Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಹುಡುಗರೇ ಹುಷಾರ್, ಹುಡುಗಿಯರ ಡಿಮ್ಯಾಂಡ್‌ಗೆ ಸಿದ್ಧರಾಗಿರಿ!
ಪ್ರತಿಯೊಬ್ಬ ಗಂಡು ಮತ್ತು ಹೆಣ್ಣು ತಮ್ಮ ಬಾಳ ಸಂಗಾತಿಯ ಆಯ್ಕೆಗಾಗಿ ತಮ್ಮದೆ ಆದ ಕನಸುಗಳನ್ನು ಹೊಂದಿರುತ್ತಾರೆ. ಹೆಂಗಸರ ಪ್ರಕಾರ ಮದುವೆ ಎನ್ನುವುದು ಏಳೇಳು ಜನ್ಮದ ಅನುಬಂಧ. ಅದಕ್ಕಾಗಿ ಅವರು ತಮಗೆ ಅನುರೂಪವಾದಂತಹ ವರನಿಗಾಗಿ ಹುಡುಕಾಡುತ್ತಾರೆ. ಅವರ ಪಟ್ಟಿಯಲ್ಲಿ ನಿರ್ದಿಷ್ಟ ಮತ್ತು ಅನನ್ಯವಾದ ಗುಣಗಳು ಸ್ಥಾನ ಪಡೆದಿರುತ್ತವೆ. ತಮಗೆ ಎದುರಾಗುವ ಪ್ರತಿಯೊಬ್ಬ ಗಂಡಸರಲ್ಲಿ ಈ ಗುಣಗಳನ್ನು ಆಕೆ ಹುಡುಕುತ್ತಲೆ ಇರುತ್ತಾಳೆ.
ಭಾರತದಲ್ಲಿ ಕುಟುಂಬಗಳ ಅನುಬಂಧವು ತುಂಬಾ ಸದೃಢವಾಗಿರುತ್ತವೆ. ಮಹಿಳೆಯರು ಹುಡುಕುವ ಗುಣಗಳು ಈ ಕುಟುಂಬದ ಬುನಾದಿಯನ್ನು ನಿರ್ಮಿಸಲು ಸಹಾಯಕವಾಗಿರುತ್ತವೆ ಎಂಬುದು ಗಮನಾರ್ಹ.
ಮಹಿಳೆಯರು ಮತ್ತು ಅವರ ಆಲೋಚನಾ ಕ್ರಮಗಳು ತುಂಬಾ ಸಂಕೀರ್ಣವಾಗಿರುತ್ತವೆ. ಬಹುತೇಕ ಹೆಂಗಸರ ಇಷ್ಟಾನಿಷ್ಟಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ, ಗಂಡಸರು ಗೊಂದಲಕ್ಕೆ ಒಳಗಾಗುತ್ತಾರೆ. ಇಲ್ಲಿ ನಾವು ಮಹಿಳೆಯರು ತಾವು ಮದುವೆಯಾಗುವ ಗಂಡಸಲ್ಲಿ ಬಯಸುವ ಗುಣಗಳನ್ನು ಪಟ್ಟಿ ಮಾಡಿದ್ದೇವೆ, ಬನ್ನಿ ಅವುಗಳ ಕುರಿತು ಒಂದು ನೋಟ ಹರಿಸೋಣ. ಸ್ತ್ರೀಯರಲ್ಲಿ ಮಾತ್ರ ಕಂಡು ಬರುವ ಸ್ವಭಾವಗಳಿವು!

ಆತ್ಮವಿಶ್ವಾಸ
ಹೆಣ್ಣು ಒಬ್ಬ ಗಂಡಸಲ್ಲಿ ಮೊದಲು ನೋಡುವುದು ಆತ್ಮ ವಿಶ್ವಾಸವನ್ನು. ಆತ್ಮವಿಶ್ವಾಸ ಹೊಂದಿರುವ ಗಂಡಸಿನ ಜೊತೆಗೆ ಜೀವನ ಸುಖಕರ ಮತ್ತು ಸುರಕ್ಷಿತ ಎಂಬ ಭಾವನೆ ಆಕೆಗೆ ಇರುತ್ತದೆ.
ರೊಮ್ಯಾನ್ಸ್
ಹೆಣ್ಣು ಮಕ್ಕಳು ಹೇಳಿ ಕೇಳಿ ಬಾಲಿವುಡ್‌ನಿಂದ ಹಿಡಿದು ಎಲ್ಲಾ----ವುಡ್‍ವರೆಗೆ ಇರುವ ಎಲ್ಲಾ ಪ್ರೇಮ ಕಥೆಗಳನ್ನು ನೋಡಿ, ತಮ್ಮದೆ ಆದ ಲವ್ ಸ್ಟೋರಿಯನ್ನು ಕಲ್ಪಿಸಿಕೊಂಡಿರುತ್ತಾರೆ. ಸರಿಯಾಗಿ ಪ್ರೀತಿ ಮಾಡಲು ಬರುವ ಗಂಡಸರನ್ನು ಇವರು ಇಷ್ಟಪಡುತ್ತಾರೆ. ಪ್ರೀತಿ ಮಾಡುವ ಕಲೆಯು ಸಂಬಂಧದಲ್ಲಿ ಲವಲವಿಕೆಯನ್ನು ಇರಿಸುತ್ತದೆ.
ಬೆಂಬಲ
ಜೀವನದ ಹಲವು ಹಂತದಲ್ಲಿ ನಮಗೆ ಬೆಂಬಲವಾಗಿ ನಿಲ್ಲುವ ಒಬ್ಬ ವ್ಯಕ್ತಿ ಬೇಕು. ಇಂತಹ ಗುಣವು ಜೀವನದಲ್ಲಿ ಹಲವಾರು ಬಾರಿ ಸಹಾಯಕ್ಕೆ ಬರುತ್ತದೆ. ಅಂತಹ ವ್ಯಕ್ತಿಗಾಗಿ ಇವರು ಹುಡುಕುತ್ತಾರೆ.
ಸಂವಹನ
ಒಳ್ಳೆಯ ಸಂವಹನವು ಸಂಬಂಧದ ಪ್ರಮುಖ ಅಂಶವಾಗಿರುತ್ತದೆ. ಇಂತಹ ಸಂವಹನವನ್ನು ಹೊಂದಿರುವ ಒಬ್ಬ ಗಂಡಸು ಎಂತಹ ಹೆಂಗಸರನ್ನು ಸಹ ಮರುಳು ಮಾಡಬಲ್ಲ. ಅಂತಹವನನ್ನು ಮೆಚ್ಚದೆ ಯಾರು ತಾನೇ ಇರುತ್ತಾರೆ.
ಗೌರವ
ಭಾರತೀಯರು ಗೌರವಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. "ಗೌರವ ಕೊಡು ಮತ್ತು ತೆಗೆದುಕೊ" ಎಂಬ ನೀತಿ ನಮ್ಮದು. ಹುಡುಗಿಯರು ತಮ್ಮ ಪ್ರೀತಿಯ ಹುಡುಗನಲ್ಲಿ ಬಯಸುವ ಗುಣಗಳಲ್ಲಿ ಗೌರವಕ್ಕು ಒಂದು ಸ್ಥಾನಮಾನ ನೀಡಿರುತ್ತಾರೆ.
ಬುದ್ಧಿವಂತಿಕೆ
ಭಾರತೀಯ ಹೆಣ್ಣು ಮಕ್ಕಳು ಬಯಸುವ ಮತ್ತೊಂದು ಗುಣವೆಂದರೆ ಅದು ಬುದ್ಧಿವಂತಿಕೆ. ಬುದ್ಧಿವಂತ ಎಂದರೆ ರ‍್ಯಾಂಕ್ ಪಡೆದಿರುವವನೆ ಆಗಿರಬೇಕು ಎಂದಲ್ಲ. ಜೀವನದ ಸಂಕಷ್ಟಗಳನ್ನು ಸರಿಯಾಗಿ ಬುದ್ಧಿವಂತಿಕೆಯಿಂದ ನಿಭಾಯಿಸುವ ಜಾಣ್ಮೆ ಇರುವವನು ಇವರ ಮನಸ್ಸನ್ನು ಗೆಲ್ಲುತ್ತಾನೆ.
ಪ್ರಾಮಾಣಿಕತೆ
ಭಾರತೀಯ ಹೆಣ್ಣನ್ನು ಮೆಚ್ಚಿಸಲು ಪ್ರಾಮಾಣಿಕತೆಗಿಂತ ಮತ್ತೊಂದು ವಿಷಯ ಅಗತ್ಯವಿಲ್ಲ. ನಿಮ್ಮ ಪ್ರಾಮಾಣಿಕತೆಗೆ ಆಕೆ ನೂರಕ್ಕೆ ನೂರು ಅಂಕಗಳನ್ನು ನೀಡುತ್ತಾಳೆ. ಆದರೆ ಅದನ್ನು ನೀವು ಆಕೆಗೆ ಮನವರಿಕೆ ಮಾಡಿಕೊಡಬೇಕು ಅಷ್ಟೇ.
ಹಾಸ್ಯ ಪ್ರಜ್ಞೆ
ಹಾಸ್ಯ ಪ್ರಜ್ಞೆ ಇಲ್ಲದಿದ್ದಲ್ಲಿ ನಿಮ್ಮ ಜೀವನ ಮಂಕಾಗಿ ಬಿಡುತ್ತದೆ. ನೀವು ಗಂಭೀರವಾಗಿ ಇದ್ದಲ್ಲಿ, ಸಣ್ಣ ಸಣ್ಣ ವಿಚಾರಗಳು ಸಹ ಗಂಭೀರವಾದ ವಿಷಯಗಳಾಗಿ ಪರಿವರ್ತನೆಯಾಗಿ ಬಿಡುತ್ತವೆ. ಆದ್ದರಿಂದ ಹೆಂಗಸರನ್ನು ಮೆಚ್ಚಿಸಲು ಸ್ವಲ್ಪ ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.



Click it and Unblock the Notifications

