Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಬ್ರೇಕ್ ಅಪ್ ಶಾಕ್ ಗಂಡಸರಿಗೇ ಹೆಚ್ಚಾಗಿ ಕಾಡುತ್ತದೆಯಂತೆ!
ಅಮರ ಮಧುರ ಈ ಪ್ರೇಮ, ಇದು ಏಳು ಜನ್ಮಗಳ ಸಂಬಂಧ ಎಂಬಂತಿರುವ ಒಂದು ಸಂಬಂಧವು ಮುರಿದು ಬಿದ್ದರೆ, ಅದರಿಂದ ಉಂಟಾಗುವ ನೋವು ಅಷ್ಟು ಇಷ್ಟಲ್ಲ. ಬ್ರೇಕಪ್‌ಗೆ ಮೊದಲು ಹಲವಾರು ವಿಚಾರಗಳು ನಿಮ್ಮಿಬ್ಬರ ಮಧ್ಯೆ ಕಿಚ್ಚನ್ನು ಹಚ್ಚಿರುತ್ತವೆ. ಬೇರೆಯಾದಾಗ ಮನಸ್ಸಿಗೆ ಸ್ವಲ್ಪ ದಿನ ಶಾಂತಿ ಸಿಗುತ್ತದೆಯಾದರು ಅದು ಕ್ಷಣಿಕ. ಆದರೆ ಬ್ರೇಕ ಅಪ್ ಆದ ನಂತರ ಜೀವನ ಮುಂದೆ ಸಾಗಿದಾಗ ಅದರ ಕಷ್ಟ ಗೊತ್ತಾಗುತ್ತದೆ.
ಒಂದು ವೇಳೆ ನೀವು ಇತ್ತೀಚೆಗಷ್ಟೆ ಬೇರೆಯಾಗಿದ್ದಲ್ಲಿ, ಒಂದು ಸಂಬಂಧ ಮಾತ್ರ ಮುರಿದು ಬಿತ್ತು ಎಂದು ಭಾವಿಸಿರಬಹುದು. ಆದರೆ ಬೇರೆಯಾದ ಮಾತ್ರಕ್ಕೆ ಎಲ್ಲವು ಬದಲಾಗುವುದಿಲ್ಲ ಮತ್ತು ಸರಿಹೋಗುವುದಿಲ್ಲ. ಒಬ್ಬರಿಗೆ ಇದರಿಂದ ಸಂತೋಷವಾದಲ್ಲಿ ಮತ್ತೊಬ್ಬರಿಗೆ ಇದರಿಂದ ದುಃಖವುಂಟಾಗಿಯೇ ಆಗುತ್ತದೆ.
ಕೆಲವರಿಗೆ ಇದು ಹೊಸ ಜೀವನದ ಮುನ್ನುಡಿಯಾದರೆ, ಇನ್ನೂ ಕೆಲವರಿಗೆ ಜೀವನ ಅಂತ್ಯವಾಗಿ ಇದು ಕಾಣುತ್ತದೆ. ಸಂಬಂಧದ ಬಗ್ಗೆ ಅಧ್ಯಯನ ಮಾಡಿರುವ ತಜ್ಞರ ಪ್ರಕಾರ ನೀವು ಈ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಆಲೋಚನೆ ಮಾಡಬೇಕಂತೆ. ನಿಮ್ಮ ಸಂಗಾತಿಯಲ್ಲಿರುವ ನಕಾರಾತ್ಮಕ ಅಂಶಗಳನ್ನು ಪರಿಗಣಿಸಿದಾಗ, ನಿಮ್ಮ ಜೀವನವು ಈಗ ಸಕಾರಾತ್ಮಕವಾಗಿ ಸಾಗುವತ್ತ ಅಡಿಯಿರಿಸಿದೆ ಎಂದು ಭಾವಿಸಿ. ನಿಜವಾಗಿ ಹೇಳಬೇಕೆಂದರೆ ಈ ಬ್ರೇಕ್ ಅಪ್ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರುತ್ತದೆ ಎಂದು ನಂಬಿ. ಬ್ರೇಕ್ ಅಪ್ ನೋವಿವಿಂದ ಹೊರಬರುವುದು ಹೇಗೆ?
ಪ್ರತಿಯೊಂದು ಬ್ರೇಕ್ ಅಪ್ ನಿಮ್ಮ ಜೀವನದಲ್ಲಿ ಕೆಲವೊಂದು ಸನ್ನಿವೇಶಗಳನ್ನು ಎದುರಿಸುವಂತೆ ಮಾಡುತ್ತದೆ. ಅದರಲ್ಲೂ ಗಂಡಸರಿಗೆ ಇದರಿಂದ ಇನ್ನೂ ಸ್ವಲ್ಪ ಕಷ್ಟವಾಗಬಹುದು. ಅವರು ತಮ್ಮ ಜೀವನವನ್ನು ಮತ್ತಷ್ತು ಮುಗುಳ್ನಗೆಯೊಂದಿಗೆ ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಆದ್ದರಿಂದ ಭಗ್ನ ಹೃದಯಿ ಗಂಡಸರೆ ನಿಮ್ಮ ತಲೆಯನ್ನು ಮತ್ತಷ್ಟು ಮೇಲಕ್ಕೆ ಎತ್ತಿ, ಜೀವನದಲ್ಲಿ ಒಳ್ಳೆಯದನ್ನು, ಒಳ್ಳೆಯ ಮೌಲ್ಯಗಳನ್ನು ಇರಿಸಿಕೊಂಡು ಮುಂದೆ ಸಾಗಿ. ನಿಮ್ಮ ಜೀವನದಲ್ಲಿ ಸಂಬಂಧ ಮುರಿದು ಬಿದ್ದ ಮೇಲೆ ಏನೆಲ್ಲಾ ಎದುರಿಸಬೇಕಾಗಿ ಬರುತ್ತದೆ ಎಂಬುದರ ಸಣ್ಣ ಪಕ್ಷಿನೋಟವನ್ನು ಇಲ್ಲಿ ನೀಡಿದ್ದೇವೆ ಓದಿ...

ಒಂಟಿಯಾಗಿರುವುದು ತಪ್ಪಲ್ಲ
ನೀವು ಬ್ರೇಕಪ್ ಆದ ನಂತರ ನಿಮ್ಮ ಮನಸ್ಸಿನಲ್ಲಿ ಹಲವಾರು ವಿಚಾರಗಳು ಬಂದು ಹೋಗಬಹುದು. ಈ ಸಮಯದಲ್ಲಿ ನೀವು ಒಂಟಿಯಾಗಿರುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಒಂಟಿಯಾಗಿರಬೇಕಾಗುತ್ತದೆ ಅದು ತಪ್ಪು ಅಲ್ಲ. ಪ್ರಪಂಚದಲ್ಲಿ ಹಲವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ನಿಮ್ಮ ಹೆಸರು ಸಹ ಆ ಪಟ್ಟಿಯಲ್ಲಿ ಸೇರ್ಪಡೆಯಾಗಬಹುದು. ಸ್ವಲ್ಪ ದಿನಗಳ ಮಟ್ಟಿಗಾದರು ಇದು ನಿಮಗೆ ಅನ್ವಯಿಸುತ್ತದೆ.
ಮುಂದಿನ ಬಾರಿ ನೀವು ಸಲಹೆಯನ್ನು ಕೇಳಬೇಕಾಗುತ್ತದೆ
ನಿಮಗೆ ಮತ್ತಷ್ಟು ಒಳ್ಳೆಯದು ಸಿಗಲೇಬೇಕು



Click it and Unblock the Notifications

