ಪ್ರೀತಿ-ಕಾಮ, ಒಂದೇ ನಾಣ್ಯದ ಎರಡು ಮುಖವಿದ್ದಂತೆ...

Posted By: Staff
Subscribe to Boldsky

ಕಾಮಾಸಕ್ತಿ ಒಂದು ಪಾಪವಲ್ಲ, ಬದಲಿಗೆ ಪ್ರೇಮದ ಒಂದು ಭಾಗ ಮಾತ್ರ. ದಂಪತಿಗಳ ನಡುವೆ ಪ್ರೀತಿ, ಒಲುಮೆ, ವಿಶ್ವಾಸ, ಗೌರವ, ಆದರ ಮೊದಲಾದವುಗಳಂತೆಯೇ ಕಾಮಾಸಕ್ತಿಯೂ ಒಂದು ಬೆಸುಗೆಯ ಕೊಂಡಿಯಷ್ಟೇ. ಆದರೆ ಕೆಲವೊಮ್ಮೆ ಕಾಮಾಸಕ್ತಿಯ ಭರ ತುಂಬಾ ಹೆಚ್ಚಾಗಿದ್ದು ಇತರ ಗುಣಗಳನ್ನೆಲ್ಲಾ ಮರೆಸಿಬಿಡುತ್ತದೆ. ಒಂದು ವೇಳೆ ಪತ್ನಿಯ ನೆನಪಾದಾಗಲೆಲ್ಲಾ ಕಾಮದ ನೆನಪಾದರೆ ನಿಮ್ಮ ನಿರ್ಧಾರದಲ್ಲಿಯೇ ಏನಾದರೊಂದು ತೊಂದರೆ ಇದೆ ಎಂದು ಅರ್ಥೈಸಿಕೊಳ್ಳಬಹುದು. ಅಥವಾ ನಿಮಗೆ ಸಲ್ಲದ ವ್ಯಕ್ತಿಯೊಂದಿಗೆ ಜೀವನ ನಡೆಸುವ ಅಥವಾ ನಿಮ್ಮ ಜೀವನವೇ ನರಕವಾಗಬಹುದು.

ಯಾವುದೇ ದಾಂಪತ್ಯದಲ್ಲಿಯೂ ಕಾಮಾಸಕ್ತಿ ಒಂದು ಅತ್ಯಂತ ಅಗತ್ಯವಾದ ನಿಸರ್ಗದ ನಿಯಮವಾಗಿದೆ. ಸಂತಾನೋತ್ಪತ್ತಿಯ ಮೂಲಕ ಪೀಳಿಗೆ ಮುಂದುವರೆಯಲು ಸಕಲ ಜೀವಿಗಳಿಗೆ ಆ ಭಗವಂತ ನೀಡಿರುವ ವರದಾನವಾಗಿದೆ. ಆದರೆ ಬುದ್ಧಿವಂತರಾದ ಮನುಷ್ಯರಿಗೆ ಈ ವರದಾನವನ್ನು ತಪ್ಪಾಗಿ ಉಪಯೋಗಿಸಿಕೊಳ್ಳದಿರುವಂತೆ ಸಮಾಜ ವಿವಾಹ ವ್ಯವಸ್ಥೆಯನ್ನು ಮಾಡಿದೆ. ಅಂತೆಯೇ ವಿವಾಹಬಂಧನದಲ್ಲಿರುವ ದಂಪತಿಗಳು ಒಬ್ಬರಿಗೊಬ್ಬರು ಮಾತ್ರ ದೈಹಿಕವಾಗಿ ಮತ್ತು ಮಾನಸಿಕವಾಗಿ ಜೊತೆಯಾಗಿರಬೇಕು, ಇದರ ಮೂಲಕವೇ ಸಮಾಜದಲ್ಲಿ ಸ್ಥಿರತೆ ಮತ್ತು ಸಮೃದ್ಧಿ ಸಾಧ್ಯ.  ಪ್ರೇಮ vs ಕಾಮ: ಎಡವಟ್ಟು ಮಾಡ್ಕೊಬೇಡಿ!

ಜೊತೆಯಾಗಿರುವ ದಂಪತಿಗಳು ಕಾಮಾಸಕ್ತಿಯನ್ನು ಮಾತ್ರ ಹಂಚಿಕೊಳ್ಳುವುದಲ್ಲ, ಬದಲಿಗೆ ಜೀವನದ ಎಲ್ಲಾ ಮಜಲುಗಳನ್ನೂ ಹಂಚಿಕೊಳ್ಳುತ್ತಾರೆ. ತಜ್ಞರ ಪ್ರಕಾರ ಸುಖೀ ದಂಪತಿಗಳ ನಡುವಣ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ಕಾಮಕ್ಕೆ ಸಿಗುವ ಅಂಕಗಳೆಂದರೆ ನೂರಕ್ಕೆ ಒಂಬತ್ತು ಮಾತ್ರ. ಇನ್ನುಳಿದಂತೆ ಶೇಖಡಾ ತೊಂಭತ್ತೊಂದು ಭಾಗ ಮಾನಸಿಕವಾಗಿ, ಭಾವಾತ್ಮಕರಾಗಿ ಒಬ್ಬರ ಜೊತೆ ಇನ್ನೊಬ್ಬರಿರುವುದೇ ಆತ್ಮೀಯ ದಾಂಪತ್ಯವಾಗುತ್ತದೆ.

ಇದೇ ಕಾರಣಕ್ಕೆ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಪತಿಯನ್ನು ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಕಾಣುವ ಪತ್ನಿಯರೂ ತಮ್ಮ ವೈವಾಹಿಕ ಜೀವನದಲ್ಲಿ ಸಂತುಷ್ಟರಾಗಿರುತ್ತಾರೆ. ವ್ಯತಿರಿಕ್ತವಾಗಿ ಜೊತೆಗೇ ಇದ್ದರೂ ವೈಮನಸ್ಯದಿಂದ ಜಗಳಾಡುತ್ತಲೇ ಇರಬಹುದು. ಬನ್ನಿ, ಸಂಬಂಧದಲ್ಲಿ ಕಾಮಾಸಕ್ತಿಯೇ ಹೆಚ್ಚಿನ ಪ್ರಾಧಾನ್ಯತೆ ವಹಿಸಿದರೆ ಏನಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ...

ಇಲ್ಲಿ ಭಾವೋದ್ವೇಗ ಇರಬಹುದು ಆದರೆ ಸ್ಥಿರತೆ ಇರುವುದಿಲ್ಲ

ಇಲ್ಲಿ ಭಾವೋದ್ವೇಗ ಇರಬಹುದು ಆದರೆ ಸ್ಥಿರತೆ ಇರುವುದಿಲ್ಲ

ಯಾವುದೇ ಸಂಬಂಧಕ್ಕೆ ಇರುವ ಮೌಲ್ಯ ಇದರ ಸ್ಥಿರತೆಯಲ್ಲಿರುತ್ತದೆ. ಅಂದರೆ ಜೀವನಪರ್ಯಂತ ಇಬ್ಬರು ಒಬ್ಬರಿಗೊಬ್ಬರು ಅನುರೂಪರಾಗಿ ಬಾಳುತ್ತಾರೆ ಎಂಬುದು.ಕೇವಲ ಕಾಮಾಸಕ್ತಿ ಇದ್ದರೆ ಈ ಬಂಧನ ಕೇವಲ ಮಲಗುವ ಕೋಣೆಯ ಚಟುವಟಿಕೆಗಳಿಗೆ ಮೀಸಲಾಗಿರುತ್ತದೆಯೇ ಹೊರತು ಭಾವನಾತ್ಮಕವಾಗಿ ಅಲ್ಲ. ಇಲ್ಲಿ ಸ್ಥಿರತೆ ಇರುವುದೇ ಅನುಮಾನ. ಚಂಚಲಗೊಂಡ ಮನಸ್ಸು ಬೇರೆಡೆಗೆ ಹೊರಳಿದರೆ ಇಬ್ಬರಿಗೂ ಇದರ ಪರಿಣಾಮ ಭೀಕರವಾಗಿ ಪರಿಣಮಿಸಬಹುದು

ಇಲ್ಲಿ ವ್ಯಕ್ತಿಯ ಮೈಮಾಟ ಮಾತ್ರ ಗಣನೆಗೆ ಬರುತ್ತದೆ

ಇಲ್ಲಿ ವ್ಯಕ್ತಿಯ ಮೈಮಾಟ ಮಾತ್ರ ಗಣನೆಗೆ ಬರುತ್ತದೆ

ಕಾಮಾಸಕ್ತಿಯಲ್ಲಿ ಜೊತೆಗಾರನ/ಜೊತೆಗಾರ್ತಿಯ ಸೌಂದರ್ಯ, ಮೈಕಟ್ಟು ಮತ್ತು ಮೈಮಾಟವೇ ಪ್ರಧಾನ ಪಾತ್ರ ವಹಿಸುತ್ತದೆ. ಇಬ್ಬರ ನಡುವಣ ಬಂಧನಕ್ಕೆ ಈ ಸೌಂದರ್ಯಾಧನೆ ಒಂದು ಕೊಂಡಿಯಾಗಿ ಕೆಲಕಾಲ ಉಳಿಯಬಹುದು. ಆದರೆ ದಿನಗಳೆದಂತೆ ಯಾವುದೇ ಹೂವೂ ಮುದುಡುವಂತೆ ಸೌಂದರ್ಯ ಹಾಗೂ ಮೈಮಾಟ ಬದಲಾಗುತ್ತದೆ.

ಇಲ್ಲಿ ವ್ಯಕ್ತಿಯ ಮೈಮಾಟ ಮಾತ್ರ ಗಣನೆಗೆ ಬರುತ್ತದೆ

ಇಲ್ಲಿ ವ್ಯಕ್ತಿಯ ಮೈಮಾಟ ಮಾತ್ರ ಗಣನೆಗೆ ಬರುತ್ತದೆ

ವಿಪರ್ಯಾಸವೆಂದರೆ ಕೆಲವರಿಗೆ ಕೆಲವೇ ದಿನಗಳಲ್ಲಿ ಒಂದೇ ಹೂವಿನ ನೋಟ ಬೇಸರ ತರಿಸುತ್ತದೆ. ಒಂದು ವೇಳೆ ದಂಪತಿಗಳ ನಡುವೆ ಕೇವಲ ದೈಹಿಕ ಆಕರ್ಷಣೆಯೇ ಪ್ರಧಾನವಾಗಿದ್ದರೆ ಈ ಸಂಬಂಧ ಆಕರ್ಣಣೆಯೊಂದಿಗೇ ನಶಿಸುತ್ತಾ ಹೋಗುತ್ತದೆ.

ದೈಹಿಕ ಇಚ್ಛೆಗಳಿಗೆ ಹೆಚ್ಚಿನ ಆದ್ಯತೆ

ದೈಹಿಕ ಇಚ್ಛೆಗಳಿಗೆ ಹೆಚ್ಚಿನ ಆದ್ಯತೆ

ಇಬ್ಬರೂ ಒಟ್ಟಿಗಿದ್ದಾಗ ಕೇವಲ ಕಾಮದ ಕುರಿತಾದ ಮಾತು ಮತ್ತು ಚಟುವಟಿಕೆಯೇ ಪ್ರಧಾನ ಪಾತ್ರ ವಹಿಸಿ ಜೀವನದ ಇತರ ಮಹತ್ವದ ಸಂಗತಿಗಳಿಗೆ ಯಾವುದೇ ಬೆಲೆ ಇಲ್ಲದಿದ್ದರೆ ಈ ಸಂಬಂಧವನ್ನು ಕಾಮವೇ ಆಳುತ್ತಿದೆ ಎಂಬ ತೀರ್‍ಮಾನಕ್ಕೆ ಬರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದೈಹಿಕ ಇಚ್ಛೆಗಳಿಗೆ ಹೆಚ್ಚಿನ ಆದ್ಯತೆ

ದೈಹಿಕ ಇಚ್ಛೆಗಳಿಗೆ ಹೆಚ್ಚಿನ ಆದ್ಯತೆ

ಜೀವನದಲ್ಲಿ ಹತ್ತು ಹಲವು ಸಂಗತಿಗಳಿದ್ದು ಇದರಲ್ಲಿ ದಂಪತಿಗಳು ಸಮಾನವಾಗಿ ಚರ್ಚಿಸಿ ಭವಿಷ್ಯದ ಬಗ್ಗೆ ಚಿಂತನೆ, ಇದಕ್ಕಾಗಿ ಸೂಕ್ತ ಕ್ರಮ, ಜೀವನದಲ್ಲಿ ಮುಂದುವರೆಯಲು ಒಬ್ಬರಿಗೊಬ್ಬರು ನೀಡಬೇಕಾದ ಜೊತೆ ಮೊದಲಾದವುಗಳೆಲ್ಲಾ ಹಳ್ಳ ಹಿಡಿಯುತ್ತವೆ. ಪರಿಣಾಮವಾಗಿ ಸಂಬಂಧ ನೀರಸವಾಗುತ್ತದೆ.

ಕಾಮದ ಹೊರತಾಗಿ ಬೇರೆ ಮಾತು ಎತ್ತಿದರೆ ಜಗಳ

ಕಾಮದ ಹೊರತಾಗಿ ಬೇರೆ ಮಾತು ಎತ್ತಿದರೆ ಜಗಳ

ಒಂದು ವೇಳೆ ನಿಮ್ಮ ಸಂಬಂಧದಲ್ಲಿ ಕೇವಲ ಕಾಮ ಮಾತ್ರ ಉಳಿದಿದ್ದರೆ ಇಬ್ಬರಲ್ಲೊಬ್ಬರಿಗಾದರೂ ಕಾಮದ ಹೊರತಾಗಿ ಬೇರಾವುದೂ ಮಾತನಾಡುವುದೇ ಬೇಕಿಲ್ಲ. ಒಂದು ವೇಳೆ ಬೇರೆ ಮಾತು ಬಂದರೆ ಇದೇ ಪಿಳ್ಳೆನವವಾಗಿ ಜಗಳ ಪ್ರಾರಂಭವಾಗಬಹುದು. ಪ್ರಾರಂಭವಾದ ಜಗಳ ಯಾವ ಮಟ್ಟಕ್ಕೆ ಬೆಳೆದು ಯಾವ ಪರಿಣಾಮ ಮತ್ತು ನಿರ್ಣಯಗಳನ್ನು ಪಡೆದುಕೊಳ್ಳಬಹುದು ಎಂದು ಊಹಿಸಲೂ ಸಾಧ್ಯವಿಲ್ಲ.

ಸ್ನೇಹಿತರೊಂದಿಗೆ ಮಾತ್ರ ಗುಟ್ಟುಗಳನ್ನು ಹಂಚಿಕೊಳ್ಳುತ್ತೀರಿ

ಸ್ನೇಹಿತರೊಂದಿಗೆ ಮಾತ್ರ ಗುಟ್ಟುಗಳನ್ನು ಹಂಚಿಕೊಳ್ಳುತ್ತೀರಿ

ಒಂದು ವೇಳೆ ಕಾಮವೇ ಪ್ರಧಾನವಾಗಿದ್ದರೆ ಸಂಗಾತಿಯಾಗಿರುವ ವ್ಯಕ್ತಿ ಕೇವಲ ಕಾಮದ ಹಸಿವನ್ನು ತೀರಿಸುವ ಓರ್ವ ವ್ಯಕ್ತಿಯೇ ಹೊರತು ಜೀವನದ ಸುಖದುಃಖಗಳನ್ನು ಹಂಚಿಕೊಳ್ಳುವ ವ್ಯಕ್ತಿಯಲ್ಲ. ಈ ಸಂದರ್ಭದಲ್ಲಿ ತಮ್ಮ ಆತ್ಮೀಯ ಸ್ನೇಹಿತ ಸ್ನೇಹಿತೆಯರಲ್ಲಿಯೇ ತಮ್ಮ ಮನದಾಳದ ಮಾತುಗಳನ್ನು ಆಡಿ ಗುಟ್ಟುಗಳನ್ನು ಹಂಚಿಕೊಳ್ಳುತ್ತೀರಿ.

 
Please Wait while comments are loading...
Subscribe Newsletter