For Quick Alerts
ALLOW NOTIFICATIONS  
For Daily Alerts

ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ, ಕೊನೆಗೆ ಕೈ ಕೊಟ್ಟಾಗ....

By Manu
|

ಜೀವನಸಂಗಾತಿಯನ್ನು ಆಯ್ದುಕೊಳ್ಳುವುದು ಎಷ್ಟು ಕಷ್ಟಕರವೋ ಇದಕ್ಕಿಂತ ಆಯ್ದುಕೊಂಡ ವ್ಯಕ್ತಿಯನ್ನು ಜೀವನಸಂಗಾತಿಯಾಗಿ ಪಡೆಯುವುದು ಇನ್ನಷ್ಟು ಕಷ್ಟ. ಏಕೆಂದರೆ ಕೆಲವಾರು ಕಾರಣಗಳಿಂದ ಇನ್ನೇನು ವಿವಾಹವಾಗುತ್ತಾರೆ ಎಂಬ ಸೂಚನೆ ಕಂಡುಬಂದಿದ್ದ ಜೋಡಿಗಳ ನಡುವೆಯೂ ಬಿರುಕು ಮೂಡಿ ಬೇರೆ ಬೇರೆಯಾಗಿರುವುದು ಕಂಡುಬಂದಿದೆ. ಬ್ರೇಕ್ ಅಪ್ ಶಾಕ್ ಗಂಡಸರಿಗೇ ಹೆಚ್ಚಾಗಿ ಕಾಡುತ್ತದೆಯಂತೆ!

ಇಬ್ಬರಲ್ಲೊಬ್ಬರಿಗೆ ಮೂರನೆಯ ವ್ಯಕ್ತಿ ದಕ್ಕಿದ್ದು ಇವರಿಗಿಂತ ಅವರು ಉತ್ತಮ ಎಂಬ ಭಾವನೆ ಬಲವಾಗಿರುವ ಕಾರಣ ಈ ಸ್ನೇಹ ದಾಂಪತ್ಯಕ್ಕೆ ತಿರುಗುವುದು ತಪ್ಪುತ್ತದೆ. ಆಗ ಪ್ರೀತಿಯನ್ನು ಕಳೆದುಕೊಂಡ ವ್ಯಕ್ತಿಗೆ ತಾನು ಪ್ರೀತಿಯಲ್ಲಿ ಮೋಸಹೋದ ವಿಷಯ ಅರಿವಾಗಿ ಪ್ರಪಂಚವೇ ತಲೆಯ ಮೇಲೆ ಬಿದ್ದಂತಾಗುತ್ತದೆ.

ಇದರ ಪರಿಣಾಮದಿಂದ ಮೇಲೆ ಬರಲು ಆಪಾರವಾದ ಆತ್ಮಸ್ಥೈರ್ಯ ಬೇಕು. ಆದರೆ ಹೆಚ್ಚಿನವರಿಗೆ ಈ ಆತ್ಮಸ್ಥೈರ್ಯದ ಕೊರತೆ ಇರುವ ಕಾರಣ ಇವರು ಹತಾಶೆ, ಮೌನ, ಮದ್ಯ, ನಿರುತ್ಸಾಹ ಮೊದಲಾದವುಗಳಲ್ಲಿ ಮುಳುಗಿಬಿಡುತ್ತಾರೆ. ಹೆಚ್ಚಿನ ಸಮಯ ಒಂಟಿಯಾಗಿಯೇ ಕಳೆಯುತ್ತಾರೆ. ಬೇರ್ಪಟ್ಟ ಸಂಬಂಧ ನೀಡುವುದೇ ಹೊಸ ತಿರುವು?

ಪ್ರತಿಯೊಬ್ಬರಲ್ಲಿಯೂ ಈ ನೋವು ಬೇರೆ ಬೇರೆಯಾಗಿರುತ್ತದೆ. ಬನ್ನಿ, ಮೋಸಕ್ಕೊಳಗಾದ ಬಳಿಕ ವ್ಯಕ್ತಿಗೆ ಯಾವ ರೀತಿಯಾದ ತೊಂದರೆಗಳು ಎದುರಾಗುತ್ತವೆ ನೋಡೋಣ:

ನೋವು

ನೋವು

ಮೋಸಕ್ಕೊಳಗಾದ ಬಳಿಕ ವ್ಯಕ್ತಿ ಅಪಾರವಾದ ನೋವು ಅನುಭವಿಸುತ್ತಾನೆ/ಳೆ. ಏಕೆಂದರೆ ನಮ್ಮ ಮೆದುಳು ಮನದ ಬೇಗುದಿಯ ನೋವನ್ನೂ ಶಾರೀರಿಕವಾಗಿ ಆಗುವ ನೋವನ್ನೂ ಸಮಾನವಾಗಿ ಗ್ರಹಿಸುತ್ತದೆ.

ನೋವು

ನೋವು

ಇದರಿಂದ ದೈಹಿಕವಾಗಿಯೂ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗೇ ಎಂದು ಸ್ಪಷ್ಟವಾಗಿ ವಿವರಿಸಲಾಗದ, ಇದೇ ಭಾಗದಲ್ಲಿ ಎಂದು ಸ್ಪಷ್ಟವಾಗಿ ಹೇಳಲಾಗದ ಅವ್ಯಕ್ತ ನೋವು ಆವರಿಸುತ್ತದೆ.

ಮಹಿಳೆಯರಿಗೆ ಹೆಚ್ಚು

ಮಹಿಳೆಯರಿಗೆ ಹೆಚ್ಚು

ಈ ನೋವನ್ನು ಅಧ್ಯಯನದ ವಿಷಯವಾಗಿ ಪರಿಗಣಿಸಿ ನಡೆಸಿದ ಸಂಶೋಧನೆಗಳ ಮೂಲಕ ಪ್ರೀತಿಯಲ್ಲಿ ಮೋಸಕ್ಕೊಳಗಾದ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚು ನೋವಿಗೆ ಒಳಗಾಗುತ್ತಾರೆ ಎಂದು ತಿಳಿದುಬಂದಿದೆ.

ಮಹಿಳೆಯರಿಗೆ ಹೆಚ್ಚು

ಮಹಿಳೆಯರಿಗೆ ಹೆಚ್ಚು

ಇನ್ನೊಂದು ಸಂಶೋಧನೆಯ ಮೂಲಕ ಒಂದು ವೇಳೆ ಮಹಿಳೆಯರು ಮಾನಸಿಕವಾಗಿ

ಮೂರನೆಯ ವ್ಯಕ್ತಿಗೆ ಆಪ್ತರಾಗುವುದನ್ನು ಹೆಚ್ಚಿನ ತೊಂದರೆ ಎಂದು ಭಾವಿಸದ ಪುರುಷರು ಅದೇ ಮಹಿಳೆ ಮೂರನೆಯ ವ್ಯಕ್ತಿಯೊಂದಿಗೆ ದೈಹಿಕವಾಗಿ ಆಪ್ತವಾದಾಗ ಮಾತ್ರ ಸಹಿಸಲಾರರು. ವ್ಯತಿರಿಕ್ತವಾಗಿ ಮಹಿಳೆಯರು ತಮ್ಮ ಪುರುಷ ಇನ್ನೋರ್ವ ಮಹಿಳೆಯೊಂದಿಗೆ ಮಾನಸಿಕವಾಗಿ ಆಪ್ತರಾಗುವುದನ್ನೂ ಸಹಿಸರು.

ಅವಮಾನಗೊಂಡ ಭಾವನೆ

ಅವಮಾನಗೊಂಡ ಭಾವನೆ

ಮೋಸಕ್ಕೊಳಗಾದ ಪುರುಷರೂ ಮಹಿಳೆಯರೂ ತಾವು ಮೋಸಕ್ಕೊಳಗಾದ ಬಗ್ಗೆ ತಿಳಿಯುತ್ತಿದ್ದಂತೆಯೇ ಅಪಾರವಾಗಿ ಅವಮಾನಗೊಂಡ ಭಾವನೆಯನ್ನು ಅನುಭವಿಸುತ್ತಾರೆ. ಇದು ತಮ್ಮ ಆತ್ಮಾಭಿಮಾನ, ಆತ್ಮಗೌರವಕ್ಕೆ ಎದುರಾದ ಧಕ್ಕೆ ಎಂದು ಭಾವಿಸುತ್ತಾರೆ.

ಹಿಂದಿನ ಕ್ಷಣಗಳ ಮೆಲುಕು

ಹಿಂದಿನ ಕ್ಷಣಗಳ ಮೆಲುಕು

ಮೋಸಗೊಂಡ ಬಳಿಕ ಸಾಮಾನ್ಯವಾಗಿ ಪುರುಷರು ತಕ್ಷಣಕ್ಕೆ ಆಧೀರರಾದರೂ ಕೆಲವೇ ದಿನಗಳಲ್ಲಿ ಹಿಂದಿನ ಕ್ಷಣಗಳನ್ನು ಮರೆತು ಮುಂದಿನ ಜೀವನವನ್ನು ಎದುರಿಸುವತ್ತ ಚಿತ್ತ ಹರಿಸುತ್ತಾರೆ. ಆದರೆ ಮಹಿಯರಿಗೆ ಮಾತ್ರ ಹಿಂದಿನ ಸುಂದರ ಕ್ಷಣಗಳನ್ನು ಮರೆಯಲು ಸಾಧ್ಯವಾಗದೇ ಖಿನ್ನತೆ ಹೆಚ್ಚುತ್ತಾ ಹೋಗಬಹುದು. ಇದರಿಂದ ಇವರು ಮಾನಸಿಕರಾಗಿ ಹೆಚ್ಚು ಹೆಚ್ಚು ಕುಗ್ಗುತ್ತಾ ಹೋಗಬಹುದು.

ದ್ರೋಹದ ಪರಿಣಾಮಗಳು

ದ್ರೋಹದ ಪರಿಣಾಮಗಳು

ತಮಗೆ ದ್ರೋಹವಾಗಿದೆ ಎಂದು ಅರಿತ ಬಳಿಕ ವ್ಯಕ್ತಿ ಕೈಗೊಳ್ಳುವ ತೀರ್ಮಾನಗಳು ಭಿನ್ನ ಭಿನ್ನವಾಗಿವೆ. ಕೆಲವರು ಆತ್ಮಹತ್ಯೆಯಂತಹ ಘೋರ ಅಪರಾಧವನ್ನು ಆಯ್ದುಕೊಂಡರೆ ಕೆಲವರು ಇದಕ್ಕೆ ವ್ಯತಿರಿಕ್ತವಾಗಿ ತನಗೆ ದ್ರೋಹ ಎಸಗಿದವರನ್ನು ಕೊಲೆ ಮಾಡಿ ಜೈಲು ಸೇರುತ್ತಾರೆ.

ದ್ರೋಹದ ಪರಿಣಾಮಗಳು

ದ್ರೋಹದ ಪರಿಣಾಮಗಳು

ಆದರೆ ಈ ಪರಿಯ ತೀರ್ಮಾನಗಳನ್ನು ಕೈಗೊಳ್ಳಲು ಭಾರೀ ಗುಂಡಿಗೆ ಬೇಕು. ಹೆಚ್ಚಿನವರು ತಮ್ಮ ವಿಧಿಯನ್ನು ಹಳಿಯುತ್ತಾ ಜೀವನ ಕಳೆಯುತ್ತಾರೆ. ಮಹಿಳೆಯರು ಈ ಪರಿಸ್ಥಿತಿಗೆ ತಾವೇ ಕಾರಣ ಎಂದು ಹಳಿದರೆ ಪುರುಷರು ಈ ಪರಿಸ್ಥಿತಿಗೆ ತಮ್ಮನ್ನು ಹೊರತು ಪಡಿಸಿ ಇಡಿಯ ವಿಶ್ವವೇ ಇದಕ್ಕೆ ಕಾರಣ ಎಂದು ಹಳಿಯುತ್ತಾರೆ.

English summary

What Happens If You Get Cheated...

What happens if you suddenly find your partner cheating you? Well, it shatters your world! You may feel shocked and terribly disappointed. It will surely impact you for at least a few days even if you are very strong as a person. Each person takes it in a different way but anyone would first get affected.Here are some immediate consequences after getting cheated by someone.
X
Desktop Bottom Promotion