ನಿನ್ನನ್ನು ಮದುವೆಯಾಗಿದ್ದೇ ನಾನು ಮಾಡಿದ ದೊಡ್ಡ ತಪ್ಪು!

Posted By: manu
Subscribe to Boldsky

ಯಾವುದೇ ಸಂಬಂಧದಲ್ಲಿ ಕೆಲಸಮಯದ ಬಳಿಕ ಕೆಲವಾದರೂ ಭಿನ್ನಾಭಿಪ್ರಾಯ ಬಂದೇ ಬರುತ್ತದೆ. ಅನ್ಯೋನ್ಯತೆ ಈ ಭಿನ್ನಾಭಿಪ್ರಾಯವನ್ನು ಮೀರಿ ಸಂಬಂಧ ಕದಡದಂತೆ ನೋಡಿಕೊಳ್ಳುತ್ತದೆ. ಕಡಿಮೆಯಾಗುತ್ತಿರುವ ಸಮಾಗಮ ಇದಕ್ಕೆ ಸ್ಪಷ್ಟ ಸೂಚನೆಯಾಗಿದೆ. ಹತ್ತಿರವಿದ್ದೂ ಮನಸ್ಸಿಗೆ ಹತ್ತಿರರಾಗದೇ ಅತ್ಮೀಯ ಸ್ಪರ್ಶವೂ ಸಿಗದೇ ಹೋಗುತ್ತದೆ. ಇದರಿಂದ ಇಬ್ಬರಿಗೂ ಪರಸ್ಪರರಿಂದ ದೂರಾಗುತ್ತಿರುವ ನೋವು ಕಾಡತೊಡಗುತ್ತದೆ.  ಗಂಡ ಹೆಂಡತಿಯ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

ಒಂದು ವೇಳೆ ಅನ್ಯೋನ್ಯತೆ ಪಕ್ವವಾಗಿದ್ದರೆ ಈ ತೊಂದರೆ ಮರುದಿನಕ್ಕೆ ಬೆಳೆಯದಂತೆ ಇಬ್ಬರೂ ಒಬ್ಬರಿಗೊಬ್ಬರು ಸಂತೈಸಿಕೊಳ್ಳುವ ಮೂಲಕ ನೋಡಿಕೊಳ್ಳುತ್ತಾರೆ. ಆದರೆ ಅನ್ಯೋನ್ಯತೆಗೂ ಮೀರಿದ ಇತರ ಆಕರ್ಷಣೆ ಅಥವಾ ಕಾರಣಗಳು ಈ ಬಿರುಕನ್ನು ಇನ್ನಷ್ಟು ಹೆಚ್ಚಿಸುತ್ತಾ ಹೋಗುತ್ತವೆ.   ಹೆಂಡತಿ ಹೀಗೆಲ್ಲಾ ವರ್ತಿಸಿದರೆ, ಗಂಡನಿಗೆ ಇಷ್ಟವಾಗುವುದಿಲ್ಲವಂತೆ!

ತಕ್ಷಣವೇ ಈ ಬಿರುಕನ್ನು ಸರಿಪಡಿಸದಿದ್ದರೆ ಸಂಬಂಧದ ಅಣೆಕಟ್ಟು ಮತ್ತೆ ಕಟ್ಟಲಾಗದಂತೆ ಕುಸಿಯಬಹುದು. ಹೀಗಾಗಬಾರದು ಎಂದರೆ ಈ ಬಿರುಕನ್ನು ಸೂಚಿಸುವ ಸಂಜ್ಞೆಗಳನ್ನು ಗಮನಿಸಿ ತಕ್ಷಣ ಸರಿಪಡಿಸುವ ಮೂಲಕ ಸಂಬಂಧವನ್ನು ಮತ್ತೆ ಹಸಿರಾಗಿಸಬಹುದು....

ಮೂರನೆಯ ವ್ಯಕ್ತಿಯ ವ್ಯಾಮೋಹ ಶುರುವಾಗಿ ಬಿಟ್ಟರೆ!

ಮೂರನೆಯ ವ್ಯಕ್ತಿಯ ವ್ಯಾಮೋಹ ಶುರುವಾಗಿ ಬಿಟ್ಟರೆ!

ಒಮ್ಮೆ ಸಂಬಂಧಕ್ಕೆ ಒಳಗಾದ ಬಳಿಕ ನಿಮ್ಮ ಸಂಗಾತಿಯನ್ನು ಕಾಯಾ ವಾಚಾ ಮನಸಾ ಒಪ್ಪಿಕೊಳ್ಳುವುದೇ ಅನ್ಯೋನ್ಯತೆಗೆ ಮೂಲ. ಯಾವಾಗ ನಿಮಗೆ ಮೂರನೆಯ ವ್ಯಕ್ತಿಯ ಯಾವುದೋ ಒಂದು ವಿಷಯ ಆಕರ್ಷಕವಾಗಿ ಕಂಡುಬಂದು ನಿಮ್ಮ ಸಂಗಾತಿಯೊಡನೆ ಹೋಲಿಸತೊಡಗಿದಾಗ ಚಿಕ್ಕ ಬಿರುಕು ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಮೂರನೆಯ ವ್ಯಕ್ತಿಯ ಕಣ್ಣು ಕುಕ್ಕುವ ಸೌಂದರ್ಯ.

ಮಾತಿಗೆ ಮಾತು ಬೆಳೆದರೆ...!

ಮಾತಿಗೆ ಮಾತು ಬೆಳೆದರೆ...!

ಗಂಡಹೆಂಡಿರ ನಡುವೆ ಚಿಕ್ಕ ಪುಟ್ಟ ಜಗಳ ಇದ್ದರೆ ಅದು ಊಟಕ್ಕೆ ಉಪ್ಪಿನಕಾಯಿಯಂತೆ ಇರಬೇಕು. ಆಗಲೇ ಅನ್ಯೋನ್ಯತೆ ಹೆಚ್ಚಾಗುತ್ತದೆ. ಆದರೆ ಒಂದು ವೇಳೆ ಈ ಕೋಳಿಜಗಳ ಕಡಿಮೆಯಾಗದೇ ಕಲಹದತ್ತ ಸಾಗತೊಡಗಿದರೆ ಇದು ಮುಂದೆ ನಿಮ್ಮ ಸಂಬಂಧ ಹದಗೆಡುವುದನ್ನು ಸೂಚಿಸುವ ಸಂಜ್ಞೆಯಾಗಿದೆ.

ನಿನ್ನನ್ನು ಮದುವೆಯಾಗಿದ್ದೇ ತಪ್ಪು!

ನಿನ್ನನ್ನು ಮದುವೆಯಾಗಿದ್ದೇ ತಪ್ಪು!

ಒಂದು ವೇಳೆ ನಿಮ್ಮ ಕೋಳಿಜಗಳದಲ್ಲಿ 'ನಿನ್ನನ್ನು ಮದುವೆಯಾಗಿದ್ದೇ ತಪ್ಪು' ಎಂಬ ಮಾತುಗಳು ಪದೇ ಪದೇ ನುಸುಳುತ್ತಿದ್ದರೆ ಈ ಸಂಬಂಧ ಅಲ್ಲಾಡುತ್ತಿರುವ ಸ್ಪಷ್ಟ ಸೂಚನೆಯಾಗಿದೆ. ಈ ಸ್ಥಿತಿಗೆ ಇಬ್ಬರಲ್ಲೊಬ್ಬರಿಗೆ ಮೂರನೆಯ ವ್ಯಕ್ತಿ ಸಿಕ್ಕಿರುವುದು ಪ್ರಬಲ ಕಾರಣವಾಗಿದೆ.

ಕಳೆದುಕೊಳ್ಳುವ ಆಕರ್ಷಣೆ

ಕಳೆದುಕೊಳ್ಳುವ ಆಕರ್ಷಣೆ

ಭಗ್ನಗೊಂಡ ಸಂಸಾರಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿದ ತಜ್ಞರಿಗೆ ಸಂಬಂಧ ಹದಗೆಡಲು ತಮ್ಮ ಸಂಗಾತಿಗಳಲ್ಲಿ ಆಕರ್ಷಣೆ ಕಳೆದುಕೊಳ್ಳುವುದು ಪ್ರಮುಖ ಕಾರಣವೆಂದು ಕಂಡುಬಂದಿದೆ. ವಿವಾಹಕ್ಕೂ ಮುನ್ನ ಸಂಗಾತಿಯ ಯಾವ ಗುಣಗಳನ್ನು ಇಷ್ಟಪಟ್ಟಿದ್ದರೋ, ಕ್ರಮೇಣ ಇವುಗಳೇ ಅವಗುಣಗಳಾಗಿ ಕಂಡುಬರುತ್ತವೆ ಅಥವಾ ವಿವಾಹಕ್ಕೂ ಮುನ್ನ ಗೊತ್ತಿರದಿದ್ದ ಅವಗುಣಗಳು ಕ್ರಮೇಣ ಗೊತ್ತಾಗಿ ಇವು ಸಂಗಾತಿಯನ್ನು ಇಷ್ಟಪಡದಿರಲು ಕಾರಣವಾಗುತ್ತವೆ.

ಸಂಬಂಧ ಕೊನೆಗೊಳಿಸುವ ಮಾತುಗಳು

ಸಂಬಂಧ ಕೊನೆಗೊಳಿಸುವ ಮಾತುಗಳು

ಮನೆಯಲ್ಲಿ ಸಿಗದ ಹಾಲು ಮಾರುಕಟ್ಟೆಯಲ್ಲಿ ಸಿಕ್ಕರೆ ಅಲ್ಲಿಗೇ ಹೋಗುವ ಪ್ರವೃತ್ತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂತೆಯೇ ತಮ್ಮ ಸಂಗಾತಿಯಿಂದ ಪಡೆಯದ ಯಾವುದೋ ಆಕರ್ಷಣೆಯನ್ನು ಇತರ ವ್ಯಕ್ತಿಗಳಿಂದ ಪಡೆದಾಗ ಕ್ರಮೇಣ ಆ ಆಕರ್ಷಣೆಯನ್ನು ಕಳೆದುಕೊಳ್ಳಲಿಚ್ಛಿಸದವರು.

ಸಂಬಂಧ ಕೊನೆಗೊಳಿಸುವ ಮಾತುಗಳು

ಸಂಬಂಧ ಕೊನೆಗೊಳಿಸುವ ಮಾತುಗಳು

ಅಲ್ಲದೆ ಹಿಂದಿನ ಸಂಬಂಧವನ್ನು ಕೊನೆಗೊಳಿಸಿ ಹೊಸ ಸಂಬಂಧ ಪ್ರಾರಂಭಿಸಲು ಯೋಚಿಸುತ್ತಾರೆ. ಈ ಯೋಚನೆಗಳು ಆಗಾಗ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಇದು ಸಹಾ ಸಂಬಂಧ ಕೊನೆಗೊಳ್ಳುವ ಸೂಚನೆಯಾಗಿದೆ.

 
English summary

Signs You Are Starving In Your Relationship

After some time, any relationship suffers certain issues. Out of them, lack of frequent lovemaking sessions could also be one. When the physical intimacy reduces, one starts feeling deprived. As physical touch is also an important necessity, one may start feeling starved. When starvation starts, the relationship may start experiencing ups and downs. Now, let us discuss about signs of starvation.