Latest Updates
-
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ
ಹೆಂಡತಿ ಹೀಗೆಲ್ಲಾ ವರ್ತಿಸಿದರೆ, ಗಂಡನಿಗೆ ಇಷ್ಟವಾಗುವುದಿಲ್ಲವಂತೆ!
ಹೊಸ ಸಂಬಂಧ ಬೆಳೆಸಲು ಉತ್ಸುಕರಾಗಿರುವ ಪುರುಷರು ತಮ್ಮ ಜೀವನಸಂಗಾತಿ ಎಲ್ಲಾ ರೀತಿಯಲ್ಲಿಯೂ ಅಪ್ಪಟ ಮತ್ತು ತಮಗೆ ಇಷ್ಟವಾದ ರೀತಿಯಲ್ಲಿರಬೇಕು ಎಂದು ಬಯಸುತ್ತಾರೆ. ಹೆಚ್ಚಿನವರು ಮೊತ್ತ ಮೊದಲಾಗಿ ನೋಡುವುದು ಸೌಂದರ್ಯ ಮತ್ತು ಮೈಮಾಟ.
ಆದರೆ ನಿಜವಾದ ಪ್ರೀತಿ ಬಾಹ್ಯ ಸೌಂದರ್ಯಕ್ಕಿಂತಲೂ ಎಷ್ಟೋ ಹೆಚ್ಚು ವಿಶಾಲ ಮತ್ತು ಅಂತರ್ಯವೇ ಹೆಚ್ಚು ಬೆಲೆಬಾಳುವುದೆಂದು ಕೊಂಚ ಸಮಯದಲ್ಲಿಯೇ ತಿಳಿದುಬರುತ್ತದೆ. ಅಂತೆಯೇ ಮಹಿಳೆಯರೂ ತಮ್ಮ ಪುರುಷನಲ್ಲಿ ಅಪಾರವಾದ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಆದರೆ ವಿವಾಹದ ಬಳಿಕ ದೂರದಿಂದ ಕಂಡ ಬೆಟ್ಟದಷ್ಟು ನುಣ್ಣಗಿಲ್ಲದ ಇವರ ಡೊಂಕುಬಾಲ ನಿಧಾನವಾಗಿ ಕಾಣತೊಡಗುತ್ತದೆ.

ಆದ್ದರಿಂದ ಒಂದು ಸಂಬಂಧಕ್ಕೆ ಒಳಪಡುವ ಮುನ್ನ ಇಬ್ಬರೂ ತಮ್ಮ ಸಂಗಾತಿಯಾಗುವವರ ಗುಣಗಳನ್ನು ಕೊಂಚ ಅರಿತಿರುವುದು ಉತ್ತಮ. ಇವರಲ್ಲಿರುವ ಉತ್ತಮ ಗುಣಗಳನ್ನು ಒಪ್ಪಿಕೊಂಡು ಇಲ್ಲದ ಗುಣಗಳನ್ನು ಬಯಸದೇ ಹೊಂದಿಕೊಂಡು ಹೋದರೆ ಜೀವನಪರ್ಯಂತ ಸುಖವಾದ ಬಾಳು ಸಾಗಿಸಬಹುದು. ಅಪ್ಪಿ ತಪ್ಪಿಯೂ ಹೆಂಡತಿ ಬಳಿ ಆಡಬಾರದ ಮಾತುಗಳಿವು!
ವಿವಾಹದ ಬಳಿಕ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚು ಬದಲಾಗಬೇಕಾಗುತ್ತದೆ. ಅಂದರೆ ತಮ್ಮ ಪತಿ, ಪತಿಯ ಮನೆಯ ಪರಿಸ್ಥಿತಿ, ಮುಂದೆ ಹುಟ್ಟಲಿರುವ ಮಕ್ಕಳು ಮೊದಲಾಗಿ ಎಲ್ಲಾ ಪರಿಸ್ಥಿತಿಗಳಿಗೆ ತಕ್ಕಂತೆ ಬದಲಿಸಿಕೊಂಡು ಹೋಗುವುದರಿಂದ ಬಾಳು ಸುಖಮಯವಾಗುತ್ತದೆ. ಆದರೆ ಹೆಚ್ಚಿನ ಯುವತಿಯರಿಗೆ ತಮ್ಮ ಪತಿಗೆ ತಮ್ಮ ಯಾವ ಗುಣ ಇಷ್ಟವಿಲ್ಲ ಎಂದೇ ಅರಿವಿರುವುದಿಲ್ಲ. ಇದನ್ನು ಅರಿತರೆ ಇದಕ್ಕೆ ತಕ್ಕನಾಗಿ ವ್ಯವಹರಿಸಿ ಪತಿಯ ಮನಸ್ಸನ್ನು ಗೆದ್ದು ಬಾಳನ್ನು ಸುಖವಾಗಿ ಕಳೆಯಬಹುದು, ಮುಂದೆ ಓದಿ....
ಶಾಪಿಂಗ್
ಈ ಜಗತ್ತಿನಲ್ಲಿ ಅತ್ಯಂತ ಬೇಸರ ತರಿಸುವ ಉದ್ಯೋಗಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಸೀರೆ ತೋರಿಸುವ ಸೇಲ್ಸ್ ಮ್ಯಾನ್ ಕೆಲಸ. ಏಕೆಂದರೆ ಹೆಚ್ಚಾಗಿ ಮಹಿಳೆಯರಿಗೆ ಸೀರೆಯ ವಿಷಯ ಬಂದಾಗ ಅವರಿಗೆ ತಕ್ಕ ವಿನ್ಯಾಸವೇ ಸಿಗುವುದಿಲ್ಲ. ಎಲ್ಲಾ ಸರಿಯಾಗಿರುವ ಸೀರೆ ಸಿಕ್ಕರೂ 'ಇದೇ ಡಿಸೈನ್‌ನ ಬೇರೆ ಕಲರ್ ತೋರಿಸಿ, ಅಥವಾ ಇದೇ ಕಲರ್ ನ ಬೇರೆ ಡಿಸೈನ್ ತೋರಿಸಿ' ಎಂದೇ ದುಂಬಾಲು ಬೀಳುತ್ತಾರೆ. ಇದು ಸೇಲ್ಸ್ ಮ್ಯಾನ್ ಗಳಿಗೆ ನಿತ್ಯದ ಕಾಯಕವಾದುದರಿಂದ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
ಆದರೆ ಈ ಮಹಿಳೆಯರ ಪತಿ ಮಾತ್ರ ಈ ದುಂಬಾಲುಬೀಳುವುದನ್ನು ಸರ್ವಥಾ ಸಹಿಸಲಾರ. ಒಟ್ಟಾರೆ ತನ್ನ ಪತ್ನಿಯ ಶಾಪಿಂಗ್ ಗೀಳನ್ನೇ ಆತ ದ್ವೇಶಿಸಲು ತೊಡಗುತ್ತಾನೆ. ನೀವು ಶಾಪಿಂಗಿನಲ್ಲಿ ಹೆಚ್ಚು ಹೊತ್ತು ಕಳೆದಷ್ಟೂ ಅತ್ತ ಪತಿದೇವರ ಬೀಪಿ ನಿಮಿಷ ನಿಮಿಷಕ್ಕೂ ಹೆಚ್ಚಾಗುತ್ತಾ ಹೋಗುತ್ತದೆ. ಗಂಡನಿಗೆ 'ಅನುರೂಪದ ಹೆಂಡತಿ' ಹೇಗಿರಬೇಕು?
ಇದರಿಂದ ಪಾರಾಗಬೇಕಿದ್ದರೆ ನಿಮ್ಮ ಆಯ್ಕೆಯನ್ನು ಸೇಲ್ಸ್ ಮ್ಯಾನ್ ಗೆ ಸ್ಪಷ್ಟವಾಗಿ ತಿಳಿಸಿ ಅವರು ಸೂಚಿಸಿದ್ದರಲ್ಲೇ ಒಂದನ್ನು ಆದಷ್ಟು ಬೇಗನೇ ಖರೀದಿಸಿ ಹೊರಬಂದುಬಿಡಿ. ನೆನಪಿರಲಿ, ಹೆಚ್ಚು ಹೆಚ್ಚು ಕೆದಕಿದಷ್ಟೂ ಕೆಟ್ಟ ಆಯ್ಕೆಯೇ ಕೊನೆಗೊಳ್ಳುವುದು ಎಂದು ಸೀರೆ ಅಂಗಡಿಯ ಮಾರಾಟಗಾರರು ತಮ್ಮ ಅಪಾರ ಅನುಭವದಿಂದ ತಿಳಿಸುತ್ತಾರೆ.
ಅಳುಮುಂಜಿಯಾಗುವುದು
ಅಮ್ಮನ ದುಃಖ ಕಾಣುತ್ತದೆ, ಅಪ್ಪನ ದುಃಖ ಕಾಣಿಸುವುದಿಲ್ಲ ಎಂಬ ಗಾದೆಯೇ ಇದೆ. ಮಹಿಳೆಯರು ತಮ್ಮ ಭಾವನೆಗಳನ್ನು ಪುರುಷರಿಗಿಂತ ಹೆಚ್ಚು ಬೇಗನೇ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತಾರೆ. ಆದರೆ ಇದೇ ಪರಿ ಮನರಂಜನಾ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸ್ನೇಹಿತ-ಕುಟುಂಬದವರೊಡನೆ ಇದ್ದಾಗ ಅನುಸರಿಸಿದರೆ ಮಾತ್ರ ಪುರುಷರು ಸಹಿಸಲಾರರು. ಸಿನೇಮಾ ಹಾಲ್ ನಲ್ಲಿ ದುಃಖದ ಸನ್ನಿವೇಶದಲ್ಲಿ ಮಹಿಳೆ ಅತ್ತು ಕಣ್ಣೀರು ಸುರಿಸುವುದು ಪುರುಷರ ಮನೋಭಾವನೆಯನ್ನೇ ಕುಂದಿಸಿಬಿಡುತ್ತದೆ.
ಹೊಟ್ಟೆಕಿಚ್ಚು
Frailty, thy name is woman ಎಂಬ ಶೇಕ್ಸ್ ಪಿಯರನ ಖ್ಯಾತ ವಾಕ್ಯವನ್ನು ಕೊಂಚ ಬದಲಿಸಿ jealousy, thy name is woman ಎಂದು ಬದಲಿಸಿ ಸುಮಾರು ಶತಮಾನವೇ ಕಳೆದಿದೆ. ಏಕೆಂದರೆ ಹೊಟ್ಟೆಕಿಚ್ಚು ಮಹಿಳೆಯರ ಹುಟ್ಟು ಸ್ವಭಾವವಾಗಿದ್ದು ಕೆಲವರಲ್ಲಿ ಹೆಚ್ಚು ಮತ್ತು ಕೆಲವರಲ್ಲಿ ಕಡಿಮೆ ಇರುತ್ತದೆ. ಆದರೆ ವಯಸ್ಸಿನಲ್ಲಿ ಪ್ರಬುದ್ಧರಾಗುತ್ತಾ ಹೋದಂತೆ ಹೃದಯ ವಿಶಾಲತೆ ಪಡೆಯುತ್ತಾ ಈ ಗುಣ ಕಡಿಮೆಯಾಗಬೇಕು.
ಕೆಲವರು ಹದಿಹರೆಯಲ್ಲಿಯೇ ಹೆಚ್ಚಿನ ಹೃದಯ ವಿಶಾಲತೆ ಪಡೆದಿದ್ದರೆ ಕೆಲವರು ಮರಿಮಕ್ಕಳಾದರೂ ಹಳೆಯ ಬುದ್ಧಿಯನ್ನು ಬಿಡುವುದಿಲ್ಲ. ಪುರುಷರಿಗೆ ಮಹಿಳೆಯರ ಈ ಬುದ್ಧಿ ಸ್ವಲ್ಪವೂ ಇಷ್ಟವಿಲ್ಲ. ತಮ್ಮ ಪತ್ನಿ ತಮ್ಮನ್ನು ಇತರರೊಂದಿಗೆ ಹೋಲಿಸದೇ, ಇತರರ ಸಂತೋಷದಲ್ಲಿ ಸಂತೋಷ ಪಟ್ಟು ಕಷ್ಟದಲ್ಲಿ ನೆರವಾಗುವ ಗುಣವೇ ಪುರುಷರಿಗೆ ಇಷ್ಟವಾಗಿದೆ. ಹೆಂಡತಿಯೆಂದರೆ ಹೀಗಿರಬೇಕು! ನನ್ನ ಸುತ್ತಲೇ ಸುತ್ತುತ್ತಿರಬೇಕು!!
ಇತರರ ಬಗ್ಗೆ ವಿಮರ್ಶಿಸುವುದು
ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಗಾದೆಯೇ ಇದೆ. ಸಾಮಾನ್ಯವಾಗಿ ಮಹಿಳೆಯರು ಇತರ ಮಹಿಳೆಯರ ಬಗ್ಗೆ ಹಲವು ವಿಧದ ವಿಮರ್ಶೆ ನೀಡುವುದು ಸಾಮಾನ್ಯವಾಗಿದೆ. ಆದರೆ ವಯಸ್ಸಿನಲ್ಲಿ ಪ್ರಬುದ್ಧತೆ ಬರುತ್ತಿದ್ದಂತೆಯೇ ಈ ಗುಣ ಬದಲಾಗಬೇಕು. ಪುರುಷರು ಸುಂದರವಾಗಿ ಅಲಂಕರಿಸಿಕೊಂಡ ಅಥವಾ ಆಧುನಿಕ ವಿನ್ಯಾಸದ ಬಟ್ಟೆ ತೊಟ್ಟ ಮಹಿಳೆಯರತ್ತ ಗಮನ ಬೀರಿದರೂ ಇದು ಕೇವಲ ಆಕರ್ಷಣೆಯೇ ಹೊರತು ಆರಾಧನೆಯಲ್ಲ.
ಆದರೆ ತಮ್ಮ ಪತ್ನಿ ತಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು, ಇತರ ಮಹಿಳೆಯರ ಬಗ್ಗೆ ವಿಮರ್ಶಿಸುವುದನ್ನು ಮಾತ್ರ ಸಹಿಸಲಾರರು. ತಮ್ಮ ಪತ್ನಿ ವಿಶಿಷ್ಟ ಮತ್ತು ವಿಶೇಷ ರೀತಿಯಲ್ಲಿ ಕಾಣಬೇಕು ಎಂದು ಬಯಸುತ್ತಾರೆ.



Click it and Unblock the Notifications















