿರುವವನ ಜೊತೆ ಮಾತನಾಡುವದಕ್ಕಿಂತ ಹೆಚ್ಚು ಪಕ್ಕದ ಊರು, ಪಕ್ಕದ ದೇಶದಲ್ಲಿರುವವನೊಂದಿಗೆ ಮಾತನಾಡುತ್ತಿದ್ದಾನೆ. ಕಾಲ - ದೂರಗಳ ಮಿತಿ ಇಲ್ಲದೆ ನಮ್ಮ ಪ್ರೀತಿ ಪಾತ್ರರೊಂದಿಗೆ ನಾವಿರುವ ಸ್ಥಳದಿಂದಲೇ ಮಾತನಾಡುವ ಅವಕಾಶ ಸೈಬರ್ ತಂತ್ರಜ್ಞಾನವು ನಮಗೆ ನೀಡಿರುವ ಉಡುಗೊರೆಯಾಗಿದೆ. ಅದರಲ್ಲೂ ಒಬ್ಬ ಪುರುಷ ದೂರದಲ್ಲಿರುವ ತನ್ನ ಮಹಿಳೆಯ ಜೊತೆ ನಡೆಸುವ ಮಾತುಕತೆಯ ಅನುಭವ ನಿಜಕ್ಕೂ ಶಬ್ಧಗಳಲ್ಲಿ ಹೇಳತೀರದು.
ಹಲವು ಅಧ್ಯಯನಗಳ ಪ್ರಕಾರ, ಮಹಿಳೆಯರು ಮುಖಾಮುಖಿಯಾಗಿ ಮಾತನಾಡುವುದಕ್ಕಿಂತ ಆನ್- ಲೈನ್ ಮಾತುಗಾರಿಕೆಯಲ್ಲಿ ಸರಳವಾಗಿ ತೆರೆದುಕೊಳ್ಳುವರಂತೆ ! ಅದಕ್ಕಾಗಿಯೇ ಪುರುಷರು ತಮ್ಮ ಮನದನ್ನೆಯ ಮನವನ್ನರಿಯಲು ಅಂತರ್ಜಾಲದ ಮೊರೆಹೋಗುತ್ತಾರೆ. ಬನ್ನಿ ನೋಡೋಣಾ... ಅಂತರ್ಜಾಲದ ಮಾತುಕತೆಯಲ್ಲಿ ಹೆಚ್ಚು ಮನಬಿಚ್ಚಿ ಮಾತನಾಡಲು ಕಾರಣಗಳೇನು? ಅಂತ....

ಅಡೆತಡೆಗಳು ಕಡಿಮೆ ಇರುತ್ತವೆ
ನಾವು ಮಾತನಾಡುತ್ತಿರುವ ವ್ಯಕ್ತಿ ನಮ್ಮೆದುರಿಗಿಲ್ಲದಿದ್ದರೆ ನಾವು ಅಷ್ಟೇನೂ ಜಾಗರೂಕರಾಗಿರುವ ಅವಶ್ಯಕತೆ ಇರುವದಿಲ್ಲ. ಏಕೆಂದರೆ ಅವನು ನಮ್ಮ ಹಾವಭಾವಗಳನ್ನು ಗುರುತಿಸುವಲ್ಲಿ ಅಸಮರ್ಥನಾಗಿರುತ್ತಾನೆ. ಆದ ಕಾರಣ ನಾವು ಯಾವುದೇ ಮುಜುಗರವಿಲ್ಲದೆ ನಮ್ಮ ಹೃದಯದ ಭಾವನೆಗಳನ್ನು ಪ್ರಚುರಪಡಿಸಬಹುದು.

ಮನಸ್ಸು ಕಲ್ಪನಾ ಲಹರಿಯಲ್ಲಿ ತೇಲುತ್ತಿರುತ್ತದೆ
ಅವಳ ಪ್ರತಿಯೊಂದು ಪದವನ್ನೂ ನಿಮ್ಮ ಮನಸು ಕಲ್ಪನೆ ಮಾಡಿಕೊಳ್ಳುತ್ತದೆ. ಪ್ರತಿ ಪದವನ್ನೂ ಅತಿ ಸುಂದರವಾಗಿ ಅರ್ಥೈಸಿಕೊಳ್ಳುತ್ತಾ ಸಂತೋಷದಿಂದ ಆಸ್ವಾದಿಸುತ್ತದೆ.

ಮನಸ್ಸು ಅಮಲೇರುವ ಸಂತೋಷನವನ್ನು ಅನುಭವಿಸುವುದು
ನಿಮ್ಮ ಬರಹಕ್ಕೆ ಪ್ರತಿಯಾಗಿ ಅವಳಿಂದ ಬರುವ ಉತ್ತರಗಳಿಂದ ನಿಮ್ಮ ಮಿದುಳಿನಲ್ಲಿ ಸಂತೃಪ್ತಿಯ ಅಲೆಗಳೆಳುವವು. ನಿಮ್ಮ ಮನಸ್ಸು ಅವರ್ಣನೀಯ ಸಂತೋಷನವನ್ನು ಅನುಭವಿಸುವುದು. ಈ ಸಂತೋಷವು ನಿಮ್ಮಲ್ಲಿ ಅಮಲೇರಿಸುವುದು.

ಕಾಯುವುದರಲ್ಲೂ ಸುಖ ಅನುಭವಿಸುವಿರಿ
ನಲ್ಲೆಯ ಉತ್ತರಕ್ಕೆ ಕಾಯುವುದರಲ್ಲೂ ಒಂದು ತೆರನಾದ ಸುಖವಿರುತ್ತದೆ. ಅದರಲ್ಲೂ ನಿಮ್ಮ ತುಂಟುತನದ ಮಾತಿನ ಪ್ರತ್ಯುತ್ತರಕ್ಕಾಗಿ ಕಾಯುವಾಗ ಸಂಭವ್ಯ ಉತ್ತರಗಳನ್ನು ನೆನೆದೆ ಮನಸ್ಸು ಸುಖಿಸಲಾರಂಭಿಸುತ್ತದೆ.

ನಿರೀಕ್ಷಣಾ ವ್ಯಾಪ್ತಿ
ನೇರ ಬೇಟಿಯಲ್ಲಿ ಸಂಭಾಷಣೆಗಳೂ ಸಹ ನೇರವಾಗಿ ಹಾಗೂ ತ್ವರಿತವಾಗಿರುತ್ತವೆ. ಆದರೆ ಸೈಬರ ಸಂಭಾಷಣೆಯಲ್ಲಿ ನಿರೀಕ್ಷಣಾ ವ್ಯಾಪ್ತಿ ತುಸು ಹೆಚ್ಚಿಗೆ ಇರುತ್ತದೆ. ಕ್ರಿಯೆ ಹಾಗೂ ಪ್ರತಿಕ್ರಿಯೆಗಳ ನಡುವಿನ ಕಾಲವು ಇದನ್ನು ನಿರ್ಧರಿಸುತ್ತದೆ.

ಮನಸ್ಸನ್ನು ರೋಮಾಂಚಿತಗೊಳಿಸುತ್ತದೆ
ಅವಳ ಒಂದು ಸಣ್ಣ ಬರಹ ನಿಮ್ಮ ಇಡೀ ದಿನವನ್ನೆ ಆವರಿಸಿಬಿಡುತ್ತದೆ. ಹಾಗೆ ಬರೆದವಳು ನಿಮ್ಮೆದುರು ಇಲ್ಲದಿದ್ದರೂ ಅವಳ ಗುಂಗಿನಲ್ಲಿ ಇಡೀ ದಿನ ಒಂದು ನವಿರಾದ ರೋಮಾಂಚನಕ್ಕೊಳಗಾಗುತ್ತೀರಿ.

ಭೇಟಿಗೆ ಸಿದ್ಧತೆ ನಡೆಸಬಹುದು
ಆನ್-ಲೈನ್ ಸಂಭಾಷಣೆಯ ಮೂಲಕ ಈ ಮೋದಲೇ ಅವಳ ಬಗ್ಗೆ ಸಾಕಷ್ಟು ತಿಳಿದಿರುವ ನೀವು ಈಗ ಅವಳನ್ನು ಭೇಟಿಯಾಗಲು ಸುಲಭವಾಗಿ ತಯಾರಿನಡೆಸಬಹುದು. ಅವಳಿಷ್ಟದ ಸ್ಥಳ, ಬಣ್ಣ, ತಿನಿಸು........... ಗಳ ಬಗ್ಗೆ ವಿಶೇಷ ಕಾಳಜಿವಹಿಸಿ ವಳನ್ನು ಇಂಪ್ರೆಸ್ ಮಾಡಬಹುದು.
ಹಾಗಿದ್ದರೆ ಹುಡುಗರೆ ಇನ್ನೇಕೆ ತಡ, ಆನ್-ಲೈನ್ ಸಂಭಾಷಣೆಯ ಲಾಭಪಡೆಯಿರಿ ನಿಮ್ಮ ಮನದನ್ನೆಯನು ಒಲಿಸಿಕೊಳ್ಳಿ.
All the best.



Click it and Unblock the Notifications











