For Quick Alerts
ALLOW NOTIFICATIONS  
For Daily Alerts

ಡೇಟಿಂಗ್ ಮಾಡಿದರೂ ಕಷ್ಟ ಮಾಡದಿದ್ದರೂ ಕಷ್ಟ!

By Deepu
|

ಒಬ್ಬ ಹುಡುಗ ಹುಡುಗಿ ಇಬ್ಬರು ಪದೇ ಪದೇ ಭೇಟಿಯಾಗುತ್ತಿದ್ದರೆ ಅದೇನೋ ರೋಮಾಂಚನ ಅವರ ಮಧ್ಯೆ ಉಂಟಾಗುತ್ತದೆ. ಅದು ಪ್ರೀತಿಯೋ, ಇಲ್ಲವೋ ಎಂಬ ಸಂಶಯ ಅವರಲ್ಲಿ ಸಹ ಇರುತ್ತದೆ. ಕೆಲವರು ಹೇಳುತ್ತಾರೆ ನಾವು ಡೇಟಿಂಗ್‌ನಲ್ಲಿದ್ದೀವಿ ಎಂದು, ಆದರೆ ಅದು ಒಬ್ಬ ವ್ಯಕ್ತಿಯ ಭಾವನೆ ಮಾತ್ರ ಆಗಿರುತ್ತದೆ. ಇನ್ನೂ ಕೆಲವರಿಗೆ ಅಸಲು ತಮ್ಮಿಬ್ಬರ ಮಧ್ಯೆ ಏನು ನಡೆಯುತ್ತಿದೆ ಎಂಬ ಗೊಂದಲ, ಆ ಗೊಂದಲವನ್ನೇ ಡೇಟಿಂಗ್, ಪ್ರೀತಿ ಎಂದು ತಪ್ಪಾಗಿ ಅರ್ಥೈಸಿ ಕೊಂಡು ಬಿಡುತ್ತಾರೆ. ಬನ್ನಿ ಅದನ್ನು ಇಂದು ವಿವರವಾಗಿ ತಿಳಿದುಕೊಳ್ಳೋಣ.

ಕಾಫಿಗೂ ಡೇಟಿಂಗ್‌ಗು ನಡುವಿನ ವ್ಯತ್ಯಾಸವೇನು?

Ways to find out whether it is a date or just coffee
ಯಾರನ್ನಾದರು ನೀವು ಭೇಟಿಯಾದಾಗ ಅವರ ಜೊತೆಗೆ ಮುಂದೆ ಪ್ರೇಮ ವ್ಯವಹಾರವನ್ನು ಮಾಡುತ್ತೀರಿ ಎಂದು ಹೇಳಲು ಆಗುವುದಿಲ್ಲ. ನೀವು ಭೇಟಿಯಾದಾಗ ಒಂದು ಊಟ ಮಾಡಬಹುದು ಅಥವಾ ಮಾತುಕತೆ ನಡೆಸಬಹುದು, ಇಲ್ಲವೇ ಒಂದು ಲಾಂಗ್ ಡ್ರೈವ್ ಹೋಗಿ ಬರಬಹುದು. ಆದರೆ ಡೇಟಿಂಗ್ ಎನ್ನುವುದು ನೀವು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಒಬ್ಬ ವ್ಯಕ್ತಿಯ ಜೊತೆಗೆ ಪ್ರೀತಿಯ ಸಂಬಂಧವನ್ನು ಬೆಳೆಸಲು ಹಾತೊರೆಯುವ ಅವಧಿಯಾಗಿರುತ್ತದೆ. ಈ ಡೇಟಿಂಗ್ ಎನ್ನುವ ಪ್ರಕ್ರಿಯೆ ಮೂಲಕ ನೀವು ಅವರನ್ನು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಆಕರ್ಷಿಸಿ ಸೆಳೆಯಲು ಹಂಬಲಿಸುವಿರಿ. ಇದು ಸ್ನೇಹ ಸಂಬಂಧವನ್ನು ದಾಟಿದ ಒಂದು ಬಗೆಯ ಸಂಬಂಧವಾಗಿರುತ್ತದೆ ಎಂಬುದನ್ನು ಮರೆಯಬಾರದು. ಮದುವೆ ಮುಂಚೆ ಡೇಟಿಂಗ್, ಸರಿಯೋ? ತಪ್ಪೋ?

ಡೇಟಿಂಗ್‌ನಲ್ಲಿ ದೈಹಿಕ ಆಕರ್ಷಣೆಯೇ ಮುಖ್ಯವೇ?
ಹೌದು, ಡೇಟಿಂಗ್‌ನಲ್ಲಿ ದೈಹಿಕ ಆಕರ್ಷಣೆಯೇ ಮುಖ್ಯ. ಆದರೆ ಹಲವಾರು ಡೇಟಿಂಗ್‌ಗಳು ಇದನ್ನು ಹೊಂದಿರುವುದಿಲ್ಲ. ಡೇಟಿಂಗ್‌ನಲ್ಲಿ ನೀವು ಇಬ್ಬರೂ ಒಟ್ಟಿಗೆ ಪರಸ್ಪರ ಕಳೆಯುತ್ತೀರಿ. ಇಬ್ಬರೂ ಒಟ್ಟಿಗೆ ಕಳೆದಾಗ ನೀವು ದೈಹಿಕವಾಗಿ ಅತಿ ಹೆಚ್ಚು ನಿಕಟವಾಗುತ್ತೀರಿ. ಇದು ಯೋಜನೆ ಮಾಡಿಕೊಂಡು ಹತ್ತಿರವಾಗುವುದು ಸಹ ನಡೆಯುತ್ತದೆ, ಕೆಲವೊಮ್ಮೆ ಅಚಾನಕಾಗಿ ಸಹ ನಡೆಯುತ್ತದೆ. ಆದರೆ ದೈಹಿಕವಾಗಿ ಹತ್ತಿರವಾಗುವ ಮುನ್ನ ಆತ/ಆಕೆ ನಿಮ್ಮ ಪ್ರೇಮಿಯಾಗಲು ಅರ್ಹವೇ ಎಂದು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಪ್ರೀತಿ ಸ್ವಾಭಾವಿಕವೇ? ಪ್ರೀತಿಯನ್ನು ಹೇಗೆ ಯೋಜನೆ ಮಾಡಬಹುದು?
ಈ ಕುರಿತಾಗಿ ಒಂದು ದೊಡ್ಡ ಚರ್ಚೆಯೇ ನಡೆದಿದೆ. ಡೇಟಿಂಗ್ ಅನ್ನು ಯೋಜನೆ ಮಾಡುವುದಕ್ಕೆ ಹಲವರ ವಿರೋಧವು ಸಹ ಇದೆ. ಖಂಡಿತ ಡೇಟಿಂಗ್ ಅನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆಯೇನು ಕಡಿಮೆಯಿಲ್ಲ. ಡೇಟಿಂಗ್ ಅನ್ನು ಮುಂದಿನ ಬಾಳಿನ ಒಂದು ಪೂರ್ವ ಸಿದ್ಧತಾ ಹಂತ ಎಂದುಕೊಂಡು ನಿಭಾಯಿಸಿದರೆ ಒಳ್ಳೆಯದಲ್ಲವೇ? ತಜ್ಞರು ದಂಪತಿಗಳು ಸಹ ಡೇಟಿಂಗ್ ಹೋಗಬೇಕೆಂದು ಸಲಹೆ ನೀಡುತ್ತಾರೆ. ಏಕೆಂದರೆ ಡೇಟಿಂಗ್‌ನಲ್ಲಿ ಪ್ರೀತಿ ಮತ್ತು ಗೌರವ ಮಾತ್ರ ತುಂಬಿರುತ್ತದೆ. ಜೊತೆಗೆ ದಂಪತಿಗಳು ಡೇಟಿಂಗ್ ಹೋಗುವುದರಿಂದ ಅವರ ಪ್ರೀತಿ ನವೀಕರಣಗೊಳ್ಳುತ್ತದೆ. ಏಕೆಂದರೆ ಒಂದು ಬದ್ಧತೆಯಿರುವ ಸಂಬಂಧದಲ್ಲಿ ಪ್ರೀತಿ ಕಡೆಯ ಸ್ಥಾನವನ್ನು ಪಡೆದುಬಿಡುತ್ತದೆ ಒಮ್ಮೊಮ್ಮೆ. ಹುಡುಗಿ ಜೊತೆ ಮೊದಲ ಡೇಟಿಂಗ್ - ನರ್ವಸ್ ಆಗಬೇಡಿ!

ಅದಕ್ಕಾಗಿ ದಂಪತಿಗಳು ಯೋಜನೆ ಮಾಡಿಕೊಂಡು ತಮ್ಮ ವಾರ್ಷಿಕೋತ್ಸವ, ಹುಟ್ಟು ಹಬ್ಬ, ಪ್ರೇಮಿಗಳ ದಿನಾಚರಣೆ ಮುಂತಾದ ಸಂದರ್ಭದಲ್ಲಿ ಮನೆಯಿಂದ ದೂರ ಹೋಗಿ, ತಾವು ತಾವಾಗಿ ವರ್ತಿಸುವ ಮತ್ತು ಆನಂದಿಸುವ ಕ್ಷಣಗಳನ್ನು ಕಳೆಯಬೇಕು. ಉಡುಗೆ-ತೊಡುಗೆ, ಬಟ್ಟೆ-ಬರೆ, ಊಟ-ತಿಂಡಿ, ಮೋಜು-ಮಸ್ತಿ ಎಲ್ಲವನ್ನೂ ಸಂಕೋಚ ಎಂಬ ಪದ ಸೋಕದಂತೆ ಆನಂದಿಸಬೇಕು. ಆಗ ನೋಡಿ ಡೇಟಿಂಗ್‌ನ ಮಜಾ ಹೇಗಿರುತ್ತದೆ ಎಂದು. ಹೀಗೆ ಯೋಜಿತ ಡೇಟಿಂಗ್ ಇಬ್ಬರ ಸಹಮತದ ಮೇಲೆ, ಇಬ್ಬರ ನಡುವಿನ ಗೌರವ ಮತ್ತು ಪ್ರೀತಿಯ ಮೇಲೆ ತುಂಬಾ ಚೆನ್ನಾಗಿ ನಡೆಯುತ್ತದೆ ಮತ್ತು ಬಹುಕಾಲ ನೆನಪಿನಲ್ಲುಳಿಯುತ್ತದೆ.ದಂಪತಿಗಳು ಡೇಟಿಂಗ್ ಹೋದಾಗ, ಮನೆಯ ಸಮಸ್ತ ಜವಾಬ್ದಾರಿ ಮತ್ತು ತಲೆನೋವನ್ನು ಮರೆತು ಡೇಟಿಂಗ್ ಆನಂದಿಸಬೇಕು. ಯಾವುದೇ ಕಾರಣಕ್ಕು ಮಕ್ಕಳು, ಬಿಲ್, ಹಣ, ಸಾಲ ಇತ್ಯಾದಿ ಬಗ್ಗೆ ಚಿಂತಿಸಬಾರದು. ಈ ರೋಮಾಂಚಕಾರಿ ಡೇಟಿಂಗ್ ಹೇಗೆ ಯಶಸ್ವಿಯಾಗಬಲ್ಲದು? ಅದರಲ್ಲೂ ಕೆಲಸದ ಒತ್ತಡ ಇದ್ದಾಗ? ಇಂತಹ ಮಹಿಳೆಯರ ಜೊತೆ ಡೇಟಿಂಗ್ ಮಾಡದಿರುವುದೇ ಬೆಸ್ಟ್ ಕಣ್ರೀ!

ಆಗುತ್ತದೆ, ನೀವು ಅಂದುಕೊಂಡರೆ! ಹೌದು ಡೇಟಿಂಗ್ ಮಾಡಲು ದೂರ ದೇಶದ ಪ್ರವಾಸ ಮಾಡಬೇಕೆಂದೆನಿಲ್ಲ. ಬೆಂಗಳೂರಿನಲ್ಲಿರುವವರು ಮೈಸೂರಿಗೆ ಹೋಗಿ ಸಹ ಡೇಟಿಂಗ್ ಮಾಡಬಹುದು. ಅನುಕೂಲಕರ ಸ್ಥಳ, ಮನಸ್ಸಿಗೆ ಹಿತನೀಡುವ ಪರಿಸರ ಮತ್ತು ಒಂದಷ್ಟು ಸಮಯವನ್ನು ಪಡೆದುಕೊಂಡು ನಿಮ್ಮ ಮತ್ತು ನಿಮ್ಮ ಪ್ರೀತಿಯನ್ನು ಆನಂದಿಸಿ. ಎಲ್ಲಾ ಜಂಜಾಟಗಳನ್ನು ಇಲ್ಲಿಯೇ ಬಿಟ್ಟು ಹೋಗಿ, ಪ್ರೇಮಲೋಕದಲ್ಲಿ ಸುತ್ತಿ ಬನ್ನಿ. ಆಗ ನೋಡಿ ನಿಮ್ಮ ಸಂಗಾತಿ ನಿಮಗೆ ಮತ್ತೆ ಹೊಸದಾಗಿ ಕಾಣಿಸಿಕೊಳ್ಳುತ್ತಾರೆ, ನಿಮ್ಮ ಪ್ರೀತಿ ಶಾಶ್ವತವಾಗುತ್ತದೆ.

English summary

Ways to find out whether it is a date or just coffee

Is this a date or are you just meeting as friends? Short of asking the person how can you figure out whether you are on a date or not? Some people claim they don’t understand the whole dating business and ‘just’ meet people. But is there something special about meeting people and calling it a date? The simple answer is yes.
Story first published: Wednesday, February 3, 2016, 15:52 [IST]
X
Desktop Bottom Promotion