Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹುಡುಗ ಇಷ್ಟವಾದರೂ, ಆಕೆಯ ಡಿಮ್ಯಾಂಡ್ ಇನ್ನೂ ಇರುತ್ತೇ..!
ಹಿಂದಿನ ಕಾಲದಲ್ಲಿ ಕೆಲವೊಂದು ಸಂಪ್ರದಾಯಗಳು ತುಂಬಾ ವಿಚಿತ್ರವಾಗಿರುತ್ತಿದ್ದವು. ಅವುಗಳಲ್ಲಿ ಹೆಚ್ಚಿನವು ಈಗಾಗಲೇ ಕಾಲಘಟ್ಟದಲ್ಲಿ ಉರುಳಿಹೋಗಿವೆ. ಹಿಂದೆ ಮದುವೆಯಾಗುವ ಹೆಣ್ಣು ಹಾಗೂ ಗಂಡು ಪರಸ್ಪರ ಮುಖವನ್ನು ನೋಡುವಂತಿರಲಿಲ್ಲ. ಮದುವೆಯಾಗುವ ದಿನದಂದೇ ಅವರಿಬ್ಬರು ಮುಖ ನೋಡಲು ಸಾಧ್ಯವಾಗುತ್ತಿತ್ತು.

ಆದರೆ ಈಗ ಹಿಂದಿನ ಸಂಪ್ರದಾಯಗಳು ಕಂಡುಬರುವುದಿಲ್ಲ. ಮದುವೆಗೆ ಮೊದಲು ಅಥವಾ ಪ್ರೀತಿ ಹುಟ್ಟುವಾಗ ಮೊದಲ ಸಲ ಹುಡುಗನನ್ನು ನೋಡುವ ಹುಡುಗಿಯು ಯಾವ ರೀತಿಯಿಂದ ಯೋಚಿಸುತ್ತಾಳೆ ಎನ್ನುವ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹುಡುಗಿಯು ತಾನು ಇಷ್ಟಪಡುವ ಹುಡುಗನನ್ನು ನೋಡುವಾಗ ಏನೆಲ್ಲಾ ಯೋಚಿಸುತ್ತಾಳೆ ಎನ್ನುವುದನ್ನು ಮುಂದೆ ಓದುತ್ತಾ ತಿಳಿಯಿರಿ. ಹುಡುಗರೇ ಹುಷಾರ್, ಹುಡುಗಿಯರ ಡಿಮ್ಯಾಂಡ್‌ಗೆ ಸಿದ್ಧರಾಗಿರಿ!
ಆತ ನಿಜವಾಗಿಯೂ ಸುಂದರವಾಗಿದ್ದಾನೆಯಾ?
ಆತ ನೋಡಲು ಸುಂದರವಾಗಿಯೇ ಇದ್ದಾನೆ. ಆದರೆ ಆತನಲ್ಲಿ ಹೆಣ್ಣನ್ನು ತೃಪ್ತಿಗೊಳಿಸುವಂತಹ ಎಲ್ಲಾ ಗುಣಗಳು ಇವೆಯಾ? ಕೇವಲ ಹೊರಗಿನ ಸೌಂದರ್ಯದಿಂದ ಇದನ್ನು ಅಳೆಯುವುದು ತುಂಬಾ ಕಷ್ಟ. ಹುಡುಗಿಯು ಮುಂದಿನ ಹೆಜ್ಜೆ ಇಡುವ ಮೊದಲು ಇದನ್ನು ತಿಳಿಯಲು ಪ್ರಯತ್ನಿಸುತ್ತಾಳೆ. ಆದರೆ ಮೊದಲ ಸಲ ಆತನ ಸೌಂದರ್ಯಕ್ಕೆ ಆಕರ್ಷಿತಳಾಗಿರುವುದು ನಿಜ.
ದುಂದುವೆಚ್ಚಗಾರನಾ?
ದುಬಾರಿ ವಸ್ತುಗಳ ಖರೀದಿಯ ಅಭ್ಯಾಸವು ಹೆಚ್ಚಿನವರಿಗೆ ಇರುತ್ತದೆ. ಆದರೆ ಇದು ನಿಷ್ಠೆಗಿಂತ ಮಿಗಿಲಲ್ಲ. ಹುಡುಗ ಎಷ್ಟೇ ದುಬಾರಿ ವಸ್ತುಗಳನ್ನು ಖರೀದಿಸಲು ಹಣ ಖರ್ಚು ಮಾಡುತ್ತಿರಲಿ. ಆದರೆ ಹುಡುಗಿಗೆ ತನ್ನ ಹುಡುಗ ತುಂಬಾ ನಿಷ್ಠೆಯಿಂದ ಇರಬೇಕು ಮತ್ತು ದುಂದುವೆಚ್ಚ ಮಾಡಬಾರದು ಎಂದಿರುತ್ತದೆ.
ದೈಹಿಕವಾಗಿ ಬಲಿಷ್ಠ
ಹೆಚ್ಚಿನ ಹುಡುಗಿಯರ ಹುಡುಗ ದೈಹಿಕವಾಗ ತುಂಬಾ ಬಲಿಷ್ಠವಾಗಿರಬೇಕು ಎಂದು ಬಯಸುತ್ತಾರೆ. ಆತನ ದೈಹಿಕ ತುಂಬಾ ಫಿಟ್ ಇರುವುದು ಹುಡುಗಿಯರಿಗೆ ಇಷ್ಟ. ಫಿಟ್ ನೆಸ್ ಬಗ್ಗೆ ಹುಡುಗರಿಗೆ ತಿಳಿದಿದ್ದರೆ ತುಂಬಾ ಒಳ್ಳೆಯದು.
ಆತ ಸ್ವಾರ್ಥಿಯೇ?
ಹುಡುಗನು ಯಾವಾಗಲೂ ತನ್ನ ಸ್ವಾರ್ಥವನ್ನು ಮಾತ್ರ ನೋಡುತ್ತಲಿದ್ದರೆ ಆಗ ಮುಂದೆ ಕೂಡ ಆತ ತನ್ನ ಜೀವನದ ಬಗ್ಗೆ ಮಾತ್ರ ಗಮನಿಸುತ್ತಾನೆ. ಯಾವುದೇ ಹುಡುಗಿ ಕೂಡ ಇದನ್ನು ಬಯಸುವುದಿಲ್ಲ ಮತ್ತು ಈ ರೀತಿಯ ಹುಡುಗನ ಬಗ್ಗೆ ಆಕೆ ಚಿಂತಿಸಲು ಸಾಧ್ಯವೇ ಇಲ್ಲ.



Click it and Unblock the Notifications




